ಬೆಂಗಳೂರು : ಫಸ್ಟ್ ನೈಟ್ ಎನ್ನುವುದು ವಧು ವರರ ಜೀವನದಲ್ಲಿ ತುಂಬಾ ವಿಶೇಷವಾದದ್ದು. ಸಾಮಾನ್ಯವಾಗಿ ಇದು ಖಾಸಗಿ ಕ್ಷಣವಾದ್ದರಿಂದ ಇದನ್ನು ಯಾರು ಬೇರೆಯವರೊಡನೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಇಲ್ಲೊಂದು ಜೋಡಿ ತಮ್ಮ ಫಸ್ಟ್ ನೈಟ್ ಕ್ಷಣವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ. ಅನೇಕರು ಇದನ್ನು ನೋಡಿ ಶಾಕ್ ಆಗಿದ್ದಾರೆ.
ವೈರಲ್ ವಿಡಿಯೊದಲ್ಲಿ, ಕೋಣೆಯೊಂದರಲ್ಲಿ ವಧು ತನ್ನ ವಿಶೇಷ ಕ್ಷಣಕ್ಕಾಗಿ ಅಲಂಕಾರ ಮಾಡಿಕೊಂಡು ತನ್ನ ವರನ ಮುಂದೆ ಬಂದು ನಿಂತಿದ್ದಾಳೆ. ಈ ಸಮಯದಲ್ಲಿ, ವರನು ತನ್ನ ನವವಧುವಿಗೆ ಮದುವೆಯ ಆಭರಣಗಳನ್ನು ತೆಗೆಯಲು ಹಾಗೂ ಮದುವೆಯ ಉಡುಪುಗಳನ್ನು ತೆಗೆಯಲು ಸಹಾಯ ಮಾಡಿದ್ದಾನೆ. ಆದರೆ ಇದ್ದಕ್ಕಿದ್ದಂತೆ ವರನು ರೋಮ್ಯಾಂಟಿಕ್ ಆಗಿ ವಧುವಿನ ಆಭರಣಗಳನ್ನು ತೆಗೆಯುವಾಗ, ಅವಳ ಸೊಂಟವನ್ನು ಹಿಡಿದು ಚುಂಬಿಸಿದ್ದಾನೆ. ಇದರ ನಂತರ, ಕುತ್ತಿಗೆಯಿಂದ ಆಭರಣಗಳನ್ನು ತೆಗೆಯುವಾಗ ವಧುವಿನ ತುಟಿಗೆ ಚುಂಬಿಸಿದ್ದಾನೆ.
मोबाईल की unboxing तो बहुत देखी होगी
— HasnaZarooriHai🇮🇳 (@HasnaZaruriHai) October 13, 2024
आज पहली बात देखो बीवी की unboxing
😂😂😂😂😂😂😂 pic.twitter.com/8Yb7RxRpsZ
ಈ ವಿಡಿಯೊವನ್ನು arushirahulofficial_ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಇದನ್ನು ಇಲ್ಲಿಯವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ವಿಡಿಯೊವನ್ನು ಸುಮಾರು 38 ಸಾವಿರ ಬಾರಿ ಲೈಕ್ ಮಾಡಲಾಗಿದೆ. ಅನೇಕರು ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. ಇಂತಹ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೇ ಮೊದಲಬಾರಿ ಅಲ್ಲ. ಇಂತಹ ಅನೇಕ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಇದೀಗ ಈ ವಿಡಿಯೊ ನೋಡಿದ ಅನೇಕ ಬಳಕೆದಾರರು ದಂಪತಿಗೆ ಛೀಮಾರಿ ಹಾಕಿದ್ದಾರೆ.
ಇದನ್ನೂ ಓದಿ: ಸಿರಿವಂತರಾಗಿದ್ದರೂ ರತನ್ ಟಾಟಾ ಧರಿಸುತ್ತಿದ್ದ ವಾಚ್ ಯಾವುದು ನೋಡಿ!
ನೆಟ್ಟಿಗರೊಬ್ಬರು, ‘ಈ ನವಜೋಡಿಯು ನೈತಿಕತೆಯ ಗಡಿಯನ್ನು ಮೀರಿದ್ದಾರೆ ‘ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇತ್ತೀಚಿಗೆ ಜನರು ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ‘ಇದೇನಾ ನಮ್ಮ ಸಂಸ್ಕೃತಿ’ ಎಂದು ಬರೆದುಕೊಂಡಿದ್ದಾರೆ. ಹೀಗೆ ಅನೇಕರು ಈ ನವಜೋಡಿಯು ತಮ್ಮ ಖಾಸಗಿ ವಿಡಿಯೋ ಹಂಚಿಕೊಂಡದ್ದಕ್ಕೆ ಅವರ ಮೇಲೆ ಕಿಡಿಕಾರಿದ್ದಾರೆ.