ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ವಿಮಾನ ಸಿಬ್ಬಂದಿಯ ಎಡವಟ್ಟು; ಬ್ಯಾಗ್ ಕಳೆದುಕೊಂಡ ಪ್ರಯಾಣಿಕನ ವ್ಯಥೆ ಕೇಳೋರ್ಯಾರು? ವಿಡಿಯೊ ನೋಡಿ

ವಿಸ್ತಾರಾ-ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರತೀಕ್ ರಾಯ್ ಎಂಬ ಪ್ರಯಾಣಿಕ ಒಬ್ಬ ತನ್ನ ಬ್ಯಾಗ್‍ ಕಳೆದುಕೊಂಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಮತ್ತು ಈ ಬಗ್ಗೆ ದೂರು ನೀಡಿದ್ರೂ ತನ್ನ ಬ್ಯಾಗ್ ಮರಳಿ ತನಗೆ ಸಿಗುವುದಿಲ್ಲ ಎಂದು ವಿಮಾನ ಸಂಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾನೆ. ಇದು ವೈರಲ್(Viral News)ಆಗಿದೆ.

ವಿಮಾನ ಸಿಬ್ಬಂದಿಯ ಎಡವಟ್ಟಿಗೆ ಬ್ಯಾಗ್ ಕಳೆದುಕೊಂಡ ಪ್ರಯಾಣಿಕ!

Profile pavithra Feb 27, 2025 12:33 PM

ನವದೆಹಲಿ: ವಿಮಾನ, ಬಸ್‌, ರೈಲು ಹೀಗೆ ಯಾವುದಾದರೂ ವಾಹನದಲ್ಲಿ ಪ್ರಯಾಣಿಸುವಾಗ ಬ್ಯಾಗ್‌, ಪರ್ಸ್‌,ಮೊಬೈಲ್‌ಗಳನ್ನು ನೆನಪಿಲ್ಲದೇ ಮರೆತುಬಿಟ್ಟು ಬರುವುದು ಸಹಜ! ಇದೀಗ ದೆಹಲಿ-ಬೆಂಗಳೂರು ವಿಸ್ತಾರಾ-ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕನೊಬ್ಬ ತನ್ನ ಬ್ಯಾಗ್‍ ಕಳೆದುಕೊಂಡು ವ್ಯಥೆ ಪಟ್ಟಿದ್ದಾನೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಆತ ವಿಮಾನ ಸಂಸ್ಥೆಯ ದುರಾಡಳಿತದಿಂದಾಗಿ ತನ್ನ ಬ್ಯಾಗ್‍ ತನಗೆ ಎಂದಿಗೂ ಮರಳಿ ಸಿಗುವುದಿಲ್ಲ ಎಂಬ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾನೆ. ಈ ಪೋಸ್ಟ್‌ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಪ್ರತೀಕ್ ರಾಯ್ ಎಂಬಾತ ತನ್ನ ಬ್ಯಾಗ್ ಅನ್ನು ದೆಹಲಿ-ಬೆಂಗಳೂರು ವಿಸ್ತಾರಾ-ಏರ್ ಇಂಡಿಯಾದಲ್ಲಿ ಕಳೆದುಕೊಂಡಿದ್ದು, ಈತ ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿ, "ಟ್ಯಾಗ್ ಸಮಸ್ಯೆಯಿಂದಾಗಿ ನಿಮ್ಮ ಬ್ಯಾಗ್‍ ಅನ್ನು ದೆಹಲಿಯಿಂದ ಲೋಡ್ ಮಾಡಲಾಗಿಲ್ಲ ಎಂದು 7 ದಿನಗಳ ನಂತರ ಸಿಬ್ಬಂದಿಗಳು ನನಗೆ ತಿಳಿಸಿದ್ದಾರೆ. ಹೀಗಾಗಿ ನಾನು ನನ್ನ ಬ್ಯಾಗ್‍ ಅನ್ನು ಮರಳಿ ಪಡೆಯುತ್ತೇನೆ ಎಂದು ನಂಬಿಕೆ ಇಲ್ಲ “ ಎಂದು ಆತ ಬರೆದಿದ್ದಾನೆ.



ಪ್ರತೀಕ್ ರಾಯ್ ಜನವರಿ 21 ರಂದು ದೆಹಲಿ-ಬೆಂಗಳೂರು ವಿಸ್ತಾರಾ-ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಿದ್ದನಂತೆ. ಈ ಘಟನೆ ಒಂದು ತಿಂಗಳ ಹಿಂದೆ ನಡೆದಿತ್ತಂತೆ. ಆದರೆ ಆತ ಇನ್ನೂ ಕಳೆದುಕೊಂಡ ಬ್ಯಾಗ್ ಅನ್ನು ಮರಳಿ ಪಡೆದಿಲ್ಲವಂತೆ, ಇದು ವಿಸ್ತಾರಾ-ಏರ್ ಇಂಡಿಯಾದ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಆತ ಆರೋಪಿಸಿದ್ದಾನೆ.



“ಜನವರಿ 22ರಂದು ಏರ್ ಇಂಡಿಯಾ ಬೆಂಗಳೂರು ಸಿಬ್ಬಂದಿ ಕರೆ ಮಾಡಿ ಬ್ಯಾಗ್ ಬೆಂಗಳೂರಿನಲ್ಲಿದೆ ಎಂದು ತಿಳಿಸಿದ್ದಾರೆ. ಆದರೆ ಮರುದಿನ ಯಾವುದೇ ಪ್ರತಿಕ್ರಿಯೆ ಇಲ್ಲ. ಜನವರಿ 23 ರಂದು ನಾನು ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದೇನೆ ತದನಂತರ ಬ್ಯಾಗ್‍ನ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಆದರೆ ನನಗೆ ನನ್ನ ಬ್ಯಾಗ್‌ ಮರಳಿ ಪಡೆಯುವ ನಂಬಿಕೆ ಇಲ್ಲ ಎಂದು ಆತ ಹೇಳಿದ್ದಾನೆ.ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಹಾಯಕ್ಕಾಗಿ ಕಸ್ಟಮರ್ ಕೇರ್ ಮತ್ತು ಏರ್‌ಲೈನ್‌ ನಂಬರ್‌ಗಳಿಗೆ ಹೇಗೆ ಕರೆ ಮಾಡಬೇಕು ಮತ್ತು ಮೆಸೇಜ್‌ಗಳನ್ನು ಹೇಗೆ ಕಳುಹಿಸಬೇಕು ಎಂದು ಹಲವಾರು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.

ಇನ್ನು ವಿಮಾನಯಾನದಲ್ಲಿ ನಮ್ಮ ವಸ್ತುಗಳು ಕಳೆದುಹೋದರೆ ಅದರ ತೂಕದ ಆಧಾರದ ಮೇಲೆ ಪರಿಹಾರವನ್ನು ನಮಗೆ ನೀಡುತ್ತದೆ. ಆದ್ದರಿಂದ, ನನಗೆ 3-4 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣ ಸಿಗುವುದಿಲ್ಲ. ಅದು ಬಹುಶಃ ಆ ಬ್ಯಾಗ್‍ನ ಬೆಲೆಗೂ ಸರಿದೂಗುವುದಿಲ್ಲ ಎಂದು ಆತ ಹೇಳಿದ್ದಾನೆ. ಈ ವಿಷಯವನ್ನು ಪರಿಶೀಲಿಸಲು ವಾಯುಯಾನ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾನೆ.

ಈ ಸುದ್ದಿಯನ್ನೂ ಓದಿ:Shivraj Singh Chouhan: ಏರ್‌ಇಂಡಿಯಾ ಜನರಿಗೆ ಮೋಸ ಮಾಡುತ್ತಿದೆ- ವಿಮಾನದಲ್ಲಿ ಮುರಿದ ಸೀಟು ನೋಡಿ ಕೇಂದ್ರ ಸಚಿವ ಫುಲ್‌ ಗರಂ!

ಇತ್ತೀಚೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶನಿವಾರ ಏರ್ ಇಂಡಿಯಾ ವಿಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರ್‌ ಇಂಡಿಯಾ ವಿಮಾನ ಸಂಸ್ಥೆ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ. ವಿಮಾನದಲ್ಲಿನ ಸೀಟುಗಳು ಸರಿ ಇಲ್ಲದಿರುವುದರ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.