Saturday, 14th December 2024

Viral News: ಆಲೂಗಡ್ಡೆ ಮಾರಾಟದ ನಡುವೆ ‘ಕೈ ಕೆಲಸ’; ವ್ಯಾಪಾರಿಯ ಕೃತ್ಯಕ್ಕೆ ಖಂಡನೆ

Viral News

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಅರಿವು ಕೆಲವರಿಗೆ ಇರುವುದಿಲ್ಲ. ಹೀಗಾಗಿ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸುವುದು ಈಗ ಮಾಮೂಲಿಯಾಗಿದೆ. ಅಂತಹದೊಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಆತ ತರಕಾರಿ ಮಾರಾಟಗಾರ ಎಂಬುದು ಆತಂಕದ ವಿಷಯ. ಈ ಅವಿವೇಕಿ ಆಲೂಗಡ್ಡೆಗಳನ್ನು ಮಾರಾಟ ಮಾಡುವಾಗ ಕೈಕೆಲಸದಲ್ಲಿ ತೊಡಗಿರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಇದು ವೀಕ್ಷಕರ ಆಕ್ರೋಶಕ್ಕೆ  ಕಾರಣವಾಗಿದೆ.  

ವಿಡಿಯೊದಲ್ಲಿ  ಮಾರಾಟಗಾರ ತನ್ನ ಸ್ಟಾಲ್‍ನಲ್ಲಿ ಕುಳಿತು ಅಲೂಗಡ್ಡೆಯನ್ನು ಮಾರಾಟ ಮಾಡುತ್ತಿದ್ದಾನೆ. ಆದರೆ ಮೇಲ್ನೋಟಕ್ಕೆ ಆತ ಆಲೂಗಡ್ಡೆ ಮಾರಾಟ ಮಾಡುವಂತೆ ಕಾಣಿಸಿದರೂ ಕೂಡ ನಂತರ ನೋಡಿದರೆ  ಆತ ಮೇಜಿನ ಕೆಳಗೆ ಹೈ ಹಾಕಿ ತನ್ನ ಗುಪ್ತಾಂಗ ಸವರುತ್ತಾ ಅಸಭ್ಯ ಕೃತ್ಯದಲ್ಲಿ ತೊಡಗಿರುವುದು ಕಾಣಿಸುತ್ತದೆ. ಮನೋಜ್ ಶಂಕರ್ ಎಂಬ ಬಳಕೆದಾರ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆತನ ಈ  ಕೃತ್ಯದ ಬಗ್ಗೆ ಜನರು ಸಿಟ್ಟಾಗಿದ್ದು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ವಿಡಿಯೊ  ವೈರಲ್ ಆಗಿದ್ದು, ಅನೇಕರು ಮಾರಾಟಗಾರನ  ಸಭ್ಯತೆ ಪ್ರಶ್ನಿಸಿದ್ದಾರೆ. ಆದರೆ ಈ ಘಟನೆಗೆ ಆ ಪ್ರದೇಶದ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯಿಸಿಲ್ಲ, ಆದರೆ ಸಾರ್ವಜನಿಕರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ವಿಡಿಯೊ ಸಾರ್ವಜನಿಕರ ಸುರಕ್ಷತೆ, ಮಾರಾಟಗಾರರ ವರ್ತನೆ ಮತ್ತು ಮಾರುಕಟ್ಟೆಗಳಲ್ಲಿ ಕಟ್ಟುನಿಟ್ಟು ನಿಯಮಗಳ ಪಾಲನೆಯ ಅಗತ್ಯವನ್ನು ಹೇಳಿದೆ.

ಈ ಘಟನೆಯು ತುಂಬಾ ಆತಂಕಕಾರಿಯಾಗಿದ್ದರೂ, ಕೆಲವು ವ್ಯಕ್ತಿಗಳ ಇಂತಹ ಅನುಚಿತ ವರ್ತನೆಗಳನ್ನು ಸೋಶಿಯಲ್ ಮೀಡಿಯಾಗಳು ಎತ್ತಿ ತೋರಿಸುತ್ತಿವೆ. ಅನೇಕರು  ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯದಂತೆ ತಡೆಯಲು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕರೆ ನೀಡಿದ್ದಾರೆ.

ಇದನ್ನೂ ಓದಿ:ಪ್ರಿಯಕರನ ಜೊತೆ ಸುತ್ತಾಡಿದ ಕಾಲೇಜು ಹುಡುಗಿ ಕೊನೆಗೆ ಗರ್ಭಪಾತ ಮಾತ್ರೆ ತಿಂದು ಸಾವು

ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳು ಅಶ್ಲೀಲತೆಯಲ್ಲಿ ತೊಡಗಿಕೊಂಡಿರುವುದು ಇದೇ ಮೊದಲಲ್ಲಾ. ಈ ಹಿಂದೆ ಬಸ್‍ನಲ್ಲಿ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಪಕ್ಕದ ಸೀಟಿನಲ್ಲಿ ಕುಳಿತು ಇಂಥದ್ಧೇ ಕುಕೃತ್ಯದಲ್ಲಿ ತೊಡಗಿಕೊಂಡಿದ್ದಲ್ಲದೇ ತನ್ನ ಖಾಸಗಿ ಭಾಗವನ್ನು ಮಹಿಳೆಗೆ ತೋರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಅದನ್ನು ತನ್ನ ಮೊಬೈಲ್‍ನಲ್ಲಿ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.