Viral Video: ತಾಜ್ಮಹಲ್ ಒಳಗೆ ಶಿವಲಿಂಗಕ್ಕೆ ಜಲಾಭಿಷೇಕ! ಸಕ್ಕತ್ ವೈರಲಾಗ್ತಿದೆ ಈ ವಿಡಿಯೊ
ಐತಿಹಾಸಿಕ ಸ್ಮಾರಕವಾದ ತಾಜ್‍ಮಹಲ್ ಒಳಗೆ ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ಐತಿಹಾಸಿಕ ಸ್ಮಾರಕದ ಭದ್ರತೆಯ ಬಗ್ಗೆ ಕೂಡ ಈಗ ತೀವ್ರ ಕಳವಳ ಉಂಟಾಗಿದೆ.


ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‍ಮಹಲ್(Taj Mahal)ಪ್ರೀತಿಯ ಸಂಕೇತ! ರಾಜ ಶಾಹಜಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿದ ಸ್ಮಾರಕವಾಗಿದೆ. ಇದರೊಳಗೆ ಮುಮ್ತಾಜ್ ಸಮಾಧಿ ಇರುವುದು ಎಲ್ಲರಿಗೂ ತಿಳಿದ ವಿಚಾರ. ಇದೆಲ್ಲದರ ನಡುವೆ ತಾಜ್‌ಮಹಲ್ ಈ ಹಿಂದೆ ಹಿಂದೂಗಳ ಧಾರ್ಮಿಕ ಸ್ಥಳವಾಗಿತ್ತು. ಅದು ತಾಜ್‌ಮಹಲ್ ಅಲ್ಲ ತೇಜೋ ಮಹಾಲಯ ಎಂಬ ಮಾತುಗಳು ಕೇಳಿಬರುತ್ತಿತ್ತು. ಇದೆಲ್ಲದರ ನಡುವೆ ಈಗ ಮಹಿಳೆಯೊಬ್ಬಳು ತಾಜ್‍ಮಹಲ್ ಒಳಗೆ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಸುದ್ದಿಯಲ್ಲಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಐತಿಹಾಸಿಕ ಸ್ಮಾರಕದ ಭದ್ರತೆಯ ಬಗ್ಗೆ ತೀವ್ರ ಕಳವಳ ಉಂಟಾಗಿದೆ.
ವಿಡಿಯೊದಲ್ಲಿರುವ ಮಹಿಳೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ಎಂದು ಗುರುತಿಸಲಾಗಿದೆ. ರಾಥೋಡ್ ಪ್ರಯಾಗ್‍ರಾಜ್‍ನ ತ್ರಿವೇಣಿ ಸಂಗಮದ ಗಂಗಾ ನದಿಯಿಂದ ಪವಿತ್ರ ನೀರನ್ನು ಹಾಗೂ ಸಣ್ಣ ಶಿವಲಿಂಗವನ್ನು ತೆಗೆದುಕೊಂಡು ತಾಜ್‌ಮಹಲ್‌ಗೆ ಹೋಗಿದ್ದಾಳೆ. ಅಲ್ಲಿ ಅವಳು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಧೂಪದ್ರವ್ಯದ ಕಡ್ಡಿಗಳನ್ನು ಹಚ್ಚಿದ್ದಾಳೆ. ಇನ್ನು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ ಆಕೆ, ತಾಜ್ ಮಹಲ್ ಮೂಲತಃ 'ತೇಜೋ ಮಹಾಲಯ' ಎಂದಿದ್ದಾಳೆ.
महाशिवरात्रि पर ताजमहल में भगवान शिव का अभिषेक... महिला साथ लेकर गईं शिवलिंग, संगम से लाया गंगाजल चढ़ाया pic.twitter.com/G1SH21SGEk
— Abhishek Saxena (@abhis303) February 26, 2025
ಈ ಹಿಂದೆ, ಶ್ರಾವಣ ಮಾಸದಲ್ಲಿ ಎಬಿಎಚ್ಎಂ ಮತ್ತು ಇತರ ಗುಂಪುಗಳ ಮಹಿಳೆಯರು ತಾಜ್‍ಮಹಲ್‍ನಲ್ಲಿ ಗಂಗಾಜಲವನ್ನು ಅರ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ತಾಜ್‌ಮಹಲ್‌ನಲ್ಲಿ ಜಲಾಭಿಷೇಕ ಮಾಡಿದ ಘಟನೆಯು ಭದ್ರತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಈ ಘಟನೆಗೆ ಪ್ರತಿಕ್ರಿಯಿಸಿದ ತಾಜ್ ಮಹಲ್‍ನ ಹಿರಿಯ ಸಂರಕ್ಷಣಾ ಸಹಾಯಕ ಪ್ರಿನ್ಸ್ ವಾಜಪೇಯಿ, "ನಾವು ಘಟನೆಯನ್ನು ಗಮನಿಸಿದ್ದೇವೆ ಮತ್ತು ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸಿಐಎಸ್ಎಫ್‍ನಿಂದ ವರದಿ ಕೇಳಲಾಗಿದೆ. ತನಿಖೆಯ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದ್ದಾರೆ.
ವಿವಾದಗಳ ಹೊರತಾಗಿಯೂ ತಾಜ್‌ಮಹಲ್ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಒಂದು ಇತ್ತೀಚೆಗೆ ತಾಜ್ ಮಹಲ್‌ಗೆ ತಮ್ಮ ಪ್ರೀತಿಯ ನಾಯಿಯ ಜೊತೆ ಬಂದ ದಂಪತಿ ನಾಯಿಯನ್ನು ಕಳೆದುಕೊಂಡಿದ್ದಾರೆ. ಕೊನೆಗೂ ಅದು ಪೋಷಕರ ಮಡಿಲಿಗೆ ಸೇರಿರುವ ಹೃದಯಸ್ಪರ್ಶಿ ಘಟನೆಯೊಂದು ವೈರಲ್ ಆಗಿತ್ತು. ಏರ್ ಇಂಡಿಯಾ ಅಧಿಕಾರಿ ದೀಪಾಯನ್ ಘೋಷ್ ಮತ್ತು ಆತನ ಪತ್ನಿ ಕಸ್ತೂರಿ ಪಾತ್ರಾ ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿ ನಾಯಿಯ ಜೊತೆ ಗುರುಗ್ರಾಮದಿಂದ ಆಗ್ರಾಕ್ಕೆ ಭೇಟಿ ನೀಡಿದ್ದಾರೆ. ಅವರ ಪ್ರೀತಿಯ ನಾಯಿ ಕಣ್ಮರೆಯಾದಾಗ ತಮ್ಮ ನಾಯಿಯನ್ನು ಹುಡುಕಲು ಆಗ್ರಾದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿ ಬಹುಮಾನಗಳನ್ನು ಘೋಷಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಕೊನೆಗೆ ಅವರ ಮೂರೂವರೆ ತಿಂಗಳ ಬಳಿಕ ನಾಯಿ ಸಿಕ್ಕಿತು.
ಈ ಸುದ್ದಿಯನ್ನೂ ಓದಿ:Viral News: ಶ್ವಾನ ಹಾಗೂ ಮಾಲೀಕರ ನಡುವಿನ ಪ್ರೀತಿಯ ಬೆಸುಗೆಗೆ ಸಾಕ್ಷಿಯಾದ ತಾಜ್ ಮಹಲ್