ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಪೊಲೀಸ್ ಅಧಿಕಾರಿಯ ವಿರುದ್ಧ ಟ್ರಕ್ ಚಾಲಕನಿಂದ ಸುಲಿಗೆ ಆರೋಪ; ವಿಡಿಯೊ ವೈರಲ್

ಪಶ್ಚಿಮ ಬಂಗಾಳದಿಂದ ತರಕಾರಿಗಳನ್ನು ಸಾಗಿಸುತ್ತಿದ್ದ ಸೋನು ಎಂಬ ಟ್ರಕ್ ಡ್ರೈವರ್‌, ರಾಷ್ಟ್ರೀಯ ಹೆದ್ದಾರಿ -2ರ ಡುಮ್ರಿ ಟೋಲ್ ಪ್ಲಾಜಾದಲ್ಲಿ ಮಧ್ಯರಾತ್ರಿ ಪೊಲೀಸರು ಟೋಲ್ ತೆರಿಗೆಯ ಜತೆಗೆ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯ ವೇಳೆ ನಡೆದ ಡ್ರೈವರ್ ಮತ್ತು ಪೊಲೀಸರ ವಾಗ್ವಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಣಕ್ಕೆ ಬೇಡಿಕೆಯಿಟ್ಟ ಪೊಲೀಸ್‌ಗೆ ಟ್ರಕ್‌ ಡ್ರೈವರ್‌ ಮಾಡಿದ್ದೇನು?

Profile pavithra Feb 10, 2025 3:25 PM

ಕೋಲ್ಕತಾ: ಇತ್ತೀಚೆಗಷ್ಟೇ ಲಾರಿ ಫೋಟೊ ತೆಗೆದ ಸಂಚಾರಿ ಪೊಲೀಸ್‌ಗೆ ಚಾಲಕನೊಬ್ಬ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ನಡೆದಿತ್ತು. ಇದೀಗ ಟ್ರಕ್ ಡ್ರೈವರ್ ಪೊಲೀಸ್ ಅಧಿಕಾರಿಯ ವಿರುದ್ಧ ಸುಲಿಗೆ ಆರೋಪ ಮಾಡಿದ್ದಾನೆ. ಈ ವಿಚಾರಕ್ಕೆ ಟ್ರಕ್ ಡ್ರೈವರ್‌ ಮತ್ತು ಪೊಲೀಸ್ ನಡುವಿನ ವಾಗ್ವಾದದ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಖತ್ ವೈರಲ್ (Viral Video) ಆಗಿದೆ. ವಿಡಿಯೊದಲ್ಲಿ ಟೋಲ್ ತೆರಿಗೆಯನ್ನು ಮೀರಿ ಹೆಚ್ಚುವರಿ ಮೊತ್ತವನ್ನು ಪೊಲೀಸರು ಬೇಡಿಕೆ ಇಟ್ಟಿದ್ದಾರೆ ಎಂದು ಡ್ರೈವರ್ ಆರೋಪಿಸುವುದು ಸೆರೆಯಾಗಿದೆ. ಇದು ಈ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ -2ರ ಡುಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ.

ಡ್ರೈವರ್‌ ತಿಳಿಸಿದ ಮಾಹಿತಿ ಪ್ರಕಾರ, ಮಧ್ಯರಾತ್ರಿ ಟೋಲ್ ಪ್ಲಾಜಾವನ್ನು ತಲುಪಿದಾಗ ಈ ಘಟನೆ ಸಂಭವಿಸಿದೆ. ಟೋಲ್ ತೆರಿಗೆಯ ಜತೆಗೆ ಪೊಲೀಸರು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸೋನು ಆಕ್ಷೇಪ ವ್ಯಕ್ತಪಡಿಸಿದಾಗ, ಪೊಲೀಸ್ ಪೇದೆ ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಡ್ರೈವರ್‌ ತನ್ನ ಮೊಬೈಲ್ ಫೋನ್‍ನಲ್ಲಿ ಈ ಮಾತುಕತೆಯನ್ನು ರೆಕಾರ್ಡ್ ಮಾಡಲು ಶುರುಮಾಡಿದ್ದಕ್ಕೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎನ್ನಲಾಗಿದೆ.

ವಿಡಿಯೊದಲ್ಲಿ "ನಾನು ನಿಮ್ಮನ್ನು ಕೆಲಸದಿಂದ ತೆಗೆಯುವಂತೆ ಮಾಡುತ್ತೇನೆ" ಎಂದು ಡ್ರೈವರ್ ಜಗಳದ ವೇಳೆ ಕೂಗಾಡಿದ್ದಾನೆ. ಆದರೆ ಪೊಲೀಸ್ ನಿರ್ಭೀತಿಯಿಂದ, “ನೀನು ಎಷ್ಟು ಬೇಕಾದರೂ ವಿಡಿಯೊ ಮಾಡು ನಾನು ಅದನ್ನು ಡಿಲೀಟ್ ಮಾಡುತ್ತೇನೆ” ಎಂದು ಹೇಳಿದ್ದಾನೆ.

ಈ ವಿಡಿಯೊವನ್ನು 1 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ ಮತ್ತು ಶೇರ್ ಮಾಡಿದ್ದಾರೆ. ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಡುಮ್ರಿ ಪೊಲೀಸ್ ಠಾಣೆಯ ಉಸ್ತುವಾರಿ ಪ್ರಣೀತ್ ಪಟೇಲ್ ಅವರು ಈ ವಿಷಯದ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದ್ದಾರೆ. ವಿಡಿಯೊ ಅಧಿಕೃತ ಎಂದು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಪ್ಲೀಸ್‌ ಬಿಟ್ಬಿಡಿ ಸರ್... ವಾಪಸ್‌ ಬರ್ತಾ ಸ್ವೀಟ್‌ ತರುತ್ತೀನಿ....ಟ್ರಾಫಿಕ್‌ ಪೊಲೀಸ್‌ಗೆ ವಧುವಿನ ಮನವಿ

ಇತ್ತೀಚೆಗೆ ಪಂಜಾಬ್‍ನಲ್ಲಿ ವಧು ಪ್ರಯಾಣಿಸುತ್ತಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ತಡೆದು ನಂತರ ಹಾಗೇ ಹೋಗಲು ಬಿಟ್ಟಿದ್ದಾರಂತೆ. ಟ್ರಾಫಿಕ್‌ ಪೊಲೀಸರು ಕಾರು ತಡೆದಾಗ ವಧು ಹಳದಿ ಶಾಸ್ತ್ರಕ್ಕೆ ಹೋಗುತ್ತಿದ್ದೇನೆ. ಈಗಾಗಲೇ ತಡವಾಗಿದೆ. ದಯವಿಟ್ಟು ಹೋಗಲು ಬಿಡಿ ಎಂದು ಕೇಳಿಕೊಂಡಿದ್ದಾಳೆ. ಹಾಗಾಗಿ ಪೊಲೀಸ್‌ ವಧುವಿನ ಕಾರಿನ ಡ್ರೈವಿಂಗ್ ಲೈಸೆನ್ಸ್‌ ಕೂಡ ಪರಿಶೀಲಿಸಲಿಲ್ಲ. ಹಾಗೇ ವಾಹನದ ಮೇಲೆ ದಂಡ ವಿಧಿಸಲಿಲ್ಲ, ಬದಲಾಗಿ ಕಾರನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ಕಳುಹಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೊಲೀಸರು ವಾಹನವನ್ನು ನಿಲ್ಲಿಸಿದ ಕಾರಣ ಬಹಿರಂಗವಾಗಿಲ್ಲ. ಆದರೆ ವಿಡಿಯೊದಲ್ಲಿ ವಧು ಮತ್ತು ಸಂಚಾರ ಪೊಲೀಸರ ಮಾತುಕತೆ ನಡೆದಿರುವುದು ರೆಕಾರ್ಡ್ ಆಗಿದೆ. ಪೊಲೀಸರು ಅವರಿಗೆ ಯಾವುದೇ ದಂಡ ವಿಧಿಸದೆ ಶುಭ ಹಾರೈಸಿ ಹೋಗಲು ಬಿಟ್ಟಿದ್ದಾರೆ. ಅದು ಅಲ್ಲದೇ ಹಿಂದಿರುಗಿ ಬರುವಾಗ ಪೊಲೀಸರಿಗೆ ಸಿಹಿತಿಂಡಿಗಳ ಬಾಕ್ಸ್‌ ಅನ್ನು ಉಡುಗೊರೆಯಾಗಿ ನೀಡುವುದಾಗಿ ಆಕೆ ಹೇಳಿದ್ದಾಳೆ.