ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಒಂದೇ ಸ್ಕೂಟಿಯಲ್ಲಿ ಬಂದ ನಾಲ್ವರಿಂದ ಹಾಲಿನ ಪ್ಯಾಕೆಟ್ಸ್‌ಗೆ ಕನ್ನ! ಕಿಡಿಗೇಡಿಗಳ ಹೀನ ಕೃತ್ಯ ವಿಡಿಯೊದಲ್ಲಿ ಸೆರೆ

ವೃದ್ಧ ಮಾಲೀಕ ತನ್ನ ಅಂಗಡಿಯೊಳಗೆ ಇದ್ದ ವೇಳೆ ಸ್ಕೂಟಿಯಲ್ಲಿ ಬಂದ ನಾಲ್ವರು ಯುವಕರು ಅಂಗಡಿಯ ಹೊರಗೆ ರಸ್ತೆ ಬದಿಯಲ್ಲಿ ಇರಿಸಲಾದ ಟ್ರೇಗಳಿಂದ ಕನಿಷ್ಠ 4 ಪ್ಯಾಕೆಟ್ ಹಾಲನ್ನು ಕದ್ದು ಸ್ಥಳದಿಂದ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಅಂಗಡಿಯ ಹೊರಗಿಟ್ಟ ಹಾಲಿನ ಪ್ಯಾಕೆಟ್ಸ್‌ಗೆ ಕನ್ನ ಹಾಕಿದ ಖದೀಮರು!

Profile pavithra Feb 27, 2025 3:05 PM

ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ವರು ಯುವಕರು ಸ್ಕೂಟರ್‌ನಲ್ಲಿ ಬಂದು ಅಂಗಡಿಯೊಂದರ ಹೊರಗೆ ಇಟ್ಟಿದ್ದ ಹಾಲಿನ ಪ್ಯಾಕ್‍ಗಳನ್ನು ಕದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಮುಂಜಾನೆ ವೃದ್ಧ ಅಂಗಡಿ ಮಾಲೀಕ ತನ್ನ ಅಂಗಡಿಯೊಳಗೆ ಇದ್ದಾಗ ಈ ಘಟನೆ ಸಂಭವಿಸಿದೆ. ಸ್ಕೂಟಿಯಲ್ಲಿ ಬಂದ ನಾಲ್ವರು ಯುವಕರು ಅಂಗಡಿಯ ಹೊರಗೆ ರಸ್ತೆ ಬದಿಯಲ್ಲಿ ಇರಿಸಲಾದ ಟ್ರೇಗಳಿಂದ ಕನಿಷ್ಠ 4 ಪ್ಯಾಕೆಟ್ ಹಾಲನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ನಾಲ್ವರು ಯುವಕರು ಹಾಲು ಪ್ಯಾಕ್‍ಗಳನ್ನು ಕಳ್ಳತನ ಮಾಡಿದ್ದಲ್ಲದೇ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿ ನಾಲ್ಕು ಮಂದಿ ಒಂದೇ ಸ್ಕೂಟಿಯಲ್ಲಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಾರೆ. ಹಾಗಾಗಿ ಅವರು ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಕಳ್ಳತನ ಎರಡು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಅವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.



ವೈರಲ್ ವಿಡಿಯೊದಲ್ಲಿ, ಸ್ಕೂಟಿಯಲ್ಲಿ ಬಂದ ನಾಲ್ವರು ಯುವಕರು ಅಂಗಡಿಯ ಹೊರಗೆ ಹಾಲಿನ ಪ್ಯಾಕ್‍ಗಳನ್ನು ಇರಿಸಲಾದ ಸ್ಥಳದಲ್ಲಿ ಸ್ಕೂಟಿ ನಿಲ್ಲಿಸಿ ಒಂದು ಸೆಕೆಂಡಿನಲ್ಲಿ ಅಲ್ಲಿದ್ದ ಹಾಲಿನ ಪ್ಯಾಕ್‍ಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಆದರೆ ಈ ಘಟನೆ ನಡೆದ ನಿಖರವಾದ ಸ್ಥಳ ತಿಳಿದಿಲ್ಲ. ಇಂತಹ ಕಳ್ಳತನದ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೋಣನಕುಂಟೆ ಮೆಟ್ರೋ ನಿಲ್ದಾಣದ ಬಳಿಯ ರಸ್ತೆ ಬದಿಯ ಬೂತ್‍ನಲ್ಲಿ ಸ್ಕೂಟರ್‌ನಲ್ಲಿ ಬಂದ ಕಳ್ಳರು ಇಡೀ ಹಾಲಿನ ಟ್ರೇಯನ್ನೇ ಕದ್ದುಕೊಂಡು ಹೋಗಿದ್ದರು. ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಂಗಡಿ ಮಾಲೀಕ ಹಾಲಿನ ಟ್ರೇಗಳನ್ನು ಗಮನಿಸದೇ ಅಲ್ಲೇ ಬಿಟ್ಟಿದ್ದರಿಂದ ಮುಂಜಾನೆಯ ಸಮಯದಲ್ಲಿ ಕಳ್ಳರು ಈ ಲಾಭವನ್ನು ಪಡೆದುಕೊಂಡು ಇಂತಹ ಕೃತ್ಯ ಎಸಗಿದ್ದಾರೆ.

ಬೆಂಗಳೂರಿನಲ್ಲಿ ಹಾಲಿನ ಪ್ಯಾಕೆಟ್ ಕಳ್ಳತನ ಹೆಚ್ಚಾಗಿ ನಡೆಯುತ್ತಿದೆ ಎಂದು ವರದಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಹಾಲಿನ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಚಿನ್ನ, ಹಣದಂತೆ ಹಾಲಿನ ಪ್ಯಾಕ್‍ಗಳನ್ನು ಕಳ್ಳತನ ಮಾಡಲು ಶುರುಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಸ್ಕೂಟರ್‌ನಲ್ಲಿ ಮಳ್ಳಿಯಂತೆ ಬಂದು ಫ್ಲವರ್‌ ಪಾಟ್ ಕದ್ದ ಕಳ್ಳಿ; ವಿಡಿಯೊ ನೋಡಿ

ಇತ್ತೀಚೆಗೆ ಮಹಿಳೆಯೊಬ್ಬಳು ಮನೆಯ ಹೊರಗೆ ಇರಿಸಲಾದ ಸಣ್ಣ ಹೂವಿನ ಗಿಡದ ಪಾಟ್ ಕದ್ದು ಅದನ್ನು ತನ್ನ ಸ್ಕೂಟರ್‌ನಲ್ಲಿ ಹಾಕಿಕೊಂಡು ಎಸ್ಕೇಪ್‌ ಆಗಿದ್ದ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಬಂದ ಮಹಿಳೆಯೊಬ್ಬಳು ಮನೆಯೊಂದರ ಮುಂದೆ ತನ್ನ ಸ್ಕೂಟರ್ ನಿಲ್ಲಿಸಿ ಕೆಳಗಿಳಿದು ಮನೆಯ ಹೊರಗಿಟ್ಟಿದ್ದ ಹೂವಿನ ಗಿಡದ ಪಾಟ್‍ಗಳಲ್ಲಿ ಒಂದನ್ನು ಎತ್ತಿಕೊಂಡು ತನ್ನ ಸ್ಕೂಟರ್‌ನಲ್ಲಿಟ್ಟುಕೊಂಡು ಹೋಗಿದ್ದಾಳೆ. ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.