ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 146
ಬೆಂಗಳೂರು: ಬ್ಯಾಂಕ್‌ಗಳಲ್ಲಿ ಇತರ ಸಾಲಗಳಿಗಿಂತ ಗೃಹ ಸಾಲ ಪಡೆಯುವುದು ಉತ್ತಮ ಎಂದು ಆರ್ಥಿಕ ಸಲಹೆಗಾರ ಪಿ.ಎಲ್. ಕಿರಣ್‌ಕುಮಾರ್ ಹೇಳಿದ್ದಾರೆ.
ಇತರೆ ಸಾಲಗಳಿಗಿಂತ ಗೃಹ ಸಾಲದಲ್ಲಿ ಹೆಚ್ಚು ಲಾಭವಿದೆ. ಆದಾಯ ತೆರಿಗೆ, 80ಸಿ ಸೇರಿದಂತೆ ಹಲವಾರು ಲಾಭಗಳನ್ನು ಪಡೆಯಲು ಅವಕಾಶವಿದೆ. ಅದಕ್ಕಿಂತ ಮುಖ್ಯ ವಾಗಿ ಗೃಹ ಸಾಲ ಪಡೆದವರು ಕಡ್ಡಾಯ ವಾಗಿ ಬ್ಯಾಂಕ್‌ನಿಂದ ಲಿಸ್ಟ್ ಆಫ್ ಡಾಕ್ಯುಮೆಂಟ್ ಪಡೆಯಬೇಕು. ಇದರಿಂದ ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಸಾಲ ವರ್ಗಾವಣೆ ಮಾಡುವುದು ಸುಲಭವಾಗಿದೆ ಎಂದು ಅವರು ವಿವರಿಸಿದರು.
ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಮಂಗಳವಾರ ವಿಶೇಷ ಅತಿಥಿಯಾಗಿ ಗೃಹ ಸಾಲಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ನಮ್ಮ ಗ್ರಾಹಕ ಬೇರೆ ಬ್ಯಾಂಕ್‌ಗೆ ಹೋಗುತ್ತಾನೆ ಎಂಬ ಕಾರಣಕ್ಕೆ ಗೃಹ ಸಾಲ ನೀಡಿದ ಬ್ಯಾಂಕ್‌ನವರು ಲಿಸ್ಟ್ ಆಫ್ ಡಾಕ್ಯು ಮೆಂಟನ್ನು ಅಷ್ಟು ಸುಲಭವಾಗಿ ನೀಡಲು ಒಪ್ಪುವುದಿಲ್ಲ. ಆದರೆ, ಗ್ರಾಹಕರು ತಮ್ಮ ಹಿತದೃಷ್ಟಿಯಿಂದ ಇದನ್ನು ಪಡೆಯವುದು ಸೂಕ್ತ ಎಂದು ಹೇಳಿದರು.
ಗ್ರಾಹಕರು ವೈಯಕ್ತಿಕ ಸಾಲ, ತೆಗೆದುಕೊಂಡಿದ್ದರೂ ಅದೇ ಬ್ಯಾಂಕ್‌ನಲ್ಲಿ ಗೃಹ ಸಾಲ ಪಡೆಯಲು ಅವಕಾಶವಿದೆ. ವೈಯಕ್ತಿಕ ಸಾಲ, ತುರ್ತು ಸಾಲ, ಚಿನ್ನದ ಸಾಲ ಪಡೆದ ಜತೆಗೆ ಗೃಹ ಸಾಲ ಕೂಡ ಪಡೆಯಬಹುದು. ಇನ್ನು ಹಣ ಉಳಿತಾಯ ಕುರಿತಂತೆ ಹೇಳುವುದಾದರೆ ನಿಮ್ಮ ಬಳಿ ಹೆಚ್ಚು ಹಣವಿದ್ದರೆ ಆದಷ್ಟು ಬೇಗ ಗೃಹ ಸಾಲ ತೀರಿಸಿದರೆ ಬಡ್ಡಿ ಉಳಿತಾಯವಾಗುತ್ತದೆ ಎಂದರು.
ಘೋಷಿತ ಆದಾಯ ಇಲ್ಲದವರು ಗೃಹ ಸಾಲ ಮಾಡುವಾಗ ಇಎಂಐ ಮೊತ್ತ ಕಡಿಮೆ ಇಟ್ಟುಕೊಳ್ಳುವುದು ಸೂಕ್ತ ಎಂದು ಸಲಹೆ ಮಾಡಿದ ಅವರು, ಗೃಹ ಸಾಲ ಪಡೆದ ಬ್ಯಾಂಕ್‌ನಲ್ಲೇ ಶೈಕ್ಷಣಿಕ ಸಾಲ ಪಡೆಯುವುದು ಉತ್ತಮ. ಏಕೆಂದರೆ, ಗೃಹ ಸಾಲ ಸಮರ್ಪಕ ವಾಗಿ ಪಾವತಿಸುತ್ತಿದ್ದರೆ ಬ್ಯಾಂಕ್ ಗಳೇ ಶೈಕ್ಷಣಿಕ ಮತ್ತಿತರೆ ಸಾಲ ನೀಡಲು ಮುಂದಾಗುತ್ತಾರೆ. ಒಂದೇ ಬ್ಯಾಂಕ್‌ನಲ್ಲಿ ಸಾಲ ಪಡೆಯುವುದಾದರೆ ಕಾನೂನಾತ್ಮಕ ಕೆಲಸಗಳೇ ಇಲ್ಲದೆ ಕೆಲಸ ಸರಾಗವಾಗಿ ಆಗಲಿದೆ. ತಾಂತ್ರಿಕ ಕೆಲಸಗಳಷ್ಟೇ ಇರಲಿದೆ ಎಂದು ಹೇಳಿದರು.
ಗ್ರಾಹಕರು ಟಿವಿ, ಆಟೋ ಸೇರಿದಂತೆ ಇತರೆಲ್ಲಾ ಸಾಲಗಳಿಗೆ ಸಂಬಂಧಿಸಿದಂತೆ ವ್ಯವಸ್ಥೆಗೆ ಹತ್ತಿರವಾಗಬೇಕು. ಬ್ಯಾಂಕ್‌ನಿಂದ ಕನಿಷ್ಠ ಇ-ಮೇಲ್ ಕನರ‍್ಮೇಷನ್ ತೆಗೆದುಕೊಳ್ಳಬೇಕು. ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಸೆಟಲ್ಮೆಂಟ್, ರಿಟರ್ನ್, ಕ್ಲೋಸ್ಡ್
ಎಂಬುದು ಇರಲಿದೆ. ೩೬ ತಿಂಗಳಿನಲ್ಲಿ ಕ್ಲೋಸ್ ಆದರೆ, ಅದು ನಾರ್ಮಲ್ ಕ್ಲೋಸರ್ ಆಗಲಿದೆ. ಈ ವಿಷಯವನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು ಎಂದು ತಿಳಿಸಿದರು. ಏನೇ ಸಮಸ್ಯೆಗಳಾದರೂ ಸಾಲದ ಇಎಂಐ ಪಾವತಿ ಮಾಡುವುದನ್ನು ನಿಲ್ಲಿಸಬೇಡು.
ಸಂಪನ್ಮೂಲ ಇದ್ದರೆ, ಸಂಬಳ ಬರುತ್ತಿದ್ದರೆ ಇಎಂಐ ತಪ್ಪದೆ ಪಾವತಿಸಿ. ಹಾಗೆಯೇ ಎಲ್ಲರೂ ನಿಮ್ಮ ನಿಮ್ಮ ಬ್ಯಾಂಕ್‌ಗೆ ಹೋಗಿ ಗೃಹ ಸಾಲದ ವಸ್ತುಸ್ಥಿತಿ ತಿಳಿದುಕೊಳ್ಳಿ. ಈ ಪ್ರಕ್ರಿಯೆಯನ್ನು ಸಮರ್ಪಕವಾಗಿ ಮಾಡಿದರೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚುತ್ತದೆ.
ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಆದರೆ, ಯಾವುದೇ ವ್ಯವಹಾರವಿರಲಿ, ಆನ್‌ಲೈನ್‌ನಲ್ಲಿ ತೆಗೆದುಕೊಳ್ಳು ವುದಕ್ಕೂ ಮುನ್ನ, ಕೆವೈಸಿ ಕೊಡುವುದಕ್ಕೆ ಮುಂಚೆ ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದರು.
***
ಗೃಹ ಸಾಲಕ್ಕೆ ಸಂಬಂಧಿಸಿದಂತೆ ಪಿ.ಎಲ್. ಕಿರಣ್‌ಕುಮಾರ್ ಅತ್ಯುತ್ತಮ ಮಾಹಿತಿ ಹೊಂದಿದ್ದಾರೆ. ಸುಮಾರು ೧,೨೦೦ ಕೋಟಿ ರು. ಸಾಲ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ್ದಾರೆ. ಕಳೆದ ಸಂಚಿಕೆಯಲ್ಲಿ ಶ್ರೋತೃಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಗೃಹಸಾಲ ಪಡೆಯುವವರ ಗೊಂದಲಗಳನ್ನು ನಿವಾರಿಸಲು ಕ್ಲಬ್‌ಹೌಸ್ ವೇದಿಕೆಯಾಗಿದೆ.
– ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು
ಮನೆ, ನಿವೇಶನ, ಫ್ಲ್ಯಾಟ್, ವಿಲ್ಲಾಗೆ ಸಂಬಂಧಿಸಿದಂತೆ ಗೃಹ ಸಾಲ ಎನ್ನಲಾಗುವುದು. ನನ್ನ ಬಳಿ ಪ್ರಾಪರ್ಟಿ ಇದ್ದರೆ, ಅದು ಲೋನ್ ಎಗೆನೆಸ್ಟ್ ಪ್ರಾಪರ್ಟಿ ಎನಿಸಲಿದೆ. ನೇರ ಅಗ್ರಿಮೆಂಟ್‌ನಲ್ಲಿ ಮಾತ್ರ ಹೋಮ್‌ಲೋನ್ ನಡೆಯುತ್ತದೆ. ಪ್ರೊಫೈಲ್ ಮತ್ತು ಪ್ರಾಪರ್ಟಿ, ಸಿಬಿಲ್ ಚೆನ್ನಾಗಿದ್ದರೆ ಸಾಲ ಪಡೆಯಲು ಅನುಕೂಲವಾಗಲಿದೆ.
– ಪಿ.ಎಲ್. ಕಿರಣ್‌ಕುಮಾರ್, ಆರ್ಥಿಕ ಸಲಹೆಗಾರ