Saturday, 23rd November 2024

Viral Video: ರೈಲಿನ ಬಾಗಿಲು ಹಿಡಿದು ವೃದ್ಧನ ಸರ್ಕಸ್‌; ಇದೆಂಥಾ ಮೂರ್ಖತನವೆಂದ ನೆಟ್ಟಿಗರು; ವಿಡಿಯೊ ನೋಡಿ

Viral Video

ಮುಂಬೈ: ಮುಂಬೈ ಲೋಕಲ್ ರೈಲುಗಳು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದು, ಈ ಹಿಂದೆ ರೈಲುಗಳ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಸಖತ್‌ ವೈರಲ್‌ ಆಗಿದೆ. ಇತ್ತೀಚೆಗೆ ಮತ್ತೊಂದು ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದರಲ್ಲಿ ರೈಲಿನ ಡೋರ್‌ ಮುಚ್ಚದಂತೆ ತಡೆಯಲು ವೃದ್ಧರೊಬ್ಬರು ಮಾಡಿದ ಸರ್ಕಸ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ವೈರಲ್ ವಿಡಿಯೊದಲ್ಲಿ ಮುಂಬೈ ಎಸಿ ಲೋಕಲ್ ರೈಲನ್ನು ಹತ್ತುವ ಸಂದರ್ಭದಲ್ಲಿ ವೃದ್ಧರೊಬ್ಬರು ಮುಚ್ಚುತ್ತಿರುವ  ಆಟೋಮ್ಯಾಟಿಕ್‌ ಡೋರ್‌ಗಳನ್ನು  ಹಿಡಿದುಕೊಂಡು ಅದು ಮುಚ್ಚದಂತೆ ತಡೆಯಲು ಪ್ರಯತ್ನಿಸಿದ್ದಾರೆ. ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ‘ಅನ್ಸೀನ್ ಮುಂಬೈ’ ಎಂಬ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ ಆಗಿದೆ. ಈ ವಿಡಿಯೊಗೆ ವೃದ್ಧ ವ್ಯಕ್ತಿಯ ಪ್ರಯತ್ನವನ್ನು ಖಂಡಿಸುತ್ತಾ ಅದನ್ನು  “ಮೂರ್ಖತನ!” ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೊ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಅನೇಕ ನೆಟ್ಟಿಗರು ಕಮೆಂಟ್ ಮಾಡುವುದರ ಮೂಲಕ ವೃದ್ಧ ವ್ಯಕ್ತಿಯ ಮೇಲೆ ಕಿಡಿಕಾರಿದ್ದಾರೆ.

ಈ ಘಟನೆಯನ್ನು ಗಮನಿಸಿದ ಒಬ್ಬರು, “ನಿಮ್ಮಿಂದಾಗಿ ಹಿಂದಿನಿಂದ ಬರುವ ರೈಲುಗಳು ತಡವಾಗುತ್ತವೆ ಮತ್ತು ಜನಸಂದಣಿ ಇನ್ನೂ ಹೆಚ್ಚಾಗುತ್ತದೆ. ಇಂತಹವರಿಗೆ ತಕ್ಕ ಪಾಠ ಕಲಿಸಬೇಕು” ಎಂದು ಹೇಳಿದ್ದಾರೆ. “ಒಳಗೆ ಒಬ್ಬರು ಅಥವಾ ಇಬ್ಬರು ಪೊಲೀಸರು ಇರಬೇಕು. ಅಂತಹ ಕ್ರಮಗಳ ಮೇಲೆ ದಂಡ ವಿಧಿಸಲು ಆಗದಿದ್ದರೆ  ಅವರಿಗೆ ಹೊಡೆದು ಬುದ್ದಿ ಕಲಿಸಬೇಕು” ಎಂದು ಮತ್ತೊಬ್ಬರು ತಿಳಿಸಿದ್ದಾರೆ. ವೃದ್ಧನ ಅಪಾಯಕಾರಿ ಕೃತ್ಯವನ್ನು ಹೆಚ್ಚಿನ ಜನರು ಖಂಡಿಸಿದರೆ, ಕೆಲವು ಪ್ರಯಾಣಿಕರು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಪ್ರಕರಣಗಳು ಹೆಚ್ಚಿವೆ ಮತ್ತು ಇದು ಸಾಮಾನ್ಯ ವಿಷಯವಾಗಿದೆ ಎಂದು ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ದೈತ್ಯ ಕೋಳಿಯಾಕಾರದಲ್ಲಿರೋ ಹೊಟೇಲ್‌ ನೋಡಿದ್ದೀರಾ? ಗಿನ್ನೆಸ್ ದಾಖಲೆ ಬರೆದ 114 ಅಡಿ ಎತ್ತರದ ಚಿಕನ್ ಶೇಪ್ ರೆಸಾರ್ಟ್‌

ಮುಂಬೈ ಲೋಕಲ್ ರೈಲುಗಳಲ್ಲಿ ಯಾವಾಗಲೂ ಜನಸಂದಣಿ ದಟ್ಟವಾಗಿರುತ್ತದೆ. ಹಾಗಾಗಿ ಜನರು ಹತ್ತಿ ಇಳಿಯಲು ಯಾವಾಗಲೂ ಒದ್ದಾಡುತ್ತಿರುತ್ತಾರೆ. ಈ ಹಿಂದೆ ಜನದಟ್ಟಣೆಯ ರೈಲಿನಿಂದ ಇಳಿಯಲು ವ್ಯಕ್ತಿಯೊಬ್ಬರು ಹೆಣಗಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. 11 ಸೆಕೆಂಡುಗಳ ಈ ವಿಡಿಯೊ ಕಳವಳಗಳನ್ನು ಹುಟ್ಟುಹಾಕಿದೆ.  ಈ ಸಾರಿಗೆ ಸೇವೆಯನ್ನು ಅವಲಂಬಿಸಿರುವ ಪ್ರಯಾಣಿಕರು ಎದುರಿಸುತ್ತಿರುವ ಸುರಕ್ಷತಾ ಸವಾಲುಗಳನ್ನು ಈ ವಿಡಿಯೊ ಎತ್ತಿ ತೋರಿಸುತ್ತದೆ.