ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 242
ಮಾಹಿತಿ ತಂತ್ರಜ್ಞಾನದ ಸದುಪಯೋಗಗಳ ಕುರಿತು ತಜ್ಞ ಪಿ.ಬಿ.ಕೋಟೂರ ಅವರಿಂದ ಅರಿವಿನ ಉಪನ್ಯಾಸ
ಬೆಂಗಳೂರು: ಮಾಹಿತಿ ತಂತ್ರಜ್ಞಾನ ದೇಶದ ಆಶಾಕಿರಣ. ಭಾರತ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕ ರೂಪ ಗಳಿಸಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಈ ಮಾಹಿತಿ ತಂತ್ರಜ್ಞಾನ. ಎಲ್ಲ ಕ್ಷೇತ್ರಗಳಲ್ಲೂ ಮಾಹಿತಿ ತಂತ್ರಜ್ಞಾನ ತನ್ನ ವ್ಯಾಪ್ತಿ
ಯನ್ನು ವಿಸ್ತರಿಸಿಕೊಂಡಿದೆ. ದೇಶದಲ್ಲಿ ಆರ್ಥಿಕ ಸುಧಾರಣೆಗೆ ಇದರ ಕೊಡುಗೆ ಅಮೂಲ್ಯ ಮತ್ತು ಅಪಾರ. ಪ್ರತಿಯೊಬ್ಬ ರೈತನನ್ನೂ ಇದು ತಲುಪಿದ್ದು, ಕೃಷಿ ಮಾರುಕಟ್ಟೆಗಳ ಸ್ಥಿತಿಗತಿಗಳ ಬಗ್ಗೆ ರೈತರು ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ವಿಪ್ರೊ ಸಂಸ್ಥೆಯ ಉನ್ನತ ಶಿಕ್ಷಣ ಕಾರ್ಯಕ್ರಮದ ಟ್ಯಾಲೆಂಟ್ ಟ್ರಾನ್ಸ್ ಫಾರ್ಮೆಶನ್ ಗ್ಲೋಬಲ್ ಹೆಡ್ ಪಿ.ಬಿ.ಕೋಟೂರ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನದ ಸದುಪಯೋಗಗಳ ಬಗ್ಗೆ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅರಿವಿನ ಉಪನ್ಯಾಸ ನೀಡಿದ ಅವರು, ಎಲ್ಲರಿಗೂ ಮಾಹಿತಿ ತಂತ್ರಜ್ಞಾನದ ಅರಿವಿದೆ. ಯಾವುದೇ ವಿಷಯ ತೆಗೆದುಕೊಂಡಾಗ ನಮ್ಮ ಆತ್ಮ, ನಮ್ಮ ಕುಟುಂಬ, ನಮ್ಮ ರಾಜ್ಯ, ನಮ್ಮ
ದೇಶ, ನಮ್ಮ ಜಗತ್ತಿಗೆ ಆ ಒಂದು ಘಟನೆ, ಆ ಒಂದು ತಂತ್ರಜ್ಞಾನ ನೆರವಿಗೆ ಬರುತ್ತದೆ. ಅದಕ್ಕೆ ಮುಖ್ಯ ಕಾರಣ ಮಾಹಿತಿ ತಂತ್ರಜ್ಞಾನ. ವಿಜ್ಞಾನದ ಯಾವುದೇ ಸಂಶೋಧನೆ ಅನುಕರಣೆಯಾದರೂ ಅದು ಹೇಗೆ ನಮಗೆ ಸಹಾಯ ಮಾಡಬಲ್ಲದು ಎನ್ನುವುದರ ಕಡೆ ಗಮನ ಹರಿಸಬೇಕು.
ದಿನದ ೨೪ ಗಂಟೆಯ ಅವಧಿಯಲ್ಲಿ ನಮಗೆ ಬೆಳಕಿನ ಪ್ರಭಾವ ಹಾಗೂ ಕತ್ತಲೆಯ ಪ್ರಭಾವ ಆಗುತ್ತದೆ. ಅದೇ ರೀತಿ ಮಾಹಿತಿ ತಂತ್ರ ಜ್ಞಾನದಲ್ಲಿ ಬೆಳಕಿನಂತಹ ಜ್ಞಾನ ಬಂದಾಗ ನಾವು ಅದನ್ನು ಆಹ್ವಾನಿಸಬೇಕು, ಆಮಂತ್ರಿಸಬೇಕು ಮತ್ತು ಆಸ್ವಾದಿಸಬೇಕು ಎಂದು ತಿಳಿಸಿದರು.
ಕಳೆದ ೧೦-೧೫ ವರ್ಷದಲ್ಲಿ ವಿಜ್ಞಾನ, ತಂತ್ರಜ್ಞಾನ ನಾಗಲೋಟದಲ್ಲಿ ಓಡಿ ಜನರಿಗೆ ಬಹಳ ಹತ್ತಿರವಾಗಿದೆ. ಮಾಹಿತಿ ತಂತ್ರಜ್ಞಾನ ಇಲ್ಲದಿದ್ದರೆ ನಾವು ಬದುಕುವುದಿಲ್ಲ ಎಂಬುವಷ್ಟರ ಮಟ್ಟಿಗೆ ವ್ಯಾಪಕವಾಗಿ ಬೆಳೆದಿದೆ ಮತ್ತು ಅನಿವಾರ್ಯ ಆಗುತ್ತಿದೆ. ಕರೋನಾ ದಂತಹ ಮಹಾಮಾರಿಯಿಂದ ಜಗತ್ತೇ ಒಂದು ರೀತಿ ಸ್ತಂಬ್ದವಾಗಿತ್ತು. ಆದರೆ ಆ ಎಲ್ಲಾ ಸಂದರ್ಭದಲ್ಲಿಯೂ ಜಗತ್ತನ್ನು ನಿರಂತರ ವಾಗಿ ಮುನ್ನಡೆಸಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರ. ಪತ್ರಿಕೆಗಳು ಮುದ್ರಣಗೊಳ್ಳುವುದು ನಿಲ್ಲಲಿಲ್ಲ. ಟಿ.ವಿ ಚಾನಲ್‌ಗಳು ಮಾಹಿತಿ ನೀಡುವುದನ್ನು ಸ್ಥಗಿತಗೊಳಿಲಿಲ್ಲ. ಸಾಮಾನ್ಯರು, ಬಡವರಿಗೆ ಸರಕಾರದಿಂದ ಒದಗಬೇಕಾದ ಸೌಲಭ್ಯಗಳು ನಿಲ್ಲಲಿಲ್ಲ. ಏಕೆಂದರೆ, ಇಲ್ಲಿ ಮಾಹಿತಿ ತಂತ್ರಜ್ಞಾನದ ಅನನ್ಯ ಉಪಕರಣಗಳು ಕಾರ್ಯನಿರ್ವಹಿಸುತ್ತಿದ್ದವು ಎಂದರು.
ವಿಜ್ಞಾನ, ಹಾರ್ಡ್‌ವೇರ್, ಸಾಫ್ಟ್ ವೇರ್ ತಂತ್ರಾಂಶ, ನೆಟ್‌ವರ್ಕ್ ಕನೆಕ್ಟಿವಿಟಿ, ಇಂಟ್ರಾನೆಟ್, ಇಂಟರ್‌ನೆಟ್ ಇದೆಲ್ಲವೂ ಒಳ ಗೊಂಡು ದೊಡ್ಡ ಸಮಗ್ರ ಸಮ್ಮಿಲನವೇ ಮಾಹಿತಿ ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನ ಎನ್ನುವಂತಹದ್ದು ಒಂದು ದೊಡ್ಡ ವಿಶ್ವವಾಣಿ. ಅಂದರೆ ಅದರಿಂದ ವಿಶ್ವದ ಎಲ್ಲಾ ಮಾಹಿತಿಗಳನ್ನು ನಾವು ಸುಲಭವಾಗಿ ಕಾಣಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮನುಷ್ಯರು ಕಲಿಯುವುದನ್ನು ಮರೆಯುತ್ತಿದ್ದಾರೆ: ಭಾರತದ ಮೊದಲ ಕಂಪ್ಯೂಟರ್ ಶುರುವಾಗಿದ್ದು 1975ರಲ್ಲಿ, ಅದು ಕೋಲ್ಕೊತಾದಲ್ಲಿ. ಶಿಕ್ಷಣ, ವೈದ್ಯ ವಿಜ್ಞಾನ, ಕೃಷಿ, ಸಂಶೋಧನೆ ಮತ್ತು ಅಭಿವೃದ್ಧಿ ಈ ಯಾವುದೇ ವಿಚಾರವಾಗಿರಬಹುದು ಮಾಹಿತಿ ತಂತ್ರಜ್ಞಾನ ಇಲ್ಲದೆ ದಿನಗಳೇ ನಡೆಯುವುದಿಲ್ಲ. ಸ್ಮಾರ್ಟ್ ಫೋನ್ ರೆವೊಲ್ಯೂಷನ್‌ನಿಂದಾಗಿ ಪ್ರತಿಯೊಬ್ಬರ ಕೈಯಲ್ಲೂ ಫೋನ್ ಕಾಣಬಹದು.
ಹಳ್ಳಿಯ ರೈತರಿಗೂ ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬ ಮಾಹಿತಿ ಈ ಸ್ಮಾರ್ಟ್ ಫೋನ್‌ಗಳಿಂದ ದೊರೆಯುತ್ತಿದೆ. ಆದರೆ, ದುರಂತವೆಂದರೆ, ಈ ಮೆಷಿನ್ ಗಳು ಕಲಿತಷ್ಟು ಕಲಿಯುವುದನ್ನೂ ಜನರು ಮರೆಯುತ್ತಿದ್ದಾರೆ. ಇಂಟರ್‌ನೆಟ್ ಪ್ರೊವೈಡ್ ಸರ್ವಿಸ್
ನವುರು ನಾವು ಕೇಳಿದಷ್ಟು ಡಾಟಾ ನೀಡುತ್ತಾರೆ. ಆದರೆ ನಾವು ತೆಗೆದುಕೊಳ್ಳುವ ಡೇಟಾವನ್ನು ಹೇಗೆ ಸದುಪಯೋಗ ಪಡೆದು ಕೊಳ್ಳಬೇಕು ಅನ್ನುವುದು ಮುಖ್ಯವಾಗಿದೆ ಎಂದು ಹೇಳಿದರು.
ನಮ್ಮ ಖಾಸಗಿತನವನ್ನು ಎಷ್ಟು ಬೇಕೊ ಅಷ್ಟು ಕಾಪಾಡಿಕೊಳ್ಳಬೇಕು. ಈಗಿನ ಕಾಲದ ಮಕ್ಕಳು ಫೋನ್ ಹಿಡಿದುಕೊಂಡಿರುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರೆ, ಮಕ್ಕಳ ಕೈಯಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದು ಈ ವರ್ಚುವಲ್ ವರ್ಲ್ಡ್‌ನ
ಅಪರಾಧ. ಇದನ್ನು ಕಡಿಮೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕು. ಏಕೆಂದರೆ ತಂತ್ರಜ್ಞಾನದ ಬಳಕೆಯನ್ನು ಸಮರ್ಪಕವಾಗಿಸಿಕೊಂಡರೆ ಮಾತ್ರ ಅದನ್ನು ಸದುಪಯೋಗ ಪಡೆದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಾಫ್ಟ್ ವೇರ್‌ನಲ್ಲಿ ಭಾರತೀಯರೇ ಮುಂಚೂಣಿಯಲ್ಲಿರುವುದು ಒಂದು ಹೆಮ್ಮೆ. ವಿಶ್ವದ ಒಟ್ಟಾರೆ ಸಾಫ್ಟವೇರ್ ಬಳಕೆ ಪೈಕಿ ಶೇ. 60ರಿಂದ 63ರಷ್ಟು ಪ್ರಮಾಣದ ಸಾಫ್ಟ್ ವೇರ್ ಭಾರತದಿಂದ ರಫ್ತಾಗುತ್ತದೆ. ಜಗತ್ತಿನಲ್ಲಿ ಸುಮಾರು 8.6ಮಿಲಿಯನ್ ಸಾಫ್ಟ್ ವೇರ್ ಎಂಜಿನಿಯರ್‌ಗಳ ಪೈಕಿ 4.5 ಮಿಲಿಯನ್ ಭಾರತೀಯರೇ ಆಗಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ 2.3 ಮಿಲಿಯನ್ ಸಾಫ್ಟ್ ವೇರ್ ಎಂಜಿನಿಯರ್ ಗಳಿದ್ದಾರೆ. ಇದು ನಾವು ಮಾಹಿತಿ ತಂತ್ರಜ್ಞಾನಕ್ಕಿರುವ ಬೆಲೆ ಮತ್ತು ಕೊಡುಗೆ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನದ ಮೂಲ: ಮಾಹಿತಿ ತಂತ್ರಜ್ಞಾನದ ಮೂಲ ಇರುವುದು ಎರಡೇ ಅಕ್ಷರಗಳಲ್ಲಿ. ನಾವು ಅದನ್ನು ಡಿಜಿಟ್ ಎನ್ನುತ್ತೇವೆ, ಅದುವೇ ಒಂದು ಮತ್ತು ಸೊನ್ನೆ. ಇವುಗಳನ್ನು ಬೈನರಿ ಡಿಜಿಟ್ ಎನ್ನುತ್ತೇವೆ. ಇವೆರಡರ ಪೈಕಿ ಯಾವುದಾದರೂ ಒಂದು ಇಲ್ಲದಿದ್ದರೂ ಮಾಹಿತಿ ತಂತ್ರeನದ ಜಗತ್ತು ನಡೆಯುವುದಿಲ್ಲ. ಈ ಭೂಮಿಗೆ ಸೊನ್ನೆಯನ್ನು ಪರಿಚಯಿಸಿದವರು ಭಾರತೀ ಯರು. ಇದು ನಮ್ಮ ಗಣಿತ, ವಿಜ್ಞಾನದ ಪ್ರಮುಖ ಕೊಡುಗೆ. ಬೆಂಗಳೂರು ಇಂದು ಇಷ್ಟು ದೊಡ್ಡ ನಗರವಾಗಿ, ಸಿಲಿಕಾನ್ ಸಿಟಿಯಾಗಿ ಬೆಳೆಯಲು ಕಾರಣ ಈ ಮಾಹಿತಿ ತಂತ್ರಜ್ಞಾನ ಎಂಬುದನ್ನು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕು ಪಿ.ಬಿ.ಕೋಟೂರ ಎಂದರು.
***
ಮಾಹಿತಿ ತಂತ್ರಜ್ಞಾನ ನಮ್ಮ ಜೀವನವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಈ ಡಿಜಿಟ್ ವರ್ಡ್‌ನಲ್ಲಿ ಮಾಹಿತಿ ತಂತ್ರಜ್ಞಾನ
ಪ್ರತಿಕ್ಷಣವೂ ಕೂಡ ಹೊಸ ಮಾಹಿತಿ ನೀಡುತ್ತಿದೆ. ಪರ್ಸನಲ್ ಅಂದರೆ ನಮ್ಮ ಮನಸ್ಸಿನ ಕಂಪ್ಯೂಟರ್ ಇದ್ದಹಾಗೆ. ಆದರೆ ಈಗಿನ ಕಂಪ್ಯೂಟರ್‌ಗಳು ಫಾರ್ಮುಲಾ ರೇಸ್ ಕಾರ್ ಇದ್ದ ಹಾಗೆ.
-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ
***
ನಾವು ತಂತ್ರಜ್ಞಾನವನ್ನು ಸಾಮೂಹಿಕ ಜವಬ್ದಾರಿಯಿಂದ ಬದಲಿಸಿಕೊಂಡರೆ ಮಾತ್ರ ಇದರ ಸದುಪಯೋಗ ಪಡೆದುಕೊಳ್ಳಲು
ಸಾಧ್ಯ.
ಮಾಹಿತಿ ತಂತ್ರಜ್ಞಾನ ಎನ್ನುವಂತಹದ್ದು ಒಂದು ದೊಡ್ಡ ವಿಶ್ವವಾಣಿ.
ಜಗತ್ತಿಗೆ ಸೊನ್ನೆಯನ್ನು ಪರಿಚಯಿಸಿದವರು ಭಾರತೀಯರು. ಮಾಹಿತಿ ತಂತ್ರಜ್ಞಾನದ ಮೂಲವೂ ಸೊನ್ನೆ ಮತ್ತು ಒಂದು.
ಮಾಹಿತಿ ತಂತ್ರಜ್ಞಾನದಲ್ಲಿ ಬೆಳಕಿನಂತಹ ಜ್ಞಾನವನ್ನು ನಾವು ಆಮಂತ್ರಿಸಬೇಕು.