Wednesday, 24th April 2024

ದಾಸ ಸಾಹಿತ್ಯದಿಂದ ಮೋಕ್ಷ

ಸಂವಾದ ೧೨೧

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿದ್ವಾನ್ ಆರ್.ಕೆ.ಪದ್ಮನಾಭ ಅಭಿಮತ

ಬೆಂಗಳೂರು: ಹರಿದಾಸರು ಯಾವುದೇ ಪಂಥ ಹಾಗೂ ಧರ್ಮವನ್ನು ತೆಗಳಲಿಲ್ಲ. ಮಾನವ ಕುಲದ ಬಗ್ಗೆ ಮಾತ್ರವೇ ಜಗತ್ತಿಗೆ
ಹೇಳಿದರು. ಇಂತಹ ದಾಸರು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದು ನಮ್ಮ ಯಾವುದೋ ಜನ್ಮದ ಪುಣ್ಯ
ಎಂಬುದು ನಿಸ್ಸಂಶಯ ಎಂದು ವಿದ್ವಾನ್ ಆರ್.ಕೆ.ಪದ್ಮನಾಭ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾತನಾಡಿದ ಅವರು, ಪುರಂದರದಾಸರು, ಕನಕದಾಸರು ಮತ್ತು ವಾದಿರಾಜರು ಪ್ರತಿಯೊಬ್ಬರ ಜೀವನದಲ್ಲೂ ಎಷ್ಟು ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನು ಹಾಡಿನ ಮೂಲಕ ಹೇಳಿದರು. ಕನಕದಾಸರು ಮತ್ತು ಪುರಂದರದಾಸರು ಬೀದಿ ಬೀದಿಗಳಲ್ಲಿ ಸಮಾಜಮುಖಿ ವಿಚಾರಗಳನ್ನು ಕಾಲಿಗೆ ಗೆಜ್ಜೆ ಕಟ್ಟಿ ಕುಣಿದು ಸಾದರಪಡಿಸಿದವರು. ದಾಸರು ಯಾವತ್ತೂ ಅನ್ಯರಿಗೆ ನೋವಾಗುವಂತೆ ನಡೆದುಕೊಂಡವರಲ್ಲ ಎಂದರು.

ಹರಿದಾಸರು ಸಮಾಜ ಕೊಟ್ಟಿದ್ದನ್ನು ಊಟ ಮಾಡಿ ತಮ್ಮನ್ನು ತಾವೇ ಸಮಾಜಕ್ಕೆ ಅರ್ಪಿಸಿಕೊಂಡ ಮಹಾನ್ ಜೀವಿಗಳು ಎಂದು ಸಂಗೀತ ವಿದ್ವಾನ್, ಗಾನಕಲಾನಿಧಿ ಆರ್. ಕೆ. ಪದ್ಮನಾಭ ಬಣ್ಣಿಸಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೋಮವಾರ ಮಾತನಾಡಿದ ಅವರು, ಕಾಶಿಯಲ್ಲಿ ಗಂಗಾ ನದಿಯ ತೀರದಲ್ಲಿ ವಾದಿರಾಜರು ಧ್ಯಾನದಲ್ಲಿ ಕುಳಿತಿದ್ದರು. ಆ ಸಮಯಕ್ಕೆ ಎಲ್ಲಿಂದಲೋ ಒಂದು ವಾರ್ತೆ ಬಂದಿತ್ತು. ದಾರಿ ಮಧ್ಯದಲ್ಲಿ ಮುಸ್ಲಿಂ ಹುಡುಗನೊಬ್ಬ ಸತ್ತು ಬಿದ್ದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಮುಸ್ಲಿಂ ಹುಡುಗ ಬಿದ್ದಿದ್ದ ಜಾಗಕ್ಕೆ ಧಾವಿಸಿದ ವಾದಿರಾಜರು, ತಾವೇ ಬೀದಿಯಲ್ಲಿ
ಕುಳಿತು ಅವನನ್ನು ತಮ್ಮ ಕಾಲುಗಳ ಮೇಲೆ ಮಲಗಿಸಿಕೊಂಡು ಆರೈಕೆ ಮಾಡಿ ಬದುಕಿಸಿದ್ದರು ಎಂದು ಕಥೆಯ ಮೂಲಕ ಹೇಳುತ್ತ ವಾದಿರಾಜರ ಮಹತ್ವವನ್ನು ಜನರಿಗೆ ತಿಳಿಸಿದರು.

ವಾದಿರಾಜರ ಪಾಂಡಿತ್ಯ: ವಾದಿರಾಜರು ಜಾತ್ಯತೀತರಾಗಿದ್ದರು. ಹಿಂದುಳಿದ ಜನಾಂಗಗಳಿಗೆ ಸಂಗೀತವನ್ನು ಕಲಿಸಿ ಅವರ ಮೂಲಕ ಪ್ರಚಾರವನ್ನು ಮಾಡಿಸಿದ್ದರು. ಅವರೊಬ್ಬ ಅತ್ಯಂತ ದೊಡ್ಡ ಸಂಗೀತಗಾರರು, ವಾದದಲ್ಲಿ ನಿಪುಣರು, ಅವರಿಗೆ ಸಂಸ್ಕೃತ ಪಾಂಡಿತ್ಯ ತುಂಬಾ ಇತ್ತು ಎನ್ನುವುದಕ್ಕೆ ದೊರೆತಿರುವ ಅವರ ಕೃತಿಗಳೇ ಸಾಕ್ಷಿ ಎಂದರು.

ಹಾಡುವುದು ಹೇಗೆ?
ಪುರಂದರ ದಾಸರ ಪ್ರಕಾರ ಹಾಡುವಾಗ ತಾಳ ಬೇಕು, ತಾಳಕ್ಕೆ ತಕ್ಕಂತೆ ಮೇಳ ಇರಬೇಕು, ಮನಸ್ಸಿನಲ್ಲಿ ಯಾವುದೇ ಕಳವಳ ಇರ ಬಾರದು, ಮನಸ್ಸು ಅತ್ಯಂತ ಪ್ರಫುಲ್ಲವಾಗಿ ಇರಬೇಕು. ಮನಸ್ಸಿನಲ್ಲಿ ಯಾವಾಗಲೂ ವಿಷ್ಣುವೇ ಇರಬೇಕು. ಕೇಳುಗರೂ ವಿದ್ವತ್ ಜನರಾಗಿದ್ದರೆ ಗಾಂಭೀರ್ಯ ಇನ್ನೂ ಹೆಚ್ಚುತ್ತದೆ ಎಂದು ಹೇಳಿದರು.

***

ಸಂಗೀತ ಇದ್ದರೆ ಮಾತ್ರ ಸಾಹಿತ್ಯಕ್ಕೆ ರುಚಿ ಇವತ್ತಿನ ಸಮಾಜದಲ್ಲಿ ಪ್ರಚಲಿತದಲ್ಲಿರುವ ದುಡ್ಡು ಇದ್ದವನೇ ದೊಡ್ಡಪ್ಪ  ನ್ನುವುದನ್ನು ೧೫ನೇ ಶತಮಾನದಲ್ಲೇ ಹೇಳಿದ್ದರು. ಹರಿದಾಸರ ಸಾಹಿತ್ಯವನ್ನು ಅರ್ಥೈಸಿಕೊಂಡರೆ ಇನ್ನೊಬ್ಬ ಗುರು ಬೇಕಿಲ್ಲ.
ಭಗವಂತನಿಗೆ ಇಷ್ಟವಾದ ಶೃಂಗಾರ ರಸಪ್ರಧಾನ ಸಾಹಿತ್ಯವನ್ನು ವಾದಿರಾಜರು ರಚಿಸಿದ್ದರು.

ಇಂದಿನ ದಿನಗಳಲ್ಲಿ ಅವನಲ್ಲಿರುವ ಹಣದಿಂದ ಅವನ ಯೋಗ್ಯತೆಯನ್ನು ಅಳೆಯಲಾಗುತ್ತಿದೆ. ಪ್ರಹ್ಲಾದ ವಿಜಯ ಎನ್ನುವ
ಕೃತಿಯಲ್ಲಿ ಕನಕದಾಸರ ಕುರಿತಾಗಿ ಪುರಂದರ ದಾಸರು ಸುಂದರವಾಗಿ ಬರೆದಿದ್ದಾರೆ. ಸಾವರಿ ರಾಗ ಮನಸ್ಸಿಗೆ ಅತ್ಯಂತ
ಆಹ್ಲಾದ ಉಂಟುಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!