Saturday, 27th February 2021

ರಾಘವೇಶ್ವರ ಭಾರತಿ ಶ್ರೀಯಿಂದ ವಿಶ್ವವಾಣಿ ಸಂಚಿಕೆ ಬಿಡುಗಡೆ

ಶಿರಸಿ; ವಿಶ್ವವಾಣಿಯ ಆರನೇ ವರ್ಷದ ವಿಶೇಷ ಸಂಚಿಕೆಯ ಪುಸ್ತಕವನ್ನು ಇಂದು ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ವಿಶ್ವೇಶ್ವರ ಭಟ್ ಅವರು ಯಾವಾಗಲೂ ಹೊಸತನದ ಪ್ರಯೊಇಗಗಳ ಕೈಗೊಂಡು ಉತ್ತಮ ರೀತಿಯಲ್ಲಿ ಚಿಂತನೆಗಳನ್ನು ನಡೆಸುತ್ತಾರೆ. ಉತ್ತಮವಾಗಿ ಪತ್ರಿಕೆಯನ್ನು ಕೊಂಡೊಯ್ಯುವಲ್ಲಿ ಅವರದು ಸದಾ ಮುಂದಾಲೋಚನೆ. ಆರು ಏರು ಈ ಸಂಚಿಕೆ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಉತ್ತಮ ವಿಚಾರಗಳು, ಕಾರ್ಯಗಳು ಇದರಲ್ಲಿ ಅಡಕವಾಗಿದ್ದು ಸಂತಸ ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಾನಂದ ಹೆಗಡೆ ಕಡತೋಕಾ ದಂಪತಿ, ವಿಶ್ವವಾಣಿ ಜಿಲ್ಲಾವರದಿಗಾರ್ತಿ ವಿನುತಾ ಹೆಗಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *