ಬೆಂಗಳೂರು: ಕೋವಿಡ್‌ನಿಂದಾಗಿ ಕಳೆದ ಎರಡು ರ‍್ಷದಿಂದ ಮಕ್ಕಳು ಮನೆಯಲ್ಲೇ ಹೆಚ್ಚು ಸಮಯ ಕಳೆಯುವಂತಾಗಿದೆ. ಅದರಲ್ಲೂ ಆನ್‌ಲೈನ್ ಕ್ಲಾಸ್‌ನಿಂದಾಗಿ ಮಕ್ಕಳು ಹೊರ ಪ್ರಪಂಚಕ್ಕೆ ಹೆಚ್ಚಾಗಿ ತೆರೆದುಕೊಳ್ಳದೇ ಮನೆಯಲ್ಲೇ ಮನರಂಜನೆ ಪಡೆದುಕೊಳ್ಳಲು ಕರ‍್ಟೂನ್ ಚಾನೆಲ್‌ಗಳ ಮೊರೆ ಹೋಗಿದ್ದಾರೆ. ಮಕ್ಕಳು ವೀಕ್ಷಿಸಲು ಇಷ್ಟ ಪಡುವ ೫ ಆನಿಮೇಟೆಡ್ ಕರ‍್ಟೂನ್‌ಗಳು ಪಟ್ಟಿ ಇಲ್ಲಿವೆ.
೧.ಮೋಟು ಪಟ್ಲು
ನಿಕಲೋಡಿಯೋನ್‌ನಲ್ಲಿ ಪ್ರತಿದಿನ ಬೆಳಗ್ಗೆ ೮.೩೦ಕ್ಕೆ ಪ್ರಸಾರವಾಗುವ ಮೋಟುಪಟ್ಲು ಕರ‍್ಟೂನ್ ಮಕ್ಕಳಿಗೆ ಹೆಚ್ಚು ಪ್ರಿಯವಾಗಿದೆ. ಮೋಟಿ ಮತ್ತು ಪಟ್ಲು ಈ ಎರಡು ಕರ‍್ಟೂನ್ ಕ್ಯಾರೇಕ್ಟರ್‌ಗಳು ಸಮಸ್ಯೆಯನ್ನು ಮೈಮೇಲೆಳೆದು ಕೊಂಡು ಅದನ್ನ ಸರಿ ಪಡಿಸುವ ಹಾದಿಯೇ ತಮಾಷದಾಯವಾಗಿದೆ. ಒಬ್ಬರಿಗೊಬ್ಬರನ್ನು ಮೀರಿಸುವ ಈ ಕ್ಯಾರೆಕ್ಟರ್‌ಗಳು ದೊಡ್ಡವರನ್ನೂ ಆರ‍್ಷಿಸದೇ ಇರದು.
೨.ಶಿವ
ನಿಕ್ ಚಾನೆಲ್‌ನಲ್ಲಿ ಸಂಜೆ ೫.೩೦ಕ್ಕೆ ಪ್ರಸಾರವಾಗುವ ಈ ಕರ‍್ಟೂನ್ ಸಹ ಮಕ್ಕಳಿಗೆ ಅಚ್ಚುಮೆಚ್ಚು. ದುಷ್ಟರನ್ನು ಸದೆ ಬಡಿಯುವ ಶಿವನ ಹೆಸರಿನಲ್ಲಿ ಈ ಕರ‍್ಟೂನ್ ಇದ್ದರೂ 9 ರ‍್ಷದ ಬಾಲಕದುಷ್ಟರಿಂದ ಅವನ ನಗರವನ್ನು ಹೇಗೆ ಸಂರಕ್ಷಿಸಿಕೊಳ್ಳುತ್ತಾನೆ, ಸ್ನೇಹಿತರು, ಮಕ್ಕಳು, ದೊಡ್ಡವರಿಂದ ಸದಾ ಹೇಗೆ ಪ್ರಶಂಸೆ ಪಡೆಯುತ್ತಾನೆ ಎಂಬುದೇ ಈ ಕರ‍್ಟೂನ್‌ನ ಕತೆ. ಪ್ರತಿ ಎಪಿಸೋಡ್ ಕೂಡ ರೋಚಕವಾಗಿರುವುದರಿಂದ ಮಕ್ಕಳ ಆರ‍್ಷಣೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಕರ‍್ಟೂನ್ ಗೆದ್ದಿದೆ.
೩.ರುದ್ರ
ನಿಕ್ ಚಾನೆಲ್‌ನಲ್ಲಿ ಬೆಳಗ್ಗೆ ೧೦.೩೦ಕ್ಕೆ ಪ್ರಸಾರವಾಗುವ ಈ ಕ್ಯಾರೆಕ್ಟರ್ ಮಕ್ಕಳಿಗೆ ಅಚ್ಚುಮೆಚ್ಚು. ಏಕೆಂದರೆ, ಇದು ಮ್ಯಾಜಿಕ್‌ಗೆ ಸಂಬಂಧಿಸಿದ ಕರ‍್ಟೂನ್, ೯ ರ‍್ಷದ ಬಾಲಕ ಮ್ಯಾಜಿಕ್ ಮೂಲಕ ತನ್ನ ಸ್ನೇಹಿತರ ಜೊತೆಗೂಡಿ ಅವರ ರಾಜ್ಯವನ್ನು ದುಷ್ಟ ರಾಜನಿಂದ ರಕ್ಷಿಸಲು ಮ್ಯಾಜಿಕ್ ಬಳಸುತ್ತಾನೆ. ಮಕ್ಕಳಿಗೆ ಮ್ಯಾಜಿಕ್ ಎಂದರೇ ಇಷ್ಟ. ಇನ್ನು ಈ ಕರ‍್ಟೂನ್ ಇಷ್ಟವಾಗದೇ ಇರಲು ಸಾಧ್ಯವೇ?
೪.ಗೋಲ್ ಮಾಲ್ ಜೂನಿಯರ್
ಅತ್ಯಂತ ಜನಪ್ರತಿಯ ಚಿತ್ರವಾದ ಗೋಲ್‌ಮಾಲ್ ತಂಡದಿಂದ ಪ್ರಾಂಚೈಸಿ ಪಡೆದು ಗೋಲ್‌ಮಾಲ್ ಜೂನಿಯರ್ ಎಂದು ಕರ‍್ಟೂನ್‌ನಲ್ಲಿ ಮಕ್ಕಳ ಮುಂದಿಡ ಲಾಗಿದೆ. ಈ ಕರ‍್ಟೂನ್ ಗೋಲ್ ಮಾಲ್ ಮಾಡುವುದರಿಂದ ಹಾಸ್ಯವನ್ನು ಕಟ್ಟಿಕೊಡುತ್ತದೆ. ಗೋಲ್‌ಮಾನ್ ಪ್ರಾಂಕ್ ಗ್ಯಾಂಗ್ ಮಕ್ಕಳನ್ನು ನಗಿಸುವಲ್ಲಿ ಯಶಸ್ವಿ ಯಾಗಿದೆ. ಈ ಹಾಸ್ಯಭರಿತ ಸಾಹಸಗಳನ್ನು ನಿಕ್ ನಲ್ಲಿ ವೀಕ್ಷಿಸಿ.
೫.ಚಿಕ್ಕೂ ಔರ್ ಬಂಟಿ
ಒ೦ದೇ ಮನೆಯಲ್ಲಿ ಇರುವ ಅಣ್ಣತಮ್ಮನ ಕಾಳಗ ಹಾಗೂ ಯಾರು ಗ್ರೇಟ್ ಎನ್ನುವ ಚಾಲೆಂಜಿ೦ಗ್ ವಿಷಯವೇ ಈ ಚಿಕ್ಕೂ ಔರ್ ಬಂಟಿ ಶೋ. ಮನೆಯಲ್ಲಿ ಯಾವುದೋ ತರಲೆ ಮಾಡಿ ಅದನ್ನ ಅಣ್ಣನ ಮೇಲಾಕುವುದು ಅಥವಾ ತಮ್ಮನ ಮೇಲಾಕುವುದು. ಬೆಳಗ್ಗೆ ೧೦.೩೦ಕ್ಕೆ ನಿಕ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.