Friday, 3rd February 2023

ಮೂರನೇ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ, ರಿಷಬ್ ಪಂತ್ ಅಲಭ್ಯ

ನವದೆಹಲಿ: ಕೋಲ್ಕತ್ತಾದಲ್ಲಿ ಭಾನುವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ.

ಈ ನಡುವೆ ತವರಿಗೆ ತೆರಳಿರುವ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಬಿಸಿಸಿಐ 10 ದಿನಗಳ ವಿರಾಮ ನೀಡಿದೆ. ಫೆ.24 ರಂದು ಲಕ್ನೋದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಆಡುವುದಿಲ್ಲ.

ಫೆ.26 ಮತ್ತು 27 ರಂದು ಧರ್ಮಶಾಲಾದಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಕರೋನಾ ಸಾಂಕ್ರಾ ಮಿಕ ಕಾರಣದಿಂದ ಎಲ್ಲಾ ಆಟಗಾರರಿಗೂ ಮುಂಜಾ ಗೃತಾ ಕ್ರಮವಾಗಿ ಬಯೋ-ಬಬಲ್ ಕಡ್ಡಾಯ ಗೊಳಿಸಲಾಗಿದೆ.

ಎಲ್ಲಾ ನಿಯಮಿತ ಆಟಗಾರರಿಗೆ ಅವರ ಕೆಲಸದ ಹೊರೆ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯವನ್ನು ಕಾಳಜಿ ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಬಬಲ್‍ನಿಂದ ಆವರ್ತಕ ವಿರಾಮಗಳನ್ನು ನೀಡುವುದು ನೀತಿಯಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

error: Content is protected !!