Friday, 13th December 2024

ಕ್ರೈಮ್ ಅಗೈನ್ಸ್ಟ್ ಚಿಲ್ಡ್ರನ್, ಎನ್‌ಸಿಆರ್‌ಬಿ ವರದಿಯಲ್ಲಿ ಕಳವಳಕಾರಿ ಮಾಹಿತಿ

ಬೆಂಗಳೂರು: ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚು
ತ್ತಿದ್ದು, ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳ ಉಂಟುಮಾಡಿದೆ.

ಕ್ರೈಮ್ ಅಗೈನ್ಸ್ಟ್ ಚಿಲ್ಡ್ರನ್ ಸಂಸ್ಥೆ ಮಾಡಿರುವ ವರದಿ ಪ್ರಕಾರ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನ ಗಳಲ್ಲಿ ತೆಲಂಗಾಣ ಮತ್ತು ತಮಿಳುನಾಡು ಇದೆ. ಈ ವರದಿ ಪ್ರಕಾರ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ಅತಿ ಹೆಚ್ಚು ನಡೆಯುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ.

ಈ ಮಧ್ಯೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ, ಕರ್ನಾಟಕವು ಕಳೆದ 8 ವರ್ಷಗಳಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

2013ರಲ್ಲಿ ರಾಜ್ಯವು ಅಂತಹ ೧,೩೫೩ ಪ್ರಕರಣಗಳನ್ನು ವರದಿ ಮಾಡಿದರೆ, ಎಂಟು ವರ್ಷಗಳಲ್ಲಿ ಐದು ಪಟ್ಟು ಹೆಚ್ಚು ಏರಿಕೆ ಕಂಡಿದೆ. ಅಂದರೆ, 2021 ರಲ್ಲಿ ೭,೨೬೧ ಪ್ರಕರಣ ಗಳು ವರದಿಯಾಗಿವೆ. ಈ ಪೈಕಿ ಹೆಚ್ಚಿನ ಪ್ರಕರಣಗಳು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿವೆ.

2012ರಲ್ಲಿ ಪೋಕ್ಸೋ ಕಾಯಿದೆ ಜಾರಿಗೊಳಿಸಿದ ಬಳಿಕ ಇಂತಹ ವಿಚಾರಗಳಲ್ಲಿ ಜನರು ದೂರು ಕೊಡಲು ಮುಂದಾಗಿರುವು ದರಿಂದ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಕೂಡ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಮಧ್ಯೆ 2020ರಿಂದ ಸುಮಾರು 2563 ಪ್ರಕರಣಗಳನ್ನು ಪೊಲೀಸರು ಇನ್ನೂ ತನಿಖೆ ಮಾಡಬೇಕಿದೆ. ಇದರಿಂದಾಗಿ 2022ರ ಬಳಿಕ ತನಿಖೆ ಮಾಡಬೇಕಾದ ಒಟ್ಟು ಪ್ರಕರಣಗಳ ಸಂಖ್ಯೆ ೯೮೨೪ಕ್ಕೆ ಏರಿಕೆಯಾಗಿದೆ.

ಮಕ್ಕಳು ಹಾಗೂ ಮಹಿಳೆಯರ ವಿರುದ್ಧದ ಅಪರಾಧಗಳ ತನಿಖೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ವಿರುದ್ಧದ ಅಪರಾಧಗಳಿಗೆ ಸಂಬಂಽಸಿದಂತೆ ಒಟ್ಟು ೧೩,೯೦೩ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ, ೪೬೭೩ ಪ್ರಕರಣಗಳನ್ನು ೨೦೨೧ರಲ್ಲಿ ವಿಚಾರಣೆಗೆ ಕಳುಹಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹರಿಯಾಣ, ಛತ್ತೀಸ್‌ಘಡ, ತೆಲಂಗಾಣ, ಒಡಿಶಾ ಮತ್ತು ಅಸ್ಸಾಂ ೨೦೨೧ರಲ್ಲಿ ಮಕ್ಕಳ ವಿರುದ್ಧದ ಹೆಚ್ಚಿನ ಅಪರಾಧಗಳನ್ನು ಹೊಂದಿರುವ ಇತರ ರಾಜ್ಯಗಳಾಗಿವೆ. ನಾಗಾಲ್ಯಾಂಡ್ ನಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ ಪ್ರಮಾಣವು ೬.೨ ರಷ್ಟು ಕಡಿಮೆ ಯಾಗಿದ್ದು, ೨೦೨೧ರಲ್ಲಿ ೫೧ ಪ್ರಕರಣಗಳು ದಾಖಲಾಗಿವೆ.

2019ರಲ್ಲಿ ನಾಗಲ್ಯಾಂಡ್‌ನಲ್ಲಿ ೫೯ ಮತ್ತು 2020 ರಲ್ಲಿ ೩೧ ಪ್ರಕರಣಗಳು ದಾಖಲಾಗಿವೆ. ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯಲ್ಲಿ 2021ರಲ್ಲಿ 7000ಕ್ಕೂ ಹೆಚ್ಚು ಪ್ರಕರಣಗಳು ದಾಖಲಿಸುವ ಮೂಲಕ ದೇಶದ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾದ ಕುಖ್ಯಾತಿ ಹೊಂದಿದೆ. ಇಲ್ಲಿ 2021ರಲ್ಲಿ ೧೪೦ ಮಕ್ಕಳನ್ನು ಅತ್ಯಾಚಾರ ಮತ್ತು ಹತ್ಯೆ ಮಾಡಲಾಗಿದ್ದು, 1402 ಮಕ್ಕಳನ್ನು ಕೊಲ್ಲಲಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿ ಅಂಶಗಳು ಹೇಳುತ್ತವೆ. ಅದೇ ರೀತಿ ಮಕ್ಕಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ೩೫೯ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಮತ್ತು ಕೊಲೆಗಳು ಮತ್ತು ಮಕ್ಕಳ ಹತ್ಯೆಗಳು ನಡೆದಿವೆ.

*
ಕಳೆದ ಎಂಟು ವರ್ಷಗಳಲ್ಲಿ ಆರು ಪಟ್ಟು ಹೆಚ್ಚಳವಾದ ಕೃತ್ಯಗಳು

ಪೋಕ್ಸೋ ಕಾಯಿದೆ ಜಾರಿಯಾದ ಬಳಿಕ ದೂರು ಹೆಚ್ಚಾಗಿದ್ದು ಕಾರಣ