Saturday, 23rd November 2024

ಸತ್ಯ, ಪ್ರಾಮಾಣಿಕತೆ ದೇವರ ಪಕ್ಷ: ಉಮೇಶ್ ಪುತ್ರನ್

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 67

ಶ್ರೀಮಂತರು ಎಂದರೆ ಹೆಚ್ಚು ಕೊಟ್ಟವನು

ವಿದೇಶಿ ದಾಳಿಯಿಂದ ಬೇರೆಯವರ ಪಾಲಾದ ‌ಆಯುರ್ವದ

ಬೆಂಗಳೂರು: ಕಾಯಿಲೆ ಬಂದರೆ ದೇವರಿಗೆ ಪೂಜೆ ಮಾಡುವ ವಿಧಾನ ಇಂದಿಗೂ ಮುಂದುವರಿದಿದೆ. ದೇವರು ಸದಾ ನಮ್ಮ ಜತೆ ಇರಬೇಕು ಎಂಬ ಅಪೇಕ್ಷೆ ಯಾಗಿರುತ್ತದೆ. ಸತ್ಯ, ಪ್ರಾಮಾಣಿಕತೆಯೇ ದೇವರ ಪಕ್ಷ ಎಂದು ವೈದ್ಯ ಡಾ.ಉಮೇಶ ಪುತ್ರನ್ ತಿಳಿಸಿದರು.

ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಅವಧಿ ನಿಗದಿಯಾಗಿರುತ್ತದೆ. ಅವು ಜೀವಿತಾವಧಿ, ಜೀವನೋತ್ತರ ಅವಧಿ. ಎಷ್ಟು ವರ್ಷ ಬದುಕುವುದು ಎಂಬುದು ಜೀವಿತಾವಧಿ. ಜೀವಿತಾವಽಯಲ್ಲಿ ಮಾಡಿದ ಕೆಲಸ ಜನರ ಮನಸ್ಸಿನಲ್ಲಿ ಉಳಿಯು ವುದು. ಜೀವಿತೋತ್ತರ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು ಎಂದರು.

ಒಂದು ಕಾಲದಲ್ಲಿ ಶ್ರೀಮಂತರು ಎಂದರೆ ಹೆಚ್ಚು ಕೊಟ್ಟವನು ಎನ್ನುತ್ತಿದ್ದರು. ಇವತ್ತು ಹೆಚ್ಚೆಚ್ಚು ಗಳಿಸಿದವನೇ ಶ್ರೀಮಂತ. ಕಾಯಿಲೆ ಎಂಬುದು ಹುಟ್ಟಿದ ದಿನದಿಂದಲೇ ಹಿಂಬಾಲಿಸುವ ಮರಣದ ದುಃಸ್ವಪ್ನ. ಕಾಯಿಲೆ ಬಗ್ಗೆ ಸರಿಯಾದ ಔಷಧ ಇರಲಿಲ್ಲ ಎಂದರು. 18ನೇ ಶತಮಾನದವರೆಗೆ ವೈದ್ಯ ವಿಜ್ಞಾನ ಆಳಿದ ದೇಶ ಭಾರತ. ಕಾಲಾನಂತರ ನಮ್ಮ ಮೇಲೆ ವಿದೇಶಿ ದಾಳಿಯಿಂದ ಆಯುರ್ವೇದ ಬೇರೆಯವರ ಪಾಲಾಯಿತು. ಪಾಶ್ಚಾತ್ಯ ವಿಜ್ಞಾನಿಗಳು ತಾರ್ಕಿಕವಾಗಿ ಅಧ್ಯಯನ ಮಾಡಲು ಶುರು ಮಾಡಿದರು. 1929ರ ಸುಮಾರಿಗೆ, ಪ್ರಸಿದ್ಧ ಬ್ರಿಟಿಷ್ ಬ್ಯಾಕ್ಟೀರಿಯಾ ಶಾಸ್ತ್ರಜ್ಞ ಅಲೆಕ್ಸಾಂಡರ್ ಫ್ಲೆಮಿಂಗ್ ಅಚ್ಚುಗಳ ಮೇಲೆ ಸರಣಿ ಪ್ರಯೋಗಗಳನ್ನು ನಡೆಸಿದರು.

ಒಂದು ನಿರ್ದಿಷ್ಟ ಪ್ರಕಾರದ ಅಚ್ಚು ನಿರ್ದಿಷ್ಟವಾದ ಬ್ಯಾಕ್ಟೀರಿಯಾ ವಿರೋಧಿ ವಸ್ತುವನ್ನು ಉತ್ಪಾದಿಸುತ್ತದೆ ಎಂದು ಅವರು ಕಂಡುಕೊಂಡರು, ನಂತರ ಇದನ್ನು ಪೆನಿಸಿಲಿನ್ ಎಂದುಕರೆಯುತ್ತಾರೆ ಎಂದರು. ನಾಲ್ಕು ಅಲೆಗಳಲ್ಲಿ: ಪ್ಲೇಗ್ ಕಾಯಿಲೆ ಮನುಷ್ಯನ ಇತಿಹಾಸದಲ್ಲಿ ದೊಡ್ಡ ಕಂಟಕ. ಇದು ನಾಲ್ಕು ಅಲೆಗಳಲ್ಲಿ ಬಂದಿದೆ. ಪ್ರಥಮ ಅಲೆ 5 ನೇ ಶತಮಾನದಲ್ಲಿ, 1885 ಎರಡನೇ ಅಲೆ, ಮೂರನೇ ಅಲೆ 1892 ಕಂಡುಬಂತು. ಬಾಂಬೆ ಮತ್ತು ಪೂನಾದಲ್ಲಿ ಪ್ಲೇಗ್ ಬಂದಿತ್ತು. ಮೂರನೇ ಅಲೆ. ಆಗ ಜನರನ್ನು ದೂರ ಇಡುತ್ತಿದ್ದರು. ಇಂಗ್ಲಿಷ್ ಅಧಿಕಾರಿಗಳು ಹಿಂಸೆ ನೀಡುತ್ತಿದ್ದರು ಎಂದು ತಿಳಿಸಿದರು.

ನಂತರ ಸ್ಪಾನಿಷ್ ಪ್ಲೂ ಜಗತ್ತಿನಾದ್ಯಂತ ವ್ಯಾಪಿಸಿದ ಸಾಂಕ್ರಾಮಿಕ ಕಾಯಿಲೆ. 1918ರಲ್ಲಿ ಕಾಣಿಸಿಕೊಂಡಿತ್ತು. ಎರಡನೇ ಅಲೆ ಅದೇ ವರ್ಷ ಕಾಡಿದ್ದು, ಭಾರತಕ್ಕೂ ವಕ್ಕರಿಸಿತ್ತು. ಭಾರತದಲ್ಲಿ 1.7 ಕೋಟಿ ಜನರು ಮೃತಪಟ್ಟರು. ಬಾಂಬೆಯಿಂದ ಬೆಂಗಳೂರಿಗೆ ಈ ಕಾಯಿಲೆ ಬಂತು. 40 ಸಾವಿರ ಮಂದಿ ಮೃತ ಪಟ್ಟರು. ಕುಷ್ಠ ರೋಗ ಮೈಕೋ ಬ್ಯಾಕ್ಟೀರಿಯಾ ಲೆಪ್ರೇಮ್‌ನಿಂದ ಬರುತ್ತದೆ. ಮನೆಯವರು ಇಂತಹ ರೋಗಿಗಳನ್ನು ತಿರಸ್ಕರಿಸುತ್ತಾರೆ. ಇದಕ್ಕೆ ಹೋಲುವುದು ಮತ್ತೊಂದು ಕಾಯಿಲೆ ತೊನ್ನು. ತೊನ್ನು ಗುಣಪಡಿಸಬಹುದು ಎಂದು ವಿವರಿಸಿದರು.

ಚಿಕನ್ ಫಾಕ್ಸ್ ಮಾಹಿತಿ: ಸರ್ಪಸುತ್ತು ಹೊಟ್ಟೆ ಕೈಕಾಲುಗಳ ಮೇಲೆ ಗುಳ್ಳೆಗಳು ಕಂಡು ಬರುವ ಕಾಯಿಲೆ ಇದಾಗಿದೆ. ಹೊಟ್ಟೆಯ ಸುತ್ತು ಬಂದರೆ ಬದುಕುಳಿಯಲು ಸಾಧ್ಯವಿಲ್ಲ ಅಂತಾರೆ. ಇದಕ್ಕೆ ಓಲುವಕಾಯಿಲೆ ಚಿಕನ್ ಫಾಕ್ಸ್ ಕುರಿತು ಮಾಹಿತಿ ನೀಡಿದರು. ಭಾರತದಲ್ಲಿ ಸಾವಿರಾರು ಪ್ರಭೇದದ ಹಾವುಗಳಿವೆ. ಹಾವಿಗೆ ಎರಡು ಚೂಪಾದ ಹಲ್ಲುಗಳಿರುತ್ತವೆ. ಹಲ್ಲಿನ ಮಧ್ಯೆ ರಂಧ್ರ, ಅದರ ಹಿಂದೆ ವಿಷದ ಚೀಲ ಇರುತ್ತದೆ. ಹಲ್ಲಿನಿಂದಕಚ್ಚಿದಾಗ ವಿಷದ ಚೀಲ ತೆರೆಯುತ್ತದೆ. ಆಗ ವಿಷ ದೇಹಕ್ಕೆ ಹರಿಯುತ್ತದೆ.

ಒಂದು ತರದ ಹಾವಿನ ವಿಷದಲ್ಲಿ ಮಾಂಸಖಂಡ ಕ್ಷೀಣಮಾಡುವ ಶಕ್ತಿ ಇರುತ್ತದೆ. ಇನ್ನೊಂದು ರೀತಿಯ ಹಾವು ರಕ್ತ ತಿಳಿ ಮಾಡುತ್ತದೆ. ಕಾಮಾಲೆ ರೋಗ ಎಂದರೆ ಜಾಂಡೀಸ್. ಹೆಪಟೈಟಿಸ್ ವೈರಸ್ ಲಿವರ್ ಮೇಲೆ ದಾಳಿ ಮಾಡುತ್ತದೆ. ಇದಲ್ಲದೆ ಕರುಳಿನಲ್ಲಿ ದುಗ್ಧರಸ ಬ್ಲಾಕ್ ಆದಾಗ ಜಾಂಡೀಸ್ ಬರುತ್ತದೆ. ಎಪಟೈಟಸ್ ಎ ನೀರಿನಿಂದ ಬರುತ್ತದೆ. ಎಪಟೈಟಸ್ ಬಿ, ಸಿ, ಗಂಭೀರ ಕಾಯಿಲೆ. ಬಿಳಿ ಜಾಂಡೀಸ್ ಎಂಬುದು ಎಲ್ಲೂ ಇಲ್ಲ ಎಂದರು.

ಕಾಯಿಲೆಗಳ ಬಗ್ಗೆ ಅಪನಂಬಿಕೆ ಬೇಡ
ಮಾನಸಿಕ ಕಾಯಿಲೆ ಬಗ್ಗೆ ತಪ್ಪು ಕಲ್ಪನೆ ಇದೆ. ಮೆದುಳಲ್ಲಿ ನರ ಜೀವಕೋಶಗಳಿವೆ. ಒಂದು ನರಜೀವಕೋಶ ಸ್ತರಗಳಿಂದ ಕೂಡಿರುತ್ತದೆ. ನರಕೋಶಗಳ ಮಧ್ಯೆ ಸಣ್ಣ ಅಂತರ ಇರುತ್ತದೆ. ನ್ಯುರೋ ಟ್ರಾಮೀಟರ್ ಇಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಆಗುವ ವ್ಯತ್ಯಾಸದಿಂದ ಮಾನಸಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕರೋನಾ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯಗಳಿವೆ. ಜನರು ಸರಕಾರದ ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ. ಲಾಕ್‌ಡೌನ್ ಉಲ್ಲಂಘನೆ, ಚಿಕಿತ್ಸೆ ಪಡೆಯುವ,
ಲಸಿಕೆ ಪಡೆಯುವ ವಿಚಾರದಲ್ಲಿ ಅಪನಂಬಿಕೆ ಇದ್ದ ಕಾರಣ ಕರೋನಾದಿಂದ ಮುಕ್ತಿ ಪಡೆಯಲಾಗುತ್ತಿಲ್ಲ ವೈದ್ಯ ಡಾ. ಉಮೇಶ್ ಪುತ್ರನ್ ತಿಳಿಸಿದ್ದಾರೆ.

ಹಲವು ಕಾಯಿಲೆಗಳಿಗೆ ವೈದ್ಯರ ಸಲಹೆಗಳು

? ಹೃದಯಕಾಯಿಲೆ ವ್ಯಕ್ತಿಗಳಿಗೆ ಇಸಿಜಿ ಪರೀಕ್ಷೆ ಮಾಡಿದಾಗ ರೋಗ ಪತ್ತೆಯಾಗದೆ ಇರಬಹುದು. ಅವರನ್ನು ನಿಗಾದಲ್ಲಿಡಬೇಕು.
? ಮೂತ್ರ ಪರೀಕ್ಷೆ ಮಾಡಿಸಿಕೊಂಡಾಗ ಕಿಡ್ನಿ ಸಮಸ್ಯೆ ತಿಳಿದು ಬರುತ್ತದೆ. ರಕ್ತದೊತ್ತಡ, ಮಧುಮೇಹ ನಿಯಂತ್ರಣಕ್ಕೆ ತರದಿದ್ದರೆ ಕಿಡ್ನಿ ಕಾಯಿಲೆ ಬರುತ್ತದೆ.
? ಸೋಲಾರ್ ನೀರಿನಿಂದ ಸ್ನಾನ, ಬೇರೆ ಬೇರೆ ಕಾರಣಗಳಿಂದ ತಲೆ ಕೂದಲು ಉದುರುತ್ತವೆ.
? ಮೊಡವೆ ಬಂದರೆ ಪ್ರಾರಂಭ ಹಂತದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆಹಾರ ಪದ್ಧತಿಗೂ, ಮೊಡವೆಗಳು ಬರುವುದಕ್ಕೆ ಸಂಬಂಧವಿಲ್ಲ.
? ನಾಲಿಗೆಗೆ ರುಚಿ ಕೊಡುವ ಆಹಾರ ದೇಹಕ್ಕೆ ಒಳ್ಳೆಯದಲ್ಲ.
? ರಕ್ತದಾನಕ್ಕೆ ಅಪನಂಬಿಕೆಗಳಿವೆ. ರಕ್ತ ತೆಗೆದುಕೊಂಡ ಮೇಲೆ ಪ್ಲಾಸ್ಮಾ 3 ದಿನದಲ್ಲಿ ಮತ್ತೆ ಉತ್ಪತ್ತಿಯಾಗುತ್ತದೆ. 1ತಿಂಗಳಲ್ಲಿ ಬಿಳಿರಕ್ತಕಣ ಉತ್ಪತ್ತಿಯಾಗುತ್ತದೆ.
? ಶುಚಿತ್ವಕಾಪಾಡಿಕೊಳ್ಳಿ, ಮಾದಕ ವ್ಯಸನದಿಂದ ದೂರವಿರಿ.
? ವೈದರು ಮತ್ತು ರೋಗಿಯ ನಡುವೆ ಅವಿನಾಭಾವ ಸಂಬಂಧವಿರಲಿ.

***

ವೈದ್ಯ ಡಾ. ಉಮೇಶ್ ಪುತ್ರನ್ ಅವರು ನಮ್ಮ ’ವಿಶ್ವವಾಣಿ’ ಪತ್ರಿಕೆಯಲ್ಲಿ ’ಸ್ವಾತಂತ್ರ್ಯದ ಆ ಕ್ಷಣಗಳು’ ಲೇಖನದ ಸರಣಿ ಆರಂಭಿಸಿದ್ದಾರೆ. ವಿಚಾರವಂತರು, ವಿಷಯ ತಜ್ಞರು ಆಗಿದ್ದಾರೆ. ಚಿನ್ಮಯಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿzರೆ. ಕಲೆ, ಸಂಸ್ಕೃತಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ವೈದ್ಯಕೀಯ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

– ವಿಶ್ವೇಶ್ವರ ಭಟ್‌ವಿಶ್ವವಾಣಿ ಪ್ರಧಾನ ಸಂಪಾದಕರು

ಡಾ.ಉಮೇಶ್ ಪುತ್ರನ್ ಎರಡು ದಶಕಗಳಿಂದ ನನಗೆ ಚಿರಪರಿಚಿತರು. ಯಾವುದೇ ವಿಷಯದ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಅವರ ಲೇಖನ ಗಳಲ್ಲಿ ಭಾಷೆಯ ಮೇಲೆ ಹಿಡಿತವಿದೆ. 4 ಸಾವಿರ ಭಾಷಣಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಉಚಿತವಾಗಿ ಬಡರೋಗಿಗಳಿಗೆ ಉಚಿತ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಾರೆ.
– ಷಡಕ್ಷರಿ ಅಂಕಣಕಾರರು