Saturday, 14th December 2024

Viral Video: ಪ್ಯಾಂಟ್ ಕಳಚಿ ಬಿದ್ದರೂ ಜುಟ್ಟು ಬಿಡದೇ ಹೊಡೆದಾಡಿಕೊಂಡ ಹುಡುಗಿಯರು! ವಿಡಿಯೊ ವೈರಲ್

Viral Video

ನಾಗಲ್ಯಾಂಡ್: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಜನರ ಫೈಟಿಂಗ್ ವಿಡಿಯೊಗಳು ವೈರಲ್ ಆಗುತ್ತವೆ. ಇದರಲ್ಲಿ ಕೆಲವೊಂದು ವಿಡಿಯೊಗಳು ಹಾಸ್ಯಮಯವಾಗಿದ್ದರೆ ಕೆಲವೊಂದು ತುಂಬಾ ಅಘಾತಕಾರಿಯಾಗಿರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ  ನಾಗಾಲ್ಯಾಂಡ್‌ ಹುಡುಗಿಯರಿಬ್ಬರು ಬೀದಿಯಲ್ಲಿ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.

ಈ ವೈರಲ್ ವಿಡಿಯೊದಲ್ಲಿ ಅಲ್ಲಿದ್ದವರು ಒಂದೇ ಬಣ್ಣದ ಬಟ್ಟೆ ಧರಿಸಿದ್ದಾರೆ. ಅವರಲ್ಲಿ  ಇಬ್ಬರು ಹುಡುಗಿಯರು ತುಂಬಾ ಘೋರವಾಗಿ ನಡು ಬೀದಿಯಲ್ಲಿ ಜಗಳವಾಡಿದ್ದಾರೆ. ಅವರಲ್ಲಿ ಒಬ್ಬಳು ಪ್ಯಾಂಟ್ ಬಿಚ್ಚಿ ಹೋದರೂ ಅದರ ಬಗ್ಗೆ ಗಮನ ಕೊಡದೆ ತನ್ನ ಎದುರಾಳಿಗೆ ಹೊಡೆಯುವುದರಲ್ಲೇ ತಲ್ಲೀನಳಾಗಿದ್ದಾಳೆ. ಪ್ಯಾಂಟ್ ಜಾರಿದ ಹುಡುಗಿ ತನ್ನ ಪ್ಯಾಂಟ್ ಸರಿಮಾಡಿಕೊಂಡು ಮತ್ತೆ ಅಡ್ಡಾಡಿಸಿಕೊಂಡು ಇನ್ನೊಂದು ಹುಡುಗಿಯನ್ನು ಹೊಡೆದಿದ್ದಾಳೆ. ಆಕೆ ಕೊನೆಗೆ ಮೂರ್ಛೆ ಹೋದ ಬಳಿಕ ಅಲ್ಲಿದ್ದವರು ಅವಳನ್ನು ಸಮಾಧಾನ ಪಡಿಸಿ ಕರೆದುಕೊಂಡು ಹೋಗಿದ್ದಾರೆ. ಇತ್ತ ತಲೆ ಸುತ್ತಿ ಬಿದ್ದ ಹುಡುಗಿಯನ್ನು ಎಲ್ಲರೂ ಸೇರಿ ಮೇಲೆತ್ತಿದ್ದಾರೆ. ಒಟ್ಟಾರೆ ಈ ಜಗಳ ಒಂದು ಘೋರ ಸ್ವರೂಪ ಪಡೆದುಕೊಂಡಿತ್ತು. ಆದರೆ ಅವರ ನಡುವೆ ಜಗಳ ಯಾವ ಕಾರಣಕ್ಕೆ ಶುರುವಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಹುಡುಗಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯಾರ ಮಧ್ಯೆ, ಯಾವ ಕಾರಣಕ್ಕೆ ಜಗಳ ನಡೆದಿದೆ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಹುಡುಗಿಯರು ರೀಲ್‍ಗಾಗಿ ಹೊಡೆದಾಡಿದ್ದೇ ಅಥವಾ ರಿಯಲ್ ಆಗಿ ಜಗಳವಾಡಿದ್ದಾರೆಯೇ? ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇನ್‌ಕಮ್ ಸರ್ಟಿಫಿಕೇಟ್‌ನಲ್ಲಿ 2 ರೂ. ಮುದ್ರಣ; ಅಧಿಕಾರಿಯ ತಪ್ಪಿಗೆ ಬಡ ಕುಟುಂಬದ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್‌ ನಷ್ಟ!

ಈ ವಿಡಿಯೊಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ಹುಡುಗಿಯರು ಡಬ್ಲ್ಯೂ ಡಬ್ಲ್ಯೂ ಇ ನೋಡಿ ಪ್ರಚೋದನೆಗೆ ಒಳಗಾಗಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಹುಡುಗಿಯರು ಇವರಾದ್ರೆ ಮೊದಲು ಇವರನ್ನು ಅಲ್ಲಿಂದ ಹೊರಗೆ ಹಾಕಿ. ಇಂಥವರಿಂದ ಅಲ್ಲಿನ ವಾತಾವರಣ ಹದಗೆಡುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತವರನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಇಂಥ ಘಟನೆ ಹೆಚ್ಚಾಗುತ್ತೆ. ಹಾಗಾಗಿ ಇವರಿಗೆ ತಕ್ಕ ಶಿಕ್ಷೆ ವಿಧಿಸಬೇಕು  ಎಂದು ಇನ್ನೊಬ್ಬರು  ಕಾಮೆಂಟ್ ಮಾಡಿದ್ದಾರೆ.