ನವದೆಹಲಿ: ಜೀವನ ಎನ್ನುವುದು ಕ್ಷಣಿಕವಾದುದು. ಯಾಕೆಂದರೆ ಸಾವು ಯಾರಿಗೆ ಯಾವಾಗ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಇದೀಗ ಪಂಜಾಬ್ ಲುಧಿಯಾನದ ಗುರುನಾನಕ್ ಕ್ರೀಡಾಂಗಣದಲ್ಲಿ ಅಥ್ಲೀಟ್ಯೊಬ್ಬರು ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನಪ್ಪಿದ್ದಾರೆ. ಈ ಘೊರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ಅಥ್ಲೀಟ್ ವರಿಂದರ್ ಸಿಂಗ್ ಮೃತಪಟ್ಟ ವ್ಯಕ್ತಿ. ಇವರಿಗೆ 54 ವರ್ಷ ವಯಸ್ಸಾಗಿದ್ದು, ಇವರು ಸ್ಟೇಡಿಯಂನಲ್ಲಿ ಸ್ನೇಹಿತನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ವರಿಂದರ್ ಸಿಂಗ್ ಖೇಡಾನ್ ವತನ್ ಪಂಜಾಬ್ ದಿಯಾನ್ ಸೀಸನ್ 3 ರಲ್ಲಿ ಭಾಗವಹಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಲುಧಿಯಾನ ಸೇರಿದಂತೆ ಪಂಜಾಬ್ನ ಐದು ಜಿಲ್ಲೆಗಳಲ್ಲಿ ಇತ್ತೀಚೆಗೆ ಪ್ರಾರಂಭವಾದ ಈ ಸ್ಪರ್ಧೆಯು ಅಥ್ಲೆಟಿಕ್ಸ್, ಬೇಸ್ಬಾಲ್, ಕಿಕ್ ಬಾಕ್ಸಿಂಗ್ ಮತ್ತು ಲಾನ್ ಟೆನಿಸ್ನಂತಹ ಸ್ಪರ್ಧೆಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ನವೆಂಬರ್ 9 ರವರೆಗೆ ಮುಂದುವರಿಯಲಿದೆ.
मौत कब आ जाए, कुछ नहीं पता…💔
— Sachin Gupta (@SachinGuptaUP) November 6, 2024
लुधियाना के गुरु नानक स्टेडियम में एथलीट वरिंदर सिंह फोन पर दोस्त से बात कर रहे थे। अचानक नीचे गिरे और मौत हो गई। pic.twitter.com/tBtlkDCpQY
ಜಲಂಧರ್ನಿಂದ ಲುಧಿಯಾನಕ್ಕೆ ಬಂದಿದ್ದ ವರಿಂದರ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವರದಿಗಳ ಪ್ರಕಾರ, ಸಿಂಗ್ ಮಧ್ಯಾಹ್ನ 3 ಗಂಟೆಗೆ ತಮ್ಮ ಆಟವನ್ನು ಮುಗಿಸಿ ನಂತರ ಇತರ ಕ್ರೀಡಾಪಟುಗಳು ಆಡುವುದನ್ನು ನೋಡುತ್ತಿದ್ದರು. ಸಂಜೆ 5.30ರ ಸುಮಾರಿಗೆ ಹೃದಯಾಘಾತದಿಂದ ಅವರು ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಅವರ ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಮೆಟ್ರೋದೊಳಗೆ ಈ ಕಾರಣಕ್ಕೆ ಕಿತ್ತಾಡಿದ ಮಹಿಳೆ; ವಿಡಿಯೊ ನೋಡಿ
ವರಿಂದರ್ ಅವರ ಪತ್ನಿ ಮತ್ತು ಮಗ ಶವವನ್ನು ಅಂತ್ಯಕ್ರಿಯೆಗಾಗಿ ಅವರ ಹುಟ್ಟೂರಾದ ಜಲಂಧರ್ಗೆ ತೆಗೆದುಕೊಂಡು ಹೋಗಿದ್ದಾರೆ. ವರಿಂದರ್ ಅವರ ಮಗಳು ವಿದೇಶದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾಳೆ. ಹಾಗೂ ಅವರ ಮಗ ಜಲಂಧರ್ನಲ್ಲಿ ಎಂಜಿನಿಯರ್ ಆಗಿದ್ದಾರೆ. ವರಿಂದರ್ ಅವರ ಖಾಸಗಿ ಕಂಪನಿಯಲ್ಲಿ ಎಚ್ಆರ್ ಆಗಿದ್ದರು.