Saturday, 14th December 2024

ಪೋಷಕರ ಮಾತಲ್ಲಿ ಮಕ್ಕಳು ಆಲದಮರ ಆಗುವ ಶಕ್ತಿಯಿದೆ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೌನ್ಸೆಲಿಂಗ್ ತಜ್ಞೆ ಪರಿಮಳಾ ಜಗ್ಗೇಶ್

ಸಂವಾದ – ೧೪೩

ಬೆಂಗಳೂರು: ಈ ಪ್ರಪಂಚದಲ್ಲಿ ಮಾತು ಎಂಬುದು ಅತ್ಯಂತ ಪ್ರಭಾವಶಾಲಿ. ಮಕ್ಕಳು ಆಲದಮರ ಆಗುವ (ಉತ್ತಮವಾಗಿ ಬೆಳೆಯುವ) ಶಕ್ತಿ ತಂದೆ, ತಾಯಿಯ ಮಾತಿನಲ್ಲಿದೆ. ಅದೇ ರೀತಿ ಆತ್ಮವಿಶ್ವಾಸ ಕುಗ್ಗಿಸುವ ಶಕ್ತಿಯೂ ಇದೆ. ಹೀಗಾಗಿ ಪೋಷಕರು
ಮಕ್ಕಳೊಂದಿಗೆ ಮಾತಿನ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಕೌನ್ಸೆಲಿಂಗ್ ತಜ್ಞೆ ಪರಿಮಳಾ ಜಗ್ಗೇಶ್ ಹೇಳಿ ದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಶುಕ್ರವಾರ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಮಕ್ಕಳೊಂದಿಗೆ ಪೋಷಕರ ಸಂವಹನ ಅವರ ಬೆಳವಣಿಗೆಗೆ ಅತಿ ಮುಖ್ಯ. ಸಂವಹನದ ವೇಳೆ ತಾಳ್ಮೆಯಿಂದ ಕುಳಿತುಕೊಂಡು ಮಕ್ಕಳು ಏನು ಹೇಳುತ್ತಿದ್ದಾರೆ ಎಂದು ಕೇಳಿಸಿ ಕೊಳ್ಳುವ ವ್ಯವಧಾನ ಪೋಷಕರಿಗೆ ಇರಬೇಕು. ಮಕ್ಕಳಿಗೆ ಏನು ಬೇಕು ಎಂದು ಕೇಳಬೇಕು. ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಬೇಕು. ಮಕ್ಕಳು ಹೇಳಿದ ಮಾತು ಗಳನ್ನು ಆಲಿಸಿ, ನಂತರ ಅವರಿಗೆ ಅರ್ಥವಾಗುವ ರೀತಿ ಶಾಂತಿಯಿಂದ ಬುದ್ಧಿಮಾತು ಹೇಳಬೇಕು ಎಂದರು.

ನಾವು ಸಣ್ಣವರಿದ್ದಾಗ ಯಾವುದೇ ಸಾಮಾಜಿಕ ಜಾಲತಾಣ ಇರಲಿಲ್ಲ. ಆದರೆ, ಈಗ ವಿಜ್ಞಾನ-ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬೆಳೆದಿದಿಯೋ ಅಷ್ಟೇ ಮಕ್ಕಳು ಮುಂದು ವರಿದ್ದಾರೆ. ಸಾಮಾಜಿಕ ಜಾಲತಾಣವನ್ನು ಮಕ್ಕಳು ಅವಲಂಬಿತವಾಗಿದ್ದಾರೆ. 17ರ ವಯಸ್ಸಿನ ಶೇ.13ರಷ್ಟು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತಲ್ಲೀನರಾಗಿದ್ದಾರೆ ಎಂದು ಹೇಳಿದರು.

ಮಗು ಹುಟ್ಟಿದ ನಂತರ 12 ವರ್ಷದವರೆಗೂ ಅವರನ್ನು ಮಕ್ಕಳೆಂದು ಭಾವಿಸುತ್ತೇವೆ. ಆದರೆ, ವಯಸ್ಕ ಎಂದ ಅಂದ ಕೂಡಲೇ ನನಗೆ ಎಲ್ಲಾ ಗೊತ್ತು ಎಂಬುದು ಅಷ್ಟೊಂದು ಸರಿಯಲ್ಲ. ಎಲ್ಲದಕ್ಕೂ ಸಮಯಬೇಕು. ನಾವು ಏನಾದರೂ ತಿಳಿದುಕೊಳ್ಳ ಬೇಕಾದರೆ ಆ ಬಗ್ಗೆ ದೊಡ್ಡವರು ಹೇಳಿಕೊಡುತ್ತಾರೆ. ಪ್ರಪಂಚ ಎಷ್ಟು ಅಭಿವೃದ್ಧಿಯಾಗಿದೆಯೋ, ಮಕ್ಕಳ ಮನಸ್ಸಿನಲ್ಲಿ ಅಷ್ಟೇ ಗೊಂದಲಮಯ ವಾತಾವರಣ ಮೂಡಿರುತ್ತದೆ ಎಂದರು.

ಮೂರು ವರ್ಷದ ಹಿಂದಿನ ಮಕ್ಕಳಿಗೆ ಹೋಲಿಸಿದರೆ ಇತ್ತೀಚೆಗೆ ಜನಿಸಿದ ಮಕ್ಕಳು ಚುರುಕಾಗಿದ್ದಾರೆ. ನಾವು ಪೋಷಕರಾಗಿ ಅವರ ಜತೆಗೆ ಇದ್ದು, ಉತ್ತಮ ಜೀವನ ಅರ್ಥ ಮಾಡಿಸಬೇಕು. ಎಲ್ಲ ವಿಷಯದಲ್ಲೂ ಮಕ್ಕಳಿಗೆ ಸ್ವಾತಂತ್ರ್ಯ ಕೊಡಬಾರದು. ಸಮಾಜದಲ್ಲಿ ಸನ್ನಿವೇಶಗಳಿಗೆ ಅನುಗುಣವಾಗಿ ಮಕ್ಕಳನ್ನು ಒಳ್ಳೆ ದಾರಿಯಲ್ಲಿ ಕೊಂಡೊಯ್ಯಬೇಕು. ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸದಿಂದ ಅವರನ್ನು ಕಾಣಬೇಕು ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಮಕ್ಕಳು ತಮ್ಮ ಮನಸ್ಸಿಗೆ ಅನುಗುಣವಾಗಿ ಇರಲು ಬಿಡಬೇಕು. ಸ್ವಾರ್ಥದಿಂದ ವರ್ತಿಸಿದಾಗ ಅವರಿಗೆ ಬುದ್ಧಿ ಹೇಳಬೇಕು. ಎರಡನೇ ಹಂತದಲ್ಲಿ ಅವರು ಮಾತುಕತೆಗೆ ಮುಂದಾಗುತ್ತಾರೆ. ಆಗ ಅವರ ಹಠವನ್ನು ಸುಲಭವಾಗಿ ಪರಿಗಣಿಸಿ  ಮನವೊಲಿಸಬೇಕು. ಇದರಿಂದ ಅವರ ಮನಸ್ಸು ಶಾಂತವಾಗುತ್ತದೆ. ಮೂರನೇ ಹಂತ, ಮಕ್ಕಳಲ್ಲಿ ಜವಾಬ್ದಾರಿ ಬಂದಾಗ ಅವರಿಗೆ ಅನಿಸಿದ್ದನ್ನು ಮಾಡಲು ಮುಂದಾಗುತ್ತಾರೆ. ಆಗ ಪೋಷಕರು ತಾಳ್ಮೆಯಿಂದ ಸರಿಯಾದ ದಾರಿ ತೋರಬೇಕು. ಮಕ್ಕಳ ಜವಾಬ್ದಾರಿ ಯನ್ನು ದಿಕ್ಕುಪಾಲು ಮಾಡಬಾರದು ಎಂದು ಕಿವಿಮಾತು ಹೇಳಿದರು.

ಪಂಚ ದಾರಿಯಲ್ಲಿ ಸಾಗೋಣ

ಒಪ್ಪಿಕೊಳ್ಳುವಿಕೆ: ಮಕ್ಕಳು ಸಣ್ಣ ಪುಟ್ಟ ತಪ್ಪು ಮಾಡಿದಾಗ ಯೋಚನೆ ಮಾಡಿ ಪ್ರತಿಕ್ರಿಯಿಸಬೇಕು. ನಾನು ಏನಾದರೂ ತಪ್ಪು ಮಾಡಿದ್ದೇನೆಯೇ ಎಂದು ಪೋಷಕರು ಚಿಂತಿಸಬೇಕು. ಒಂದು ಮನೆಯಲ್ಲಿ ಮೂರು ಜನ ಮಕ್ಕಳಿದ್ದಾಗ ಎಲ್ಲರಿಗೂ ಒಂದೇ ಪಾಠ ಹೇಳಿಕೊಟ್ಟರೂ, ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಹೇಳಿಕೊಟ್ಟರೂ ಪ್ರತಿಯೊಂದು ಮಗು ಈ ಪ್ರಪಂಚದಲ್ಲಿ  ಭಿನ್ನ ವಾಗಿರುತ್ತಾರೆ. ಪೋಷಕರು ಅದನ್ನು ಒಪ್ಪಿಕೊಳ್ಳಬೇಕು.

ನಂಬಿಕೆ: ನಂಬಿಕೆ ಎನ್ನುವುದು ಬಹಳ ಮುಖ್ಯ. ಇದು ಇದ್ದಾಗ ಮಾತ್ರ ನಮ್ಮ ಮಕ್ಕಳನ್ನು ಪ್ರೋತ್ಸಾಹಿಸಬಹುದು. ಮಕ್ಕಳಿಗೆ
ಸ್ವಾತಂತ್ರ್ಯ ಕೊಡಬೇಕು. ಮಕ್ಕಳ ಮೇಲೆ ಪೋಷಕರು ನಂಬಿಕೆ ಇಡಬೇಕು. ೧೨ ವರ್ಷದವರೆಗೂ ಮಕ್ಕಳಂತೆ ನೋಡಿಕೊಳ್ಳಬೇಕು. ನಂತರ ಅವರ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು.
ಅವರನ್ನು ದೊಡ್ಡವರಂತೆ ನೋಡಬೇಕು.

ಕನಸು ಸಾಕಾರ: ಮಕ್ಕಳ ಕನಸು ಸಾಕಾರಗೊಳಿಸಿದಾಗ ಅವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ನಾವು ಮಾಡಬೇಕಾದ ಮೊದಲ ಕೆಲಸ ಇದು. ಕನಸುಗಳು ಈಡೇರಲು ಬೇಷರತ್ತಾದ ಪ್ರೀತಿ, ಜವಾಬ್ದಾರಿ ನೀಡಬೇಕು.

ಶಕ್ತಿ ತುಂಬಬೇಕು: ಮಕ್ಕಳ ಅನಿಸಿಕೆಗಳನ್ನು ಕೇಳುವುದು ಮಾತ್ರವಲ್ಲ, ಅವರನ್ನು ಶ್ರದ್ಧಾವಂತರಾಗಿ, ಆರೋಗ್ಯವಂತ ರನ್ನಾಗಿಸಬೇಕು. ಮಾಸಿಕವಾಗಿ ಸದೃಢವಾಗಲು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಗುಣಮಟ್ಟದ ಮೌಲ್ಯ ಹೆಚ್ಚಿಸಲು
ಮಾರ್ಗ ತೋರಬೇಕು. ಮಕ್ಕಳಲ್ಲಿ ಪ್ರೀತಿ ತುಂಬಿ, ಅವರಿಗೆ ಬೆನ್ನೆಲುವಾಗಿ ನಿಂತಾಗ ಸದಾ ಅವರ ಮನಸ್ಸಲ್ಲಿ ಇರುತ್ತೇವೆ.

ಪ್ರೀತಿಯ ಸಲಹೆಗಳು: ಮಕ್ಕಳಿಗೆ ಪ್ರೀತಿಯ ಮಾತುಗಳನ್ನು ಹೇಳಬೇಕು. ಮಕ್ಕಳ ಜೀವನದಲ್ಲಿ ಪ್ರೀತಿಯ ಮಾತುಗಳೇ ಶಾಶ್ವತ ವಾಗಿ ಉಳಿಯಲು ಸಾಧ್ಯ.

ಇರಲಿ ಮಕ್ಕಳ ಮೇಲೆ ಕಾಳಜಿ…
ಉತ್ತಮ ಮಾರ್ಗ: ಮಕ್ಕಳನ್ನು ಸರಿದಾರಿಗೆ ಕೊಂಡೊಯ್ಯಬೇಕು. ಮೌಲ್ಯಗಳಿಗೆ ಬೆಲೆ ಕೊಡಬೇಕು. ಮಗುವಿನ ಬೌದ್ಧಿಕತೆಗೆ ಅನುಗುಣವಾಗಿ ಸ್ಪಂದಿಬೇಕು.

ಶ್ರಮಕ್ಕೆ ಸ್ಪಂದನೆ: ಮಕ್ಕಳಿಗೆ ಕಷ್ಟ ಸುಖ ಎದುರಿಸುವ ಶಕ್ತಿ ನೀಡಬೇಕು. ಸಣ್ಣ ಕೆಲಸ ಮಾಡಿದರೂ ಧನ್ಯವಾದ, ಕೃತಜ್ಞತೆ ಹೇಳಿದರೆ ಅವರಲ್ಲಿ ಇನ್ನಷ್ಟು ಹುಮ್ಮಸ್ಸು ಬರುತ್ತದೆ. ಅವರು ಹಾಕುವ ಶ್ರಮ ಗುರುತಿಸಿ ಪ್ರೋತ್ಸಾಹಿಸಬೇಕು.

ಕೇಳಿದ ಕೊಡಲೇ ಕೊಡಿಸುವುದು: ಮಕ್ಕಳು ಏನೇ ಬಯಸಿದರೂ ನಮ್ಮ ಶಕ್ತಿಗೆ ಅನುಸಾರವಾಗಿ ಮಾತ್ರ ಕೊಡಬೇಕು. ಕೇಳಿದ
ಕೂಡಲೇ ಪೂರೈಸಿದಾಗ ಅದರ ಮೌಲ್ಯ ಗೊತ್ತಾಗುವುದಿಲ್ಲ.