Saturday, 14th December 2024

ವಿಶ್ವವಾಣಿ ಕ್ಲಬ್‌ ಹೌಸ್‌ಗೆ 150ರ ಸಂಭ್ರಮ

Club House

ದಾಖಲೆಯ ಅರ್ಧ ಕೋಟಿ ಹಿಂಬಾಲಕರ ಹೆಗ್ಗಳಿಕೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 150

ಬದ್ಧತೆಯ ಬಗ್ಗೆ ಶ್ರೋತೃಗಳ ಮಾತಿನ ಲಹರಿ 

ಮತ್ತಷ್ಟು ವಿಭಿನ್ನ ಕಾರ್ಯಕ್ರಮದ ಭರವಸೆ

ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್‌ಗೆ ಇದೀಗ 150ರ ಸಂಭ್ರಮ. ಕನ್ನಡದಲ್ಲಿ ಸತತ 150 ಕಾರ್ಯಕ್ರಮಗಳ ದಾಖಲೆ
ಅಚ್ಚಾಗಿದೆ. ಈ ಅಂಗವಾಗಿ ಬುಧವಾರದ ‘ಅನುಭವ ಮಂಟಪ’ದ ವೇದಿಕೆಯ ತುಂಬಾ ಬರೀ ಕೇಳುಗರದ್ದೆ ಸದ್ದು. ಹೊಗಳಿಕೆ, ವಿಮರ್ಶೆ, ಸಂವಾದ, ಸಲಹೆಗಳಲ್ಲೇ ಸಂಜೆ ಮುಳುಗಿ ಹೋಗಿತ್ತು. ವಿಶ್ವವಾಣಿಯ ವಿಭಿನ್ನತೆ, ಪತ್ರಿಕೆ ಕ್ಲಬ್‌ಹೌಸ್ ಕಾರ್ಯಕ್ರಮದ ವೈಶಿಷ್ಯ, ಸಾಹಸವನ್ನು ಸಹಜವಾಗಿ ಎಲ್ಲರೂ ಕೊಂಡಾಡಿದರು.

ಓದುಗರ ಹೊಗಳಿಕೆಯಲ್ಲಿ ಮುಳುಗಿದ ವಿಶ್ವೇಶ್ವರ ಭಟ್ ಅವರು ಮಾತನಾಡಿ, ಕಾರ್ಯಕ್ರಮವನ್ನು ಹೊಸ ಮೈಲುಗಲ್ಲಿನವರೆಗೆ  ತಂದು ತಲುಪಿಸಿದ ಎಲ್ಲ ಶೋತ್ರುಗಳಿಗೆ ಮನದುಂಬಿ ಧನ್ಯವಾದ ಹೇಳಿದರು. ‘ಅನೇಕರು ನೀಡಿದ ಸಲಹೆಗಳನ್ನು ನನ್ನ ಮನಸಿ ನಲ್ಲಿ ಟಿಪ್ಪಣಿ ಮಾಡಿದ್ದೇನೆ. ಮುಂದೆ ಇವೆಲ್ಲವೂ ಕಾರ್ಯರೂಪಕ್ಕೆ ಬರಲಿವೆ. 2 ನೇ ಅಲೆಯ ಮಧ್ಯದ ಭಾಗದಲ್ಲಿ ಆರಂಭವಾದ ಕಾರ್ಯಕ್ರಮ ನಾಲ್ಕು ದಿನದ ಹೊರತಾಗಿ ನಿರಂತರವಾಗಿ ನಡೆದಿದೆ. 50 ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳು ಖಾಲಿಯಾಗಿ ಮುಂದೇನು ಎಂಬ ಪ್ರಸಂಗ ಬರುತ್ತದೆ ಎಂದುಕೊಂಡಿದ್ದೆ. ಈಗ ಪ್ರತಿದಿನ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ನಡೆಯುತ್ತಿದೆ. ನಮ್ಮಲ್ಲಿ ಎಷ್ಟೊಂದು ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಿದ್ದಾರೆ ಎಂಬುದು ಈ ಮುಳಕ ಅರಿವಿಗೆ ಬರುತ್ತಿದೆ’ ಎಂದರು.

‘ಕಾರ್ಯಕ್ರಮ ಆರಂಭ ಮಾಡಿದ ಸಂದರ್ಭದಲ್ಲಿ ಎಲ್ಲರಿಗೂ ಕುತೂಹಲವಿತ್ತು. ಬಹಳ ದಿನಗಳವರೆಗೆ ಇದು ಮುಂದು ವರಿಯುವುದಿಲ್ಲ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ ಉತ್ತಮ ವಿಷಯ ಕೊಟ್ಟರೆ ಜನ ಬಂದೇ ಬರುತ್ತಾರೆ ಎಂಬುದು ಗೊತ್ತಿತ್ತು. ಸಂಖ್ಯೆಯಲ್ಲಿ ನನಗೆ ನಂಬಿಕೆಯಿಲ್ಲ. ಗುಣಮಟ್ಟದಲ್ಲಿ ನಂಬಿಕೆಯಿದೆ. ಒಳ್ಳೆಯ ಮಾಹಿತಿನೀಡಿದರೆ, ಖಂಡಿತ ಜನರು
ಕೇಳುತ್ತಾರೆ. ಸಮಾಜದ ಪ್ರಮುಖರು ಕ್ಲಬ್‌ಹೌಸ್ ಅನ್ನು ನಿಲ್ಲಿಸಬಾರದು ಎಂದು ವಿನಂತಿಸಿಕೊಂಡಿದ್ದಾರೆ. ಉಪನ್ಯಾಸಗಳು ಹೊರಗೆ ಕಡಿಮೆಯಾಗಿವೆ. ವಿಶ್ವವಾಣಿ ಕ್ಲಬ್ ಅದಕ್ಕೆ ಪರ್ಯಾಯ ವೇದಿಕೆಯಾಗಿದೆ. ಹೀಗಾಗಿ, ಇದನ್ನು ನಿಲ್ಲಿಸುವ ಪ್ರಯತ್ನ
ಬೇಡ ಎಂಬ ಸಲಹೆ ನೀಡಿದ್ದಾರೆ’ ಎಂದರು.

ಹೊಸ ದಾಖಲೆಯೊಂದಿಗೆ ಸತತ 150 ಸಂವಾದಗಳನ್ನು ನೀಡಿದ ‘ವಿಶ್ವವಾಣಿ ಕ್ಲಬ್‌ಹೌಸ್’ರ ಸಂಭ್ರಮಾಚರಣೆಗೆ ನಿಜಕ್ಕೂ ಬಣ್ಣ ತುಂಬಿದವರು ಎಂದಿನಂತೆ ಅಭಿಮಾನಿಗಳು. ಜಾಗತಿಕ ಕ್ಲಬ್‌ಹೌಸ್ ಇತಿಹಾಸದಲ್ಲಿಯೇ ಹತ್ತು ಹಲವು ದಾಖಲೆಗಳನ್ನು ಬರೆದ, ಹೊಸ ಮೈಲುಗಲ್ಲಾಗಿ ನಿಂತ ವಿಶ್ವವಾಣಿ ಕ್ಲಬ್‌ ಹೌಸ್ ಬಗ್ಗೆ ಕೇಳುಗರ ಪ್ರೀತಿಯ ಮಾತುಗಳು ಅಪರಿಮಿತ. 150 ದಿನಗಳಲ್ಲಿ ಆಗಮಿಸಿದ ವಿಭಿನ್ನ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ, ಆಯ್ಕೆ ಮಾಡಿಕೊಂಡ ವಿಷಯಗಳ, ಅಭಿರುಚಿಯ ಬಗ್ಗೆ, ವಿಶ್ವೇಶ್ವರ ಭಟ್ಟರ ಕಾರ್ಯಕ್ರಮ ರೂಪಿಸುವ ಬದ್ಧತೆಯ ಬಗ್ಗೆ, ಮೋಹನ್ ಕುಮಾರ್ ಅವರ ಸರಾಗ ಮಾತುಗಾರಿಕೆ ಬಗ್ಗೆ, ರೂಪಾ ಗುರುರಾಜ್ ಅವರ ಸಿರಿಕಂಠದ ಬಗ್ಗೆ ಕೇಳುಗರು ಹೊಗಳಿಕೆಯ ಮಳೆಯನ್ನೇ ಕರೆದರು.

15.45.30 ಫಾರ್ಮುಲಾ ಬಳಸಿ: ಕ್ಲಬ್ ಹೌಸ್‌ನ ಯಶಸ್ಸಿನ ಬಗ್ಗೆ ಮಾತನಾಡಿದ ವಿಜಯ್ ಕುಲಕರ್ಣಿ ಅವರು, ಕ್ಲಬ್‌ಹೌಸ್‌ನ ಬಹಳ ದೊಡ್ಡ ಆಕರ್ಷಣೆ ವಿಶ್ವೇಶ್ವರ ಭಟ್ ಅವರು. ಭುಜಂಗಶೆಟ್ಟಿ ಅವರು ದಿನ ಈ ಕಾರ್ಯಕ್ರಮಕ್ಕೆ ಬರುತ್ತಾರೆ ಎನ್ನುವುದೇ ಹೆಮ್ಮೆ. ಪ್ರತಿದಿನ ಸೀರಿಯಲ್ ನೋಡ್ತಲು ಜನರು ಕಿತ್ತಾಡ್ತಾರೆ. ಆದರೆ, ಕ್ಲಬ್‌ಹೌಸ್‌ನಲ್ಲಿ ಒಮ್ಮತ ದಿಂದ ಕೇಳುತ್ತಾರೆ. ಇದರಿಂದ ನನಗೆ ಜಗದಲ್ಲಿರುವ ವಿವಿಧ ವಿಷಯಗಳ ಬಗ್ಗೆ ಗೊತ್ತಾಗಿದೆ. ಕಾರ್ಯಕ್ರಮಕ್ಕೆ ನಾನು 15.45.30 ಫಾರ್ಮುಲಾ ಹೇಳುತ್ತೇನೆ. 15 ನಿಮಿಷ ಪರಿಚಯ, 45 ನಿಮಿಷ ಭಾಷಣ, 30 ನಿಮಿಷ ಪ್ರಶ್ನೋತ್ತರ ಇರಬೇಕು. ಹೀಗೆ ಕಾರ್ಯಕ್ರಮ ರೂಪಿಸಿದರೆ ಮತ್ತಷ್ಟು ಚೆಂದವಾಗಿರಲಿದೆ ಎಂದು ಸಲಹೆ ನೀಡಿದರು.

ರೆಕಾರ್ಡೆಡ್ ಕಾರ್ಯಕ್ರಮದ ಅವಕಾಶ: ಅನ್ನಪೂರ್ಣೇಶ್ವರಿ ನಗರದ ಮೋಹನ್ ಎಂಬುವವರು ಮಾತನಾಡಿ, ಈ ಕಾರ್ಯ ಕ್ರಮವನ್ನು ಮತ್ತೇ ಕೇಳಿಸಿಕೊಳ್ಳುವ ವ್ಯವಸ್ಥೆಯಾಗಬೇಕು. ಎಷ್ಟು ಜನರ ಕೈ ಎತ್ತುತ್ತಾರೆ ಅವರಿಗೆಲ್ಲ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಏನಾದರೂ ವ್ಯವಸ್ಥೆ ಮಾಡಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ರೂಪಾ ಗುರುರಾಜ್ ಅವರು, ಕಾರ್ಯಕ್ರಮದ ರೆಕಾರ್ಡೆಡ್ ಸೌಲಭ್ಯವಿದೆ. ಮಾಡಿರೇಟರ್ ಅವರ ಪ್ರೊಫೈಲ್‌ನಲ್ಲಿ ಹೋಗಿ ನೋಡಿದರೆ, ಅಲ್ಲಿ ರೆಕಾರ್ಡ್ ಆಗಿರುವ ಎಲ್ಲ ಕಾರ್ಯಕ್ರಮಗಳ ಪಟ್ಟಿ ಇರುತ್ತದೆ. ಅದನ್ನು ನೀವು ಯಾವಾಗ ಬೇಕಾದರೂ ಕೇಳಬಹುದು ಎಂದು ಮಾಹಿತಿ ನೀಡಿದರು. ಇದರಿಂದ ಕೇಳುಗರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೆಲ ಕೇಳುಗರು ಆತಂಕ ವ್ಯಕ್ತಪಡಿಸಿದರು.

ಆಧುನಿಕ ಅನುಭವ ಮಂಟಪ: ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮ ಆಧುನಿಕ ಅನುಭವ ಮಂಟಪವಿದ್ದಂತೆ, ಇಲ್ಲಿ
ವಿಶ್ವೇಶ್ವರ ಭಟ್ಟರು ಅಲ್ಲಮಪ್ರಭುವಿನಂತೆ ನಿಂತಿದ್ದಾರೆ. ಮೋಹನ್ ಕುಮಾರ್ ಅವರು ಕಲ್ಯಾಣದ ಬಸವಣ್ಣನಂತಿದ್ದಾರೆ. ರೂಪಾ
ಮೋಹನ್ ಅವರು ಅಕ್ಕಮಹಾದೇವಿಯಂತೆ ಕಾಣಿಸುತ್ತಾರೆ. ಅವರೆಲ್ಲರೂ ಇರುವುದರಿಂದ ಇದೊಂದು ಅಭೂತಪೂರ್ವ ಕಾರ್ಯ ಕ್ರಮವಾಗಿದ್ದು, ಆಧುನಿಕ ಅನುಭವ ಮಂಟಪದಂತೆ ಅನೇಕ ವಿಷಯಗಳನ್ನು ನಮಗೆ ಉಣಬಡಿಸುತ್ತಿದೆ. ನಾನು ವಿಶ್ವೇಶ್ವರ ಭಟ್ ಅವರ ಅಭಿಮಾನಿ. ಕ್ಲಬ್‌ಹೌಸ್‌ನಿಂದ ಪ್ರಭಾವಿತರಾಗಿ ಆಶಾ ಫೌಂಡೇಷನ್‌ನಲ್ಲಿ ಪಾಠ ಮಾಡಲು ತೀರ್ಮಾನಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಭಾರತಿ ನಾಯ್ಕ್ ಅವರು ತಿಳಿಸಿದರು.

ಮುಖ್ಯಾಂಶಗಳು
ಮೋಹನ್-ಭಟ್ಟರ ಜೋಡಿ, ಅಂಬರೀಷ್-ವಿಷ್ಣುವರ್ಧನ್ ರ ದಿಗ್ಗಜ ಜೋಡಿ ಎಂದ ಅಜಯ್ ಕುಮಾರ್ ೩೬೦ ಡಿಗ್ರಿಯಲ್ಲಿ ಎಲ್ಲ ಕವರ್ ಮಾಡಿದ್ದೀರಿ ಎಂದ ಗಾಯತ್ರಿ ಸ್ವಾತಂತ್ರ್ಯ ಹೋರಾಟ, ರಂಗಕರ್ಮಿಗಳ ಅನುಭವ ಮೂಡಿಬರಲಿ ಎಂದ ಹುವಾಶ್ರೀ ಪ್ರಕಾಶ್, ‘ವಿಶ್ವ ರೂಪ ಮೋಹನ್’ ಅವರ ಶ್ರಮದಿಂದ ಕ್ಲಬ್‌ಹೌಸ್ ಯಶಸ್ವಿಯಾಗಿದೆ ಎಂದ ರವಿಕುಮಾರ್ ನಾನು ಮೋಹನ್ ಸರ್ ಅಭಿಮಾನಿ. ಒಂದೂ ಕಾರ್ಯಕ್ರಮ ಮಿಸ್ ಮಾಡಿಲ್ಲ ಎಂದ ಸ್ವರೂಪ್ ಭಾರದ್ವಾಜ್, ಮಹಿಳೆಯರು ಸೀರಿಯಲ್‌ಗಾಗಿ ಕಾಯುತ್ತಾರೆ. ನಾನು ಕ್ಲಬ್ ಹೌಸ್‌ಗೆ ಕಾಯುತ್ತೇನೆ ಎನ್ನುತ್ತಾರೆ ಇಂದೂ ರಾವ್ ದೇವಾಲಯಕ್ಕೆ ಹೋಗಿ ವಾಪಸ್ ಬರುವಾಗ ಸಿಗುವ ನೆಮ್ಮದಿ ನಮಗೆ ಸಿಗುತ್ತದೆ ಎನ್ನುತ್ತಾರೆ ವಿ.ಶಿವರಾಂ ೧೫೦ ಕಂತುಗಳ ಮಾಹಿತಿ ಪುಸ್ತಕದ ರೂಪದಲ್ಲಿ ಸಿಗಲಿ ಎನ್ನುತ್ತಾರೆ ಹರಪ್ಪನ ಹಳ್ಳಿಯ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಲ್ಲಿ ನೈತಿಕತೆ, ಸಂಸ್ಕಾರ ಬೆಳೆಸುವ ಕಾರ‍್ಯಕ್ರಮ ಬರಲಿ ಎನ್ನುತ್ತಾರೆ ಶ್ರವಣ ಬೆಳಗೊಳದ ಛಾಯಾ ಸುನೀಲ್, ವಿಭಿನ್ನ ಕ್ಷೇತ್ರದ ಜ್ಞಾನಿಗಳನ್ನು ಕರೆದು ತರುವುದು ಬಹಳ ಖುಷಿ ಎನ್ನುತ್ತಾರೆ ನಂಜನಗೂಡಿನ ಎಲ್‌ಐಸಿ ರವಿ

ಕಟ್ಟು ಕಟ್ಟಳೆ ಇಲ್ಲದ ಕ್ಲಬ್
ಎಲ್ಲ ರೀತಿಯ ವಿಷಯಗಳ ಬಗ್ಗೆ ಚರ್ಚೆ ಆಗಬೇಕು ಎಂಬ ಆಶಯ ನಮ್ಮದು. ಎಲ್ಲ ರೀತಿಯ ಸಂವಾದ ನಮ್ಮದಾಗಬೇಕು. ಮಡಿ- ಮೈಲಿಗೆ, ಲಿಂಗ-ಜಾತಿಯ ಕಟ್ಟಳೆ ಇರಬಾರದು. ಹೀಗಾಗಿ ಎಲ್ಲ ರೀತಿಯ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ.
ಮುಂದೆಯೂ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಆದರೆ, ಗುಣಮಟ್ಟದ್ದಾಗಿರಬೇಕು ಎಂಬುದು ನಮ್ಮದು ಕಳಕಳಿ. ಒಂದು ವಾರದ ಸಂಪನ್ಮೂಲ ವ್ಯಕ್ತಿಗಳ ಹೆಸರು ಇದೆ. ವಾರಕ್ಕೊಮ್ಮೆ ಟೌನ್‌ಹಾಲ್ ಕಾರ್ಯಕ್ರಮ ನಡೆಸುವ ಉದ್ದೇಶ
ವಿದೆ. ವಾರದಲ್ಲಿ ಒಮ್ಮೆ ಅನಿವಾಸಿ ಭಾರತೀಯರನ್ನು ಕರೆಸುವ ಉದ್ದೇಶ ವಿದೆ. ಬೆಳಗ್ಗೆ ಒಂದು ಕಾರ್ಯಕ್ರಮ ಮಾಡುವ ಉದ್ದೇಶವೂ ಇದೆ ಎಂದು ವಿಶ್ವೇಶ್ವರ ಭಟ್ ಪ್ರಕಟಿಸಿದರು.