ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇವಳೆಂಥಾ ತಾಯಿ?! ಡಿಕ್ಕಿ ಒಳಗೆ ಮಗುವನ್ನು ಮಲಗಿಸಿ ಸ್ಕೂಟಿ ಚಲಾಯಿಸಿದ ಮಹಿಳೆ

Viral Video: ಮಹಿಳೆಯೊಬ್ಬಳು ತನ್ನ ಮಗುವನ್ನು ಸ್ಕೂಟರ್‌ನ ಡಿಕ್ಕಿ ಒಳಗೆ ಮಲಗಿಸಿ ಸೀಟ್ ಬಂದ್ ಮಾಡಿ ಪ್ರಯಾಣಿಸಿದ ದೃಶ್ಯ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸದ್ಯ ಮಹಿಳೆಯ ಈ ವರ್ತನೆ ಕಂಡು ಅನೇಕರು ಕಿಡಿಕಾರಿದ್ದಾರೆ. ಮಗುವಿನ ಸುರಕ್ಷತೆಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಕೂಟಿಯ ಡಿಕ್ಕಿ ಒಳಗೆ ಮಗುವನ್ನು ಮಲಗಿಸಿ ಪ್ರಯಾಣ

ದೆಹಲಿ, ಮಾ. 12: ಇಂದು ಮಕ್ಕಳ ಬಗ್ಗೆ ಪೋಷಕರು ಎಷ್ಟು ಜಾಗೃತಿ ವಹಿಸಿದರೂ ಕಡಿಮೆಯೇ. ಇತ್ತೀಚೆಗಂತೂ ಪೋಷಕರು ಮಕ್ಕಳ ಮೇಲೆ ಸರಿಯಾದ ನಿಗಾ ಇಡದೇ ಬೇಜಾವಬ್ದಾರಿಯಿಂದ ವರ್ತಿಸುವ ಅನೇಕ ಘಟನೆಗಳು ನಡೆದಿವೆ. ಫೋನ್‌ನಲ್ಲಿಮಾತನಾಡುತ್ತ ಮಗುವನ್ನು ಆಟೋದಲ್ಲೇ ಬಿಟ್ಟು ಹೋದ ತಾಯಿ, ಮಗುವಿನ ಬಾಯಿ ಬದಲು ಕಿವಿಗೆ ಹಾಲಿನ ಬಾಟಲಿ ಇಟ್ಟ ತಾಯಿ ಹೀಗೆ ಅನೇಕ ಇಂತಹ ಘಟನೆಗಳು (Viral Video) ನಡೆದಿವೆ. ಇದೀಗ ಮಹಿಳೆಯೊಬ್ಬಳು ತನ್ನ ಮಗುವನ್ನು ಸ್ಕೂಟರ್‌ನ ಡಿಕ್ಕಿ ಒಳಗೆ ಮಲಗಿಸಿ ಸೀಟ್ ಬಂದ್ ಮಾಡಿ ಪ್ರಯಾಣಿಸಿದ ದೃಶ್ಯ ಕಂಡುಬಂದಿದೆ. ಸದ್ಯ ಮಹಿಳೆಯ ಈ ವರ್ತನೆ ಕಂಡು ಅನೇಕರು ಕಿಡಿಕಾರಿದ್ದಾರೆ.

ಮಗುವಿನ ಸುರಕ್ಷತೆಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದು ಚಿಂತೆಗೀಡು ಮಾಡಿದೆ. ಅನೇಕ ಬಳಕೆದಾರರು ತಾಯಿಯ ಈ ವರ್ತನೆಯನ್ನು ಅಸುರಕ್ಷಿತ ಮತ್ತು ಬೇಜವಾಬ್ದಾರಿ ಎಂದು ಕರೆದಿದ್ದಾರೆ.

ವಿಡಿಯೊ ನೋಡಿ:



ಮನೆಯ ಪ್ರವೇಶದ್ವಾರದಂತೆ ಕಾಣುವ ಹೊರಗೆ ಮಹಿಳೆಯೊಬ್ಬರು ನಿಂತಿರುವುದನ್ನು ವಿಡಿಯೊ ತೋರಿಸುತ್ತದೆ. ದ್ವಾರದ ಬಳಿ ನಿಲ್ಲಿಸಲಾದ ಸ್ಕೂಟರ್ ಪಕ್ಕಕ್ಕೆ ಅವಳು ಚಿಕ್ಕ ಮಗುವನ್ನು ತೋಳುಗಳಲ್ಲಿ ಎತ್ತಿಕೊಂಡು ಬಂದಿದ್ದಾಳೆ. ನಂತರ ಸ್ಕೂಟರ್‌ನ ಡಿಕ್ಕಿಯನ್ನು ತೆರೆದು ಅದರ ಸಣ್ಣ ಜಾಗದಲ್ಲಿ ಮಗುವನ್ನು ಮಲಗಿಸಿದ್ದಾಳೆ. ನಂತರ ಸೀಟ್ ಅನ್ನು ಲಾಕ್ ಮಾಡಿ‌ ಯಾವುದೇ ಆತಂಕವಿಲ್ಲದೆ ಸ್ಕೂಟರ್‌ನಲ್ಲಿ ಪ್ರಯಾಣಿಸಿದ್ದಾಳೆ.

ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ವಾಹನದಲ್ಲಿ ಕಾಣುವ ನಂಬರ್ ಪ್ಲೇಟ್ MP ನೋಂದಣಿ ಕೋಡ್‌ನೊಂದಿಗೆ ಪ್ರಾರಂಭವಾಗುವುದರಿಂದ, ಸ್ಕೂಟರ್ ಮಧ್ಯ ಪ್ರದೇಶದಲ್ಲಿ ನೋಂದಾಯಿಸಲ್ಪಟ್ಟಿರುವುದು ಖಚಿತ. ಈ ವಿಡಿಯೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಮಹಿಳೆಯ ಬೇಜವಾಬ್ದಾರಿತನದ ವಿರುದ್ಧ ಕೆಂಡವಾಗಿದ್ದಾರೆ.

ನೆಟ್ಟಿಗರೊಬ್ಬರು ಮಗುವಿಗೆ ಉಸಿರಾಡಲು ಸಾಧ್ಯವಾಗದೆ ಉಸಿರುಗಟ್ಟಿ ಸಾಯಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಮತ್ತೊಬ್ಬರು ಇದು ಅಪಾಯಕಾರಿ, ಕೇವಲ ಮೋಜಿಗಾಗಿ ಇಂತಹ ಕೃತ್ಯ ಮಾಡಬೇಡಿ ಎಂದು ಹೇಳಿದರು.