Wednesday, 18th September 2024

ವಾಯುಮಾಲಿನ್ಯ ಮಧುಮೇಹಕ್ಕೆ ಕಾರಣವಾಗಬಹುದು

ಲೇಖಕರು : ಡಾ. ಕಂಚನ್ ಎನ್.ಜಿ., ಆಂತರಿಕ ವೈದ್ಯಕೀಯ, ಟ್ರೈಲೈಫ್ ಹಾಸ್ಪಿಟಲ್

ಪಟ್ಟಣ ಪ್ರದೇಶಗಳಲ್ಲಿ ಮಧುಮೇಹ ಅತಿಯಾಗಿ ಹೆಚ್ಚುತ್ತಿರುವ ವಿಷಯ ಕುರಿತಂತೆ ಇದ್ದ ಸಾಂಪ್ರದಾಯಿಕ ನಂಬಿಕೆಗೆ ಸವಾಲು ಹಾಕುವಂತೆ ನೂತನ ವಾದವೊಂದು ಮುಂಚೂಣಿಗೆ ಬರುತ್ತಿದೆ. ಇತ್ತೀಚಿನ ಭೂಭಂಜಕ ಅಧ್ಯಯನದಲ್ಲಿ ವಾಯುಮಾಲಿನ್ಯ ಅದರಲ್ಲಿಯೂ ನಿರ್ದಿಷ್ಟವಾಗಿ ಪಿಎಂ2.5 ಕಣಗಳು ಇದ್ದಂತಹ ವಾಯುಮಾಲಿನ್ಯವು ಭಾರತದ ಎಲ್ಲೆಡೆ ಪ್ರಮುಖ ನಗರಗಳಲ್ಲಿ ಟೈಪ್-2 ಮಧುಮೇಹ ಹೆಚ್ಚಾಗಲು ಕೊಡುಗೆ ನೀಡುತ್ತಿದೆ ಎಂದು ವಾದ ಮಂಡಿಸಲಾಗಿದೆ. ದೀರ್ಘಕಾಲದಿಂದ ಆಲಸಿ ಜೀವನಶೈಲಿ, ಅನಾರೋಗ್ಯಕರ ಆಹಾರಕ್ರಮದ ಆಯ್ಕೆಗಳು ಮತ್ತು ಹೆಚ್ಚುತ್ತಿರುವ ಸ್ಥೂಲಕಾಯದ ದರಗಳು ಮುಂತಾದ ಅಂಶಗಳು ಮಧುಮೇಹಕ್ಕೆ ಕಾರಣವಾಗುತ್ತವೆ ಎಂದು ಗಮನಹರಿಸಲಾಗಿತ್ತು. ಆದರೆ ಈಗ ಇವೆಲ್ಲವುಗಳಲ್ಲದೆ, ಸತತವಾಗಿ ಹೆಚ್ಚುತ್ತಿರುವ ಮಧುಮೇಹದೊಂದಿಗೆ ಗಾಳಿಯ ಗುಣಮಟ್ಟ ಸೂಕ್ಷ್ಮವಾದ ಸಂಬoಧ ಹೊಂದಿದೆ ಎನ್ನಲಾಗುತ್ತಿದೆ. ಭಾರತ, ಈಗಾಗಲೇ “ಜಗತ್ತಿನ ಮಧುಮೇಹದ ರಾಜಧಾನಿ’’ಎಂಬ ಹೆಸರು ಸಂಪಾದಿಸಿದೆ. ದೇಶದಲ್ಲಿ 77 ದಶಲಕ್ಷ ಜನರು ಈ ಚಯಪಚಯದ ಸಂಬoಧಿ ತೊಂದರೆಯಿoದ ಪೀಡಿತರಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಈಗ ವಾಯುಮಾಲಿನ್ಯದೊಂದಿಗೆ ಮಧುಮೇಹ ಸಂಭಾವ್ಯ ಸಂಬoಧ ಹೊಂದಿದೆ ಎನ್ನುವುದರೊಂದಿಗೆ ಈ ದೇಶ ಮತ್ತಷ್ಟು ಸಂಕೀರ್ಣವಾದ ಆರೋಗ್ಯದ ಸವಾಲನ್ನು ಎದುರಿಸುತ್ತಿದೆ.

ಪಿಎಂ2.5 ಕಣವು ದೀರ್ಘಕಾಲದ ಶ್ವಾಸಕೋಶದ ರೋಗ, ಆಸ್ತಮಾ ಮತ್ತು ಶ್ವಾಸಕೋಶದ ಕ್ಯಾನ್ಸರ್ ಮುಂತಾದ ಉಸಿರಾಟ ಸಂಬoಧಿ ರೋಗಗಳು ಬರುವಲ್ಲಿ ಪಾತ್ರವಹಿಸುತ್ತದೆ ಎಂದು ಸಾಂಪ್ರದಾಯಿಕವಾಗಿ ಗುರುತಿಸಲಾಗಿತ್ತು. ಈ ಪಿಎಂ2.5 ಕಣವು ಸಾರ್ವಜನಿಕ ಆರೋಗ್ಯದಲ್ಲಿ ಬಹುಮುಖಿ ಪರಿಣಾಮ ಉಂಟುಮಾಡುತ್ತಿದೆ. ಈ ಸೂಕ್ಷ್ಮ ಕಣಗಳು ನಿರ್ನಾಳ ಗ್ರಂಥಿಗಳ ಕಾರ್ಯದಲ್ಲಿ ಅಡ್ಡಿವುಂಟು ಮಾಡುತ್ತವೆ ಎಂಬ ವಿಷಯವನ್ನು ಹೊರಗೆಡವಿರುವುದು, ಈ ಕಣಗಳ ಪರಿಣಾಮ ಕುರಿತಂತೆ ನಮ್ಮ ಅರಿವಿನಲ್ಲಿ ಹೊಸ ಪದರವನ್ನು ಸೇರಿಸುತ್ತದೆ. ಚಯಪಚಯ ಎಂದರೆ ಮೆಟಬಾಲಿಸಂ ಸೇರಿದಂತೆ ದೇಹದ ಹಲವಾರು ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ನಿರ್ನಾಳ ವ್ಯವಸ್ಥೆಗೆ ಅಡ್ಡಿವುಂಟು ಮಾಡುವ ಸಾಮರ್ಥ್ಯವನ್ನು ಈ ಕಣಗಳು ಹೊಂದಿರುತ್ತವೆ. ನಿರ್ನಾಳ ವ್ಯವಸ್ಥೆಗೆ ಪಿಎಂ2.5 ಕಣಗಳು ತರುವಂತಹ ಬದಲಾವಣೆಯು ಮಧುಮೇಹ ಅಭಿವೃದ್ಧಿಗೊಳ್ಳಲು ದಾರಿ ಮಾಡಿಕೊಡಬಹುದು ಎಂದು ಅಧ್ಯಯನ ತಿಳಿಸಿದೆ. ಇದರೊಂದಿಗೆ ಈ ಚಯಪಚಯ ಸಂಬoಧಿ ತೊಂದರೆಯ ಮೇಲೆ ಪ್ರಭಾವ ಬೀರುವ ಅಂಶಗಳ ಸಂಕೀರ್ಣ ಜಾಲಕ್ಕೆ ಹಿಂದೆoದೂ ಕಾಣದಂತಹ ಆಯಾಮ ಬಂದಿದೆ.

ಭಾರತೀಯ ನಗರ ಪ್ರದೇಶಗಳಲ್ಲಿ ಕ್ಷಿಪ್ರಗತಿಯಲ್ಲಿ ಕೈಗಾರೀಕರಣ ಮತ್ತು ನಗರೀಕರಣಗಳಿಂದಾಗಿ ಅಪಾರ ವಾಯುಮಾಲಿನ್ಯದ ಸವಾಲುಗಳು ಎದುರಾಗಿವೆ. ಇದರೊಂದಿಗೆ ಉಸಿರಾಟದ ಆರೋಗ್ಯ ಸಮಸ್ಯೆಗಳ ಹೊಸ ತೊಂದರೆ ಕಾಡುತ್ತಿದೆ. ಮಧುಮೇಹವನ್ನು ನಿಯಂತ್ರಿಸಲು ಸರ್ಕಾರಿ ಸಂಸ್ಥೆಗಳು ಮತ್ತು ಆರೋಗ್ಯ ಸೇವಾ ವೃತ್ತಿಪರರು ಶ್ರಮಿಸುತ್ತಿದ್ದು, ಈ ರೋಗಕ್ಕೆ ಸಂಬoಧಿಸಿದoತೆ ವಾಯುಮಾಲಿನ್ಯದ ಪಾತ್ರವನ್ನು ಗಮನಿಸಲೇಬೇಕಾಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ವಾಯುಮಾಲಿನ್ಯದ ಪ್ರಭಾವವನ್ನು ನಿವಾರಿಸಲು ಸರ್ಕಾರದ ಉಪಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ. ಗಾಳಿಯ ಗುಣಮಟ್ಟ ಮಾನದಂಡಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರುವುದು, ನವೀನಕರಿಸಬಹುದಾದ ಶಕ್ತಿಮೂಲಗಳಲ್ಲಿ ಹೂಡಿಕೆ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಗೆ ಪ್ರೋತ್ಸಾಹ ನೀಡುವುದು ಮುಂತಾದವುಗಳು ಗಾಳಿಯಲ್ಲಿ ಪಿಎಂ2.5 ಕಣಗಳನ್ನು ಕಡಿಮೆ ಮಾಡುವತ್ತ ಪ್ರಮುಖ ಕ್ರಮಗಳಾಗಿರುತ್ತವೆ. ಹೆಚ್ಚುವರಿಯಾಗಿ, ಹಸಿರು ಪ್ರದೇಶಗಳನ್ನು ಪೋಷಿಸಿ ಬೆಳೆಸುವುದು, ಪರಿಸರ ಪ್ರಜ್ಞೆಯ ನಗರ ಯೋಜನೆಗೆ ಆದ್ಯತೆ ನೀಡುವುದು ಮುಂತಾದ ಕ್ರಮಗಳು ನಗರಗಳ ಜನರ ಒಟ್ಟಾರೆ ಯೋಗಕ್ಷೇಮಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಬಹುದು.

ವಾಯುಮಾಲಿನ್ಯದ ಪರಿಣಾಮಗಳನ್ನು ನಿವಾರಿಸುವಲ್ಲಿ ನಾಗರಿಕರಿಗೂ ಕೂಡ ವೈಯಕ್ತಿಕ ಮಟ್ಟದ ಜವಾಬ್ಧಾರಿ ಇರುತ್ತದೆ. ಪರಿಸರಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು, ವೈಯಕ್ತಿಕ ಇಂಗಾಲದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡುವುದು ಮತ್ತು ಮಾಲಿನ್ಯದ ವಿರುದ್ಧ ಹೋರಾಡುವಂತಹ ಉಪಕ್ರಮಗಳಿಗೆ ಸಕ್ರಿಯವಾಗಿ ಬೆಂಬಲ ನೀಡುವುದು ಮುಂತಾದ ಕ್ರಮಗಳು ಆರೋಗ್ಯಕರ ಪರಿಸರಕ್ಕೆ ಸಾಂಘಿಕವಾಗಿ ಕೊಡುಗೆ ನೀಡುತ್ತವೆ. ವಾಯುಮಾಲಿನ್ಯ ಮತ್ತು ಮಧುಮೇಹದ ನಡುವೆ ನೂತನವಾಗಿ ಗುರುತಿಸಲಾದ ಸಂಪರ್ಕ ಕುರಿತಂತೆ ಜಾಗೃತಿ ಮೂಡಿಸುವುದರಿಂದ ವ್ಯಕ್ತಿಗಳು ಸ್ವಚ್ಛ ಗಾಳಿಯನ್ನು ಪ್ರೋತ್ಸಾಹಿಸುವ ನೀತಿಗಳನ್ನು ಬೆಂಬಲಿಸುವಲ್ಲಿ ಮತ್ತು ಪ್ರಯತ್ನಗಳ ಪರ ವಕಾಲತ್ತು ನಡೆಸುವಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತದೆ.

ಮಧುಮೇಹ ಉಂಟು ಮಾಡುವಲ್ಲಿ ವಾಯುಮಾಲಿನ್ಯದ ಸಂಭಾವ್ಯ ಪಾತ್ರ ಭಾರತದಲ್ಲಿ ಈ ಆರೋಗ್ಯ ಬಿಕ್ಕಟ್ಟಿನ ಬಹುಮುಖಿ ಸ್ವಭಾವಕ್ಕೆ ಮತ್ತಷ್ಟು ಸಂಕೀರ್ಣತೆ ತಂದಿದೆ. ಸರ್ಕಾರದ ಉಪಕ್ರಮಗಳು ಮತ್ತು ವೈಯಕ್ತಿಕ ಕಾರ್ಯಗಳ ನಡುವಿನ ಸಹಭಾಗಿತ್ವದ ಪ್ರಯತ್ನಗಳ ಜೊತೆಗೆ ಸ್ವಚ್ಛ ಗಾಳಿ ಉಳಿಯುವಲ್ಲಿ ಹಚ್ಚು ಆರೋಗ್ಯಯುತ ಭವಿಷ್ಯಕ್ಕೆ ಭರವಸೆ ಇರುತ್ತದೆಯಲ್ಲದೆ, ಮಧುಮೇಹದ ನೆರಳು ಕಡಿಮೆಯಾಗುತ್ತದೆ. “ಜಗತ್ತಿನ ಮಧುಮೇಹ ರಾಜಧಾನಿ’ಎಂಬ ತನ್ನ ಸ್ಥಾನದ ಹೊರೆಯಲ್ಲಿ ದೇಶ ಹೋರಾಡುತ್ತಿರುವಾಗ, ಇದುವರೆಗೆ ನಿರ್ಲಕ್ಷಿಸಲಾದ ವಾಯುಮಾಲಿನ್ಯದ ಜೊತೆಗಿನ ಸಂಪರ್ಕವನ್ನು ಗಮನಿಸುವುದ ಕೂಡ ಸಾಮಾಜಿಕ ಜವಾಬ್ಧಾರಿಯಾಗುತ್ತದೆ.

Leave a Reply

Your email address will not be published. Required fields are marked *