Saturday, 23rd November 2024

ಪ್ರತಿಮನೆಯಲ್ಲೂ ಹಾಸುಹೊಕ್ಕಾಗಿರುವ ಕೃಷ್ಣ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 73

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶೇಷ ಸಂವಾದ

ಮನುಕುಲದ ಒಳಿತಿಗೆ ಭಗವದ್ಗೀತೆ ಬೋಧಿಸಿದ ಕೃಷ್ಣ

ಆತ್ಮವಿದ್ಯೆ, ರಾಜವಿದ್ಯೆಯನ್ನು ಮನುಕುಲದ ಒಳತಿಗಾಗಿ ಬೋಧಿಸಿದ ಕೃಷ

ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ಆಚರಣೆಯೆಂದರೆ ಪ್ರತಿ ಮನೆಯಲ್ಲಿಯೂ ಬಾಲಕೃಷ್ಣನನ್ನು ಪೂಜಿಸುತ್ತಾರೆ. ತಾಯಿಯರು ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಕೃಷ್ಣನ ವೇಷಧಾರಣೆ ಮಾಡಿಸುತ್ತಾರೆ. ಇದರಿಂದಲೇ ಭಾರತದಲ್ಲಿ ಹೇಗೆ ಕೃಷ್ಣ ಹಾಸುಹೊಕ್ಕಾಗಿದ್ದಾನೆ ಎಂದು ತಿಳಿದುಬರುತ್ತದೆ. ಕೃಷ್ಣ ಈಗ ಅವಶ್ಯ ಮತ್ತು
ಪ್ರಸ್ತುತ ಎಂದು ಗದುಗಿನ ಶಿವಾನಂದ ಬೃಹನ್ಮಠದ ಉತ್ತರಾಧಿಕಾರಿ ಸದಾಶಿವಾನಂದ ಮಹಾಸ್ವಾಮೀಜಿ ಹೇಳಿದರು.

ಅವರು ವಿಶ್ವವಾಣಿ ಕ್ಲಬ್ ಹೌಸ್‌ನ ಶ್ರೀ ಕೃಷ್ಣ ಸಂದೇಶ ಸಂವಾದದಲ್ಲಿ ಮಾತನಾಡಿ, ಎಲ್ಲ ಉಪನಿಷತ್ತುಗಳು, ಆಕಳುಗಳು ಭಾರತೀಯ ತತ್ವಶಾಸ್ತ್ರದ ಶಿರೋ ಸ್ಥಾಯಿಯಾದ ವೇದಾಂತ ಆಕಳಿದ್ದಂತೆ. ಈ ಆಕಳಿನಿಂದ ಮನುಕುಲದ ಉದ್ಧಾರಕ್ಕಾಗಿ ಈ ಸಾರವನ್ನು ಶ್ರೀಕೃಷ್ಣನು ಹಾಲಿನಂತೆ ಕರೆದುಕೊಟ್ಟ. ತಂತ್ರದಲ್ಲಿ ಕೃಷ್ಣ ಹೆಚ್ಚಿನವನು. ಭಗವದ್ಗೀತೆಯಲ್ಲಿ ಕೃಷ್ಣ ತನ್ನ ತಂತ್ರವನ್ನು ಪ್ರಸ್ತುತಪಡಿಸುತ್ತಾನೆ. ಭಗವದ್ಗೀತೆಯ ವ್ಯಾಪಕತೆ ಎಷ್ಟು ಎಂಬುದು ಗಮನಿಸಬಹುದಾಗಿದೆ. ಗೀತೆಯು ಮನುಷ್ಯರಿಗೆ ಯಾಕೆ? ಹೇಗೆ ಈ ಪರಿಸ್ಥಿತಿ ಬಂತು? ಅಕೀರ್ತಿವಂತನಾಗಿ ಮಾಡುವ ದೌರ್ಬಲ್ಯ ಯಾಕೆ ಬಂತು ಎಂಬುದನ್ನು ತಿಳಿಸಿಕೊಡುತ್ತದೆ. ಮನುಕುಲದಲ್ಲಿ ವ್ಯಕ್ತಿ ತನ್ನಲ್ಲಿ ಕೆಲ ಗುಣ, ಸ್ವಭಾವಗಳನ್ನು ಹೊಂದಿರುತ್ತಾನೆ. ಅದಕ್ಕೆ ಹೊಂದುವಂತಹ ಕರ್ಮ ಮಾಡಿದರೆ ಉತ್ತಮ ಎಂದು ಕೃಷ್ಣ ಹೇಳುತ್ತಾನೆ. ಕೃಷ್ಣನ ಸಂದೇಶ ವನ್ನು ವಿಸ್ತಾರ ಅರ್ಥದಲ್ಲಿ ನೋಡಿದರೆ ಕರ್ಮ, ಜ್ಞಾನ, ಭಕ್ತಿ ಯೋಗದ ಸಮನ್ವಯತೆಯನ್ನಯ ಕಾಣಬಹುದು.

ಗೀತೆ ವಾಸ್ತವಕ್ಕೆ ಹತ್ತಿರವಾಗಿದೆ. ಮನೋದೌರ್ಬಲ್ಯವುಳ್ಳವರನ್ನು ಕೈಹಿಡಿದೆತ್ತುವ ಅಪೂರ್ವ ಶಕ್ತಿ ಗೀತೆ. ಯಾರು ಭಗವಂತನ ಚಿಂತೆ ಮಾಡುವರೋ ಅವರಿಗೆ
ಶಕ್ತಿಯನ್ನು ಕೊಡುತ್ತಾನೆ. ಭಗವದ್ಗೀತೆಯಲ್ಲಿ ಭಗವಂತನು ಭಕ್ತರ ಜತೆಗಿರುವ ಆಪ್ತಮಿತ್ರ. ಮನುಕುಲದ ಹಿತಾರ್ಥವಾಗಿರುವುದೇ ಭಗವದ್ಗೀತೆ. ಇದರ ಮುಖ್ಯ ಸಂದೇಶ ಯೋಗ ಕ್ಷೇಮಂ ಮಹಾಮ್ಯಹಂ ಅಂದರೆ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿದೆ.

ಕೃಷ್ಣ ಈಗ ಅತ್ಯಂತ ಹೆಚ್ಚು ಪ್ರಸ್ತುತ

ಸಂಪೂರ್ಣ ಮನುಕುಲದ ಒಳಿತಿಗಿರುವುದೇ ಭಗವದ್ಗೀತೆ

ಮನುಕುಲದ ಉದ್ಧಾರಕ್ಕಾಗಿ ಭಗವದ್ಗೀತೆ ಬೋಧಿಸಿದ ಕೃಷ್ಣ

ಕೈಹಿಡಿದೆತ್ತುವ ಅಪೂರ್ವ ಗೀತೆ ಭಗವದ್ಗೀತೆ

ಭಗವದ್ಗೀತೆ ಭಗವಂತನ ಭಕ್ತರಿಗೆ ಜತೆಗಿರುವ ಆಪ್ತಮಿತ್ರ

ಭಗವದ್ಗೀತೆ ಮನುಕುಲದ ಹಿತಾರ್ಥವಾಗಿದೆ

ಪುಸ್ತಕ ಹಳೆಯದಾದರೂ ಹಾಡು ಹಳೆಯದಾಗುವುದಿಲ್ಲ, ಭಗವದ್ಗೀತೆಯೂ ಹಾಗೇ..

ನಾವು ಮಣ್ಣನ್ನು ಪೂಜಿಸುವವರು

ಗಣಪತಿ ಹಬ್ಬ ಪರಿಸರಸ್ನೇಹಿಯಾಗಿರಲಿ

ಮಣ್ಣಿನ ಗಣಪತಿಯ ಪೂಜೆ ಪ್ರಸ್ತುತ ಅಗತ್ಯವಿದೆ

ಹಬ್ಬಗಳು ಶುದ್ಧ ರೂಪದಲ್ಲಿರಲಿ.