Wednesday, 18th September 2024

ಕಲಾಸೇವಕ, ಕಲಾಸಾಮ್ರಾಟ್, ಕಲಾಭಿಮಾನಿ ಡಾ.ಎಸ್.ನಾರಾಯಣ್

ವಿಶ್ವವಾಣಿ ಗ್ಲೋಬಲ್ ಅಚೀವರ್ಸ್

ಕಲಾ ಸಾಮ್ರಾಟ್ ಡಾ.ಎಸ್.ನಾರಾಯಣ್ ಅವರು ಕೈ ಇಡದ ಕ್ಷೇತ್ರವೇ ಇಲ್ಲ ಎನ್ನಬಹುದು. ನಿರ್ದೇಶನ, ನಿರ್ಮಾಣ, ಸಾಹಿತ್ಯ, ಸಂಗೀತ ನಿರ್ದೇಶನ, ಚಲನಚಿತ್ರ ವಿತರಣೆ, ಅಷ್ಟೇ ಯಾಕೆ, ಡೈಲಾಗ್ ಬರೆಯು ವಲ್ಲೂ ಅವರು ನಿಪುಣರು. ಹೀಗೆ ಬಹುಮುಖ ಪ್ರತಿಭೆಯೆನ್ನಿಸಿರುವ ಈ ಕಲಾಸೇವಕನಿಗೆ ವಿಶ್ವವಾಣಿ, ಮಾರೀಶಸ್ ಗ್ಲೋಬಲ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿ ಸಿದೆ.

ವಿನಾಯಕರಾಮ್ ಕಲಗಾರು

ಡಾ.ಎಸ್ ನಾರಾಯಣ್ ನಿಜವಾದ ಕಲಾಸೇವಕ ಎನ್ನುವುದರಲ್ಲಿ ಎರಡು ಮಾತಿಲ್ಲ. .ಇವರು ನಿರ್ದೇಶ ಕರೂ ಹೌದು, ನಿರ್ಮಾಪಕರು ಮತ್ತೊಂದು ಕಡೆ. ಇನ್ನೊಂದು ಕಡೆ ಸಾಹಿತ್ಯಗಾರ, ಮತ್ತೊಂದು ಕಡೆ ಸಂಗೀತ ನಿರ್ದೇಶನದಲ್ಲೂ ಗೆದ್ದವರು. ಮಗದೊಂದು ಕಡೆ ಚಲನಚಿತ್ರ ವಿತರಕರೂ ಹೌದು. ಅಷ್ಟೇ ಯಾಕೆ, ಡೈಲಾಗ್ ಬರೆಯುವಲ್ಲಿ ಸಂಭಾಷಣಾ ಚತುರರೆಂದೇ ಕರೆಯಬಹುದು.

ಮತ್ತೊಂದೆಡೆ ಸೀರಿಯಲ್ ನಿರ್ಮಾಣ, ನಿರ್ದೇಶನ. ಅ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಇಂದಿಗೂ ನಟನೆ. ಅದರ ಬೆನ್ನ ಸಿನೆಮಾಗಳಲ್ಲಿ ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರಗಳ ನಿರ್ವಹಣೆ. ಆ ಕಡೆ ನವರಸ ನಟನಾ ಅಕಾಡೆಮಿಗೆ ಪ್ರಾಂಶುಪಾಲರೂ ಆಗಿದ್ದು, ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿಗೆ ಅಧ್ಯಕ್ಷರೂ ಆಗಿ ಕೆಲಸ ಮಾಡುತ್ತಿದ್ದಾರೆ! ಇವತ್ತಿಗೂ ಯುವ ನಿರ್ದೇಶಕರನ್ನೇ ಮೀರಿಸುವ ಓಡಾಟ, ಜತೆಗೆ ಒಂದು ಗುಣಮಟ್ಟದ ಪ್ರೌಢತೆ, ಚಿತ್ರರಂಗದ ಮೇಲೆ ವಿಶೇಷವಾದ ಬದ್ಧತೆ ಅವರಿಗಿದೆ. ಈ ಎಲ್ಲದರ ಮಧ್ಯೆ ಚಿತ್ರರಂಗದವರನ್ನೆ ಸೇರಿಸಿ ಒಂದು ಸಮಾರಂಭ ಆಗಬೇಕು, ದೊಡ್ಡ ಮಟ್ಟದ ವೇದಿಕೆ ಸೃಷ್ಟಿಯಾಗ ಬೇಕು ಎಂದರೆ ಅದರ ಪರಿಪೂರ್ಣ ಸಾರಥ್ಯವನ್ನು ನಾರಾಯಣ್ ಸಾರಾಸಗಟಾಗಿ ವಹಿಸಿಕೊಳ್ಳುತ್ತಾರೆ. ಕೊಟ್ಟ ಜವಾಬ್ದಾರಿಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿ ಕೃತಾರ್ಥರಾಗುತ್ತಾರೆ!

ಸಮರ್ಥ ನಿರ್ದೇಶಕ
ಇನ್ನು ಸಿನೆಮಾ ನಿರ್ದೇಶನ ವಿಭಾಗಕ್ಕೆ ಬಂದರೆ ನಾರಾಯಣ್ ಅವರು ಕನ್ನಡದಲ್ಲಿ ಚೈತ್ರದ ಪ್ರೇಮಾಂಜಲಿ ಎಂಬ ಪ್ರೇಮಕಾವ್ಯದ ನಿರ್ದೇಶನ ದಿಂದ ಹಿಡಿದು, ನಲವತ್ತೆಂಟು ಚಿತ್ರಗಳನ್ನು ನಿರ್ದೇಶನ ಮಾಡಿzರೆ. ತಮಿಳು ಹಾಗೂ ತೆಲುಗಿನಲ್ಲೂ ತಲಾ ಒಂದೊಂದು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಒಂದಾದ ಮೇಲೆ ಒಂದರಂತೇ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಕೀರ್ತಿ ಎಸ್ ನಾರಾಯಣ್ ಅವರಿಗೆ ಸಲ್ಲುತ್ತದೆ.

ನಿರ್ಮಾಣದಲ್ಲಿ ಸಾರ್ಥಕತೆ
ಈ ಮಧ್ಯೆ ನಾರಾಯಣ್ ಅವರು ನಿರ್ಮಾಪಕರಾಗಿಯೂ ಚಿತ್ರರಂಗದ ಕಲಾಸೇವೆ ಮುಂದುವರಿಸು ತ್ತಿರುವುದು ಇವತ್ತಿಗೂ ಶ್ಲಾಘನೀಯ. ಒಟ್ಟು ೨೧ ಸಿನೆಮಾಗಳ ನಿರ್ಮಾಪಕರಾಗಿರುವ ನಾರಾಯಣ್ ಅವರ ಚೆಲುವಿನ ಚಿತ್ತಾರ ಚಿತ್ರದ ಪ್ರಚಂಡ ಯಶಸ್ಸು ಇವತ್ತಿಗೂ ಪ್ರಶಂಸನೀಯ! ಈ ನಡುವೆ ಮೂವತ್ತೈದು ಚಿತ್ರಗಳಿಗೆ ಕಥೆ ಬರೆದಿದ್ದು, ೫೦ ಚಿತ್ರಗಳಿಗೆ ಚಿತ್ರಕತೆ ಮಾಡಿಕೊಟ್ಟಿದ್ದಾರೆ.

ಐವತ್ತೈದು ಸಿನೆಮಾಗಳಿಗೆ ಸಂಭಾಷಣೆ ಬರೆದಿದ್ದು, ಮುನ್ನೂರಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಹದಿಮೂರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿzರೆ. ಎರಡು ಭಕ್ತಿಗೀತೆಗಳ ಆಡಿಯೋ ಆಲ್ಬಂ ಕೂಡ ನಿರ್ಮಾಣ ಮಾಡಿರುತ್ತಾರೆ. ಹತ್ತಕ್ಕೂ ಹೆಚ್ಚು ಮೆಗಾ ಸೀರಿಯಲ್ ಪ್ರೊಡಕ್ಷನ್, ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ, ಈಗಲೂ ಕಿರುತೆರೆಯ ಜನಪ್ರಿಯ ಸೀರಿಯಲ್‌ನಲ್ಲಿ ನಟನೆ ಹೀಗೆ ನಾರಾಯಣ್ ಅವರು ಒಂದ ಒಂದು ಕೆಲಸದಲ್ಲಿ ತಮ್ಮನ್ನು ತಾವು ತನ್ಮಯತೆಯಿಂದ ತೊಡಗಿಸಿ ಕೊಂಡಿರುತ್ತಾರೆ!

ಸಹಾಯಕರಾಗಿ ಶ್ರಮವಹಿಸಿದ್ದರ ಫಲ
ನಾರಾಯಣ್ ಅವರು ಹಂತಹಂತವಾಗಿ ಸಹಾಯಕ ನಿರ್ದೇಶನರಾಗಿ ದುಡಿದು. ಕಲಿತು, ಆಮೇಲೆ ಸ್ಟಾರ್ ಆಗಿ ಬೆಳೆದು ಬಂದವರು. ಹಿರಿಯ ನಿರ್ದೇಶನ ಭಾರ್ಗವ ಅವರ ಸಿನೆಮಾಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಸೇರಿಕೊಂಡ ನಾರಾಯಣ್ ಅವರು, ಎಟಿ ರಘು, ರಾಜ್ ಕಿಶೋರ್ ಸೇರಿದಂತೇ ಸಾಕಷ್ಟು
ನಿರ್ದೇಶಕರ ಜತೆ ಕೆಲಸ ಕಲಿಯುವಿಕೆ ಮುಂದುವರೆಸುತ್ತಾರೆ. ೧೯೯೨ರಲ್ಲಿ ಸ್ವತಂತ್ರ ನಿರ್ದೇಶನರಾಗಿ ಚೈತ್ರದ ಪ್ರೇಮಾಂಜಲಿ ಸಿನೆಮಾ ಮಾಡುತ್ತಾರೆ. ಅದು ಚಂದನವನದ ಚಂದದ ಬ್ಲಾಕ್ ಬಸ್ಟರ್ ಆಗುತ್ತದೆ. ಹಂಸಲೇಖಾ ನಾರಾಯಣ್ ಕಾಂಬೋ ಎಡೆ ಧೂಳೆಬ್ಬಿಸಿ ಕಲೆಕ್ಷನ್ ಮಾಡುತ್ತದೆ!

ಮಹಾನ್ ಕಲಾವಿದರ ಜತೆ ಕೆಲಸ
ನಾರಾಯಣ್ ಅವರು ವರನಟ ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಡಾ. ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಕಿಚ್ಚ ಸುದೀಪ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶ್ರೀಮುರಳಿ, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ, ವಿನೋದ್ ರಾಜ, ವಿಜಯ ರಾಘವೇಂದ್ರ ಸೇರಿದಂತೇ ಹೆಚ್ಚಿನ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅದರಲ್ಲೂ ಅಣ್ಣಾವ್ರ ಶಬ್ಧವೇದಿ ಚಿತ್ರವನ್ನು ಎಂದಾದರೂ ಮರೆಯುವುದುಂಟೇ? ಸಾಹಸಸಿಂಹನ ಸಿಂಹಾದ್ರಿಯ ಸಿಂಹ ಚಿತ್ರವನ್ನು ಮಿಸ್ ಮಾಡಿಕೊಳ್ಳುವು ದುಂಟೇ? ಸ್ವತಃ ಅಣ್ಣಾವ್ರೂ ಸೇರಿದಂತೇ ಅವರ ಮಕ್ಕಳಿಗೂ ಆಕ್ಷನ್ ಕಟ್ ಹೇಳುವ ಭಾಗ್ಯ ಸಿಕ್ಕಿದ್ದರೆ ಅದು ಎಸ್ ನಾರಾಯಣ್ ಅವರಿಗೆ ಮಾತ್ರ. ಪುನೀತ್ ಅವರು ಸದಾ ಇಷ್ಟಪಡುತ್ತಿದ್ದ ನಿರ್ದೇಶಕರಲ್ಲಿ ಒಬ್ಬರು ನಾರಾಯಣ್. ಶಿವಣ್ಣ ರಾಘಣ್ಣನಿಗೆ ಇವರೆಂದರೆ ಬಲು ಪ್ರೀತಿ.

ಹಿಟ್ ಮೇಲೆ ಹಿಟ್!
ಚೈತ್ರದ ಪ್ರೇಮಾಂಜಲಿ ೨೫೦ ದಿನ, ನಂಜುಂಡ ೧೦೦ ದಿನ, ಅನುರಾಗದ ಅಲೆಗಳು ೭೫ ದಿನ, ಬೇವುಬೆಲ್ಲ ೫೦ ದಿನ, ಮೇಘಮಾಲೆ ೫೦ ದಿನ, ತವರಿನ ತೊಟ್ಟಿಲು ೧೭೫ ದಿನ, ತಾಯಿಕೊಟ್ಟ ಸಿರಿ ೧೦೦ದಿನ, ಮಹಾಭಾರತ ೫೦ ದಿನ, ಭಾಮ ಸತ್ಯ ಭಾಮ ೧೦೦ ದಿನ, ವೀರಪ್ಪ ನಾಯ್ಕ ೧೭೫ ದಿನ, ರವಿಮಾಮಾ ೧೦೦ ದಿನ, ಸೂರ್ಯವಂಶ ೨೫೦ದಿನ, ಶಬ್ದವೇದಿ ೨೫೦ ದಿನ, ಗಲಾಟೆ ಅಳಿಯಂದ್ರು ೧೦೦, ನನ್ನವಳು ನನ್ನವಳು ೧೦೦, ಅಂಜಲಿ ಗೀತಾಂಜಲಿ ೧೦೦, ಜಮೀನ್ದಾರ್ರು ೧೦೦, ಸಿಂಹಾದ್ರಿಯ ಸಿಂಹ ೧೭೫, ಚಂದ್ರಚಕೋರಿ ಯಶಸ್ವೀ ೫೦೦ ದಿನ, ಮೌರ್ಯ ೧೦೦, ಸೇವಂತಿ ಸೇವಂತಿ ೧೭೫, ಸಿರಿವಂತ ೧೦೦, ಚೆಲುವಿನ ಚಿತ್ತಾರ ೨೫೦, ಹೀಗೆ ದಿನಗಳೇ ಸಾವಿರ ಸಾವಿರ ಆಗುತ್ತವೆ.

ಪ್ರಶಸಿಗಳ ವಿಷಯಕ್ಕೂ ಯೆಸ್ ನಾರಾಯಟ್!
ದೆಹಲಿಯ ಇಂದಿರಾ ಪ್ರಿಯದರ್ಶಿನಿ, ಪ್ರೈಡ್ ಆ- ಇಂಡಿಯಾ, ವೀರಪ್ಪನಾಯ್ಕ, ಚಂದ್ರಚಕೋರಿ, ಶಬ್ಧವೇದಿ ಚಿತ್ರದ ನಿರ್ದೇಶನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಕಲಾ ಸಾಮ್ರಾಟ್ ಪ್ರಶಸ್ತಿ, ಡಾಕ್ಟರೇಟ್ ಪ್ರಶಸ್ತಿ ಸೇರಿದಂತೇ ಹತ್ತಾರು ಪ್ರಶಸ್ತಿಗಳು ನಾರಾಯಣ್ ಅವರ ಸಾಧನೆಗೆ ಸಂದಿದೆ. ಸಾರ್ಥಕತೆಯ ರೂಪ ಪಡೆದಿದೆ! ದುನಿಯಾ ವಿಜಯ್ ನಟನೆಯ ಧಕ್ಷ ಚಿತ್ರದ ವಿಶೇಷ ಹಾಗೂ ವಿಭಿನ್ನ ಚಿತ್ರೀಕರಣದ ವಿಷಯ ಗಿನ್ನೀಸ್ ರೆಕಾರ್ಡ್ ಬುಕ್ ನಲ್ಲಿ ಕೂಡ ದಾಖಲಾಗಿದೆ. ಅಣ್ಣಾವ್ರು ಬದುಕಿzಗಲೇ ಅವರ ಆತ್ಮಚರಿತ್ರೆ ಬರೆದ ವಿಶ್ವ ದಾಖಲೆ ಕೂಡ ನಾರಾಯಣ್ ಅವರ ಹೆಸರಿನಲ್ಲಿದೆ.

*

ಪತ್ರಿಕೋದ್ಯಮದ ಹೊಸ ಕ್ರಾಂತಿ ಎಂದೇ ಕರೆಯ ಬಹುದಾದ ವಿಶ್ವೇಶ್ವರ ಭಟ್ ಅವರ ತಂಡ ನನ್ನನ್ನು ಗುರುತಿಸಿ ಗುರುತರ ಪ್ರಶಸ್ತಿ ನೀಡುತ್ತಿರುವುದಕ್ಕೆ ಹೃದಯಪೂರ್ವಕ ಧನ್ಯವಾದ. ಈ ಪ್ರಶಸ್ತಿ ನನಗಷ್ಟೇ ಅಲ್ಲ, ನನ್ನನ್ನು ಪಾಲಿಸಿ, ಪೋಷಿಸಿ, ಬೆಳೆಸಿದ ಇಡೀ ಚಿತ್ರರಂಗಕ್ಕೆ ಸಲ್ಲಬೇಕು. ನಾನು ಕೆಲಸ ಮಾಡಿದ ಪ್ರತಿಯೊಂದು ಚಿತ್ರದ ತಂತ್ರಜ್ಞರು, ಕಲಾ ವಿದರು ಮತ್ತು ಅನ್ನದಾತರಾದ ನಿರ್ಮಾಪಕರಿಗೆ ಸಲ್ಲಬೇಕು!
-ಕಲಾ ಸಾಮ್ರಾಟ್ ಡಾ.ಎಸ್.ನಾರಾಯಣ್

ಹೊಸ ಮುಖಗಳ ಪರಿಚಯ 
ಈ ಎಲ್ಲದರ ನಡುವೆ ಹೆಸರಾಂತ ನಟರಾದ ದರ್ಶನ್, ಶ್ರೀಮುರುಳಿ, ಶ್ರೀನಗರ ಕಿಟ್ಟಿ, ಸುನೀಲ್ ರಾವ್, ಶೋಭರಾಜ, ಅಭಿಜಿತ, ಶ್ವೇತಾ ಚಂಗಪ್ಪ, ಅಮೂಲ್ಯ, ರೂಪಿಕಾ, ಶುಭಾ ಪುಂಜಾ ಸೇರಿದಂತೇ ಸಾಕಷ್ಟು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟ ಕ್ರೆಡಿಟ್ ನಾರಾಯಣ್ ಅವರಿಗೆ ಸೇರುತ್ತದೆ. ತಾಂತ್ರಿಕ ವರ್ಗದಲ್ಲೂ ಪಿಕೆಎಚ್ ದಾಸ್, ಆರ್‌ಗಿರಿ, ಮ್ಯಾಥ್ಯೂ ರಾಜನ, ರಾಜೇಂದ್ರ, ರೇಣುಕುಮಾರ್, ಜೆಎಸ್ ವಾಲಿ ಸೇರಿದಂತೇ ಸಾಕಷ್ಟು ಕ್ಯಾಮೆರಾಮನ್ ಗಳನ್ನು ಪರಿಚಯಿಸಿzರೆ. ಕೆ ಕಲ್ಯಾಣ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಮಾಡಿದ್ದೇ ಎಸ್ ನಾರಾಯಣ್! ಒಟ್ಟಾರೆ ನಾರಾಯಣ್ ಅವರಿಂದ ಬದುಕು ಕಟ್ಟಿಕೊಂಡ ಮಂದಿ ಅದೆಷ್ಟೋ!

*

ಕಲಾಸಾಮ್ರಾಟನಿಗೆ ಗ್ಲೊಬಲ್ ಪ್ರಶಸ್ತಿ ಸಿನೆಮಾ, ರಾಜಕೀಯ, ಕಿರುತೆರೆ ಸೇರಿದಂತೇ ವಿವಿಧ ವಿಭಿನ್ನ ವಿಶೇಷ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ನಾರಾಯಣ್ ಅವರಿಗೆ ಈ ಬಾರಿಯ ವಿಶ್ವವಾಣಿ ಗ್ಲೋಬಲ್ ಅಚೀವರ್ ಅವಾರ್ಡ್ ದೊರೆತಿದೆ. ಅವರ ಕಲಾಭಿವೃದ್ಧಿ ಮತ್ತು ಕಲಾಸೇವೆ ಯನ್ನು ಗುರುತಿಸಿ, ದೂರದ ಮಾರೀಶಸ್ ದ್ವೀಪದಲ್ಲಿ ನಡೆದ ವಿನೂತನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ವಿಶ್ವವಾಣಿ ಮತ್ತು ವಿಶ್ವೇಶ್ವರ ಭಟ್ ಅವರಂಥ ಬ್ರಾಂಡೆಡ್ ಪತ್ರಿಕೆಯ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಸಂಭ್ರಮದ ವಿಚಾರ. ಇದು ಇನ್ನೂ ಹೆಚ್ಚಿನ ಸಾಧನೆಗೆ ಸ್ಪೂರ್ತಿ ಎನ್ನುವುದು ನಾರಾಯಣ್ ಅವರ ಅಭಿಪ್ರಾಯವಾಗಿದೆ!

 

Leave a Reply

Your email address will not be published. Required fields are marked *