ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು, ಬೀಡಾಡಿ ಜಾನುವಾರುಗಳು ಪಾದಚಾರಿಗಳು, ಸಾರ್ವಜನಿಕರ ಮೇಲೆ ಅಟ್ಯಾಕ್ ಮಾಡುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಕಿರಿದಾದ ಓಣಿಯಲ್ಲಿ ಮಹಿಳೆಯೊಬ್ಬರ ಮೇಲೆ ಗೂಳಿಯೊಂದು ದಾಳಿ ಮಾಡಿದೆ. ಈ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಕಿರಿದಾದ ಓಣಿಯಲ್ಲಿ ಒಂದು ಬದಿಯಯಲ್ಲಿ ಮಹಿಳೆ ನಡೆದುಕೊಂಡು ಬರುತ್ತಿದ್ದಾಗ ಮತ್ತೊಂದು ಬದಿಯಿಂದ ಬಂದ ಗೂಳಿ ಮಹಿಳೆಯ ಮೇಲೆ ದಾಳಿ ಮಾಡಿದೆ. ಈ ಘಟನೆಯಲ್ಲಿ ಗೂಳಿ ಮಹಿಳೆಯನ್ನು ನೆಲಕ್ಕೆ ತಳ್ಳಿ ಎಳೆದೊಯ್ದ ನಂತರ ಭೀಕರವಾಗಿ ಗುದ್ದಿದೆ. ಮಹಿಳೆ ಕೂಡ ಧೈರ್ಯಮಾಡಿ ಗೂಳಿಯ ಕೊಂಬನ್ನು ಹಿಡಿದುಕೊಂಡಿದ್ದಾಳೆ. ಇದರಿಂದ ಅದಕ್ಕೆ ದಾಳಿ ಮಾಡಲು ಸಾಧ್ಯವಾಗಲಿಲ್ಲ. ಅವಳು ಗೂಳಿಯನ್ನು ಹಿಡಿದು ಸಹಾಯಕ್ಕಾಗಿ ಕಿರುಚಾಡಿದ್ದಾಳೆ. ಅವಳ ಕೂಗನ್ನು ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಬಂದು ಗೂಳಿಯನ್ನು ಹೊಡೆದೊಡಿಸಿ ಮಹಿಳೆಯನ್ನು ಗೂಳಿಯಿಂದ ರಕ್ಷಿಸಿದ್ದಾರೆ.
देखिए राह चलते ये हादसा किसी के भी साथ हो सकता है
— Lavely Bakshi (@lavelybakshi) November 6, 2024
दिल्ली में एक गुस्सैले आवारा पशु ने महिला को उठाकर पटका और घसीटा, महिला और लोग चीखते चिल्लाते रहे
लोगो ने बचाने की कोशिश भी लेकिन लोगो पर भी हमला कर दिया 📍वीडियो दिल्ली के आया नागर का है pic.twitter.com/xTIsu7DnKj
ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅನೇಕರು ಇದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೊಗೆ ಅನೇಕರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಈ ಬಿಡಾಡಿ ದನಗಳ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ ಮತ್ತು ನಿರಂತರವಾಗಿ ಹೆಚ್ಚುತ್ತಿರುವ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಅಳಿಲನ್ನು ಸಹೋದರ ಎಂದು ಭಾವಿಸಿ ಪೂಜಿಸಿದ ಯುವತಿ! ವಿಡಿಯೊ ನೋಡಿ
ಗೂಳಿ ದಾಳಿ ಘಟನೆ ಇದೇ ಮೊದಲಲ್ಲ. ಕಳೆದ ತಿಂಗಳಿನಲ್ಲಿ ಗದಗದ ಬೆಟಗೇರಿಯ ಮಾರ್ಕಂಡೇಶ್ವರ ದೇವಸ್ಥಾನದ ಬಳಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ ನಡೆಸಿದೆ. ನರಸಾಪೂರ ಡಿಪ್ಲೊಮಾ ಕಾಲೇಜಿನಿಂದ ಮರಳಿ ಮನೆಗೆ ಬರುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಇದ್ದಕ್ಕಿದ್ದಂತೆ ಗೂಳಿ ದಾಳಿ ಮಾಡಿದೆಯಂತೆ. ಅದೃಷ್ಟವಶಾತ್ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.