ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಲಗಿದ್ದ ವೃದ್ಧನ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಯುವಕ; ಆಘಾತಕಾರಿ ವಿಡಿಯೋ ವೈರಲ್‌

Viral News: ಮುಂಬೈ ರೈಲು ನಿಲ್ದಾಣದಲ್ಲಿ ಅಘಾತಕಾರಿ ಘಟನೆ ಕಂಡು ಬಂದಿದೆ.. ರೈಲ್ವೆ ನಿಲ್ದಾಣದಲ್ಲಿ ಶಾಂತವಾಗಿ ಮಲಗಿದ್ದ ವಯೋ ವೃದ್ಧರೊಬ್ಬರ ಮೇಲೆ ಯುವಕನೊಬ್ಬ ಯಾವುದೇ ಕಾರಣವಿಲ್ಲದೆ ಬೆಲ್ಟ್ ನಿಂದ ಸರಿಯಾಗಿ ಬಾರಿಸಿದ್ದಾನೆ. ಈ ಕ್ರೌರ್ಯದ ಕೃತ್ಯವನ್ನು ಮಹಾರಾಷ್ಟ್ರದ ಬೈಕುಲ್ಲಾ ನಿಲ್ದಾಣದಲ್ಲಿ ದಾರಿಹೋಕರೊಬ್ಬರು ಚಿತ್ರೀಕರಿಸಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ವೃದ್ಧನ ಮೇಲೆ ಬೆಲ್ಟ್‌ನಿಂದ ಕ್ರೂರ ಹಲ್ಲೆ

ಮುಂಬೈ ನಿಲ್ದಾಣದಲ್ಲಿ ಮಲಗಿದ್ದ ವೃದ್ಧನ ಮೇಲೆ ಹಲ್ಲೆ ನಡೆಸಿದ ಯುವಕ -

Profile
Pushpa Kumari Jun 9, 2026 6:58 PM

ಮುಂಬೈ,ಜೂ.9: ಇಂದಿನ ಈ ಯುಗದಲ್ಲಿ ಮಾನವೀಯತೆ ಅನ್ನೋದು ಮರೆಯಾಗಿ ಬಿಟ್ಟಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂಬೈ ರೈಲು ನಿಲ್ದಾಣದಲ್ಲಿ ಅಘಾತಕಾರಿ ಘಟನೆ ಕಂಡು ಬಂದಿದೆ.. ರೈಲ್ವೆ ನಿಲ್ದಾಣದಲ್ಲಿ ಶಾಂತವಾಗಿ ಮಲಗಿದ್ದ ವಯೋ ವೃದ್ಧರೊಬ್ಬರ ಮೇಲೆ ಯುವಕನೊಬ್ಬ ಯಾವುದೇ ಕಾರಣವಿಲ್ಲದೆ ಬೆಲ್ಟ್ ನಿಂದ ಸರಿಯಾಗಿ ಬಾರಿಸಿದ್ದಾನೆ. ಈ ಕ್ರೌರ್ಯದ ಕೃತ್ಯವನ್ನು ಮಹಾರಾಷ್ಟ್ರದ ಬೈಕುಲ್ಲಾ ನಿಲ್ದಾಣದಲ್ಲಿ ದಾರಿಹೋಕರೊಬ್ಬರು ಚಿತ್ರೀಕರಿಸಿದ್ದಾರೆ. ಈ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯುವಕನು ಯಾವುದೇ ಕಾರಣವಿಲ್ಲದೆ ವೃದ್ದರೊಬ್ಬರಿಗೆ ಹಲ್ಲೆಯನ್ನು ಮಾಡಿದ್ದಾನೆ. ರೈಲು ಪ್ಲಾಟ್‌ಫಾರ್ಮ್ ಮೇಲೆ ವಯಸ್ಸಾದ ವ್ಯಕ್ತಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಯಾರಿಗೂ ಅವರು ತೊಂದರೆ ಕೊಡದೆ ಮಲಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕ ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಸರಿಯಾಗಿ ಹೊಡೆದಿದ್ದಾನೆ.

ವಿಡಿಯೋ ನೋಡಿ:



ನಿದ್ದೆಯಲ್ಲಿದ್ದ ವೃದ್ಧ ಕೂಡಲೆ ಎಚ್ಚೆತ್ತು ಕೊಳ್ಳುತ್ತಾರೆ. ತಮ್ಮ ರಕ್ಷಣೆಗಾಗಿ ಪಕ್ಕದಲ್ಲೇ ಇದ್ದ ಕೋಲನ್ನು ಕೈಗೆತ್ತಿಕೊಂಡರೂ ಆ ಕ್ರೂರ ಯುವಕ ಮಾತ್ರ ವೃದ್ಧನಿಗೆ ಬೆಲ್ಟ್‌ನಿಂದ ಹೊಡೆಯು ವುದನ್ನು ಮುಂದುವರಿಸುತ್ತಾನೆ. ಈ ದೃಶ್ಯವು ಇದೀಗ ಮಾನವೀಯತೆಯನ್ನು ಪ್ರಶ್ನಿಸುವಂತೆ ಮಾಡಿದ್ದು ಆಘಾತಕಾರಿ ಕ್ರೌರ್ಯದ ಕೃತ್ಯದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

Viral Video: ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ

ವೃದ್ಧ ವ್ಯಕ್ತಿ ಶಾಂತಿಯುತವಾಗಿ ವಿಶ್ರಾಂತಿ ಪಡೆಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಕೆಲವು ಕ್ಷಣಗಳ ನಂತರ ಯುವಕ ತನ್ನ ಬೆಲ್ಟ್ ಅನ್ನು ತೆಗೆದು ಯಾವುದೇ ಕಾರಣ ಅಥವಾ ಪ್ರಚೋದನೆಯಿಲ್ಲದೆ ವೃದ್ಧ ವ್ಯಕ್ತಿಗೆ ಹೊಡೆಯಲು ಪ್ರಾರಂಭಿಸಿದ್ದಾನೆ. ಈ ​ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಕೃತ್ಯ ಖಂಡಿಸಿದ್ದು ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಳಕೆದಾರರೊಬ್ಬರು ಇತ್ತೀಚಿನ ದಿನಗಳಲ್ಲಿ, ಜನರು ತಮ್ಮ ಹತಾಶೆ ಮತ್ತು ಕೋಪವನ್ನು ದುರ್ಬಲ ಮತ್ತು ಬಡವರ ಮೇಲೆ ಸುರಿಯುವಲ್ಲಿ ತುಂಬಾ ಪರಿಣತರಾಗುತ್ತಾರೆ. ಇಂತಹ ಜನರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲದೆ ​ಈ ಘಟನೆಯನ್ನು ತಡೆಯದೆ ಕೇವಲ ವಿಡಿಯೋ ರೆಕಾರ್ಡ್ ಮಾಡುತ್ತಾ ನಿಂತಿದ್ದ ಸಾರ್ವಜನಿಕರ ಮೇಲೂ ನೆಟ್ಟಿಗರು ಕಿಡಿಕಾರಿದ್ದಾರೆ.