Wednesday, 9th October 2024

ರಣ ಹದ್ದುಗಳು ಪರಿಸರ ಸ್ನೇಹಿ ಪಕ್ಷಿಗಳು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 88

ಹದ್ದುಗಳ ಕುರಿತ ಅಧ್ಯಯನಶೀಲ ಚರ್ಚೆಯಲ್ಲಿ ಅಭಿಮತ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗವಹಿಸಿದ್ದ ತಜ್ಞರು

*ರಾಮನಗರದಲ್ಲಿ ಜಟಾಯು ಸಂರಕ್ಷಣೆ ಯೋಜನೆಗೆ ಕ್ರಮ
*ಹೆಚ್ಚು ರಾಸಾಯನಿಕ ಔಷಧಗಳಿಂದ, ಡಿಡಿಟಿ ಕೆಮಿಕಲ್ ಬಳಕೆ ಅಪಾಯ
*ರಣಹದ್ದು ಹಾಗೂ ಹದ್ದು ಬೇರೆ ಬೇರೆ ಪ್ರಭೇದಕ್ಕೆ ಸೇರಿವೆ
*ರಣಹದ್ದುಗಳು ಕೆಟ್ಟ ಪಕ್ಷಿಗಳು ಎಂದು ನಿರ್ಲಕ್ಷಿಸುವುದನ್ನು ನಿಲ್ಲಿಸಬೇಕು
*ಭಾರತದಲ್ಲಿ 1990 ರಿಂದ ಇತ್ತೀಚೆಗೆ ಶೇ.90 ರಷ್ಟು ರಣಹದ್ದುಗಳು ಕಡಿಮೆ
*ಡೈಕ್ಲೋಫಿನಾಕ್ ಕೆಮಿಕಲ್‌ನಿಂದ ಹದ್ದುಗಳು ಹೆಚ್ಚಾಗಿ ಸಾವನ್ನಪ್ಪುತ್ತಿವೆ

ಬೆಂಗಳೂರು: ರಣ ಹದ್ದುಗಳು ಪರಿಸರ ಸ್ನೇಹಿ ಪಕ್ಷಿಗಳು. ಏಕೆಂದರೆ, ಸತ್ತ ಪ್ರಾಣಿ, ಮನುಷ್ಯನ ದೇಹಗಳನ್ನು, ಕೊಳೆತ ಮಾಂಸಗಳನ್ನು ತಿನ್ನುವ ಮೂಲಕ ಪರಿಸರ ಶುದ್ಧಿ ಮಾಡುತ್ತವೆ. ರಣಹದ್ದುಗಳು ತನ್ನ ಆಹಾರ ಸಂಗ್ರಹಿ ಸುವುದರ ಜತೆಗೆ ನಾವು ಸ್ವಚ್ಛಂದವಾಗಿ ಬದುಕಲು ಸಹಾಯವಾಗಿವೆ.

ಆದರೆ ಇದೀಗ ರಣಹದ್ದುಗಳ ಸಂತತಿ ಕ್ಷೀಣಿಸುತ್ತ ಬಂದಿದೆ. ಕಾರಣ ರೈತರು ಬೆಳೆ ಉತ್ತಮವಾಗಿ ಬೆಳೆಯಲು ಬಳಸುತ್ತಿರುವ ಕೆಮಿಕಲ್ಸ್ ಹಾಗೂ ಸಾಕು ಪ್ರಾಣಿಗಳಿಗೆ ನೀಡು ತ್ತಿರುವ ಆಹಾರದಲ್ಲಿ ಬಳಕೆಯಾಗುವ ರಾಸಾಯ ನಿಕ ಪದಾರ್ಥಗಳನ್ನು ಬಳಸುತ್ತಿರುವುದೇ ಕಾರಣ.

ವಿಶ್ವವಾಣಿ ಕ್ಲಬ್‌ಹೌಸ್‌ನಿಂದ ಆಯೋಜಿಸಿದ್ದ ‘ರಣಹದ್ದುಗಳು ನಮಗೇಕೆ ಬೇಕು’ ಎಂಬ ಅರಿವಿನ ಉಪನ್ಯಾಸದಲ್ಲಿ ಪದ್ಮಾ, ಐಎಫ್ಎಸ್ ಅಧಿಕಾರಿ ಎಸ್.ಆರ್. ನಟೇಶ್ ಹಾಗೂ ರಾಜ್‌ಕುಮಾರ್ ದೇವರಾಜೇ ಅರಸ್ ಅವರು ರಣಹದ್ದುಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಪ್ರಪಂಚದಲ್ಲಿ ಶೇ.99ರಷ್ಟು ರಣಹದ್ದುಗಳು ಕ್ಷೀಣಿಸುತ್ತಿರುವುದು ಪರಿಸರದಿಂದ ಉಂಟಾಗುತ್ತಿರುವ ತೊಂದರೆಯಿಂದ, ಡೈಕ್ಲೋಫಿನಾಕ್ ಕೆಮಿಕಲ್‌ನಿಂದ ಕೂಡಿದ ಸತ್ತ ದೇಹ ಗಳನ್ನು ತಿನ್ನುತ್ತಿರುವುದರಿಂದ ರಣಹದ್ದುಗಳು ಕ್ಷೀಣಿಸುತ್ತಿವೆ.

ಸತ್ತ ಪ್ರಾಣಿಗಳ ದೇಹದಲ್ಲಿ ಡೈಕ್ಲೋಫಿನಾಕ್ ರಾಸಾಯನಿಕವಿದ್ದಾಗ ರಣಹದ್ದುಗಳು ಅವುಗಳನ್ನು ತಿನ್ನುವುದರಿಂದ 72 ಗಂಟೆಗಳಲ್ಲಿ ಮೃತಪಡುತ್ತವೆ. ಪ್ರಪಂಚ ದಲ್ಲಿ ಒಂಬತ್ತು ವಿಧವಾದ ರಣ ಹದ್ದುಗಳು ಕಂಡು ಬರುತ್ತವೆ. ದಕ್ಷಿಣ ಭಾರತದಲ್ಲಿ ರಣಹದ್ದು( ಇವು 7 ರಿಂದ 8 ಅಡಿ ಇರುತ್ತವೆ) ಲಾಂಗ್ ಬಿಲ್ಡ್ ವಲ್ಚರ್( ರಾಮ ನಗರದಲ್ಲಿ ಕಂಡುಬರುತ್ತವೆ), ವೈಟ್ ಬ್ಯಾಕ್ಡ್ ವಲ್ಚರ್ ಹಾಗೂ ಈಜಿಪ್ಟಿಯನ್ ರಣಹದ್ದುಗಳು ಎಂಬ ನಾಲ್ಕು ವಿಧವಾದ ರಣಹದ್ದುಗಳು ಕಂಡು ಬರುತ್ತವೆ. ಇದರ ಜತೆಗೆ ಇವುಗಳು ವರ್ಷಕ್ಕೆ ಒಂದೇ ಮೊಟ್ಟೆ ಇಡುವುದರಿಂದ ಇವುಗಳ ಸಂತತಿ ನಾಶವಾಗಲು ಕಾರಣವಾಗಿದೆ ಎಂದು ಪದ್ಮಾ ತಿಳಿಸಿದರು.

ಐಎಫ್ಎಸ್ ಅಧಿಕಾರಿ ಎಸ್.ಆರ್. ನಟೇಶ್, ರಣಹದ್ದುಗಳು ಒಂದು ರೀತಿಯ ಸಮರ್ಪಕ ಪಕ್ಷಿಗಳು. ಭಾರತದಲ್ಲಿ 1990 ರಿಂದ ಇತ್ತೀಚೆಗೆ ಶೇ.90ರಷ್ಟು ರಣ ಹದ್ದುಗಳು ಕಡಿಮೆಯಾಗಿವೆ. ರೈತರು, ಪಶು ವೈದ್ಯರು ಬಳಕೆ ಮಾಡುತ್ತಿರುವ ಡೈಕ್ಲೋಫಿನಾಕ್ ಡ್ರಗ್‌ನಿಂದ ಹಾಗೂ ಇವುಗಳ ಜತೆಗೆ ಇನ್ನು ಕೆಲವು ರಾಸಾಯನಿಕ ಮಿಶ್ರಿತ ಆಹಾರ, ಔಷಧಿಗಳನ್ನು ಬಳಸುತ್ತಿರುವುದರಿಂದ ರಣಹದ್ದುಗಳ ನಾಶವಾಗುತ್ತಿದೆ.

ಇಂತಹ ರಾಸಾಯನಿಕ ಔಷಧಿಗಳನ್ನು ಬ್ಯಾನ್ ಮಾಡಿದ್ದರೂ ಕೂಡ ಬಳಕೆ ಮಾಡುತ್ತಿರುವುದು ವಿಷಾದ. ದೇಶದಲ್ಲಿ 4 ಕೋಟಿಯಿದ್ದ ಹದ್ದುಗಳು ಈಗ ಸಾವಿರಕ್ಕೆ ಇಳಿಕೆ ಕಂಡಿವೆ. ಈ ಬಗ್ಗೆ ಭಾರತ ಸರಕಾರ ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ಜಟಾಯು ಯೋಜನೆಯನ್ನು (ವಲ್ಚರ್ ಸೇಫ್ ಝೋನ್) ಕೈಗೊಂಡಿದೆ. ನಾಗರಹೊಳೆ ಬಂಡೀಪುರ ದಂತಹ ಪ್ರವಾಸ ಸ್ಥಳಗಳಲ್ಲಿ ಇಂತಹ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿದಾಗ ಅವುಗಳ ಚಿತ್ರೀಕರಣ ಗಳನ್ನು ಮಾಡುವುದನ್ನು ನಿಲ್ಲಿಸಿ ಅವುಗಳನ್ನು ರಕ್ಷಿಸಬೇಕು ಎಂದರು.

ರಾಜ್‌ಕುಮಾರ್ ದೇವರಾಜೇ ಅರಸ್ ಮಾತನಾಡಿ, ರಣಹದ್ದುಗಳಿಗೆ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಅರಗಿಸಿಕೊಳ್ಳುವ ಶಕ್ತಿಯಿದೆ. ಕಾಡುಗಳನ್ನು ಸ್ವಚ್ಛವಾಗಿ ಡುವ ಪ್ರಾಣಿ, ಪಕ್ಷಿಗಳಲ್ಲಿ ರಣಹದ್ದುಗಳ ಪಾತ್ರ ಅತ್ಯುತ್ತಮ. ರೈತರು ಕೃಷಿ, ಭತ್ತದ ಗದ್ದೆಗಳಲ್ಲಿ ಬಳಸುವ ರಾಸಾಯನಿಕ, ಹಾಲು ಹೆಚ್ಚಾಗಲು ದನಗಳಿಗೆ ಬಳಸುವ ರಾಸಾಯನಿಕ ಮಿಶ್ರಿತ ಆಹಾರಗಳನ್ನು ಬಳಸುವುದನ್ನು ಕಡಿಮೆ ಮಾಡಿದರೆ ಉತ್ತಮ.

ಮೊದಲು ರಣಹದ್ದುಗಳು ಅಗ್ಲಿ ಬರ್ಡ್ ಎಂದು ನಿರ್ಲಕ್ಷಿಸುವುದನ್ನು ನಿಲ್ಲಿಸಬೇಕು. ಈ ಪಕ್ಷಿಗಳು ಇಲ್ಲದಿದ್ದರೆ ನಮ್ಮ ಪರಿಸರ ತುಂಬ ಕೊಳಚೆಯಿಂದ ಕೂಡಿರುತ್ತಿತ್ತು. ನ್ಯಾಚುರಲ್ ಸೇಫ್ ಝೋನ್ ಮಾಡಿ ಡೈಕ್ಲೋಫಿನಾಕ್ ನಂತಹ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಜತೆಗೆ ಕಾಡ್ಗಿಚ್ಚು ಕೂಡ ಇವುಗಳ ನಾಶಕ್ಕೆ ಕಾರಣ. ಜನರು ಸಾಧ್ಯವಾದಷ್ಟು ಸಾಕು ಪ್ರಾಣಿಗಳಿಗೆ ವಿಷಕಾರಕ ಪದಾರ್ಥ ನೀಡುವುದನ್ನು ಕಡಿಮೆ ಮಾಡಬೇಕು ಆಗ ಮಾತ್ರ ಸ್ವಲ್ಪ ಮಟ್ಟಿ ಗಾದರು ಇಂತಹ ಅಳಿವಿನಂಚಿನಲ್ಲಿರುವ ಪಕ್ಷಿಗಳನ್ನು ರಕ್ಷಿರಸುವುದು ಸಾಧ್ಯ ಎಂದು ಹೇಳಿದರು.