ವಿಶ್ವವಾಣಿ ಕ್ಲಬ್‌ಹೌಸ್ 246
ಆಟಿಸಂನಿಂದ ಬಳಲುವವರು ನಮ್ಮೊಂದಿಗೆ ಇರಬಹುದು
ಮಗುವಿನ ಮೊದಲ ಅಳು ಅತ್ಯಂತ್ಯ ಮುಖ್ಯವಾಗುತ್ತದೆ
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಡಾ.ಜಯಶ್ರೀ ಅವರ ಅರಿವಿನ ಉಪನ್ಯಾಸ
ಬೆಂಗಳೂರು: ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಶಾಲಾ-ಕಾಲೇಜುಗಳಲ್ಲಿ, ಕೆಲಸ ಮಾಡುವ ಜಾಗ ಇರಬಹುದು. ಅಕ್ಕಪಕ್ಕದಲ್ಲೂ ಸಿಗಬಹುದು. ಕುಟುಂಬ, ಶಾಲೆ, ಕಾಲೇಜು, ಕೆಲಸದಲ್ಲಿ, ಸಮಾಜದಲ್ಲಿ ಅವರನ್ನು ಒಪ್ಪಿಕೊಳ್ಳ ಬೇಕು ಎಂದು ಆಟಿಸಂ ಸ್ಪೆಕ್ಟ್ರಮ್ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ. ಸಿ. ಶಾನ್ಬಾಳೆ ಅಭಿಪ್ರಾಯಪಟ್ಟರು.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಮಕ್ಕಳಲ್ಲಿನ ‘ಆಟಿಸಂ’ ಕಾರ್ಯಕ್ರಮದಲ್ಲಿ, ಮೈಸೂರಿನ ಅಖಿಲ ಭಾರತ ವಾಕ್- ಶ್ರವಣ ಸಂಸ್ಥೆ ಯ ಆಟಿಸಂ ಸ್ಪೆಕ್ಟ್ರಮ್ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ. ಸಿ. ಶಾನ್ಬಾಳೆ ಅರಿವಿನ ಉಪನ್ಯಾಸ ನೀಡಿದರು. ಈ ವೇಳೆ ಸಂಸ್ಥೆಯ ನಿರ್ದೇಶಕಿ ಡಾ.ಪುಷ್ಪಾವತಿ ಮರಿಸ್ವಾಮಿ ವೇದಿಕೆ ಹಂಚಿಕೊಂಡಿದ್ದರು.
ಆಟಿಸಂ ತೊಂದರೆ ಎದುರಿಸುತ್ತಿರುವ ಮಕ್ಕಳು ಸಾಮಾನ್ಯವಾಗಿ ಕಾಣುತ್ತಾರೆ. ನೋಡಲು ಯಾವುದೇ ತೊಂದರೆ ಕಾಣುವುದಿಲ್ಲ. ಆದರೆ ಅವರಲ್ಲಿ ಬುದ್ಧಿಮತ್ತೆಯಲ್ಲಿ ತೊಂದರೆ ಇರುತ್ತದೆ. ಎಲ್ಲಾ ಸಾಮಾನ್ಯ ಮಕ್ಕಳಂತೆ ಕಂಡು ಬಂದರೂ, ಅವರ ವರ್ತನೆ ಯಲ್ಲಿ ಬದಲಾವಣೆ ಕಾಣುತ್ತದೆ. ಹೀಗಾಗಿ ಪ್ರತಿ ದಿನ ಇದರ ಬಗ್ಗೆ ತಿಳಿಯಬೇಕು ಮತ್ತು ಯಾವ ರೀತಿ ಅವರನ್ನು ನಮ್ಮಲ್ಲಿ ಒಬ್ಬರಾಗಿ ಒಪ್ಪಿಕೊಳ್ಳಬೇಕು ಎಂಬುದರ ಬಗ್ಗೆ ಹೆಚ್ಚು ಚಿಂತಿಸ ಬೇಕಿದೆ.
ಸಾಮಾನ್ಯವಾಗಿ, ಎರಡು ವರ್ಷದಲ್ಲೇ ಮಕ್ಕಳು ತಂದೆ-ತಾಯಿಯೊಂದಿಗೆ ಬೆರೆಯಲು ಪ್ರಾರಂಭ ಮಾಡಿರುತ್ತದೆ. ನಂತರ ಮನೆ ಯವರು ಅಕ್ಕ-ಪಕ್ಕದ ಮನೆಯವರೊಂದಿಗೆ ಬೆರೆಯುತ್ತದೆ. ಚಿಕ್ಕ ಮಕ್ಕಳಲ್ಲಿ ಇದು ಸಾಮಾನ್ಯ ವರ್ತನೆ. ಮಗುವಿನಲ್ಲಿ ಸಾಮಾಜಿಕ ನಗು ತುಂಬಾ ಮುಖ್ಯ ಪಾತ್ರವಹಿಸುತ್ತದೆ. ಅದನ್ನು ಈ ಮಕ್ಕಳಲ್ಲಿ ಗಮನಿಸಬೇಕು. ಹುಟ್ಟಿದ ತಕ್ಷಣ ಮಕ್ಕಳು ಅಳುತ್ತವೆ. ಹಾಗೆ ಮಾಡದಿದ್ದಲ್ಲಿ ನರದ ಬೆಳವಣಿಗೆ ತಪಾಸಣೆ ಮಾಡುತ್ತಾರೆ. ಐಸಿಯುನಲ್ಲಿ ಇಡಲಾಗುತ್ತದೆ.
ನಿಧಾನವಾಗಿ ಅತ್ತರೆ ಮೆದುಳಿಗೆ ಆಕ್ಸಿಜನ್ ನಿಧಾನವಾಗಿ ತಲುಪುತ್ತಿರುತ್ತದೆ. ಮಕ್ಕಳು ಹುಟ್ಟಿದ ಕೂಡಲೇ ಅದರ ಮೊದಲ ಅಳು ತುಂಬಾ ಮುಖ್ಯವಾಗುತ್ತದೆ ಎಂದರು. ಕಾಲಕ್ರಮೇಣ ಹಲವು ರೀತಿಯ ಅಳುವನ್ನು ಗಮನಿಸಬಹುದು. ಹಸಿವಿಗಾಗಿ, ನಿದ್ದೆಗಾಗಿ ನೋವಿನ ಅಳು ಇರುತ್ತದೆ. ಈ ಅಳು ಅದರ ಮೂಲಭೂತ ಅಗತ್ಯಗಳನ್ನು ತೋರಿಸುವ ಲಕ್ಷಣ. ಹಾಗೆ ಮಗುವಿಗೆ ಸಾಮಾಜಿಕ ನಗು ಕೂಡ ಮುಖ್ಯವಾಗುತ್ತದೆ. ತಾಯಿಯನ್ನು ನೋಡಿ ನಗುವುದು. ಇದು ಮಗುವಿಗೆ ಒಂದು ತಿಂಗಳಿಗೆ ಬಂದಿರುತ್ತದೆ. ಈ ನಗು ಸಾಮಾಜಿಕ ಬೆಳವಣಿಗೆಗೆ ಮುಖ್ಯವಾಗುತ್ತದೆ. ಇಂತ ಮಕ್ಕಳನ್ನು ಕಂಡಕೂಡಲೇ ಈ ಮಗು ಏಕೆ ಸಾಮಾನ್ಯವಾಗಿಲ್ಲ ಅನ್ನಿಸುತ್ತದೆ. ಆದರೆ ಆದನ್ನು ಗುರುತಿಸಿ ಗುಣಪಡಿಸುವುದರ ಬಗ್ಗೆ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು.
ಸಾಮಾನ್ಯ ಗುಣ ಲಕ್ಷಣಗಳು
? ಸಮಾಜದೊಂದಿಗೆ ಬೆರೆಯುವುದಿಲ್ಲ, ಬೇಗ ಮಾತು ಬಂದಿರುವುದಿಲ್ಲ. ಒಂದೇ ರೀತಿ ಆಟವಾಡುವುದು, ಅರ್ಥವಾದರೂ
ಮಾತನಾಡಲು ಸಾಧ್ಯವಾಗುತ್ತಿರುವುದಿಲ್ಲ. ಬೆಳವಣಿಗೆಕುಂಠಿತ, ವರ್ತನೆಯಲ್ಲಿ ವ್ಯತ್ಯಾಸ, ಮಾತು, ಭಾಷೆ ಬೆಳವಣಿಗೆ ಇಲ್ಲ ದಿರುವುದು. ಸ್ಟೀರಿಯೊ ಗುಣಲಕ್ಷಣಗಳು ಇರುತ್ತದೆ.
? ಮಕ್ಕಳು 11-12 ವಯಸ್ಸು ದಾಟಿದ ಮೇಲೆ ಈ ತೊಂದರೆಕಂಡು ಬರುತ್ತಾರೆ. ಆಗ ಆ ಮಗುವಿನ ಮೆದುಳು ಬೆಳೆದಿರುತ್ತದೆ. ಆಗ
ಚಿಕಿತ್ಸೆ ನೀಡುವುದುಕಷ್ಟವಾಗುತ್ತದೆ. ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಬೇಗ ಇದರ ಲಕ್ಷಣ ಗಳನ್ನು ಕಂಡು ಹಿಡಿಯುವುದು ಮುಖ್ಯವಾಗುತ್ತದೆ.
? ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ 116 ಮಕ್ಕಳಲ್ಲಿ ಒಬ್ಬರಿಗೆ ಈ ಕಾಯಿಲೆ ಕಾಣಬರುತ್ತಿದೆ. ಹಾಗೇ ಭಾರತದಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ. ಇತ್ತೀಚಿನ ನಿಮ್ಹಾನ್ಸ್ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಶೇ.೧೫ರಷ್ಟು ಕಂಡುಬಂದಿದೆ. ೩-೬ವರ್ಷದ ಮಕ್ಕಳಲ್ಲಿ 125ರಲ್ಲಿ ಒಂದುಮಗುವಿಗೆ ಈ ಕಾಯಿಲೆ ಕಾಣಿಸುತ್ತಿದೆ.
? ಕನ್ನಡದಲ್ಲಿ ಆಟಿಸಂ ಎಂದರೆ ಸ್ವಲೀನತೆ. ಇದಕ್ಕೆ ತುತ್ತಾದ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಬೆಳವಣಿಗೆ ಆಗುತ್ತಿರುವುದಿಲ್ಲ. ನರದ ಬೆಳವಣಿಗೆ ತೊಂದರೆ. ಹೊರಗಿನ ಪ್ರಪಂಚದೊಂದಿಗೆ ಬೆರೆಯುವುದಿಲ್ಲ. ಸಾಮಾನ್ಯ ಮಕ್ಕಳಲ್ಲಿ ಕಾಣಬರುವ ವರ್ತನೆ ಇಂಥಹ ಮಕ್ಕಳಲ್ಲಿ ಕಾಣಸಿಗುವುದಿಲ್ಲ.
***
ಅನುವಂಶೀಕವಾಗಿಯೂ ಅಥವಾ ವಾತಾವರಣದಿಂದ ಈ ಕಾಯಿಲೆ ಬರಬಹುದು. ಇದರಿಂದ ಬುದ್ದಿಶಕ್ತಿಕಮ್ಮಿ ಆಗುತ್ತದೆ, ಸಂವಹನೆ ಸಾಧ್ಯವಿರುವುದಿಲ್ಲ. ಹುಟ್ಟಿನಿಂದ ಬಂದಿದ್ದರೂ ಆರು ತಿಂಗಳ ಬಳಿಕ ಕಾಣಿಸುತ್ತದೆ. ಪ್ರಪಂಚದಲ್ಲಿ ವಾರ್ಷಿಕ ೫೦ ಮಿಲಿಯನ್ ಮಕ್ಕಳಲ್ಲಿ ಈ ಕಾಯಿಲೆಕಾಣಿಸುತ್ತದೆ. ಭಾರತದಲ್ಲಿ ಈ ಕಾಯಿಲೆಗೆ ಐದು ಮಿಲಿಯನ್ ಮಕ್ಕಳು ತುತ್ತಾಗಿದ್ದಾರೆ. ಇಂತಹ ಮಕ್ಕಳಿಗೆ ಪೋಷಕರ ಪ್ರೀತಿ, ವಾತ್ಸಲ್ಯ, ಪೋಷಣೆ ಬಹಳ ಮುಖ್ಯವಾಗುತ್ತದೆ.
-ನಂಜನಗೂಡು ಮೋಹನ್ ಸಂಪಾದಕೀಯ ಸಲಹೆಗಾರರು, ವಿಶ್ವವಾಣಿ ದಿನಪತ್ರಿಕೆ
***
ಮಗುವಿನಲ್ಲಿ ಗುರುತಿಸಬೇಕಾದ ಲಕ್ಷಣಗಳು
? ಎರಡು ವರ್ಷದ ಮಗು ಒಬ್ಬನೇ ಆಡುತ್ತಿದ್ದಾನೆ. ಯಾರ ಜತೆಯೂ ಬೆರೆಯುತ್ತಿಲ್ಲ. ಒಂದೇಕಡೆ ಅಥವಾ ಒಂದೇ ಆಟಿಕೆಯನ್ನು ಬಳಸುತ್ತಾನೆ. ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ. ಈ ಲಕ್ಷಣಗಳು ಕಂಡು ಬಂದರೇ, ಆ ಮಗುವಿನಲ್ಲಿ ಖಂಡಿತಾ ತೊಂದರೆ ಆಗುತ್ತಿದೆ. ಈ ಗುಣಲಕ್ಷಣಗಳು ಕಂಡು ಬಂದರೆ ಅದನ್ನು ಆಟಿಸಂ ಎನ್ನಲಾಗುತ್ತದೆ.
? ಮೂರು ವರ್ಷದ ಮಗು, ತನ್ನ ಅಗತ್ಯವನ್ನು ತಾವೇ ತೆಗೆದುಕೊಳ್ಳು ಪ್ರಯತ್ನ ಮಾಡುತ್ತಿರುತ್ತಾರೆ. ದೊಡ್ಡವರಲ್ಲಿರುವ ಆತ್ಮ ವಿಶ್ವಾಸ ಅವರಲ್ಲಿ ಇರುತ್ತದೆ. ಆದರೆ ಆಟಿಸಂ ಮಕ್ಕಳು ತಮ್ಮ ಅಗತ್ಯವನ್ನು ಪಡೆಯಲು ಪ್ರಯತ್ನ ಮಾಡುವುದೂ ಕಷ್ಟವಾಗು ತ್ತಿರುತ್ತದೆ. ತನಗೆ ಬೇಕಾಗಿರುವುದನ್ನೂ ಕೇಳುವುದೂ ಇಲ್ಲ.
? ನಾಲ್ಕು ವರ್ಷದ ಮಕ್ಕಳಿಗೆ ಮಾತು ಬರುತ್ತದೆ. ತಾಯಿಊಟ ಬೇಕಾ ಎಂದುಕೇಳಿದರೆ ಮಗೂ ಕೂಡ ಊಟ ಬೇಕಾ ಎಂದು ಕೇಳುತ್ತದೆ. ತಾಯಿ ಹೇಳಿದ್ದನ್ನೇ ಹೇಳುತ್ತದೆ.ಯಾವ ಪದ,ಯಾವ ವಾಕ್ಯ,ಯಾವ ಸಂದರ್ಭದಲ್ಲಿ ಉಪಯೋಗಿಸಬೇಕು ಎಂದು ಈ ಮಕ್ಕಳಿಗೆ ತಿಳಿದಿರುವುದಿಲ್ಲ.
ಮೈಲ್ಡ್, ಮಾಡರೇಟ್, ಸಿವಿಯರ್ ಎಂಬ ಮೂರು ವಿಭಾಗಗಳಿವೆ. ಅದರ ಸಿವಿಯಾರಿಟಿ, ಲಕ್ಷಣ ಕಂಡು ಅದಕ್ಕೆ ಬೇಕಾದ ರೀಹ್ಯಾ ಬಿಟೇಶನ್ ಮಾಡಬೇಕು, ಮಾಡಲಾಗುತ್ತಿದೆ.
? ಈ ವಿಚಾರದಲ್ಲಿ ಎಷ್ಟೋ ಮಂದಿ ಡಾಕ್ಟರ್‌ಗಳಿಗೆ ತಿಳಿದಿರುವುದಿಲ್ಲ. ಮಾತು ಮತ್ತು ಬೆಳವಣಿಗೆಗೆ ಸಂಬಂಧಪಟ್ಟ ವಿಚಾರ ಬಂದಾಗ ಅದಕ್ಕೆ ಸಂಬಂಧ ಪಟ್ಟ ತಜ್ಞರನ್ನು ಸಂಪರ್ಕಿಸಿ.
? ಸಮಸ್ಯೆ ಕಂಡ ತಕ್ಷಣ, ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗಿ ಮುಂದಿನ ಹೆಜ್ಜೆ ಬಗ್ಗೆ ತಿಳಿಸುತ್ತಾರೆ.
? ಈ ಸಮಸ್ಯೆಯ ಗುಣ ಲಕ್ಷಣಗಳನ್ನು ಮುಂಚಿತವಾಗಿ ಕಂಡುಹಿಡಿಯುವಯಂತ್ರಗಳು ಮೈಸೂರಿನ ವಾಕ್-ಶ್ರವಣ ಸಂಸ್ಥೆಯಲ್ಲಿ
ಲಭ್ಯವಿದೆ.
? ಶಾರುಕ್ ಖಾನ್ ನಟಿಸಿರುವ ಮೈನೇಮ್ ಇಸ್ ಖಾನ್ ಚಿತ್ರದಲ್ಲಿ ನಾಯಕ ನಟ ಈ ಕಾಯಿಲೆಯಿಂದಲೇ ಬಳಲುತ್ತಿರುವುದನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.
? ಸಂಯುಕ್ತ ರಾಷ್ಟರಗಳ ಸಂಸ್ಥೆ, ಪ್ರತಿವರ್ಷ ಏಪ್ರಿಲ್ 2ರಂದು ಆಟಿಸಂ ದಿನ ಎಂದು ಉಲ್ಲೇಖಿಸಲಾಗಿದೆ.
ಸಾಮಾನ್ಯ ಗುಣ ಲಕ್ಷಣಗಳು
? ಸಮಾಜದೊಂದಿಗೆ ಬೆರೆಯುವುದಿಲ್ಲ, ಬೇಗ ಮಾತು ಬಂದಿರುವುದಿಲ್ಲ. ಒಂದೇ ರೀತಿ ಆಟವಾಡುವುದು, ಅರ್ಥವಾದರೂ
ಮಾತನಾಡಲು ಸಾಧ್ಯವಾಗುತ್ತಿರುವುದಿಲ್ಲ. ಬೆಳವಣಿಗೆಕುಂಠಿತ, ವರ್ತನೆಯಲ್ಲಿ ವ್ಯತ್ಯಾಸ, ಮಾತು, ಭಾಷೆ ಬೆಳವಣಿಗೆ ಇಲ್ಲದಿರು ವುದು. ಸ್ಟೀರಿಯೊ ಗುಣಲಕ್ಷಣಗಳು ಇರುತ್ತದೆ.
? ಮಕ್ಕಳು 11-12 ವಯಸ್ಸು ದಾಟಿದ ಮೇಲೆ ಈ ತೊಂದರೆ ಕಂಡು ಬರುತ್ತಾರೆ. ಆಗ ಆ ಮಗುವಿನ ಮೆದುಳು ಬೆಳೆದಿರುತ್ತದೆ. ಆಗ
ಚಿಕಿತ್ಸೆ ನೀಡುವುದುಕಷ್ಟವಾಗುತ್ತದೆ. ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಬೇಗ ಇದರ ಲಕ್ಷಣ ಗಳನ್ನು ಕಂಡು ಹಿಡಿಯುವುದು ಮುಖ್ಯವಾಗುತ್ತದೆ.
? ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ 116 ಮಕ್ಕಳಲ್ಲಿ ಒಬ್ಬರಿಗೆ ಈ ಕಾಯಿಲೆ ಕಾಣಬರುತ್ತಿದೆ. ಹಾಗೇ ಭಾರತದಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ. ಇತ್ತೀಚಿನ ನಿಮ್ಹಾನ್ಸ್ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಶೇ.15ರಷ್ಟುಕಂಡುಬಂದಿದೆ. ೩-೬ವರ್ಷದ ಮಕ್ಕಳಲ್ಲಿ 125ರಲ್ಲಿ ಒಂದುಮಗುವಿಗೆ ಈ ಕಾಯಿಲೆ ಕಾಣಿಸುತ್ತಿದೆ.
? ಕನ್ನಡದಲ್ಲಿ ಆಟಿಸಂ ಎಂದರೆ ಸ್ವಲೀನತೆ. ಇದಕ್ಕೆ ತುತ್ತಾದ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಬೆಳವಣಿಗೆ ಆಗುತ್ತಿರುವುದಿಲ್ಲ. ನರದ ಬೆಳವಣಿಗೆ ತೊಂದರೆ. ಹೊರಗಿನ ಪ್ರಪಂಚದೊಂದಿಗೆ ಬೆರೆಯುವುದಿಲ್ಲ. ಸಾಮಾನ್ಯ ಮಕ್ಕಳಲ್ಲಿ ಕಾಣಬರುವ ವರ್ತನೆ ಇಂಥಹ ಮಕ್ಕಳಲ್ಲಿ ಕಾಣಸಿಗುವುದಿಲ್ಲ.