Friday, 20th September 2024

Health Tips: ಮದುವೆ ಬಳಿಕ ಮಹಿಳೆಯರ ಸೊಂಟದಲ್ಲಿ ಬೊಜ್ಜು ಬೆಳೆಯಲು ಕಾರಣ ಏನು ಗೊತ್ತೇ?

Health Tips

ಸಾಮಾನ್ಯವಾಗಿ ಮದುವೆಯಾದ ಬಳಿಕ ಹೆಚ್ಚಿನ ಮಹಿಳೆಯರ ( marriage) ಆರೋಗ್ಯದಲ್ಲಿ (Health Tips) ಅನೇಕ ಬದಲಾವಣೆಗಳು ಆಗುತ್ತವೆ. ಅದರಲ್ಲೂ ಮುಖ್ಯವಾಗಿ ಅನೇಕರು  ದೇಹದ ತೂಕ (weight gain) ಹೆಚ್ಚಿಸಿಕೊಳ್ಳುತ್ತಾರೆ. ಯಾರಾದರೂ ಈ ಬಗ್ಗೆ ಪ್ರಶ್ನಿಸಿದಾಗ ಇದಕ್ಕೆ ಕಾರಣ ಏನಿರಬಹುದು ಎನ್ನುವ ಗೊಂದಲ ಕಾಡಲಾರಂಭಿಸುತ್ತದೆ. ಒಮ್ಮೆ ಹೆಚ್ಚಿಸಿಕೊಂಡ ಈ ತೂಕವನ್ನು ಮತ್ತೆ ಇಳಿಸುವುದು ದೊಡ್ಡ ಸಾಹಸವೇ ಸರಿ.

ಮದುವೆಯ ಬಳಿಕ ಶೇ. 80ರಷ್ಟು ಮಹಿಳೆಯರ ಸೊಂಟ ಮತ್ತು ಕೆಳಗಿನ ಭಾಗದಲ್ಲಿ ಬೊಜ್ಜು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದಕ್ಕೆ ಮುಖ್ಯ ಕಾರಣ ತಮ್ಮ ದಿನಚರಿಯಲ್ಲಿ ಬದಲಾವಣೆ. ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದು, ಬದಲಾದ ಆಹಾರ ಪದ್ಧತಿಯು ಸೊಂಟದ ಸುತ್ತಮುತ್ತ ಬೊಜ್ಜು (obesity) ಹೆಚ್ಚಾಗಲು ಕಾರಣವಾಗುತ್ತದೆ.

ಸ್ಥೂಲಕಾಯತೆಯು ಬಹುತೇಕ ಮಹಿಳೆಯರನ್ನು ಕಾಡುವ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ವಿವಾಹಿತ ಮಹಿಳೆಯರು ಅವಿವಾಹಿತ ಮಹಿಳೆಯರಿಗಿಂತ ಎರಡು ಪಟ್ಟು ಸೊಂಟದ ಬೊಜ್ಜನ್ನು ಹೊಂದಿರುತ್ತಾರೆ.

Health Tips

ಇದನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಪ್ರಾಥಮಿಕವಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು. ಹೆಚ್ಚು ಜಡ ಚಟುವಟಿಕೆಗಳನ್ನು ಬಿಟ್ಟು ನಿಯಮಿತ ವ್ಯಾಯಾಮದ ಮೇಲೆ ಹೆಚ್ಚು ಗಮನಹರಿಸಬೇಕು.

ಮದುವೆಯ ಬಳಿಕ ಮಹಿಳೆಯರ ಸೊಂಟದ ಸುತ್ತ ಬೊಜ್ಜು ಬೆಳೆಯಲು ಅನೇಕ ಕಾರಣಗಳಿರುತ್ತವೆ. ಅವುಗಳಲ್ಲಿ ಕೆಲವು ಅಂಶಗಳು ಇಲ್ಲಿವೆ.

ಹಾರ್ಮೋನ್ ಬದಲಾವಣೆಗಳು

ಮದುವೆಯ ಬಳಿಕ ಸಾಮಾನ್ಯವಾಗಿ ಮಹಿಳೆಯರಲ್ಲಿ ಹಲವಾರು ಹಾರ್ಮೋನುಗಳ ಬದಲಾವಣೆ ಮಾಡುತ್ತದೆ. ಅನೇಕ ಮಹಿಳೆಯರಿಗೆ ಈ ಹಾರ್ಮೋನುಗಳ ಬದಲಾವಣೆಗಳು ಚಯಾಪಚಯ ಮತ್ತು ದೇಹದ ಕೊಬ್ಬಿನ ಮೇಲೆ ಪರಿಣಾಮ ಬೀರುತ್ತದೆ. ಇದು ತೂಕ ಹೆಚ್ಚಾಗಲು ಮತ್ತು ದೇಹದ ಆಕಾರದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

ದೈಹಿಕ ಚಟುವಟಿಕೆ

ಲೈಂಗಿಕ ಚಟುವಟಿಕೆ ಸೇರಿದಂತೆ ಕೆಲವು ದೈಹಿಕ ಚಟುವಟಿಕೆಗಳು ಸ್ನಾಯುಗಳ ಸಕ್ರಿಯಗೊಳಿಸುವಿಕೆ ಮತ್ತು ದೇಹದ ಆಕಾರದಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ಇದು ಮದುವೆಯ ಅನಂತರ ಆಗಾಗ್ಗೆ ಜಡ ಜೀವನಶೈಲಿಯೊಂದಿಗೆ ಸೇರಿ ಸೊಂಟದ ಸುತ್ತ ಬೊಜ್ಜನ್ನು ಹೆಚ್ಚಿಸುತ್ತದೆ.

ಗರ್ಭಧಾರಣೆ ಮತ್ತು ಹೆರಿಗೆ

ಪ್ರಮುಖ ಅಂಶವೆಂದರೆ ಗರ್ಭಧಾರಣೆ. ಹೆರಿಗೆಗೆ ಸಂಬಂಧಿಸಿದ ದೈಹಿಕ ಬದಲಾವಣೆಗಳು ಸ್ವಾಭಾವಿಕವಾಗಿ ಸೊಂಟ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿಸ್ತರಣೆಗೆ ಕಾರಣವಾಗುತ್ತವೆ. ಗರ್ಭಾವಸ್ಥೆಯಲ್ಲಿ ಮತ್ತು ಅನಂತರ ದೇಹವು ಹಲವಾರು ಹೊಂದಾಣಿಕೆಗಳಿಗೆ ಒಳಗಾಗುತ್ತದೆ. ಇದು ಸೊಂಟದ ಭಾಗ ವಿಶಾಲವಾಗಲು ಕಾರಣವಾಗುತ್ತದೆ.