ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಸಂವಾದ ೨೫೪
ವಿಭಿನ್ನ ಸಂಸ್ಕೃತಿಯ ಭಾರತದಲ್ಲಿ ಪೌರ್ಣಮಿ, ಅಮವಾಸ್ಯೆಗಳನ್ನು ಒಳಗೊಂಡಂತೇ ಅನೇಕ ಹಬ್ಬಗಳಿವೆ. ಅದರಲ್ಲಿ ವರ್ಷದ ಮೊದಲನೇ ಹಬ್ಬ ಯುಗಾದಿ. ಯುಗಾದಿ ಎಂದರೆ ಬ್ರಹ್ಮದೇವ ಚೈತ್ರ ಮಾಸ, ಶುಕ್ಲಪಕ್ಷದ ಸೂರ್ಯೋದಯಕ್ಕೆ ಸರಿಯಾಗಿ ಮುಹೂರ್ತವನ್ನಿಟ್ಟು ಜಗತ್ತಿನ ಅನೇಕ ಜೀವರಾಶಿಗಳನ್ನು ಸೃಷ್ಟಿಸಿದ್ದೇ ಯುಗಾದಿ ಎಂಬುದನ್ನು ಪುರಾಣಗಳು ಹೇಳುತ್ತವೆ. ಇದು ಭಾರತೀಯರ ಪಾಲಿಗೆ ಹೊಸ ವರ್ಷವೂ ಹೌದು. ವರ್ಷದ ಎಲ್ಲಾ ಚಟುವಟಿಕೆಗಳು ಆರಂಭವಾಗುವುದು ಯುಗಾದಿಯಿಂದ.
ಯುಗಾದಿ, ಹೊಸ ವರ್ಷದ ಪ್ರಯುಕ್ತ ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ಯುಗಾದಿ ವೈಶಿಷ್ಠ್ಯ- ದ್ವಾದಶ ರಾಶಿ ಫಲಗಳು ವಿಶೇಷ ಕಾರ್ಯಕ್ರಮದಲ್ಲಿ ವಿಶ್ವವಾಣಿ ಕ್ಲಬ್‌ಹೌಸ್ ನ ಆಸ್ಥಾನ ವಿದ್ವಾಂಸ ವೇದಬ್ರಹ್ಮ ಡಾ. ಭಾನು ಪ್ರಕಾಶ ಶರ್ಮಾ ಹೇಳಿದ್ದು ಹೀಗೆ. ಯುಗಾದಿಯನ್ನು ದೇವರಿಗಿಂತ ಹೆಚ್ಚಾಗಿ ಪ್ರಕೃತಿಯ ಹಬ್ಬ ಎಂದು ಕರೆಯ ಲಾಗುತ್ತದೆ. ಇಡೀ ಜಗತ್ತು ಜಡದಿಂದ ಮೇಲಕ್ಕೆ ಬಂದು ಬೆಳಕನ್ನು ಸೂಸುವಂಥಹ ಚೈತನ್ಯ ಸ್ವರೂಪ ವನ್ನು ೧೪ ಲೋಕಕ್ಕೆ ನೀಡುವುದೇ ಈ ಯುಗಾದಿ. ಎಲೆಗಳೆಲ್ಲ ಉದುರಿದ್ದ ಮರ-ಗಿಡಗಳೂ ನೂತನ ವಸಾಧಾರಣೆ ಮಾಡುವ ಸಮಯ. ಕೋಗಿಲೆ ಮೊಟ್ಟೆಯೊಡೆದು ಹಾಡುವ ಸಮಯ.
ಪಂಚಾಂಗ ಶ್ರವಣ ವಿಶೇಷ: ಪಂಚಾಂಗದ ಮೂಲಕ ನಮ್ಮ ಋಷಿ, ಮುನಿಗಳು ಅನೇಕ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಗುರು ಪ್ರಾರ್ಥನೆ, ಪಂಚಾಂಗದಿಂದ ನಮಗೆ ಏನು ಒಳಿತಾಗುತ್ತದೆ ಮತ್ತು ಈ ಸಂವತ್ಸರದ ರಾಜ, ಮಂತ್ರಿ, ಸೇನಾಧಿಪತಿ, ಧಾನಾಧಿಪತಿ, ಅರ್ಘ್ಯಾಧಿಪತಿ, ಮೆಘಾಧಿಪತಿ, ರಸಾಧಿಪತಿ, ನಿರಸಾಧಿಪತಿ ಯಾರು ಎಂದು ತಿಳಿಸಲಾಗುತ್ತದೆ. ಪ್ರಕೃತಿಯಲ್ಲಿ ದೇವಾನುದೇವತೆಗಳಿಗೆ ಯಾವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ನೂರಾರು ವರ್ಷಗಳಿಂದ ಋಷಿ, ಮುನಿಗಳು ಎಲ್ಲವನ್ನು ಸಂಸ್ಕರಿಸಿ ನಮಗಾಗಿ ಪಂಚಾಂಗ ನೀಡಿದ್ದಾರೆ.
ಪ್ರತಿ ದಿನ ಪಂಚಾಂಗ ಶ್ರವಣ ಮಾಡುವುದರ -ಲ: ಯಾರು ಪಂಚಾಂಗ ಶ್ರವಣ ಮಾಡುತ್ತಾನೋ ಆತನಿಗೆ ಕೀರ್ತಿ, ಹೆಸರು ಬರುತ್ತದೆ. ತಿಥಿಗಳ ಸ್ಮರಣೆ ಮಾಡಿದರೆ ಲಕ್ಷ್ಮೀ ಅನುಗ್ರಹವಾಗುತ್ತದೆ. ವಾರಗಳ ಸ್ಮರಣೆ ಮಾಡುವುದರಿಂದ ಆಯಸ್ಸು ವೃದ್ಧಿಸುತ್ತದೆ. ನಕ್ಷತ್ರಗಳ ಸ್ಮರಣೆಯಿಂದ ಮಾಡಿದ ಪಾಪಗಳು ದೂರವಾಗುತ್ತವೆ. ಯೋಗಗಳನ್ನು ಸ್ಮರಣೆ ಮಾಡಿದರೆ ರೋಗ ನಿವಾರಣೆ ಆಗುತ್ತದೆ. ಕರ್ಣಗಳ ಪ್ರಾರ್ಥನೆ ಮಾಡಿದರೆ ಕೆಲಸ ಸಿದ್ದಿಸುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.
೧೨ ರಾಶಿಗಳ ಫಲಾಫಲ: ಪಂಚಾಂಗದ ಪ್ರಕಾರ ಮೂರು ಗ್ರಹ ಬದಲಾವಣೆಯಾಗುತ್ತದೆ. ವರ್ಷದ ಪ್ರಾರಂಭವಾಗಿ ಏ ೧೩ರಿಂದ ಗುರು ತನ್ನ ಸ್ಥಾನ ಬದಲಾವಣೆ ಮಾಡಲಿದ್ದಾನೆ. ಏ. ೨೮ರಿಂದ ಶನಿ ತನ್ನ ಸ್ಥಾನ ಬದಲಾವಣೆ ಮಾಡಲಿದ್ದಾನೆ. ಏ. ೧೨ರಂದು ರಾಹು-ಕೇತು ಸ್ಥಾನ ಬದಲಾವಣೆ ಮಾಡ ಲಿದ್ದಾರೆ. ಇವೆಲ್ಲವನ್ನು ಗಮನಿಸಿ ರಾಶಿ-ಲಗಳನ್ನು ಹೇಳಲಾಗುತ್ತದೆ.
ಮೇಷ: ಕಷ್ಟ ಪಟ್ಟು ಕೆಲಸ ಮಾಡಿ ಸಾಧನೆ ಮಾಡುವವರಿಗೆ ಮುಂದಿನ ೩ವರ್ಷ ಯಾವದೇ ತೊಂದರೆ ಇಲ್ಲ. ಎಲ್ಲ ಶುಭ ಕಾರ್ಯಗಳು ನೆರವೇರಲಿದೆ. ಸಿಟ್ಟು – ಕೋಪ ಹೆಚ್ಚಾಗಲಿದ್ದು, ಗಂಡ-ಹೆಂಡತಿಯರ ಮಧ್ಯೆ ಜಗಳ ಸಂಭವವಿರುವುದರಿಂದ ಜಾಗ್ರತೆ ವಹಿಸಬೇಕು.
ಶುಭ ದಿಕ್ಕು: ಪೂರ್ವ ಪರಿಹಾರ : ಕುಕ್ಕೇ ಸುಬ್ರಮ್ಮಣ್ಯ ದಲ್ಲಿ ನಾಗ ಪ್ರತಿಷ್ಟಾಪನೆ. ಲಕ್ಷ್ಮೀ ನಾರಾಯಣ ಪಾರಾಯಣ ಮಾಡಬೇಕು.
ಹರಳು: ಹವಳ ಧಾರಣೆ.
ವೃಷಭ: ತಾಯಿಗೆ ಪ್ರೀತಿ ಪಾತ್ರವಾದ ರಾಶಿ. ಈ ರಾಶಿಯಲ್ಲಿ ಹುಚ್ಚಿದವರು ಶಾಂತ ಸ್ವಭಾವದವರು. ಒಂದೂವರೆ ವರ್ಷಗಳ ಕಾಲ ಪಟ್ಟ ಕಷ್ಟ ದೂರ ವಾಗಲಿದೆ. ಯಾವುದರಲ್ಲೂ ತೊಂದರೆ ಇಲ್ಲ, ಹೆಚ್ಚಿನ ಲಾಭವೂ ಇಲ್ಲ. ಮುಂದೆ ಗುರು ಒಳ್ಳೆಯ ಫಲ ಕೋಡುತ್ತಾನೆ. ವ್ಯವಹಾರದಲ್ಲಿ ಎಚ್ಚರ ವಹಿಸಿ. ಏಪ್ರಿಲ್ ೧೨ನಂತರ ಶುಭ ಫಲ. ಈ ರಾಶಿಯವರಿಗೆ ತಾಯಿಯ ಆಶೀರ್ವಾದವಿದೆ.
ಶುಭ ದಿಕ್ಕು: ದಕ್ಷೀಣ. ಹರಳು : ವಜ್ರ(ಉಪವಜ್ರವನ್ನು ಹಾಕಬಹುದು).
ಮಿಥುನ: ಆರೋಗ್ಯ ತೊಂದರೆ ಅನುಭವಿಸಿದ್ದೀರಿ. ಮುಂದೆ ಶುಭ ದಿನ ಪ್ರಾರಂಭ. ಅದರೆ, ತಂದೆಗೆ ಅನಾರೋಗ್ಯ ಕಾಣಿಸಿಕೊಳ್ಳಬಹುದು. ವ್ಯವಹಾರ ದಲ್ಲಿ ನೋಡಿ ನಿರ್ಧಾರ ಕೈಗೊಳ್ಳಬೇಕು. ಮಕ್ಕಳಿಗೆ ಅನಾರೋಗ್ಯ ಕಾಣಬಹುದು.
ಶುಭ ಹರಳು: ಪಚ್ಚೆ ಶುಭ ದಿಕ್ಕು: ಪಶ್ಚಿಮ ಕರ್ಕಾಟಕ: ಹೆಚ್ಚು ಜಾಗೃತರಾಗಿರಿ. ಅಷ್ಟಮ ಶನಿಕಾಟವಿದೆ. ದುಸ್ವಪ್ನ ಬೀಳಬಹುದು. ಎಡ ಕಾಲು-ಕೈಗೆ ಪೆಟ್ಟಾಗುವ ಸಂಭವವಿದೆ. ೧೧ ತಿಂಗಳು ರುದ್ರಾಭಿಷೇಕ, ೬೪ ದಿನ ಅರಳಿ ಮರ ಪ್ರದಕ್ಷಿಣೆ, ತಿಲಾಹೋಮ, ಗಣಹೋಮ ಮಾಡಿಸಿ.
ಸಿಂಹ: ಈ ವರ್ಷ ಉತ್ತಮ ಫಲ ನಿರೀಕ್ಷಿಸಬಹುದು. ವಿದೇಶ ಪ್ರಯಾಣದ ಅವಕಾಶವಿದೆ. ಲಕ್ಷ್ಮೀನಾರಾಯಣ ಪಾರಾಯಣ ಮಾಡಿದರೆ ಒಳ್ಳೆಯದು.
ಶುಭ ಹರಳು : ಮಾಣಿಕ್ಯ ಶುಭ ದಿಕ್ಕು : ಪೂರ್ವ.
ಕನ್ಯಾ: ತುಂಬಾ ಬುದ್ದಿವಂತರು. ಮುಂದಿನ ಮೂರು ವರ್ಷ ಚೆನ್ನಾಗಿದೆ. ಶತ್ರುಗಳು ಕೂಡ ಮಿತ್ರರಾಗುತ್ತಾರೆ. ಹೆಚ್ಚಿನ ಹಣ ವ್ಯಯ. ಅಷ್ಟದ್ರವ್ಯ ಹೋಮ ಮಾಡಿಸುವುದರಿಂದ ಹಣ ವ್ಯಯ ಕಮ್ಮಿ ಆಗುತ್ತದೆ. ಈ ಸಂವತ್ಸರ ಶುಭ ಫಲ ತರಲಿದೆ.
ತುಲಾ: ಕೆಲಸ ನಿಮ್ಮದು, ಹೆಸರು ಮತ್ತೊಬ್ಬರಿಗೆ ಎನ್ನುವ ಸ್ಥಿತಿ. ಇತರರಿಗೆ ಸಹಾಯ ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳಬಹುದು. ಶನಿ ದೆಸೆ ಇರುವುದರಿಂದ ಅಭಿವೃದ್ಧಿ ಕೆಲದಲ್ಲಿ ನಿದಾನಗತಿ. ಜಾಗೃತರಾಗಿರಿ. ಮದುವೆ ಕಾರ್ಯಕ್ರಮ ಒಂದು ವರ್ಷ ಮುಂದೆ ಹಾಕಿ. ಆದಿತ್ಯ ಹೃದಯ ಪಾರಾಯಣ ಮಾಡಿ. ತಿಲ ಹೋಮ ಮಾಡಿಸಿ. ಸಾಧ್ಯವಾದರೆ ಸಮುದ್ರ ಸ್ನಾನ ಮಾಡಿ. ಶುಭ ಹರಳು: ವಜ್ರ ಶುಭ ದಿಕ್ಕು: ಪಶ್ಚಿಮ.
ವೃಶ್ಚಿಕ : ಹುಟ್ಟಿದ ಊರಿನಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಹೀಗಾಗಿ ಅನ್ಯ ಮಾರ್ಗಗಳನ್ನು ಕಂಡುಕೊಳ್ಳುವುದು ಸೂಕ್ತ. ಹಣಕಾಸು ವ್ಯವಹಾರ ವನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಿ. ಹೀಗೆ ಮಾಡಿದರೆ ಈ ವರ್ಷ ಒಳ್ಳೆಯ ಫಲ ಇದೆ.
ಧನಸ್ಸು: ಸಾಡೇ ಸಾಥ್ ಮುಗಿಯುತ್ತಿದೆ. ಏ.೨೮ನೇ ತಾರೀಕಿನ ತನಕ ಏನೂ ಮಾಡಬೇಡಿ. ಕೊನೆಯ ೨೦ನೇ ದಿನ ಕೂಡ ಶನಿ ಫಲ ನೀಡಬಹುದು. ನಿಮಗೆ ಸೇರಬೇಕಾದ್ದೆಲ್ಲ ಬರುತ್ತದೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ನರಸಿಂಹ ದೇವರ ಪ್ರಾರ್ಥನೆ ಮಾಡಿ.
ಶುಭ ಹರಳು : ಕನಕಪುಷ್ಯರಾಗ.
ಮಕರ: ೫ ವರ್ಷದಿಂದ ಕಷ್ಟ ಅನುಭವಿಸಿದ್ದೀರಿ. ಶನಿ ಬಿಟ್ಟು ಹೋಗುತ್ತಿದ್ದಾನೆ. ಮುಂದೆ ಒಳ್ಳೆಯ ಫಲ ಬರುವುತ್ತದೆ. ರುದ್ರಾಭಿಷೇಕ, ಅರಳಿಮರ ಪ್ರದಕ್ಷಿಣೆ ಮಾಡಿ. ಶುಭ ಹರಳು: ಇಂದ್ರನೀಲ.
ಕುಂಭ: ಗುರು ಬಲ ಪ್ರಾರಂಭವಾಗುತ್ತದೆ. ಆದರೆ ಜತೆಯಲ್ಲಿ ಸಾಡೇಸಾಥ್ ಕೂಡ ಶುರುವಾಗುತ್ತದೆ. ಬೆನ್ನು, ಸೊಂಟ ನೋವು ಸಮಸ್ಯೆ ಎದುರಾಗ ಬಹುದು. ಯಾವುದೇ ವ್ಯವಹಾರವಾದರೂ ಎಚ್ಚರವಹಿಸಿ. ಭೂವರಾಹಸ್ವಾಮಿ ಪ್ರಾರ್ಥನೆ. ರುದ್ರಾಭಿಷೇಕ, ಅರಳಿಮರ ಪ್ರದಕ್ಷಿಣೆ ಮಾಡಿ.
ಮೀನ : ಸಾಡೇಸಾಥ್ ಪ್ರಾರಂಭವಾಗುತ್ತದೆ. ಎಚ್ಚರ ದಿಂದಿರಬೇಕು. ಯಾವುದೇ ಹೊಸ ಯೋಜನೆ ಪ್ರಾರಂಭ ಮಾಡುವುದು ಬೇಡ.. ಯಾವುದೇ ಶುಭ ಕಾರ್ಯಗಳನ್ನೂ ಮಾಡಬೇಡಿ. ಮುಂದಿನ ೩ವರ್ಷ ಜಾಗೃತಿಯಿಂದಿರಿ. ಶಿವ ಪಂಚಾಕ್ಷರಿ ಜಪ, ಅರಳಿಮರ ಪ್ರದಕ್ಷಿಣೆ ಮಾಡಿ.
ಶುಭ ಹರಳು : ಕನಕಪುಷ್ಯರಾಗ.