Viral Video: ನಡುರಸ್ತೆಯಲ್ಲಿ ಮಾನಸಿಕ ಅಸ್ವಸ್ಥನಿಗೆ ಅಮಾನುಷವಾಗಿ ಥಳಿಸಿದ ಪೊಲೀಸರು! ಶಾಕಿಂಗ್ ವಿಡಿಯೊ ಫುಲ್ ವೈರಲ್
ಬಿಹಾರದ ಕಟಿಹಾರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಐದು ಮಂದಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನಿಗೆ ಕೋಲುಗಳಿಂದ ಕ್ರೂರವಾಗಿ ಥಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ, ಇಬ್ಬರು ಹೋಮ್‍ಗಾರ್ಡ್ ಮತ್ತು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.


ಪಾಟ್ನಾ: ಬಿಹಾರದ ಕಟಿಹಾರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಐದು ಮಂದಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನಿಗೆ ಹೀನಾಯಮಾನವಾಗಿ ಥಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಹಾಗೂ ಇಬ್ಬರು ಹೋಮ್‍ಗಾರ್ಡ್ ಮತ್ತು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬುಧವಾರ(ಫೆಬ್ರವರಿ 26) ವೈರಲ್ ಆಗಿರುವ ವಿಡಿಯೊದಲ್ಲಿ, ಹೋಮ್ ಗಾರ್ಡ್ ಮತ್ತು ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯಲ್ಲಿ ವಾಹನಕ್ಕೆ ಒರಗಿ ಕುಳಿತ ಮಾನಸಿಕ ಅಸ್ವಸ್ಥನಿಗೆ ಕೋಲುಗಳಿಂದ ಹೊಡೆಯುವುದು ಸೆರೆಯಾಗಿದೆ.
ನಂತರ ವಾಹನದ ಚಾಲಕನಂತೆ ಕಾಣುವ ಇನ್ನೊಬ್ಬ ವ್ಯಕ್ತಿಯೊಬ್ಬ ಕೆಳಗಿಳಿದು, ಅಧಿಕಾರಿಯೊಬ್ಬರಿಂದ ಕೋಲನ್ನು ತೆಗೆದುಕೊಂಡು ಆ ವ್ಯಕ್ತಿಯ ಕಾಲುಗಳಿಗೆ ಪದೇ ಪದೇ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಇನ್ನೊಬ್ಬ ಅಧಿಕಾರಿ ಆತನಿಗೆ ಹೊಡೆಯಲು ಅನುಕೂಲವಾಗುವಂತೆ ಮಾನಸಿಕ ಅಸ್ವಸ್ಥನ ಕೈಗಳನ್ನು ಹಿಡಿದುಕೊಂಡಿದ್ದಾನೆ. ಮಾನಸಿಕ ಅಸ್ವಸ್ಥ ಹೊಡೆಯಬೇಡಿ ಎಂದು ಬೇಡಿಕೊಂಡರು ಕರುಣೆ ಇಲ್ಲದ ಚಾಲಕ, ಆತನಿಗೆ ಹೊಡೆದು ಅಧಿಕಾರಿಯ ಸಹಾಯದಿಂದ ಅವನನ್ನು ವಾಹನದ ಹಿಂಭಾಗಕ್ಕೆ ಎಳೆದುಕೊಂಡು ಹೋಗಿದ್ದಾನೆ.
Cops Hit Mentally Challenged Man With Sticks On Bihar Road, 2 Suspended https://t.co/m1DVPTniQi pic.twitter.com/CqlJfxM4gY
— NDTV News feed (@ndtvfeed) February 27, 2025
ಕಟಿಹಾರ್‌ನ ಸಮೇಲಿಯ ಛೋಹಾರ್ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳು ತಿಳಿಸಿದ ಪ್ರಕಾರ, ಸಂತ್ರಸ್ತ ಕಾರಿಗೆ ಒರಗಿ ಕುಳಿತಿದ್ದಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕಾರಿನ ಚಾಲಕ ಈ ಹೀನ ಕೃತ್ಯವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಹಾಗಾಗಿ ಕಟಿಹಾರ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ವೈಭವ್ ಶರ್ಮಾ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕೇದಾರ್ ಪ್ರಸಾದ್ ಯಾದವ್ ಮತ್ತು ಪೋಥಿಯಾ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪ್ರೀತಿ ಕುಮಾರಿ, ಹೋಮ್‌ಗಾರ್ಡ್‌ಗಳಾದ ಸಿಕಂದರ್ ರಾಯ್ ಮತ್ತು ಕಿಶೋರ್ ಮಹತೋ ಮತ್ತು ಖಾಸಗಿ ಚಾಲಕ ಬಂಬಮ್ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಯಾದವ್ ಮತ್ತು ಕುಮಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ರಾಯ್ ಮತ್ತು ಮಹತೋ ಅವರನ್ನು ಒಂದು ವರ್ಷದವರೆಗೆ ಕರ್ತವ್ಯದಿಂದ ದೂರವಿರಿಸಲು ಸೂಚಿಸಲಾಗಿದೆ. ಚಾಲಕ ಬಂಬಮ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಡಿವೈಎಸ್‍ಪಿ ಧರ್ಮೇಂದ್ರ ಕುಮಾರ್ ಅವರಿಗೆ ಆದೇಶಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪೊಲೀಸ್ ಅಧಿಕಾರಿಯ ವಿರುದ್ಧ ಟ್ರಕ್ ಚಾಲಕನಿಂದ ಸುಲಿಗೆ ಆರೋಪ; ವಿಡಿಯೊ ವೈರಲ್
ಇತ್ತೀಚೆಗಷ್ಟೇ ಪೊಲೀಸ್ ಅಧಿಕಾರಿಯ ವಿರುದ್ಧ ಟ್ರಕ್ ಡ್ರೈವರ್ ಸುಲಿಗೆ ಆರೋಪ ಮಾಡಿದ್ದಾನೆ. ಈ ವಿಚಾರಕ್ಕೆ ಟ್ರಕ್ ಡ್ರೈವರ್ ಮತ್ತು ಪೊಲೀಸ್ ನಡುವಿನ ವಾಗ್ವಾದದ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಖತ್ ವೈರಲ್ ಕೂಡ ಆಗಿದೆ. ವಿಡಿಯೊದಲ್ಲಿ ಟೋಲ್ ತೆರಿಗೆಯನ್ನು ಮೀರಿ ಹೆಚ್ಚುವರಿ ಮೊತ್ತವನ್ನು ಪೊಲೀಸರು ಬೇಡಿಕೆ ಇಟ್ಟಿದ್ದಾರೆ ಎಂದು ಡ್ರೈವರ್ ಆರೋಪಿಸುವುದು ಸೆರೆಯಾಗಿದೆ. ಇದು ಈ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ -2ರ ಡುಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ.