Saturday, 23rd November 2024

Viral Video: ಬೋರ್ಡ್‌ನಲ್ಲಿ ಮಾತ್ರ ಹಿಂದೂ ಹೆಸರು… ಬಿರಿಯಾನಿ ಅಂಗಡಿ ಒಳಗೆ ನೋಡಿದ್ರೆ ಕಥೆ ಬೇರೇನೆ ಇದೆ… ಭಾರೀ ಸದ್ದು ಮಾಡ್ತಿದೆ ಈ ವಿಡಿಯೋ!

Viral Video

ಲಖನೌ:  ಉತ್ತರ ಪ್ರದೇಶದ ಬರೇಲಿಯಲ್ಲಿ ಅನ್ಯಧರ್ಮಕ್ಕೆ ಸೇರಿದ ಯುವಕನೋರ್ವ ತನ್ನ ಅಂಗಡಿಗೆ ಹಿಂದೂ ಹೆಸರಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ‘ಶುಭ್ ದೀಪಾವಳಿ’ ಮತ್ತು ‘ಶುಭ್ ಲಾಭ್’ ಹೆಸರಿನಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾಗ ಹಿಂದೂಗಳ ಕೈಗೆ ಸಿಕ್ಕಿಬಿದ್ದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಅಂಗಡಿಯ ಮಾಲೀಕನ ಗುರುತನ್ನು ತಿಳಿದ ನಂತರ ಹಿಂದೂ ಸಂಘಟನೆಯ ಸದಸ್ಯರು ಅಂಗಡಿಗೆ ಬಂದು ಗಲಾಟೆ ಮಾಡಿದ್ದಾರೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಬರೇಲಿಯ ಸಿವಿಲ್ ಲೈನ್ಸ್‌ನಲ್ಲಿರುವ ರಸ್ತೆಬದಿಯ ಬಿರಿಯಾನಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿಯವನು ಬೇರೆ ಧರ್ಮಕ್ಕೆ ಸೇರಿದ್ದರೂ ಕೂಡ,  ಹಿಂದೂಧರ್ಮದ  ಚಿಹ್ನೆ ಮತ್ತು ಹೆಸರನ್ನು ಬಳಸಿ ತನ್ನ ನಿಜವಾದ ಗುರುತನ್ನು ಮರೆಮಾಚುವ ಮೂಲಕ ವ್ಯವಹಾರವನ್ನು ಹೆಚ್ಚಿಸಲು ಸಂಚು ಮಾಡಿದ್ದಾನೆ ಎಂದು ಹಿಂದೂಗಳು ಆರೋಪಿಸಿದ್ದಾರೆ. ಫುಡ್ ಜಾಯಿಂಟ್‍ನ ಹೆಸರು ಚಮನ್ ಫಾಸ್ಟ್ ಫುಡ್ ಕಾರ್ನರ್ ಎಂದು ಬರೆದಿದ್ದು,  ಬೋರ್ಡ್ ಮೇಲೆ “ಶುಭ್ ಲಾಭ್” ಮತ್ತು “ಶುಭ ದೀಪಾವಳಿ” ಎಂದು ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಂಗಡಿಯವರಿಗೆ ತಮ್ಮ ಮಳಿಗೆಗಳು ಮತ್ತು ಅಂಗಡಿಗಳ ಮೇಲೆ ಅಂಗಡಿಯ ಮಾಲೀಕರ ಹೆಸರನ್ನು ಬರೆಯಲು ಆದೇಶಿಸಿದ್ದಾರೆ. ಆದರೆ ಈ ಅಂಗಡಿಯ ಮಾಲೀಕ ಧಾರ್ಮಿಕ ಚಿಹ್ನೆಯನ್ನು ಅನುಚಿತವಾಗಿ ಬಳಸಿದ್ದಾನೆ ಮತ್ತು ಇದು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ ಎಂದು ಹಿಂದೂಗಳು ಆರೋಪಿಸಿದ್ದಾರೆ.

ವೈರಲ್‍ ಆದ ವಿಡಿಯೊದಲ್ಲಿ ಹಿಂದೂ ಯುವಕನೊಬ್ಬ, “ಅನ್ಯಧರ್ಮದ ಸಮುದಾಯಕ್ಕೆ ಸೇರಿದ ಮಾರಾಟಗಾರ ಮುಟ್ಟಿದ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ನೀವು ಹಿಂದೂ ಹೆಸರಿನ ಬೋರ್ಡ್ ಅನ್ನು ಏಕೆ ಹಾಕಿದ್ದೀರಿ? ನೀವು ನನ್ನನ್ನು ನೋಡಿದಾಗ ಏಕೆ ಹೇಳಲಿಲ್ಲ? ನೀವು ನನಗೆ ಮೋಸ ಮಾಡಿ ಆಹಾರ ತಿನ್ನಲು ನೀಡಿದ್ದೀರಿ. ನೀವು ಬೋರ್ಡ್ ಮೇಲೆ ‘ಶುಭ್ ಲಾಭ್’ ಮತ್ತು ‘ಓಂ’ ಎಂದು ಬರೆದಿದ್ದೀರಿ” ಎಂದು ಅಂಗಡಿಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.  

ಇದನ್ನೂ ಓದಿ:ಪಿಸ್ತೂಲ್‌ ತೋರಿಸಿ ಅಂಗಡಿ ದೋಚಲು ಬಂದ ದರೋಡೆಕೋರನಿಗೆ ತಕ್ಕ ಶಾಸ್ತಿ; ಭಾರತೀಯ ಮಹಿಳೆಯ ಸಾಹಸಕ್ಕೆ ನೆಟ್ಟಿಗರು ಫುಲ್‌ ಶಾಕ್‌! ವಿಡಿಯೋ ಇದೆ

ಹಿಂದೂ ಗುಂಪಿನ ಸದಸ್ಯರು ಅಂಗಡಿಯಲ್ಲಿ ಗಲಾಟೆ ಮಾಡುತ್ತಿದ್ದಾಗ ಪೊಲೀಸರು ಅಂಗಡಿಯ ಬಳಿ ನಿಂತಿದ್ದರೂ ಕೂಡ  ಪೊಲೀಸ್ ಅಧಿಕಾರಿ ಮಧ್ಯಪ್ರವೇಶಿಸಲಿಲ್ಲ ಮತ್ತು ಮೂಕ ಪ್ರೇಕ್ಷಕರಾಗಿ ನಡೆಯುವುದನ್ನು ನೋಡಿದ್ದಾರೆ.  ಅಂಗಡಿಯವರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.