Viral News: ʻನಾನು ನಿಮ್ಮ ಆ ಅಂಗವನ್ನು....ʼ ಸ್ವಿಗ್ಗಿ ಜೀನಿ ಅಸಹ್ಯಕರ ವರ್ತನೆಗೆ ಕಸ್ಟಮರ್ ಫುಲ್ ಶಾಕ್! ಏನಿದು ಪ್ರಕರಣ?
ಇತ್ತಿಚಿನ ದಿನಗಳಲ್ಲಿ ಲೈಂಗಿಕ ಕಿರುಕುಳ ಪ್ರರಣಗಳು ಎಲ್ಲೆಂದರಲ್ಲಿ ವರದಿಯಾಗುತ್ತಲೇ ಇವೆ. ವರ್ಕ್ ಪ್ಲೇಸ್, ಮನೆ, ಸಾರ್ವಜನಿಕ ಸ್ಥಳಗಳಲ್ಲೂ ಒಂದಲ್ಲ ಒಂದು ರೀತಿಯ ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇದೀಗ ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಸ್ವಿಗ್ಗಿ ಜೀನಿಯೊಬ್ಬ ಮಾಡಿರುವ ಅವಾಂತರ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ...

ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ವಿಗ್ಗಿ ಜೀನಿ (Swiggy Genie) ಮೂಲಕ ತನ್ನ ಗೆಳೆಯನಿಗೆ ಗಿಫ್ಟ್ ನೀಡಲು ನಿರ್ಧರಿಸಿದ ವ್ಯಕ್ತಿಯೊಬ್ಬರಿಗೆ ಆ ಡೆಲಿವರಿ ಬಾಯ್ (delivery person) ಲೈಂಗಿಕ ಪ್ರಚೋದನೆಯ (Sexual Favour) ಆಹ್ವಾನವನ್ನು ನೀಡಿರುವ ವಿಚಾರ ಇದೀಗ ಎಲ್ಲರನ್ನೂ ಶಾಕ್ ಗೆ ಒಳಗಾಗಿಸಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral Post( ಆಗಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಜೀನಿ ಗ್ರಾಹಕರ ಮನೆಮುಂದೆ ನಿಂತು, ‘ನೀವು ನನಗೆ ಲೈಂಗಿಕವಾಗಿ ಸಹಾಯ ಮಾಡಬಲ್ಲಿರಾ..?’ ಎಂದು ಮುಕ್ತವಾಗಿ ಕೇಳುವ ಮೂಲಕ ಆ ಗ್ರಾಹಕರನ್ನು ಒಂದು ಕ್ಷಣ ಶಾಕ್‌ಗೆ ಒಳಪಡಿಸಿದ್ದಾನೆ. ಪುರುಷನೊಬ್ಬ ಪುರುಷನಿಗೆ ಲೈಂಗಿಕ ಕ್ರಿಯೆಗೆ ಆಫರ್ ನೀಡುವುದನ್ನು ಕಂಡು ಶಾಕ್ ಗೆ ಒಳಗಾದ ಆ ಗ್ರಾಹಕ ತಕ್ಷಣವೇ ತನ್ನ ಆರ್ಡರನ್ನು ಕ್ಯಾನ್ಸಲ್ ಮಾಡಿ ಸ್ವಿಗ್ಗಿ ಎಂಪ್ಲಾಯ್ ಬಿಹೇವಿಯರ್‌ಗೆ ಈ ಕುರಿತಾಗಿ ರಿಪೋರ್ಟ್ ಮಾಡಿದ್ದಾರೆ.
ತನಗಾದ ಈ ವಿಚಿತ್ರ ಅನುಭವವನ್ನು ಆ ಗ್ರಾಹಕರು ರೆಡ್‌ಇಟ್ ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ಆ ಮೂಲಕ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವುದು ಮಾತ್ರವಲ್ಲದೇ ಈ ಕುರಿತಾಗಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.
ರೆಡ್ ಇಟ್ ಬಳಕೆದಾರರೊಬ್ಬರು ಸ್ವಿಗ್ಗಿ ಜೀನಿ ಮೂಲಕ ತನ್ನ ಸ್ನೇಹಿತರೊಬ್ಬರಿಗೆ ಗಿಫ್ಟ್ ಒಂದನ್ನು ಕಳಿಸಲು ನಿರ್ಧರಿಸುತ್ತಾರೆ. ಹೀಗೆ, ಆ ಪಾರ್ಸೆಲನ್ನು ಪಡೆದುಕೊಳ್ಳಲು ಬಂದ ಸ್ವಿಗ್ಗಿ ಜೀನಿ, ಡೆಲಿವರಿಯನ್ನು ವ್ಯಕ್ತಿಯಿಂದ ಪಡೆದುಕೊಳ್ಳುವ ಸಂದರ್ಭದಲ್ಲಿ, ನೇರವಾಗಿ ಅವರಲ್ಲಿ ‘ನಾನು ನಿಮ್ಮ ಕಾ*ಕ್ ಸಕ್ ಮಾಡಬಹುದೇ..!?’ ಎಂದು ಕೇಳಿದ್ದಾನೆ. ಇದರಿಂದ ಆ ವ್ಯಕ್ತಿ ಒಂದು ಕ್ಷಣ ಶಾಕ್ ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: MS Dhoni: ಕುತೂಹಲ ಕೆರಳಿಸಿದ ಧೋನಿಯ ಟಿ-ಶರ್ಟ್ ಕೋಡ್ ವರ್ಡ್ ಸಂದೇಶ!
‘ನಾನು ಗೆಳೆಯರ ಜೊತೆ ಫ್ಲ್ಯಾಟ್ ನಲ್ಲಿ ವಾಸಿಸುತ್ತಿರುವ ಕಾರಣ, ನಾನು ಕೀಯನ್ನು ಫ್ಲ್ಯಾಟ್ ಮೇಟ್ ಗೆ ಕಳುಹಿಸಬೇಕಿತ್ತು. ಈ ಸಂದರ್ಭದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಬರುತ್ತಾನೆ ಮತ್ತು ನಾನು ಆತನಿಗೆ ಪಾರ್ಸೆಲನ್ನು ನೀಡುತ್ತೇನೆ. ಆತ ಬಳಿಕ 10 ಸೆಕೆಂಡ್ ಕಾಯುತ್ತಾ ನಿಲ್ಲುತ್ತಾನೆ. ಮತ್ತು ನಾನೂ ಸಹ ಅಲ್ಲೇ ನಿಂತಿರುತ್ತೇನೆ. ಆತ ಒಟಿಪಿ ಕೇಳುತ್ತಾನೆ ಮತ್ತು ನಾನು ನನ್ನ ಫೋನ್ ಪರೀಕ್ಷಿಸಿ ಒಟಿಪಿಯನ್ನು ಆತನಿಗೆ ಹೇಳುತ್ತೇನೆ. ಆ ಬಳಿಕವೂ ಆತ 5-10 ಸೆಕೆಂಡ್ ಗಳ ಕಾಲ ಅಲ್ಲೇ ನಿಲ್ಲುತ್ತಾನೆ ಮತ್ತು ಸಡನ್ನಾಗಿ ಕೇಳುತ್ತಾನೆ ‘ನಾನು ನಿಮ್ಮ ಕಾ*ಕ್ ಸಕ್ ಮಾಡಬಹುದೇ?’ ಹೀಗೆಂದು ಅವರು ನಡೆದ ವಿಚಾರವನ್ನು ವಿವರವಾಗಿ ರೆಡ್ ಇಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತು ತನ್ನ ಮೇಲೆ ಲೈಂಗಿಕ ಕಿರುಕುಳವಾಗಿದೆ ಎಂದು ಆ ವ್ಯಕ್ತಿ ಇದೀಗ ಆರೋಪ ಮಾಡಿದ್ದಾರೆ.
ಈ ವ್ಯಕ್ತಿ ಕೂಡಲೇ ಸ್ವಿಗ್ಗಿ ಜೀನಿಯ ಅನುಚಿತ ವರ್ತನೆಯ ಕುರಿತು ತನ್ನ ಫ್ಲ್ಯಾಟ್‌ನಲ್ಲಿರುವ ಗೆಳೆಯರಿಗೆ ಮಾಹಿತಿ ನೀಡುತ್ತಾರೆ, ತಕ್ಷಣವೇ ಅವರು ಆತನ ಜೊತೆ ಕೀಯನ್ನು ಕಳುಹಿಸದಿರಲು ನಿರ್ಧರಿಸುತ್ತಾರೆ. ಈ ಜಿನಿ ಡೇಂಜರಸ್ ಎಂದು ಭಾವಿಸಿ ಆತನಿಂದ ಪಾರ್ಸೆಲನ್ನು ಸಹ ವಾಪಾಸು ಪಡೆದುಕೊಳ್ಳುತ್ತಾರೆ. ಸ್ವಿಗ್ಗಿ ಸಿಬ್ಬಂದಿಯ ಈ ಅನುಚಿತ ವರ್ತನೆ ಬಗ್ಗೆ ಸಂತ್ರಸ್ತ ವ್ಯಕ್ತಿ ಇದೀಗ ಸ್ವಿಗ್ಗಿ ಕಂಪೆನಿಗೆ ಮಾಹಿತಿ ನೀಡಿದ್ದು, ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
‘ಈ ವ್ಯಕ್ತಿಯನ್ನು ಕೂಡಲೇ ತೆಗೆದುಹಾಕಿ. ಒಂದು ವೇಳೆ ಈತ ಹುಡುಗಿಯರ ಬಳಿ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ’ ಎಂದು ಆ ವ್ಯಕ್ತಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಪ್ಡೇಟ್ ನೀಡಿರುವ ಸ್ವಿಗ್ಗಿ, ‘ಈ ಡೆಲಿವರಿ ಬಾಯ್ ಅನ್ನು ಸ್ವಿಗ್ಗಿ ಮತ್ತು ರ್ಯಾಪಿಡೊ ಎರಡರಿಂದಲೂ ತೆಗೆದು ಹಾಕಲಾಗಿದ್ದು, ಬ್ಲ್ಯಾಕ್ ಲಿಸ್ಟ್‌ಗೆ ಹಾಕಲಾಗಿದೆ ಎಂದು ಮಾಹಿತಿ ನೀಡಿದೆ.