Thursday, 19th September 2024

ತಾಯ್ತನದ ಕನಸಿಗೆ ಖುಷಿಯ ಸ್ಪರ್ಶ ನೀಡುತ್ತಿರುವ ಡಾ.ರಶ್ಮಿ ಯೋಗೀಶ್

ಬಂಜೆತನ ಹೆಣ್ಣಿಗೆ ಶಾಪ ಎಂದೇ ಸಮಾಜದಲ್ಲಿ ಪರಿಗಣಿಸಲಾಗುತ್ತದೆ. ಇಂಥ ನೊಂದ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿರುವುದು ಐವಿಎಫ್ ಚಿಕಿತ್ಸೆ. ಇಲ್ಲಿಯವರೆಗೆ ಬಹಳಷ್ಟು ಮಕ್ಕಳಾಗದ ದಂಪತಿಗೆ ಸಂತಾನ ಭಾಗ್ಯ ಕಲ್ಪಿಸಿರುವವರು ಖುಷಿ ಫರ್ಟಿಲಿಟಿ ಮತ್ತು ಐವಿಎಫ್ ಸೆಂಟರ್‌ನ ಸಂಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಐವಿಎಫ್ ಸಮಾಲೋಚಕರಾಗಿರುವ ಡಾ ರಶ್ಮಿ ಯೋಗೀಶ್. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇವರು ಲಕ್ಷಾಂತರ ಮಹತ್ವಾಕಾಂಕ್ಷಿ ಯವತಿಯರಿಗೆ ಸ್ಪೂರ್ತಿಯ ಸೆಲೆ, ಅನುಕರಣೀಯ ವ್ಯಕ್ತಿ.

ಇತ್ತೀಚೆಗೆ ಒತ್ತಡಯುಕ್ತ ಜೀವನಶೈಲಿಯಿಂದಾಗಿ ಬಹಳಷ್ಟು ಜನರನ್ನು ಮಕ್ಕಳಾಗದ ಸಮಸ್ಯೆ ಕಾಡುತ್ತಿದೆ. ಏನೇನೋ ಚಿಕ್ಸಿತೆ, ಪೂಜೆ, ಜಪ, ತಪ
ಮಾಡಿದರೂ, -ಲ ಕಾಣುವುದು ಕಷ್ಟ ಸಾಧ್ಯವೆನ್ನಿಸಿದೆ. ಇಂಥ ಸಂದರ್ಭದಲ್ಲಿ ಎಷ್ಟೋ ಮಹಿಳೆಯರ ತಾಯ್ತನದ ತುಂಬುವ ಕನಸನ್ನು ನನಸಾಗಿಸು ತ್ತಿರುವುದು ಜೆಪಿ ನಗರ ಮತ್ತು ಬಸವನಗುಡಿಯಲ್ಲಿರುವ ಖುಷಿ ಫರ್ಟಿಲಿಟಿ ಮತ್ತು ಐವಿಎಫ್ ಸೆಂಟರ್. ಈ ಸಂಸ್ಥೆಯ ಯಶಸ್ಸಿನ ಹಿಂದಿರುವ ಮಹಿಳೆ ಡಾ. ರಶ್ಮಿ ಯೋಗೀಶ್. ಇದರ ಸಂಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಐವಿಎಫ್ ನ ಸಮಾಲೋಚಕಿಯಾಗಿರುವ ಇವರು, ಬೆಂಗೂರಿನಲ್ಲೇ ಪ್ರಮುಖ ಐವಿಎಫ್ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಗತ್ಯವಾಗಿರುವ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವವೇ ಡಾ. ರಶ್ಮಿಯವರನ್ನು ಈ ಎತ್ತರಕ್ಕೆ ಬೆಳೆಸಿದೆ.

ಡಾ.ರಶ್ಮಿ ಯೋಗೀಶ್ ಅವರು ಗುಲ್ಬರ್ಗದ ವಕೀಲರಾದ ಪ್ರಭಾಕರ ರಾವ್ ಹಾಗರಗಿ ಮತ್ತು ಬೆಳಗಾವಿಯ ಸ್ತ್ರೀರೋಗ ತಜ್ಞೆ ಡಾ ಅನ್ನಪೂರ್ಣ ಹಾಗರಗಿ ಅವರ ಆರನೇ ಮಗು. ಇವರ ತಾತ, ಬೆಳಗಾವಿಯ ಹೆಸರಾಂತ ಕೆಎಲಇ ಸೊಸೈಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀ ಬಿ ಬಿ ಮಮದಾಪುರ. ಇವರ
ಕುಟುಂಬದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಹಾಗೂ ಸಮಾಜ ಸೇವೆಯತ್ತ ವಿಶೇಷ ಆಸಕ್ತಿ. ಡಾ.ರಶ್ಮಿಯವರ ಒಡಹುಟ್ಟಿದವರಲ್ಲಿ ಮೂರು ಸಹೋದರಿಯರು ವೈದ್ಯಕೀಯ ಕ್ಷೇತ್ರದತ್ತ ಮುಖ ಮಾಡಿದ್ದರು. ಒಬ್ಬ ಸಹೋದರಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರರು ಮತ್ತು ಒಬ್ಬ ಸಹೋದರ ವಾಣಿಜ್ಯ ಪದವೀಧರರು. ಡಾ. ರಶ್ಮಿಯವರು ಗುಲ್ಬರ್ಗಾದ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಓಬಿಜಿ ವಿಭಾಗದಲ್ಲಿ
ಎಂಎಸ್ ಕೂಡ ಮಾಡಿದ್ದರು. ಗೃಹಸ್ತಜೀವನಕ್ಕೆ ಕಾಲಿಟ್ಟ ನಂತರ ಪತಿಯ ಜತೆಗೆ ಯುಕೆಗೆ ತೆರಳಿದರು. ಅಲ್ಲಿ ಅವರ ಪತಿ ಮೂಳೆಚಿಕಿತ್ಸೆಯಲ್ಲಿ ಎಂಸಿಎಚ್ ಮಾಡಿದರು. ಬಂಜೆತನದ ಕ್ಷೇತ್ರದಲ್ಲಿ ಆಸಕ್ತಿಯಿದ್ದ ರಶ್ಮಿಯವರು ಭಾರತಕ್ಕೆ ಹಿಂದಿರುಗಿದ ನಂತರ ಬಂಜೆತನದಲ್ಲಿ ಫೆಲೋಶಿಪ್ ಮಾಡಿದರು.

ಜತೆಗೆ ಪ್ರಸೂತಿ ಅಲ್ಟ್ರಾಸೌಂಡ್, ಗೈನೆಕ್ ಎಂಡೋ ಸ್ಕೋಪಿ ಮತ್ತು ರಿಪ್ರೊಡಕ್ಟಿವ್ ಎಂಡೋಕ್ರೈನಾಲಜಿಯಲ್ಲಿ ತರಬೇತಿ ಪಡೆದರು. ಏತನ್ಮಧ್ಯೆ, ಅಭಿನವ್ ಎಂಬ ಮಗನ ತಾಯಿಯಾದರು. ಅಭಿನವ್ ಇದೀಗ ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ ತಾಯಿಯ ಬಗ್ಗೆ ಆತನಿಗೂ ತುಂಬಾ ಹೆಮ್ಮೆ ಇದೆ. ಜತೆಗೆ ಪತಿಯ ಸಹಕಾರವನ್ನು ನೆನಪಿಸಿಕೊಳ್ಳುವ ರಶ್ಮಿ, ತನ್ನ ಗಂಡ ಹಾಗೂ ಕುಟುಂಬದ ಬೆಂಬಲದಿಂದಾಗಿ, ಮದುವೆಯ ನಂತರ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎನ್ನುತ್ತಾರೆ.

ನಂತರ ಎರಡನೇ ಮಗುವನ್ನು ಹೊಂದುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ್ದು, ೨೦೧೫ರಲ್ಲಿ ಅತ್ತೆಯ ಮರಣ. ಅತ್ತೆಯ ಬಹುಕಾಲದ ಕನಸು ಇದಾಗಿತ್ತು. ಗರ್ಭಾವಸ್ಥೆಯ ನಂತರ ಕೆಲವು ತಿಂಗಳುಗಳ ಕಾಲ ವೃತ್ತಿಯಿಂದ ವಿರಾಮ ತೆಗೆದುಕೊಂಡರು. ಅದಾಗಿ ಒಂಬತ್ತು ತಿಂಗಳಲ್ಲಿ ಖುಷಿ ಸೆಂಟರ್ ರೂಪುಗೊಂಡಿತು. ಜತೆಗೆ ಎರಡನೇ ಮಗು ಐಶ್ವರ್ಯ ಸಹ ಖುಷಿಯೊಂದಿಗೆ ಬೆಳೆದಳು. ಹಾಗಾಗಿ ಖುಷಿಯನ್ನು ಐಶ್ಚರ್ಯಾಳ ಅವಳಿ ಸಹೋದರಿ ಎಂದೇ
ಕರೆಯುತ್ತಾರೆ. ಈಗ ಆರು ವರ್ಷ ವಯಸ್ಸಿನ ಖುಷಿ ಒಂದು ಅದ್ಭುತವಾದ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಗರ್ಭಿಣಿಯಾಗಲು ಹಂಬಲಿಸುವ ಮಹಿಳೆಯರ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿಯನ್ನು ತುಂಬುತ್ತಾರೆ. ತನ್ನ ನೆಚ್ಚಿನ ಮಗಳು ಡಾ. ರಶ್ಮಿಯೊಂದಿಗೆ ಇರುವ ಡಾ. ಅನ್ನಪೂರ್ಣ, ನಿರಂತರ ಬೆಂಬಲ ಮತ್ತು ಸಕಾರಾತ್ಮಕ ಶಕ್ತಿಯ ಮೂಲವಾಗಿದ್ದಾರೆ. ಸ್ವತಃ ವೈದ್ಯಯಾಗಿರುವ ಆಕೆಗೆ ತನ್ನ ಮಗಳ ಈ ಸಾಧನೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಹೆಮ್ಮೆ ಇದೆ.

ಮಹಿಳಾ ಸಬಲೀಕರಣದ ಫಲ
ಒಬ್ಬ ಮಹಿಳಾ ಉದ್ಯಮಿಯ ಈ ಸಾಹಸ, ಸಮಾಜಕ್ಕೆ ಮತ್ತು ಬಂಜೆತನ ಹೊಂದಿರುವ ದಂಪತಿಗಳಿಗೆ ವರವಾಗಿ ಪರಿಣಮಿಸಿದೆ. ಒಬ್ಬ ಮಹಿಳೆ ಇಷ್ಟೆಲ್ಲಾ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಖುಷಿ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದಂತಹ ಮಾರ್ಗಗಳು ಸೃಷ್ಟಿಯಾಗುತ್ತಿರಲಿಲ್ಲ. ಮಹಿಳಾ ಸಬಲೀಕರಣ, ಪೋಷಕರ ಬೆಂಬಲ, ಗಂಡ ಮತ್ತು ಅವರ ಕುಟುಂಬವನ್ನು ಈ ವಿಚಾರಕ್ಕಾಗಿ ಡಾ. ರಶ್ಮಿ ಸದಾ ನೆನೆಯುತ್ತಾರೆ. ಪತಿಗೆ ಆದರ್ಶ ಪತ್ನಿಯಾಗಿ, ತನ್ನ ಮಕ್ಕಳಿಗೆ
ಪ್ರೀತಿಯ ತಾಯಿಯಾಗಿ, ಕುಟುಂಬಕ್ಕೆ ಬೆಂಬಲ ನೀಡುವ ಸದಸ್ಯಳಾಗಿ, ತನ್ನ ಸಹೋದ್ಯೋಗಿಗಳಿಗೆ ಶಕ್ತಿಯುತ ಗೆಳತಿಯಾಗಿ ಮತ್ತು ತನ್ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ನಿಜವಾದ ಮಾರ್ಗದರ್ಶಕಳಾಗಿ ನಡೆದುಕೊಳ್ಳುವ ಮೂಲಕ ಡಾ.ರಶ್ಮಿ ಯೋಗೀಶ್‌ರವರು ಸಮಾಜಕ್ಕೆ ಮಾದರಿ ಹೆಣ್ಣಾಗಿದ್ದಾರೆ.

ಕಿರಿ ವಯಸ್ಸಿನಲ್ಲಿ ಹಿರಿಯ ಹುದ್ದೆ

ಯುಕೆಯಲ್ಲಿ ಉನ್ನತ ಶಿಕ್ಷಣ ಪಡೆದ ನಂತರ ಶ್ರೀ ಕೃಷ್ಣ ಸೇವಾಶ್ರಮ, ಲೇಡಿ ಆಸ್ಪತ್ರೆ, ಶೇಖರ್ ಆಸ್ಪತ್ರೆ, ಮಾಲತಿ ಮಣಿಪಾಲ ಹಾಸ್ಪಿಟಲ್, ಅಪೊಲೊ ಕ್ರೇಡಲ್ ಮತ್ತು ಕ್ಲೌಡ್ನೈನ್‌ನಂತಹ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ತದನಂತರ ‘ಫೂಟೇಜ್ ಐ ಆಮ್ ಕ್ಲಿನಿಕಲ್ ಪ್ರಾಕ್ಟೀಸ್’ ನ್ನು ಸ್ಥಾಪಿಸಿದರು. ನೋವಾದ ಐವಿಎಫ್ ಫರ್ಟಿಲಿಟಿ ಯಲ್ಲಿ ಹತ್ತು ವರ್ಷಗಳ ಕಾಲ ಹಿರಿಯ ಸಲಹೆಗಾರರಾಗಿ ಕೆಲಸ ಮಾಡಿದರು. ತನ್ನ ೨೯ನೇ ವಯಸ್ಸಿನಲ್ಲಿ ಹಿರಿಯ
ಐವಿಎಫ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದು ನಿಜಕ್ಕೂ ಸಾಧನೆಯೇ ಸರಿ. ಡಾ. ರಶ್ಮಿಯವರು ಹದಿನೈದು ವರ್ಷಗಳ ಅವಧಿಯಲ್ಲಿ ತಮ್ಮ ಸೇವಾ ಮನೋಭಾವ, ಕಠಿಣ ಪರಿಶ್ರಮ, ಜ್ಞಾನ ಹಾಗೂ ಚಿಕಿತ್ಸೆಯ ಯಶಸ್ಸಿನ ಪ್ರಮಾಣದಿಂದಾಗಿ ಬಹಳ ಬೇಗನೆ ಪ್ರಸಿದ್ಧಿಯನ್ನು ಪಡೆದುಕೊಂಡರು.

ಡಾ ರಶ್ಮಿ ಅವರು ಇಲ್ಲಿಯವರೆಗೆ ೧೦೦೦೦ ಕ್ಕೂ ಹೆಚ್ಚು ಐವಿಎಫ್ ಚಿಕಿತ್ಸೆ ನೀಡಿದ್ದಾರೆ. ಜತೆಗೆ ಚಿಕಿತ್ಸೆಯ ಯಶಸ್ಸಿನ ಪ್ರಮಾಣವೂ ಹೆಚ್ಚಿದೆ. ಅವರ ಜೀವನದ ಕನಸಾಗಿರುವ ಐವಿಎಫ್ ಸೆಂಟರ್ ಖುಷಿ, ಅತ್ಯಾಧುನಿಕ ಉಪಕರಣಗಳೊಂದಿಗೆ ಸುಸಜ್ಜಿತವಾಗಿದೆ. ಜತೆಗೆ ಇವರ ಐವಿಎಫ್ ಲ್ಯಾಬ್ ಅಂತರ ರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾದ ವ್ಯವಸ್ಥೆಯನ್ನು ಹೊಂದಿದೆ. ಐವಿಎಫ್ ಬಿ ವೈಫಲ್ಯಗಳು, ಎಂಡೊಮೆಟ್ರಿಯೊಸಿಸ್‌ನ ತೊಂದರೆಗಳು ಮತ್ತು ತೀವ್ರ ಪುರುಷ ಅಂಶ ಬಂಜೆತನ ಹೊಂದಿರುವಂತವರಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪುನರುತ್ಪಾದಕ ಔಷಧಗಳು ಮತ್ತು ಸಂತಾನೋ ತ್ಪತ್ತಿ ರೋಗನಿರೋಧಕ ಶಾಸದಲ್ಲಿ ಅನುಭವವನ್ನು ಹೊಂದಿದ್ದಾರೆ. ಈ ಬಗ್ಗೆ ಸಾಕಷ್ಟು ಸಂಶೋಧನಾ ಕಾರ್ಯಗಳನ್ನು ಮಾಡಿದ್ದಾರೆ.

ಪಿಆರ್‌ಪಿ, ಸ್ಟೆಮ್ ಸೆಲ್ ಥೆರಪಿ, ಮತ್ತು ಅಂಡಾಶಯದ ಅಂಗಾಂಶವನ್ನು ಸಂಸ್ಕರಿಸಿ ಪುನಃ ಅಂಡಾಶಯಕ್ಕೆ ಚುಚ್ಚುವ ಓವರೀಸ್ ರಿಜ್ಯುವಿನೇಶನ್ ಎಂಬ ಹೊಸ ತಂತ್ರಜ್ಞಾನವನ್ನು ಚಿಕಿತ್ಸೆಗೆ ಬಳಸಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. ಎಸಿಎಸ್‌ಐ, ಎಂಎಸಿಎಸ್, ಪಿಜಿಸ್, ಓಓಸಿವೈಟಿಇ, ಫ್ರೀಜಿಂಗ್ ಮತ್ತು ಅಂಡಾಶಯದ ಅಂಗಾಂಶದ ಕ್ರೈಪ್ರಿಸರ್ವೇಶನ್, ಸೇರಿದಂತೆ ಫಲವತ್ತತೆಯ ಕ್ಷೇತ್ರದಲ್ಲಿರುವ ಬಹಳಷ್ಟು ಸುಧಾರಿತ ತಂತ್ರಗಳನ್ನು ಖುಷಿ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದಲ್ಲಿರುವ ಅವರ ಅತ್ಯಾಧುನಿಕ ಐವಿಎಫ್ ಲ್ಯಾಬ್‌ನಲ್ಲಿ ಮಾಡಲಾಗುತ್ತದೆ. ಇಲ್ಲಿ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯ.

ಡಾ.ರಶ್ಮಿಯವರ ಯಶಸ್ವಿ ಪಯಣ
ತನ್ನ ಕಠಿಣ ಪರಿಶ್ರಮ, ಕೌಶಲ್ಯ, ಜ್ಞಾನ, ಪ್ರಾಮಾಣಿಕತೆ ಮತ್ತು ವಿನಮ್ರತೆಯಿಂದ ಬೆಂಗಳೂರಿನ ವೈದ್ಯಕ್ಷೇತ್ರದಲ್ಲಿ ತನ್ನದೇ ಛಾಪನ್ನು ಡಾ.ರಶ್ಮಿಯವರು ಮೂಡಿಸಿದ್ದಾರೆ. ಸುಮಾರು ಹತ್ತು ಅನುಭವಿ ವೈದ್ಯರು, ಎಂಟು ಅನುಭವಿ ಭ್ರೂಣಶಾಸ್ತ್ರಜ್ಞ ಮತ್ತು ಒಟ್ಟು ೭೦ ಜನರ ತಂಡವನ್ನು ಹೊಂದಿರುವ ಖುಷಿ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರ ವನ್ನು ಸ್ಥಾಪಿಸಿರುವ ಡಾ ರಶ್ಮಿ ಯೋಗೀಶ್ ಅವರು ನಿಜಕ್ಕೂ ಇಂದಿನ ಮಹಿಳೆಯರಿಗೆ ಸ್ಪೂರ್ತಿ. ಶೀಘ್ರದಲ್ಲೇ
ಬನ್ನೇರುಘಟ್ಟ ರಸ್ತೆಯಲ್ಲಿ ಬೆಂಗಳೂರಿನ ಅತಿ ದೊಡ್ಡ ಐವಿಎಫ್ ಕೇಂದ್ರವನ್ನು ಆರಂಭಿಸಲಿದ್ದಾರೆ. ಇವರ ಸಾಧನೆ ಯನ್ನು ಗುರುತಿಸಿ, ಹಲವು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಹಾಗೆಯೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನ ಗಳಲ್ಲಿ ಹಲವಾರು ಪೇಪರ್‌ಗಳನ್ನು ಪ್ರಸ್ತುತಪಡಿಸಿದ್ದಾರೆ.

*

‘ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ನಿರ್ವಹಿಸಿದರೆ, ಅದೃಷ್ಟ-ದುರಾದೃಷ್ಟವನ್ನು ದೂಷಿಸುವ ಪ್ರಶ್ನೆಯೇ ಬರುವುದಿಲ್ಲ. ನಿನ್ನೆಯನ್ನು ಒಂದು ಅನುಭವವಾಗಿ, ನಾಳೆಯನ್ನು ಒಂದು ಅವಕಾಶವಾಗಿ ಭಾವಿಸುತ್ತಾ ಬದುಕು ಸಾಗಿಸಿದಾಗ, ನಮ್ಮ ಜೀವನೋತ್ಸಾಹ ಯಾವತ್ತೂ ಬತ್ತಿ ಹೋಗುವು ದಿಲ್ಲ. ನಾವು ಆಕಸ್ಮಿಕವಾಗಿ ಗೆಲುವಿನ ದಾರಿ ತಪ್ಪಿದರೂ, ಯಾವುದೇ ಕಾರಣಕ್ಕೂ ನಮ್ಮ ಪ್ರಾಮಾಣಿಕ ನಡೆ ತಪ್ಪಬಾರದು. ನಾವು ದಾರಿ ತಪ್ಪಿದರೆ ಮತ್ತೆ ಪ್ರಯತ್ನಿಸಿ ಗೆಲುವಿನ ದಾರಿಯಲ್ಲಿ ಹೋಗಬಹುದು. ಆದರೆ ನಾವು ಪ್ರಾಮಾಣಿಕ ನಡೆ ತಪ್ಪಿದರೆ ನಮ್ಮ ವ್ಯಕ್ತಿತ್ವಕ್ಕೇ ಧಕ್ಕೆಯುಂಟಾಗುತ್ತದೆ.’
– ಡಾ.ರಶ್ಮಿ ಯೋಗೀಶ್, ಖುಷಿ ಫರ್ಟಿಲಿಟಿ, ವಿಎಫ್ ಸೆಂಟರ್‌ನ ಸಂಸ್ಥಾಪಕ ನಿರ್ದೇಶಕಿ, ಮುಖ್ಯ ಐವಿಎಫ್ ಸಮಾಲೋಚಕಿ

Leave a Reply

Your email address will not be published. Required fields are marked *