Friday, 1st December 2023

ಲಂಡನ್‌ ಪ್ರವಾಸದ ಪ್ರಯಾಸ, ಆಹ್ಲಾದ !

ಮಾತುಗಳಲ್ಲೇ ಥೇಮ್ಸ್ ದಂಡೆಯ ಥಂಡಿ ವಾತಾವರಣ ಕಟ್ಟಿಕೊಟ್ಟ ಮೆಹೆಂದಳೆ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಸಂವಾದ ೪೫೦

ಲಂಡನ್ ಪ್ರವಾಸ ಪ್ರಯಾಸವೂ ಹೌದು, ಆಹ್ಲಾದಕರವೂ ಹೌದು. ಅಲ್ಲಿನ ಏರ್‌ಪೋರ್ಟ್‌ನಲ್ಲಿ 15 ಗಂಟೆ ಪ್ರಯಾಣದ ನಂತರವೂ ಎರಡು ಮೂರು ಗಂಟೆ ಕಾಯಬೇಕು. ಆದರೆ, ಅಲ್ಲಿನ ವಾತಾವರಣ ನೋಡುತ್ತಿದ್ದಂತೆ ಅದೆಲ್ಲ ಮರೆತು ಹೋಗುತ್ತದೆ ಎಂದು ಸಂತೋಷ್ ಕುಮಾರ್ ಮೆಹಂದಳೆ ಹೇಳಿದ್ದಾರೆ.

‘ವಿಶ್ವವಾಣಿ ಕ್ಲಬ್‌ಹೌಸ್’ನ ಥೇಮ್ಸ್ ದಡದಿಂದ ‘ಅಲೆಮಾರಿ ಮೆಹೆಂದಳೆ ಮಾತುಗಳು’ ಎಂಬ ಕಾರ್ಯಕ್ರಮದಲ್ಲಿ ಟರ್ಕಿಯಿಂದ ಮಾತನಾಡಿದ ಅವರು, ತಾವು ಲಂಡನ್‌ನಲ್ಲಿ ಇರಬೇ ಕಿತ್ತು. ಅಲ್ಲಿಂದಲೇ ನೇರವಾಗಿ ಥೇಮ್ಸ್ ನದಿಯ ದಡದ ಮಾಹಿತಿ ಯನ್ನು ಹಂಚಿಕೊಳ್ಳಬೇಕಿತ್ತು. ಆದರೆ, ಅನಿವಾರ್ಯ ಕಾರಣ ದಿಂದ ಈಗಾಗಲೇ ಟರ್ಕಿಯಲ್ಲಿ ದ್ದೇನೆ.

ಆದರೂ, ಲಂಡನ್‌ನ ಅನುಭವವನ್ನು ಕಟ್ಟಿಕೊಡುತ್ತೇನೆ ಎನ್ನುತ್ತಲೇ ಮಾತು ಆರಂಭಿಸಿ ದರು. ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡುವ ಬಗ್ಗೆ ಯೋಚಿಸುವ ನನ್ನಂತಹವರಿಗೆ ಲಂಡನ್ ಪ್ರವಾಸ ಸ್ವಲ್ಪ ದುಬಾರಿ ಎನಿಸಬಹುದು. ರೈಲು ಮತ್ತು ಬಸ್‌ನ ಪ್ರಯಾಣ ಪ್ರವಾಸಿಗರಿಗೆ ಅಷ್ಟು ಸುಲಭವಲ್ಲ. ಹಾಗಂತ ಟ್ಯಾಕ್ಸಿ ಮತ್ತು ಬಸ್  ಲಕ ಪ್ರಯಾಣ ಮಾಡಿದರೆ ಪ್ರವಾಸದ ಮಜಾ ಬರುವುದೇ ಇಲ್ಲ. ಸ್ಥಳೀಯ ಸಾರಿಗೆ ಬಳಸಿಕೊಂಡಾಗ ಮಾತ್ರ ಅಲ್ಲಿನ ನೈಜ ಚಿತ್ರಣ ನಮಗೆ ಸಿಗುತ್ತದೆ. ಆದರೆ, ಅದನ್ನು ನಿಭಾಯಿಸುವುದು ಅಷ್ಟು ಸುಲಭ ವಲ್ಲ ಎಂದು ತಿಳಿಸಿದರು.

ಇಲ್ಲಿ ೧೬-೧೭ ರೀತಿಯ ಲೇನ್‌ಗಳು ರೈಲಿನಲ್ಲಿದೆ. ವಿಕ್ಟೋರಿಯಾ ಲೈನ್‌ನಲ್ಲಿ ಓಡಾಟ ಮಾಡಿದರೆ, ಲಂಡನ್‌ನ ಪುರಾತನ ಜನಜೀವನ ಮತ್ತು ಚಿತ್ರಣ ನಮ್ಮ ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ. ಲಂಡನ್ ನಿವಾಸಿಗಳು ನಮ್ಮ ಹಳೆಯ ಸಿನಿಮಾಗಳಲ್ಲಿ ಕಾಣುವಂತೆಯೇ ಕಾಣುತ್ತಾರೆ. ಕ್ರಿಸ್‌ಮಸ್ ಟೈಂ ಆಗಿರುವುದರಿಂದ ಇಲ್ಲಿ ಎಲ್ಲವೂ ಕಲರ್ ಫುಲ್ ಆಗಿರುತ್ತದೆ. ಬಸ್‌ಗಳಲ್ಲಿ ಯಾವುದೇ ಟಿಕೆಟ್ ಕೊಡುವುದಿಲ್ಲ.

ಇಲ್ಲಿನ ಕಾರ್ಡ್ ಮೂಲಕವೇ ಬಸ್ ನಲ್ಲಿ ಹತ್ತಿ, ಇಳಿದು ಮಾಡಬಹುದು. ಇದೇ ಕಾರ್ಡ್ ಅನ್ನು ಟ್ರೈನ್‌ನಲ್ಲಿಯೂ ಬಳಕೆ ಮಾಡಬಹುದು. ಇಂತಹ ಕಾರ್ಡ್ ಬಳಕೆ ಮಾಡದಿದ್ದರೆ ಇಲ್ಲಿ ಪ್ರಯಾಣ ಮಾಡುವುದು ತಡವಾಗಬಹುದು ಎಂದು
ಸಂತೋಷ್ ಕುಮಾರ್ ಮೆಹಂದಳೆ ತಮ್ಮ ಅನುಭವವನ್ನು ಹಂಚಿಕೊಂಡರು.

ಟೈಮ್ ಝೋನ್‌ನಲ್ಲಿಲ್ಲ: ಲಂಡನ್ ಬ್ರಿಡ್ಜ್‌ನ ಸೌಂದರ್ಯವನ್ನು ಸವಿಯುವುದು ಅತ್ಯದ್ಭುತವಾದ ಕ್ಷಣ. ಲಂಡನ್ ಬ್ರಿಡ್ಜ್ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ಥೇಮ್ಸ್ ನದಿಯಲ್ಲಿ ಸಾಗುತ್ತಿದ್ದರೆ ಸಮುದ್ರದಲ್ಲಿ ಹೋಗುವಷ್ಟೇ ಫೀಲ್ ಕೊಡುತ್ತದೆ. ಇಲ್ಲಿನ ಅತ್ಯದ್ಭುತ ಮತ್ತು ಬ್ಯುಸಿ ರೈಲು ನಿಲ್ದಾಣ ಎಂದರೆ ಲಂಡನ್ ಬ್ರಿಡ್ಜ್ ರೈಲು ನಿಲ್ದಾಣ. ಇಲ್ಲಿ ಕ್ಷಣಕ್ಕೊಂದು ರೈಲು ಬಂದರೂ, ಅಷ್ಟೇ ವೇಗವಾಗಿ ಜನರು ತುಂಬಿಕೊಳ್ಳುತ್ತಾರೆ. ಆರು ಎಸ್ಕ್ಯುಲೇಟರ್ ಗಳಲ್ಲಿ ಸದಾ ಜನಜಂಗುಳಿ ತುಂಬಿರುತ್ತದೆ. ಟೈಮ್ ಝೋನ್
ಸೆಟ್ ಮಾಡುವಾಗ ರಂಗೂನ್, ಬ್ಯಾಂಕಾಕ್ ಇದೆ. ಆದರೆ, ಭಾರತದ ಹೆಸರಿಲ್ಲ. ಬಾಂಬೆ ಎಂದು ಮಾತ್ರ ಸೆಟ್ ಆಗಿದೆ. ಅವರು ಇದನ್ನು ಸೆಟ್ ಮಾಡುವಾಗ ಭಾರತದ ಹೆಸರಿರಲಿಲ್ಲ ಎನಿಸುತ್ತದೆ ಎಂದು ವಿವರಿಸಿದರು.

ಲುಟೂನ್ ಏರ್‌ಪೋರ್ಟ್ ಕತೆ
ಲುಟೂನ್ ಏರ್‌ಪೋರ್ಟ್‌ನಲ್ಲಿ ತಮಗಾದ ಅನುಭವವನ್ನು ದಾಖಲಿಸಿದ ಮೆಹಂದಳೆ ಅವರು, ಲುಟೂನ್ ಏರ್‌ಪೋಟ್
ಗೆ ಆಗಮಿಸಲು ಟ್ರೈನ್ ಮೂಲಕ ಬಂದೆ. ಆದರೆ, ಕೊನೆಯ ಕ್ಷಣದಲ್ಲಿ ನಾನು ಏರ್‌ಪೋರ್ಟ್ ತಲುಪುವ ಟ್ರೈನ್ ಕ್ಯಾನ್ಸಲ್
ಆಗಿದೆ ಎಂದು ಹೇಳಿದರು. ಬೇರೆ ಸಾರಿಗೆ ಬಳಸಲು ಸಾಧ್ಯವಿರಲಿಲ್ಲ. ಆದರೆ, ಅಂಡರ್‌ಗ್ರೌಂಡ್‌ನಲ್ಲಿ ಮತ್ತೊಂದು ಟ್ರೈನ್ ಏರ್‌ಪೋರ್ಟ್‌ಗೆ ಹೋಗುತ್ತದೆ ಎಂದು ಮಾಹಿತಿ ಬಂತು. ಅಲ್ಲಿಗೆ ತೆರಳಿ ಏರ್‌ಪೋರ್ಟ್‌ಗೆ ಹೋಗುತ್ತಿದ್ದಾಗ ಬಸ್ ರೆಡಿಯಿತ್ತು. ಅಲ್ಲಿಂದ ತೆರಳಿ ಅವಸರದಲ್ಲಿ ತೆರಳಿದೆ. ವಿಮಾನಕ್ಕೆ ಹತ್ತಿ ಕುಳಿತಾಗ ಗೊತ್ತಾಯಿತು, ವಿಮಾನ ಮತ್ತೆ ಸುಮಾರು ನಾಲ್ಕು ಗಂಟೆಗಳ ಕಾಲ ವಿಳಂಬವಾಗಿದೆ ಎಂಬ ಮಾಹಿತಿ ಬಂತು ಎಂದು ನೆನಪಿಸಿಕೊಂಡರು.

ಟರ್ಕಿಯಲ್ಲಿ ನೋಡಬೇಕಾದದ್ದೇನು?
ಟರ್ಕಿಯಲ್ಲಿ ಅಂಟಾಲಿಯಾ ಕಾರ್ಡ್ ಮೂಲಕವೇ ವ್ಯವಹಾರ ನಡೆಸಲೇಬೇಕು. ಎಲ್ಲವೂ ಉಲ್ಟಾ, ಬಲಗಡೆ ಎಂದರೆ ಎಡಗಡೆ
ಎಂದು ತೋರಿಸುತ್ತದೆ. ಎಡಗಡೆ ಡ್ರೈವಿಂಗ್ ಇರುವುದರಿಂದ ಎಲ್ಲವೂ ಉಲ್ಟಾ ಎನಿಸುತ್ತದೆ. ಪಮುಕುಲೆ ಪ್ರದೇಶದಲ್ಲಿರುವ
ಸಣ್ಣ ಸಣ್ಣ ಕೊಳಗಳು ಅದ್ಭುತ, ಇಲ್ಲಿನ ರೋಮನ್ ಥೇಯಟರಿನ ವಿಸ್ತಾರವನ್ನು ಕಂಡು ನಾನು ದಂಗಾದೆ ಎಂದು ಮೆಹಂದಳೆ ವಿವರಿಸಿದರು. ಟರ್ಕಿಯಲ್ಲಿ ನೋಡಬಹುದಾದ ಕೆಲವು ಜಾಗಗಳ ಬಗ್ಗೆ ವಿಶ್ವವಾಣಿ ಸಂಪಾದಕಾರ ವಿಶ್ವೇಶ್ವರ ಭಟ್ ಅವರು ಕೂಡ ಮೆಹಂದಳೆ ಅವರ ಜತೆಗೆ ಹಂಚಿಕೊಂಡರು. ಮಸೀದಿಯ ಮಿನಾರ್‌ಗಳನ್ನು ನೋಡುವುದೇ ಚೆಂದ ಎನ್ನುವ ಮೂಲಕ ಟರ್ಕಿಯ ಏಷಿಯನ್ ಮತ್ತು ಯುರೋಪಿನ್ ಸಂಸ್ಕೃತಿಯ ಸಮಾಗಮವನ್ನು ವಿವರಿಸಿದರು.

Read E-Paper <a href=”https://epaper.vishwavani.news/” target=”_blank”>click here</a>

error: Content is protected !!