Wednesday, 11th December 2024

ಮುಡಾ ಹಗರಣ: ತನಿಖೆಗೆ ಆದೇಶ

ವಿಶ್ವವಾಣಿ ಫಲಶೃತಿ

ಮುಡಾ ಆಯುಕ್ತ, ಕಾರ್ಯದರ್ಶಿ, ಎಇಇ ಎತ್ತಂಗಡಿ, ೫೦:೫೦ ನಿವೇಶನ ಹಂಚಿಕೆಗೆ ತಡೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬಹುಕೋಟಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಮುಡಾ ಆಯುಕ್ತ ದಿನೇಶ್
ಕುಮಾರ್ ಸೇರಿದಂತೆ ಮೂವರು ಅಧಿಕಾರಿಗಳ ವರ್ಗಾವಣೆಗೆ ಆದೇಶಿಸಲಾ ಗಿದ್ದು, ಹಗರಣ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಹಗರಣ ಕುರಿತ ವಿಶ್ವವಾಣಿ ಪತ್ರಿಕೆಯ ಜೂನ್ ೨೭ರ ಸಂಚಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್
ಸೋಮವಾರ ತುರ್ತು ಸಭೆ ನಡೆಸಿದ್ದು, ಮುಡಾದಲ್ಲಿ ೫೦-೫೦ ಅನುಪಾತದಲ್ಲಿ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಲು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಮುಡಾ ಆಯುಕ್ತ ದಿನೇಶ್‌ಕುಮಾರ್, ಕಾರ‍್ಯದರ್ಶಿ ಜಿ.ಡಿ ಶೇಖರ್ ಹಾಗೂ ಎಇಇ ವರ್ಗಾವಣೆಗೆ ಮೌಖಿಕ ಆದೇಶ ನೀಡಿದ್ದಾರೆ.

೫೦:೫೦ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಕುರಿತು ತನಿಖೆ ನಡೆಸಲು ಹಿರಿಯ ಅಧಿಕಾರಿ ವೆಂಕಟಾಚಲಪತಿ ಕವಳಗಿ ನೇತೃತ್ವದಲ್ಲಿ ಸಮಿತಿ ರಚಿಸ ಲಾಗಿದ್ದು ನಾಲ್ಕು ವಾರಗಳೊಳಗೆ ವರದಿ ನೀಡಲು ಸೂಚಿಸಲಾಗಿದೆ. ಇಬ್ಬರು ಐಎಎಸ್ ಮತ್ತು ನಾಲ್ವರು ಹೆಚ್ಚುವರಿ ಸಿಬ್ಬಂದಿಯ ನ್ನೊಳಗೊಂಡ ಸಮಿತಿ ನಿಯಮಬಾಹಿರವಾಗಿ ನಡೆದ ನಿವೇಶನ ಹಂಚಿಕೆಗಳ ಬಗ್ಗೆ ತನಿಖೆ ನಡೆಸಲಿದೆ. ಮುಂದಿನ ೧ ತಿಂಗಳು ಯಾವುದೇ ಸೈಟು ಹಂಚಿಕೆ ಮಾಡದಂತೆ, ಮುಡಾದಲ್ಲಿ ಸಭೆ ನಡೆಸದಂತೆ ಸಚಿವರು ಆದೇಶಿಸಿದ್ದಾರೆ. ಈ ಹಿಂದೆ ೫೦:೫೦ ಅನುಪಾತದಡಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ಕೂಡ ತಡೆಹಿಡಿಯಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಕುರಿತು ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವರು “ ನಮ್ಮ ಅವಧಿಯಲ್ಲಿ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ. ಬಿಜೆಪಿ ಸರಕಾರ ಅಧಿಕಾರದಲ್ಲಿ ಈ ನಿಯಮ ಜಾರಿಗೆ ತಂದಿದೆ. ಅಲ್ಲಿಂದ ಏನು ಆಗಿದೆ ಎಂಬುದನ್ನು ತಿಳಿಯಬೇಕಿದೆ. ೨೦೨೩ರ ಅಕ್ಟೋಬರ್ ೨೭ರಂದು ನಿವೇಶನ ಹಂಚಿಕೆ ಆದೇಶ ಮಾಡಲಾಗಿದೆ. ೨೦೨೦ನೇ ಇಸವಿಯಲ್ಲಿ ೫೦-೫೦ ಅನುಪಾತ ಜಾರಿಗೆ ಬಂದಿದೆ. ಆದರೆ ಮುಡಾ ನೀಡಿರುವ ಜಾಗಕ್ಕೆ ಸಂಬಂಧಿಸಿ ಸಚಿವ ಸಂಪುಟದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಈವರೆಗೆ ಇದೇ ನಿಯಮದಲ್ಲಿ ಮುಡಾ ಅಧಿಕಾರಿಗಳು ಸಾಕಷ್ಟು ನಿವೇಶನ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

*

ತುಂಡು ಭೂಮಿ ಹಂಚಿಕೆ ಮಾಡದಂತೆ ನಾನೇ ಆದೇಶಿಸಿದ್ದೆ. ಬಿಜೆಪಿ ಸರಕಾರ ಇದ್ದಾಗ ಮಾಡಿದ ಆದೇಶಗಳನ್ನು ರದ್ದುಮಾಡಲು ಸೂಚನೆ
ನೀಡಿದ್ದೇನೆ. ಹಗರಣ ಕುರಿತು ತನಿಖೆ ನಡೆಸಲಾ ಗುತ್ತದೆ. ಮುಡಾ ಆಯುಕ್ತ ದಿನೇಶ್ ಕುಮಾರ್ ಕಾರ‍್ಯದರ್ಶಿ ಮತ್ತು ಎಇಇ ವರ್ಗಾವಣೆ ಮಾಡಲು ಮೌಖಿಕ ಸೂಚನೆ ನೀಡಲಾಗಿದೆ.
– ಭೈರತಿ ಸುರೇಶ್ ನಗರಾಭಿವೃದ್ಧಿ ಸಚಿವ