ಚಾಲನೆಯ ಮಧ್ಯೆ ಇನ್‌ಸ್ಟಾಗ್ರಾಮ್ ಸ್ಕ್ರಾಲ್ ಮಾಡಿದ ಆಟೋ ಚಾಲಕ; ಬೇಸರ ಹೊರಹಾಕಿದ ಪ್ರಯಾಣಿಕ
ಆಟೋ ಚಾಲಕನೊಬ್ಬ ಸವಾರಿಯ ಮಧ್ಯದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯುಸಿಯಾಗಿದ್ದ ಬಗ್ಗೆ ಪ್ರಯಾಣಿಕರೊಬ್ಬರು ದೂರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆ ಇದಾಗಿದ್ದು, ಕನ್ನಡ ಮೂಲದ ಬಹುಭಾಷಾ ನಟಿ ಶ್ರೀಲೀಲಾ ಅವರ ಪೋಸ್ಟ್ ಅನ್ನು ಚಾಲಕ ನೋಡುತ್ತಿದ್ದ ಎಂದು ಪ್ರಯಾಣಿಕ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಆಟೋ ಚಾಲಕನೊಬ್ಬ ಸವಾರಿಯ ಮಧ್ಯದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯುಸಿಯಾಗಿದ್ದ ಬಗ್ಗೆ ಪ್ರಯಾಣಿಕರೊಬ್ಬರು ದೂರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆ ಇದಾಗಿದ್ದು, ಚಾಲಕ ಆಟೋವನ್ನು ನಿಧಾನವಾಗಿ ಚಲಾಯಿಸುತ್ತ ನಟಿಯ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸ್ಕ್ರಾಲ್ ಮಾಡುತ್ತಿದ್ದ. ಇದು ತನಗೆ ಕೋಪ ತರಿಸಿತು. ಆದರೆ ತಾನು ಅಸಹಾಯಕನಾಗಿದ್ದೆ (Viral News). ಚಾಲಕನ ಈ ವರ್ತನೆ ಸಮಯ ಮತ್ತು ಸುರಕ್ಷತೆ ಎರಡನ್ನೂ ಅಪಾಯಕ್ಕೆ ಸಿಲುಕಿಸಿತು ಎಂದು ಪ್ರಯಾಣಿಕ ದೂರಿದ್ದಾರೆ.
ಪ್ರಯಾಣಿಕ ರೆಡ್ಡಿಟ್ ಪೋಸ್ಟ್‌ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಆ ವ್ಯಕ್ತಿ ತನ್ನ ಪೋಸ್ಟ್‌ನಲ್ಲಿ, ಕಚೇರಿಗೆ ತ್ವರಿತವಾಗಿ ಹೊರಬೇಕಿದ್ದರಿಂದ ಉಬರ್ ಆಟೋ ಬುಕ್ ಮಾಡಿದ್ದಾಗಿ ಹಂಚಿಕೊಂಡಿದ್ದಾರೆ. ಸುಂದರ ಪ್ರಯಾಣವಾಗಬೇಕಾಗಿದ್ದ ಈ ಆಟೋ ಯಾತ್ರೆ ಶೀಘ್ರದಲ್ಲೇ ನಿರಾಶಾದಾಯಕ ಅನುಭವವಾಗಿ ಮಾರ್ಪಟ್ಟಿತು ಎಂದು ಬೇಸರ ಹೊರ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Pakistan Floods: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ಲೈವ್ ವೇಳೆ ನೀರಿನಲ್ಲಿ ಕೊಚ್ಚಿಹೋದ ವರದಿಗಾರ; ವಿಡಿಯೊ ವೈರಲ್
ಚಾಲಕ ನಕ್ಷೆ ನೋಡಿದ ನಂತರ ಇನ್‌ಸ್ಟಾಗ್ರಾಮ್ ತೆರೆದಿದ್ದಾನೆ. ಒಂದು ಕೈಯಿಂದ ಚಾಲನೆ ಮಾಡುತ್ತಾ, ಇನ್ನೊಂದು ಕೈಯಲ್ಲಿ ಸ್ಕ್ರೋಲ್ ಮಾಡಲು ಪ್ರಾರಂಭಿಸಿದನು ಎಂದು ಪ್ರಯಾಣಿಕ ರೆಡ್ಡಿಟ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಕನ್ನಡ ಮೂಲದ ಬಹುಭಾಷಾ ನಟಿ ಶ್ರೀಲೀಲಾ ಅವರ ಪೋಸ್ಟ್ ಅನ್ನು ಚಾಲಕ ನೋಡುತ್ತಿದ್ದ ಎಂದು ಪ್ರಯಾಣಿಕ ದೂರಿದ್ದಾರೆ. ಜನನಿಬಿಡ ರಸ್ತೆಯ ಮಧ್ಯದಲ್ಲಿ ನಟಿಯ ಪ್ರೊಫೈಲ್ ನೋಡುತ್ತಾ, ಫೀಡ್ ಸ್ಕ್ರಾಲ್ ಮಾಡಿದ್ದಾನೆ. ಈ ವೇಳೆ ಆಟೋ ವೇಗ ಕಡಿಮೆ ಮಾಡಿದ್ದಾನೆ. ಇದು ತನ್ನನ್ನು ಕೋಪಗೊಳಿಸಿತ್ತು. ಆದರೆ ಈ ವೇಳೆ ತಾನು ಅಸಹಾಯಕನಾಗಿದ್ದೆ ಎಂದು ವಿವರಿಸಿದ್ದಾರೆ.
ಈ ಪೋಸ್ಟ್‌ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಚಾಲಕನ ಅಜಾಗರೂಕತೆಯನ್ನು ತೋರಿಸುತ್ತದೆ ಎಂಬಿತ್ಯಾದಿ ಕಮೆಂಟ್‍ಗಳನ್ನು ಮಾಡಿದ್ದಾರೆ. ಫೋನ್ ನೋಡುತ್ತಾ ಅಥವಾ ಫೋನ್‌ನಲ್ಲಿ ಮಾತನಾಡುತ್ತಾ ಹಲವರು ತಮ್ಮ ಪ್ರಯಾಣವನ್ನು ನಿಧಾನಗೊಳಿಸಿರುವುದನ್ನು ನೋಡಿರುವುದಾಗಿ ಕೆಲವು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.