ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೃಗಾಲಯದಲ್ಲಿ ಮಲಗಿದ್ದ ಹುಲಿಗೆ ಕಲ್ಲು ಎಸೆದ ಪ್ರವಾಸಿಗರು: ಅಶಿಸ್ತಿನ ವರ್ತನೆ ಬಗ್ಗೆ ನೆಟ್ಟಿಗರು ಕಿಡಿ!

Viral News: ಉದ್ಯಾನವನದ ಮೃಗಾಲಯದಲ್ಲಿ ಶಾಂತವಾಗಿ ಮಲಗಿದ್ದ ಹುಲಿಗೆ ಪ್ರವಾಸಿಗರು ಕಲ್ಲು ಎಸೆದಿರುವ ಘಟನೆಯೊಂದು ಕಂಡು ಬಂದಿದೆ. ಹುಲಿಯೂ ಮೃಗಾಲಯದಲ್ಲಿ ತನ್ನ ಪಾಡಿಗೆ ಮಲಗಿದೆ,ಆದರೆ ಪ್ರವಾಸಿಗರು ಕಲ್ಲು ಎಸೆದು ಕಿರುಕುಳ ನೀಡಿದ್ದಾರೆ. ಸದ್ಯ ಈ ವಿಡಿಯೊ ನೋಡಿದ ಪ್ರಾಣಿ ಪ್ರಿಯರು ಪ್ರವಾಸಿಗರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ...

ಮೃಗಾಲಯದಲ್ಲಿ ಮಲಗಿದ್ದ ಹುಲಿ ಮೇಲೆ ಕಲ್ಲು ಎಸೆದ ಪ್ರವಾಸಿಗರು

ವಿಶ್ರಾಂತಿ ಪಡೆಯುತ್ತಿದ್ದ ಹುಲಿಯ ಮೇಲೆ ಕಲ್ಲು ಎಸೆದ ಪ್ರವಾಸಿಗರು -

Profile
Pushpa Kumari Jun 9, 2026 9:26 PM

ಸೂರತ್‌,ಜೂ.9: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ಜನರು ಅಶಿಸ್ತಿನಿಂದ ವರ್ತಿಸುವ ಅನೇಕ ಘಟನೆಗಳು ವರದಿಯಾಗಿವೆ.. ಇದಕ್ಕೆ ಸಾಕ್ಷಿ ಎಂಬಂತೆ ಉದ್ಯಾನವನದ ಮೃಗಾಲಯದಲ್ಲಿ ಶಾಂತ ವಾಗಿ ಮಲಗಿದ್ದ ಹುಲಿಗೆ ಪ್ರವಾಸಿಗರು ಕಲ್ಲು ಎಸೆದಿರುವ ಘಟನೆಯೊಂದು ಕಂಡು ಬಂದಿದೆ. ಹುಲಿಯೂ ಮೃಗಾಲಯದಲ್ಲಿ ತನ್ನ ಪಾಡಿಗೆ ಮಲಗಿದೆ,ಆದರೆ ಪ್ರವಾಸಿಗರು ಕಲ್ಲು ಎಸೆದು ಕಿರುಕುಳ ನೀಡಿದ್ದಾರೆ. ಸದ್ಯ ಈ ವಿಡಿಯೊ (Viral News) ನೋಡಿದ ಪ್ರಾಣಿ ಪ್ರಿಯರು ಪ್ರವಾಸಿಗರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.

ಸೂರತ್‌ನ ಸಾರ್ಥನಾ ನೇಚರ್ ಪಾರ್ಕ್ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಶಾಂತವಾಗಿ ವಿಶ್ರಾಂತಿ ಪಡೆಯುತ್ತಿರುವ ಹುಲಿಯ ಮೇಲೆ ಪ್ರವಾಸಿಗರು ಕಲ್ಲು ಎಸೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ದೃಶ್ಯವು ವನ್ಯಜೀವಿಗಳ ರಕ್ಷಣೆ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಪ್ರಾಣಿಗಳನ್ನು ರಕ್ಷಣೆ ಮಾಡಬೇಕಾದ ಜಾಗದಲ್ಲಿಯೇ ಕಿರುಕುಳ ಎಸಗಿದ್ದಾರೆ.

ವಿಡಿಯೋ ನೋಡಿ:

ವೈರಲ್ ಆದ ವಿಡಿಯೊದಲ್ಲಿ ಹುಲಿಯು ಆವರಣದೊಳಗೆ ಶಾಂತವಾಗಿ ಮಲಗಿರುವುದನ್ನು ತೋರಿಸುತ್ತದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಹುಲಿಯನ್ನು ಎಬ್ಬಿಸಲು ಕಲ್ಲುಗಳನ್ನು ಎಸೆದಿದ್ದಾರೆ."ಕಾಡಿನಲ್ಲೂ ಇವುಗಳಿಗೆ ರಕ್ಷಣೆಯಿಲ್ಲ, ಮೃಗಾಲಯದಲ್ಲೂ ಬದುಕಲು ಇಲ್ಲ" ಎಂದು ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಹುಲಿಯು ಸೆರೆಯಲ್ಲಿ ಶಾಂತವಾಗಿ ಮಲಗಿರುವಾಗ ಅದರ ಜಾಗವನ್ನು ನಮಗೆ ಗೌರವಿಸಲು ಸಾಧ್ಯವಾಗದಿದ್ದರೆ, ಕಾಡಿನಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಲು ಹೇಗೆ ಸಾಧ್ಯ ,ಇಂತಹ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇಂತಹ ಜನರನ್ನು ಪ್ರಾಣಿಗಳ ಬದಲಿಗೆ ಮೃಗಾಲಯದೊಳಗೆ ಇಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ‌. ಮತ್ತೊಬ್ಬರು ಇಂತಹ ಜನರಿಗೆ ಬುದ್ದಿ ಕಲಿಸಲು ಸಾಧ್ಯವೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ​ವೈರಲ್ ಆಗಿರುವ ಈ ವಿಡಿಯೋವನ್ನು ಸೂರತ್ ನಗರ ಪೊಲೀಸ್, ಗುಜರಾತ್ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಟ್ಯಾಗ್ ಮಾಡಲಾಗಿದ್ದು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ..