Monday, 14th October 2024

Viral Video: ಓವರ್‌ಟೇಕ್‌ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಸ್ಕೂಟರ್‌ ಸವಾರ; ಬದುಕುಳಿದದ್ದೇ ಪವಾಡ!

Viral Video

ಬೆಂಗಳೂರು : ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಎಚ್ಚರಿಕೆಯಿಂದ ಇರಲೇಬೇಕು. ಯಾಕೆಂದರೆ ಕೆಲವು ಜನರು ವೇಗವಾಗಿ ಗಾಡಿ ಓಡಿಸುವುದಲ್ಲದೆ ಬೇರೆ ವಾಹನಗಳನ್ನು ಹಿಂದಿಕ್ಕಿ ಮುಂದೆ ಹೋಗಲು ಓವರ್ ಟೇಕ್ ಮಾಡುತ್ತಾ ಫಜೀತಿ ತಂದಿಡುತ್ತಾರೆ. ಇದರಿಂದ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವುದರ ಜೊತೆಗೆ ಬೇರೆಯವರ ಜೀವಕ್ಕೂ ಕುತ್ತು ತರುತ್ತಾರೆ. ಇದೀಗ ಅಂತಹದೊಂದು ಅಪಘಾತದ ಘಟನೆ ನಡೆದಿದ್ದು, ಅದರ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಟ್ವಿಟರ್ ನಲ್ಲಿ “ಘರ್ ಕಾ ಕಾಲೇಶ್” ಎಂಬ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೊದಲ್ಲಿ ಅಸುರಕ್ಷಿತ ಚಾಲನೆಯ ಅಪಾಯಗಳನ್ನು ತಿಳಿಸಲಾಗಿದೆ ಮತ್ತು ಈ ವಿಡಿಯೊ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿವೆ. ವೈರಲ್ ವಿಡಿಯೊದಲ್ಲಿ, ಬೈಕ್‌ನಲ್ಲಿ ಹೋಗುತಿದ್ದ ವ್ಯಕ್ತಿ ಕಾರಿನಿಂದ ಸ್ವಲ್ಪ ದೂರದಲ್ಲಿದ್ದು, ಆತ ಮುಂದೆ ಬರುತ್ತಿರುವ ವಾಹನಗಳನ್ನು ಸರಿಯಾಗಿ ನೋಡದೆ ಮುಂದೆ ಹೋಗುತ್ತಿರುವ ಕಾರನ್ನು ಓವರ್‌ಟೇಕ್‌ ಮಾಡಿದ್ದಾನೆ. ಆಗ ಆತ ಮುಂದೆ ಹೋಗುವಾಗ ಸಡನ್ ಆಗಿ ಮುಂದೆ ಬಂದ ಕಾರು ಕೆಲವೇ ಸೆಕೆಂಡುಗಳಲ್ಲಿ, ಬೈಕ್‍ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವು ಗಂಭೀರವಾಗಿದ್ದು, ಇದನ್ನು ನೋಡಿದವರ ಎದೆ ನಡುಗುತ್ತದೆ.

ಪವಾಡಸದೃಶವಾಗಿ, ಬೈಕ್ ಚಾಲಕ ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊನೆಯಲ್ಲಿ ಆಘಾತಗೊಂಡಿದ್ದ ವೀಕ್ಷಕರು ಕೂಡ ಏನು ಆಗಿಲ್ಲವೆಂದು ನಿರಾಳರಾಗಿದ್ದಾರೆ. ಈ ವಿಡಿಯೊ ಸಾವಿರಾರು ವೀಕ್ಷಣೆಗಳು ಮತ್ತು ಕಾಮೆಂಟ್‍ಗಳನ್ನು ಪಡೆದುಕೊಂಡಿದೆ. ಸಂಚಾರ ನಿಯಮಗಳನ್ನು ಉಲ್ಲಂಘನೆ ಈ ವಿಡಿಯೊದಲ್ಲಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ:ಮೊದಲ ರಾತ್ರಿ ಗಂಡನನ್ನು ಯಾಮಾರಿಸಲು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರಂತೆ ಯುವತಿಯರು!

ಹಾಗಾಗಿ ಹಲವಾರು ಬಳಕೆದಾರರಲ್ಲಿ, ಕೆಲವರು ಚಾಲಕನ ಬೇಜವಾಬ್ದಾರಿಯನ್ನು ಬೈದರೆ, ಇತರರು ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡಿದ್ದಾರೆ. ಈ ವೈರಲ್ ವಿಡಿಯೊದಲ್ಲಿ ರಸ್ತೆಯನ್ನು ಚಲಿಸುವ ಪ್ರತಿಯೊಬ್ಬರಿಗೂ ಬಹಳ ಜಾಗರೂಕರಾಗಿ ಮತ್ತು ತಾಳ್ಮೆಯಿಂದಿರಬೇಕು ಎಂಬುದನ್ನು ತಿಳಿಸುತ್ತದೆ. ಓವರ್ ಟೇಕ್ ಮಾಡುವುದು ಚಾಲಕನಿಗೆ ಮಾತ್ರವಲ್ಲದೆ ಇತರರಿಗೂ ತೊಂದರೆಯನ್ನು ಉಂಟುಮಾಡುತ್ತದೆ. ಹಾಗಾಗಿ ಈ ಬಗ್ಗೆ ಚಾಲಕರು ತಿಳಿದಿರಬೇಕು.