ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: 'ಚಾಂದನಿ ಚೌಕ್ ಲೆಹೆಂಗಾ'ಕ್ಕಾಗಿ ಮರಿದು ಬಿದ್ದ ಮದುವೆ; ಅಷ್ಟಕ್ಕೂ ಆಗಿದ್ದೇನು?

ಹರಿಯಾಣದ ಪಾಣಿಪತ್‍ನಲ್ಲಿ ನಡೆದ ಮದುವೆಯು 'ಚಾಂದನಿ ಚೌಕ್ ಲೆಹೆಂಗಾ' ವಿಚಾರಕ್ಕಾಗಿ ರದ್ದಾಗಿದೆ. ವಧು ಮತ್ತು ವರನ ಕುಟುಂಬಗಳ ನಡುವೆ ಲೆಹೆಂಗಾ ಮತ್ತು ನಕಲಿ ಆಭರಣಗಳ ಬಗ್ಗೆ ದೊಡ್ಡ ಜಗಳ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಕೊನೆಗೆ ಈ ಮದುವೆಯನ್ನು ರದ್ದುಗೊಳಿಸಲಾಗಿದೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ಹಳೆಯ ಲೆಹಂಗಾ-ನಕಲಿ ಆಭರಣ; ಮದ್ವೆನೇ ಕ್ಯಾನ್ಸಲ್‌!

Profile pavithra Feb 27, 2025 1:50 PM

ಚಂಡೀಗಢ: ಊಟದ ವಿಚಾರಕ್ಕೆ, ಡ್ಯಾನ್ಸ್ ವಿಚಾರಕ್ಕೆ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಮದುವೆ ರದ್ದಾದ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಹರಿಯಾಣದ ಪಾಣಿಪತ್‍ನಲ್ಲಿ ನಡೆದ ಮದುವೆಯು 'ಚಾಂದನಿ ಚೌಕ್ ಲೆಹೆಂಗಾ' ವಿಚಾರಕ್ಕಾಗಿ ರದ್ದಾಗಿದೆಯಂತೆ. ವಧು ಮತ್ತು ವರನ ಕುಟುಂಬಗಳ ನಡುವೆ ಲೆಹೆಂಗಾ ಮತ್ತು ನಕಲಿ ಆಭರಣಗಳ ಬಗ್ಗೆ ದೊಡ್ಡ ಜಗಳ ನಡೆದು ಕೊಲೆಯ ಬೆದರಿಕೆ ಕೂಡ ಹಾಕಿದ ಘಟನೆ ನಡೆದಿದೆ.ಕೊನೆಗೆ ಈ ಮದುವೆ ಕೂಡ ರದ್ದಾಗಿದೆಯಂತೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video)ಆಗಿದೆ.

ವರನ ಕಡೆಯವರು ವಧುವಿಗಾಗಿ ಆಯ್ಕೆ ಮಾಡಿದ ಲೆಹೆಂಗಾದಿಂದ ವಧುವಿನ ಕುಟುಂಬವು ಸಿಟ್ಟಾಗಿ ಚಾಂದನಿ ಚೌಕ್‍ನಿಂದ 40,000 ರೂಪಾಯಿಯ ಲೆಹೆಂಗಾವನ್ನು ಖರೀದಿಸುವಂತೆ ಒತ್ತಾಯಿಸಿದೆ. ಇದರಿಂದ ವರನ ಕುಟುಂಬದವರು ಕೋಪಗೊಂಡಿದ್ದಾರೆ. ಹೀಗಾಗಿ ಅವರ ನಡುವೆ ಜಗಳ ಶುರುವಾಗಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಜಗಳವನ್ನು ನಿಯಂತ್ರಣಕ್ಕೆ ತಂದಿದ್ದಾರೆ.



ಈ ಕುರಿತು ಮಾಹಿತಿ ನೀಡಿದ ವರನ ಸಹೋದರ, "ಮದುವೆ ಮಂಟಪವನ್ನು ಬುಕ್ ಮಾಡಲು ನಾವು ವಧುವಿನ ಕಡೆಯವರಿಗೆ 10,000 ರೂಪಾಯಿಗಳನ್ನು ನೀಡಿದ್ದೇವೆ. ಇದರ ನಡುವೆ ವಧುವಿನ ಕಡೆಯವರು 20,000 ರೂಪಾಯಿ ಮೌಲ್ಯದ ಲೆಹೆಂಗಾಕ್ಕೆ ಬೇಡಿಕೆ ಇಟ್ಟರು ನಂತರ ಇನ್ನೂ ದುಬಾರಿಯಾದದನ್ನು ಆರಿಸಿಕೊಂಡರು. ಆದರೆ ವಧುವಿನ ಅಜ್ಜಿ ಚಾಂದನಿ ಚೌಕ್‍ನಿಂದ ಐದು ಚಿನ್ನದ ಆಭರಣಗಳು ಮತ್ತು ಲೆಹೆಂಗಾಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಮತ್ತು ನಾವು ತಂದ ಲೆಹೆಂಗಾವನ್ನು ಅಜ್ಜಿ ಹಳೆಯದು ಎಂದು ಹೇಳಿದ್ದಾಳೆ” ಎಂದು ವಧುವಿನ ಕುಟುಂಬದ ಮೇಲೆ ಆರೋಪ ಮಾಡಿದ್ದಾನೆ.

ವರದಿಯ ಪ್ರಕಾರ, ಮದುವೆಯ ದಿನದಂದು ವರನ ಕಡೆಯವರು ತಂದ ಹಳೆಯ ಲೆಹೆಂಗಾ ಮತ್ತು ನಕಲಿ ಆಭರಣಗಳನ್ನು ನೋಡಿ ವಧುವಿನ ಕುಟುಂಬವು ಶಾಕ್‌ ಆಗಿದ್ದಾರೆ. ಈ ಕುರಿತು ಪ್ರಶ್ನಿಸಿದಾಗ, ವರನ ಕುಟುಂಬದವರು ಜಗಳಕ್ಕೆ ಬಂದಿದ್ದಾರೆ ಮತ್ತು ಅದರಲ್ಲಿ ಒಬ್ಬ ವ್ಯಕ್ತಿಯು ಖಡ್ಗವನ್ನು ತೋರಿಸಿ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೊನೆಗೆ ಈ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಊಟ ಕಡಿಮೆಯಾಯಿತೆಂದು ಮದುವೆ ಕ್ಯಾನ್ಸಲ್‌- ಪೊಲೀಸ್‌ ಠಾಣೆಯಲ್ಲಿ ಫುಲ್ ಹೈಡ್ರಾಮಾ!

ಮದುವೆ ಮನೆಯಲ್ಲಿ ಊಟದ ಕೊರತೆಯಾಗಿದ್ದಕ್ಕೆ ವರನ ಕುಟುಂಬದವರು ಮದುವೆಯನ್ನೇ ರದ್ದುಪಡಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಕೊನೆಗೆ ಮಂಟಪದಲ್ಲಿ ನಡೆಯಬೇಕಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ನಡೆಯಿತು. ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅತಿಥಿಗಳಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾಯಿತು. ಸರಿಯಾಗಿ ಊಟದ ವ್ಯವಸ್ಥೆ ಮಾಡಿಲ್ಲ ಎಂಬ ಕಾರಣಕ್ಕೆ ವರನ ಕುಟುಂಬದವರು ಗಲಾಟೆ ಮಾಡಿದ್ದಾರೆ ಮತ್ತು ಮದುವೆಯನ್ನು ರದ್ದುಪಡಿಸಲು ಮುಂದಾಗಿದ್ದಾರಂತೆ. ವರನ ಕುಟುಂಬದ ನಡವಳಿಕೆಯಿಂದ ವಧುವಿನ ಕುಟುಂಬವು ಅಸಮಾಧಾನಗೊಂಡು ಪೊಲೀಸರನ್ನು ಸಂಪರ್ಕಿಸಿದೆಯಂತೆ. ಕೊನೆಗೆ ಪೊಲೀಸ್‌ ಠಾಣೆಯಲ್ಲಿ ಮದುವೆ ನಡೆಯಿತಂತೆ.