Monday, 14th October 2024

ಎಲ್ಲೂ ಇಲ್ಲದ ಕನ್ನಡ – ಸಂಸ್ಕೃತ ಹಗೆತನ ನಮ್ಮಲ್ಲೇಕೆ ?

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 205

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಬೇಸರ ಭಾಷಾ ಹಗೆತನ ವಿಚಾರದ ಕುರಿತು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆಸಲು ಸಮಗ್ರ ಚರ್ಚೆ

ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳೊಂದಿಗೆ ಸಂಸ್ಕೃತ ಹಿತವಾಗಿ ಹೊಂದಿಕೊಂಡಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತ ಹಗೆತನ ರಾಜಕಿಯವೋ, ಸಾಮಾಜಿಕ ಪ್ರೇರಿತವೋ ಎಂಬುದು ರಹಸ್ಯ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಸಂಸ್ಕೃತ-ಕನ್ನಡ ಹಗೆತನ ಏಕೆ? ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕಾಶ್ಮೀರ, ಮತ್ತು ಗುಜರಾತ್‌ನಲ್ಲಿ ಪ್ರಾದೇಶಿಕ ಭಾಷೆಗಳ ಜತೆಗೆ ಸಂಸ್ಕೃತವೂ ಇದೆ. ಈ ರಾಜ್ಯಗಳು ಸಂಸ್ಕೃತದ ಮೇಲೆ ಹಗೆತನ ತೋರಿಲ್ಲ. ಎಲ್ಲೂ ಇಲ್ಲದ ಹಗೆತನ ನಮ್ಮಲ್ಲಿ ಯಾಕೆ ಬಂತು? ಕನ್ನಡತನವನ್ನೂ ನಾವೆಲ್ಲೂ ಬಿಟ್ಟುಕೊಟ್ಟಿಲ್ಲ. ಸಂಸ್ಕೃತ ವಿವಿ ಸ್ಥಾಪನೆ ಸಂದರ್ಭದಲ್ಲಿ ವಿವಾದ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ರಹಸ್ಯ ಹಾಗೂ ವಿಸ್ಮಯ. ಕನ್ನಡ ಮತ್ತು ಸಂಸ್ಕೃತ ನಡುವೆ ವೈರುಧ್ಯವಿಲ್ಲ ಎಂಬುದಕ್ಕೆ ಪಂಪನಿಂದ ಕುವೆಂಪುವರೆಗಿನ ಕಾವ್ಯಗಳೆ ಸಾಕ್ಷಿ ಎಂದು ಹೇಳಿದರು.

ಸಂಸ್ಕೃತ, ಕನ್ನಡಕ್ಕೆ ಹಿರಿಯ. ಕನ್ನಡದ ಎಲ್ಲಾ ಲೇಖಕರು ಸಂಸ್ಕೃತದ ಭಾವಕೋಶ ನಿರ್ಮಿಸಿಕೊಟ್ಟರು. ಆಧುನಿಕ ಕಾಲದಲ್ಲಿ ಬೆಂಗಾಲಿ, ತಮಿಳು, ತೆಲುಗು ಭಾಷೆಗಳಿಗೆ ಸಂಸ್ಕೃತದಿಂದ ಅನೇಕ ನಾಟಕಗಳು, ಕಾವ್ಯ ಗಳನ್ನು ಅನುವಾದ ಮಾಡಿಕೊಂಡಿದ್ದೇವೆ. ಕನ್ನಡಕ್ಕೆ ಅನುವಾದ ಪರಂಪರೆಯಿದೆ. ಕನ್ನಡವನ್ನು ಆತ್ಮೀಯವಾಗಿ ಸಂಸ್ಕೃತ ಸ್ವಾಗತಿಸಿದೆ. ನಮ್ಮ ದೈನಂದಿನ ಬದುಕಿನಲ್ಲಿ ಸಂಸ್ಕೃತ ಮತ್ತು ಕನ್ನಡ ಒಟ್ಟಾಗಿ ಬೆಳೆದಿದೆ. ಇದನ್ನು ಶೈಕ್ಷಣಿಕ ವಾತಾವರಣದಲ್ಲಿ ಕಾಣಬಹುದಾಗಿದೆ. ಯಾವುದೇ ಭಾಷೆ, ಇನ್ನೊಂದು ಭಾಷೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಸಮಾಗಮ: ಬಿ.ಎಂ.ಶ್ರೀಕಂಠಯ್ಯ, ಆಲೂರು ವೆಂಕಟರಾಯರು, ಗೋವಿಂದ ಪೈ, ಪಂಜೆ ಮಂಗೇಶರಾಯರು
ಸೇರಿದಂತೆ ಹಲವು ಬರಹಗಾರರು ಕನ್ನಡ ಮತ್ತು ಸಂಸ್ಕೃತದ ನಡುವಿನ ಸಂಬಂಧ ಉಳಿಸಿಕೊಂಡು ಬಂದವರು. ಅನ್ಯತಾ ಭಾವ ಯಾರಲ್ಲೂ ಕಾಣ ಲಿಲ್ಲ. ಬಿ.ಎಂ. ಶ್ರೀಕಂಠಯ್ಯ ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಪಾಂಡಿತ್ಯ ಹೊಂದಿದ್ದರು.

ಮೂರು ಭಾಷೆಗಳನ್ನು ಸಮಾನತೆಯಿಂದ ಕಾಣುತ್ತಿದ್ದರು. ಜ್ಞಾನ ಮತ್ತು ಲೋಕಜ್ಞಾನ ಒಗ್ಗೂಡಿಸಿ ಅನೇಕ ಪಠ್ಯಗಳನ್ನು ರಚಿಸಿದ್ದಾರೆ. ಶೈಕ್ಷಣಿಕ ವಾತಾ ವರಣದಲ್ಲಿ ಎರಡೂ (ಕನ್ನಡ ಮತ್ತು ಸಂಸ್ಕೃತ) ಭಾಷೆಗಳನ್ನು ಬಳಸಿದವರು ಬಿ.ಎಂ.ಶ್ರೀಕಂಠಯ್ಯ. ಮೈಸೂರಿನ ಮಹಾರಾಜರ ಆಸ್ಥಾನದ ವಿದ್ವಾಂಸರು, ಕನ್ನಡ ಮತ್ತು ಸಂಸ್ಕೃತ ಸಮರಸವಾಗಿಟ್ಟು೦ ಕೊಂಡಿದ್ದರು ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತ ನಡುವಿನ ಸಂಬಂಧ ಹೇಗಿತ್ತು?
? ಸಂಸ್ಕೃತ ಯಾವತ್ತೂ ಕನ್ನಡದ ಮೇಲೆ ಸವಾರಿ ಮಾಡಿಲ್ಲ
? ಕನ್ನಡದ ಜತೆಗೆ ಸಂಸ್ಕೃತ ಭಾಷೆ ಹಿತಮಿತವಾಗಿ ಹೊಂದಿಕೊಂಡಿದೆ
? ಎರಡೂ ಭಾಷೆಗಳ ಸಂಬಂಧ ಹಾಲು ಮತ್ತು ಜೇನು ಸಂಬಂಧವೇ ಹೊರತು ಹಾಲು ಮತ್ತು ಎಣ್ಣೆಯ ಸಂಬಂಧವಲ್ಲ
? ಸಂಸ್ಕೃತದ ಮೇಲೆ ಸವಾರಿ ಮಾಡುವುದು ಸರಿಯಲ್ಲ
? ಕನ್ನಡ-ಸಂಸ್ಕೃತ ಒಂದೇ ನಾಣ್ಯ ಎರಡು ಮುಖಗಳು
? ಸಂಸ್ಕೃತ ಮತ್ತು ಕನ್ನಡದ ಸಂಬಂಧಕ್ಕೆ ೧೫೦೦ ವರ್ಷಗಳ ಇತಿಹಾಸವಿದೆ
? ಸಂಸ್ಕೃತ, ಕನ್ನಡದ ಜತೆ ಯಾವಾಗಲೂ ಪ್ರೇರಿತ, ಪೂರಕ, ಪೋಷಕ
? ಪ್ರಾಚೀನ ಕಾಲದ ಕನ್ನಡದ ಕಾವ್ಯಗಳು ಸಂಸ್ಕೃತದ ಹಿನ್ನಲೆಯದ್ದು ಕನ್ನಡ-ಸಂಸ್ಕೃತ ಭಾಷೆ ನಡುವೆ ಉತ್ತಮ ಬಾಂಧವ್ಯಹೇಗೆ?

? ಸಂಸ್ಕೃತ ಪುರೋಹಿತ ಭಾಷೆ ಎಂಬುದು ತಪ್ಪು ? ಭಾಷೆ ಸಮಾಜವನ್ನು ಒಗ್ಗೂಡಿಸುತ್ತದೆ, ಹಾಗೇ ಸಂಸ್ಕೃತ ಕೂಡ
? ಸಂಸ್ಕೃತ ಮಾತೆ ಕುರಿತು ಕವಿತೆಯಲ್ಲಿ ಕುವೆಂಪು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ
? ಸಂಸ್ಕೃತದ ಭಾವ ಭಾಷೆಯ ಅಲಂಕಾರ, ರಸ, ನೀತಿ ಪ್ರಾಚೀನ ಕನ್ನಡ ಕಾಲದಲ್ಲಿ ಗಮನಿಸಬಹುದು
? ಕನ್ನಡವು ಸಂಸ್ಕೃತದ ಜತೆ ಬೆರೆತಿದೆ

? ಎರಡೂ ಭಾಷೆಗಳ ಮಧ್ಯೆ  ಸೋದರ-ಸೋದರಿಯರ ಸಂಬಂಧ ಪ್ರಾಚೀನದಿಂದ ಅಧುನಿಕತೆವರೆಗೆ ಕನ್ನಡ-ಸಂಸ್ಕೃತ
? ಸಂಸ್ಕೃತದ ಭಾವ ಭಾಷೆ ವಿಚಾರಗಳು ಪ್ರಾಚೀನ ಕಾಲದಲ್ಲಿ ಕನ್ನಡದ ಕವಿಗಳು ಬಳಸುತ್ತಿದ್ದರು
? ಕನ್ನಡ, ಸಂಸ್ಕೃತವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ ಸತತವಾಗಿ ನಡೆದುಕೊಂಡು ಬಂದಿದೆ
? ಮಧ್ಯಯುಗ ಕಾಲದಲ್ಲೂ ಸಂಸ್ಕೃತ ಕುರಿತು ಕೇಶಿರಾಜನ ಶಬ್ದಮಣಿ ದರ್ಪಣ ಕೃತಿಯಲ್ಲಿ ಉಲ್ಲೇಖವಿದೆ
? ನಾಗವರ್ಮನ ಕನ್ನಡವನ್ನು ಸಂಸ್ಕೃತದಲ್ಲಿಬಿತ್ತಿರಿಸಬೇಕಾದರ ಅಗತ್ಯ ಇತ್ತು

? ಸಂಸ್ಕೃತದ ಲೋಕಕ್ಕೆ ಪ್ರವೇಶ ಮಾಡಿದ ವಿದ್ವಾಂಸರು ಸಂಸ್ಕೃತ ಮತ್ತು ಪ್ರಾಕೃತ ವಿಷಯಗಳನ್ನು ಬಳಕೆ ಮಾಡುತ್ತಿದ್ದರು.

ಜ್ಞಾನ, ಭಾವ, ಲೋಕೋಪಯೋಗಿ ನೆಲೆ

ಭಾಷೆಯಲ್ಲಿ ಮೂರು ನೆಲೆ ಕಾಣಬಹುದು. ಜ್ಞಾನೋಪಯೋಗಿ, ಲೋಕೋಪಯೋಗಿ, ಭಾವೋಪಯೋಗಿ ನೆಲೆಗಳಿವೆ. ಕನ್ನಡ ಬೆಳವಣಿಗೆ ಆಗುವಾಗ
ಸಂಸ್ಕೃತ, ಪಾಲಿ ಹಾಘೂ ಪ್ರಾಕೃತವನ್ನು ಸ್ವೀಕಾರ ಮಾಡಲಾಗಿದೆ. ಕನ್ನಡದ ಮನಸ್ಸು ನಮ್ಮಲ್ಲಿ ಮಾರ್ಗ ಮತ್ತು ದೇಶಿ ಕಾವ್ಯಗಳ ಸಂಬಂಧ ಕಾಣಬಹು ದಾಗಿದೆ. ಅನ್ಯ ಭಾಷೆಗಳೂ ಕನ್ನಡಕ್ಕೆ ಬಂದಿವೆ. ಮಧ್ಯಕಾಲೀನ ಕುಮಾರವ್ಯಾಸ ಭಾರತ ಮರಾಠಿಗೂ ಅನುವಾದವಾಗಿದೆ. ಕನ್ನಡದ ಅನೇಕ ಕೀರ್ತನೆಗಳು ಮರಾಠಿಗೆ ಅಬಂಧ ರೂಪದಲ್ಲಿ ಹೋಗಿದೆ. ಕನ್ನಡದ ಎಂಬುದು ಇನ್ನೊಬ್ಬರಿಗೆ ನೆರವಾಗಿದೆ. ಬೇರೆ ಬೇರೆ ಭಾಷೆಗಳ ಜತೆಗೆ ಪ್ರಧಾನವಾಗಿದೆ. ಕನ್ನಡ ದೇಶ, ಭಾಷೆಗಳ ಜತೆಗೆ ಸಮೃದ್ಧಿ ಸ್ಥಿತಿ ಹೊಂದಿತ್ತು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದ್ದಾರೆ.

***

ಪ್ರೊ.ಮಪುರಂ ಜಿ. ವೆಂಕಟೇಶ್ ೧೯೫೨ ಜೂನ್ ೫ರಂದು ಬೆಂಗಳೂರು ಗ್ರಾಮಾಂತರ ಹೆಬ್ಬಗೋಡಿಯಲ್ಲಿ ಜನಿಸಿದರು. ಅವರ ಮೊದಲ ಸಂಸ್ಕೃತ- ಕನ್ನಡ ಗುರುಗಳು ಎಸ್.ವಿ.ರಾಮಸ್ವಾಮಿ ಅಯ್ಯಂಗಾರ್. ವಿದ್ವಾನ್ ಬಿ. ವೆಂಕಟರಾಮಭಟ್ಟ ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ ಮಾಡಿದರು.
ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿಂದ ಅದ್ವೈತ ವೇದಾಂತದ ಅನುಗ್ರಹ ಪಡೆದಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಪ್ರಥಮ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು