Thursday, 12th September 2024

ಕರ್ನಾಟಕದ ಅಳಿಯನಿಗೆ ವಿಶ್ವಮಟ್ಟದ ಗೌರವ

ಪ್ರಥಮ್ ಕರ್ನಾಟಕದ ಅಳಿಯ

ವಿಶ್ವವಾಣಿ ಗ್ಲೋಬಲ್ ಅ‌ಚೀವರ್ಸ್

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶನದ ಬ್ಲ್ಯಾಕ್ ಮ್ಯಾಜಿಕ್ ಆಧಾರಿತ ಕರ್ನಾಟಕದ ಅಳಿಯ ಚಿತ್ರ ರಿಲೀಸ್‌ಗೂ ಮುನ್ನವೇ  ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ವಿಶ್ವೇಶ್ವರ ಭಟ್ ಸಾರಥ್ಯದ ವಿಶ್ವವಾಣಿ ಗ್ಲೋಬಲ್ ಅಚೀವರ‍್ಸ್ ಅವಾರ್ಡ್ ಪಡೆಯುವ ಮೂಲಕ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವಂತೇ
ಮಾಡಿದೆ.

ಪೂರ್ಣ ವಿ-ರಾಮ

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಈಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಖುದ್ದು ನಟನೆಯ ಜತೆಗೆ ನಿರ್ದೇಶನವನ್ನೂ ಮಾಡಿರುವ ಇವರ ಕರ್ನಾಟಕದ ಅಳಿಯ ಚಿತ್ರದ ಕತೆಯನ್ನು ಕೊನೆಯದಾಗಿ ಕೇಳಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರದಲ್ಲಿ ಒಂದು ಪಾತ್ರ ಮಾಡಬೇಕು ಎಂದು ಪ್ರಥಮ್ ಕಳಕಳಿಯಿಂದ ಕೇಳಿಕೊಂಡಾಗ ರಾಘಣ್ಣ ಅಪ್ಪು ಅವರಿಗೆ ಕತೆ ಹೇಳಿಸಿದ್ದರು. ಪ್ರಥಮ್ ಕಡೆಯಿಂದ ಇಡೀ ಕರ್ನಾಟಕದ ಅಳಿಯ ಚಿತ್ರದ ಕಥಾಸಾರಾಂಶದ ಜತೆಗೆ ಇಂಟರೆಸ್ಟಿಂಗ್  ವಿಷಯಗಳನ್ನ ಗಹನವಾಗಿ ಚರ್ಚಿಸಿದ್ದರು. ಕತೆಯಲ್ಲಿ ಬರುವ ತಿರುವುಗಳ ಬಗ್ಗೆ ತಿರುತಿರುಗಿ ಕೇಳಿ ಸಂಭ್ರಮಿಸಿದ್ದರು. ಈ ಚಿತ್ರ ತುಂಬಾ ಚೆನ್ನಾಗಿ ಆಗುತ್ತದೆ. ರಾಘಣ್ಣನ ಪಾತ್ರಕ್ಕೆ ಒಳ್ಳೇ ಹೆಸರು ಬರುತ್ತದೆ ಎಂದು ಬೆನ್ನುತಟ್ಟಿದ್ದರು ಕರುನಾಡ ಯುವರತ್ನ.

ಕರ್ನಾಟಕದ ಅಳಿಯ ಚಿತ್ರ ಅತೀ ಹೆಚ್ಚು ಪ್ರೀತಿ ಅಂದರೆ ಅದು ರಾಘವೇಂದ್ರ ರಾಜ್ ಕುಮಾರ್ ಅವರಿಗೆ. ಈ ಚಿತ್ರದ ಪಾತ್ರವನ್ನು ಹೃದಯದಿಂದ ಇಷ್ಟಪಟ್ಟು ಪ್ರಥಮ್ ಕನಸಿಗೆ ನೀರೆರೆದಿದ್ದು ಹೃದಯವಂತ ರಾಘಣ್ಣ. ಚಿತ್ರದಲ್ಲಿ ವಿಶೇಷ ಹಾಗೂ ಗಮನ ಸೆಳೆಯುವ ಪಾತ್ರ ಮಾಡಿರುವ ರಾಘಣ್ಣ, ಈ ಚಿತ್ರವನ್ನು ಜನಕ್ಕೆ ತಲುಪಿಸಲು ಯಾವುದೇ ತರದ ಪಬ್ಲಿಸಿಟಿಗೆ ಬರುವುದಾಗಿಯೂ, ಈ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ಜನರಿಗೆ ತಲುಪಿಸುವ ಕೆಲಸಕ್ಕೆ ಕೈ ಜೋಡಿಸುವುದಾಗಿ ಪ್ರಥಮ್ ಅವರಿಗೆ ಮಾತುಕೊಟ್ಟಿದ್ದಾರಂತೆ. ತಾನು ಅತ್ಯಂತ ಕಾಳಜಿ ವಹಿಸಿ ಈ ಪಾತ್ರ ಮಾಡಿದ್ದೇನೆ ಎಂದು ಹೆಚ್ಚಿನ ಕಡೆ ಹೇಳಿಕೊಂಡಿದ್ದಾರಂತೆ ರಾಘವೇಂದ್ರ ರಾಜ್‌ಕುಮಾರ್.

ಸ್ವರ್ಶ ರೇಖಾ ವಿಶೇಷ ಪಾತ್ರದಲ್ಲಿ!

ಕರ್ನಾಟಕದ ಅಳಿಯ ಚಿತ್ರದ ಇನ್ನೊಂದು ಪ್ರಮುಖ ಆಕರ್ಷಣೆ, ಸುದೀಪ್ ಜತೆ ಸ್ಪರ್ಶ ಚಿತ್ರದಲ್ಲಿ ನಟಿಸಿ ಕರುನಾಡಿಗರ ಮನಗೆದ್ದ ಸ್ಪರ್ಶ ರೇಖಾ. ಬಿಗ್ ಬಾಸ್ ಕಾರ‍್ಯಕ್ರಮದಲ್ಲಿ ಮತ್ತೊಮ್ಮೆ ಕನ್ನಡಿಗರನ್ನು ಅಚ್ಚರಿಗೊಳಿಸಿದ ರೇಖಾ ಕರ್ನಾಟಕದ ಅಳಿಯ ಚಿತ್ರದಲ್ಲಿ ಮಾಟಗಾರ್ತಿಯ ರೂಪದಲ್ಲಿ ಜಗಮಗಿಸಿದ್ದಾರೆ. ಅಚ್ಚರಿ ಮೂಡಿಸುವ ರೀತಿಯಲ್ಲಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯಾದ ನಂತರ ರೇಖಾ ಅವರು ಖಂಡಿತ ನಟನೆಯಲ್ಲಿ ಬ್ಯುಸಿ ಆಗುತ್ತಾರೆ ಎನ್ನುತ್ತಾರೆ ನಿರ್ದೇಶನ ಪ್ರಥಮ್. ಮೈ ಜುಂ ಎನಿಸುವ ರೀತಿಯಲ್ಲಿ ನಟನೆ ಮಾಡಿರುವ ಸ್ಪರ್ಶ ರೇಖಾ ಅವರು ಈ ಚಿತ್ರ ಯಾವಾಗ ತೆರೆಗೆ ಬರುತ್ತದೆ ಎನ್ನುವ ಕಾತುರದಲ್ಲಿದ್ದಾರಂತೆ!

ಚಂದ್ರಚಕೋರಿ ಈಸ್ ಬ್ಯಾಕ್
ಕರ್ನಾಟಕದ ಅಳಿಯ ಚಿತ್ರದ ಇನ್ನೊಂದು ಮಹೋನ್ನತ ಹೈಲೈಟ್ ಎಂದರೆ, ಈ ಚಿತ್ರದ ಮೂಲಕ ಹತ್ತೊಂಬತ್ತು ವರ್ಷಗಳ ನಂತರ ಚಂದ್ರಚಕೋರಿ ಖ್ಯಾತಿಯ ಪ್ರಿಯಾ ಅವರು ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ವಿಶೇಷ ವೈಬ್ರೇಷನ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಅವರು ಪ್ರಥಮ್ ಅವರ ಪ್ರೀತಿಪೂರ್ವಕ ಕರೆಗೆ ಓಗೊಟ್ಟು ಸಿನೆಮಾ ಫೀಲ್ಡಿಗೆ ವಾಪಸಾಗಿದ್ದಾರೆ. ಗಮನ ಸೆಳೆಯುವ ಪಾತ್ರದಲ್ಲಿ ಮಿಂಚಿದ್ದಾರೆ. ಇಷ್ಟು ವರ್ಷದ ನಂತರ ಮತ್ತೆ ಮರಳಿ ಬರಲು ಕಾರಣ ಪ್ರಥಮ್ ಅವರು ಹೇಳಿದ ಥ್ರಿಲ್ಲಿಂಗ್ ಕಥೆ ಮತ್ತು ಅವರು ಸಿನೆಮಾದ ಮೇಲೆ ಇಟ್ಟಿರುವ ಪ್ಯಾಷನ್ ಎನ್ನುವುದು ಪ್ರಿಯಾ ಅವರ ಮನದಾಳದ ಮಾತಾಗಿದೆ. ಚಂದ್ರಚಕೋರಿಯ ಚೆಲುವೆ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದು ನಿಜಕ್ಕೂ ಪ್ರೇಕ್ಷಕರಿಗೆ ಅಚ್ಚರಿ ನೀಡಲಿದ್ದು, ಅವರ ಪಾತ್ರಕ್ಕೆ ಅದರದೇ ಆದ ಘನತೆ ಇದೆ ಎನ್ನುತ್ತಾರೆ ಕರ್ನಾಟಕದ ಅಳಿಯ ಚಿತ್ರದ ಕ್ಯಾಪ್ಟನ್-ಬಿಗ್ ಬಾಸ್ ಪ್ರಥಮ್!

ಸುದೀಪ್ ಫೂಂಕ್ ನಂತರ ಮತ್ತೊಂದು ಮೋಡಿ
ಬ್ಲ್ಯಾಕ್ ಮ್ಯಾಜಿಕ್ ಚಿತ್ರಗಳು ಕನ್ನಡದಲ್ಲಿ ಕಡಿಮೆ. ತುಳಸಿದಳ ರೀತಿಯ ಚಿತ್ರಗಳು ಒಂದು ಕಾಲದಲ್ಲಿ ಅಚ್ಚರಿ ಮೂಡಿಸಿದ್ದು ಈಗ ಇತಿಹಾಸ. ಅದೇ ಮಾದರಿಯಲ್ಲಿ ಕಿಚ್ಚ ಸುದೀಪ್ ನಟನೆಯ ಫೂಂಕ್ ಚಿತ್ರ ಬಂದಿತ್ತು. ರಾಮ್ ಗೋಪಾಲ್ ವರ್ಮಾ ವಿರಚಿತ ಆ ಚಿತ್ರ ಇಂಡಿಯಾ ತುಂಬೆಲ್ಲಾ ಸದ್ದು ಮಾಡಿತ್ತು. ಅದೇ ಮಾದರಿಯ ಚಿತ್ರ ಪ್ರಥಮ್ ಸಾರಥ್ಯದ ಕರ್ನಾಟಕದ ಅಳಿಯ ಚಿತ್ರ. ಇಡೀ ಸಿನೆಮಾ ಮಾಟ-ಮಂತ್ರ-ತಂತ್ರದ ಸುತ್ತ ಗಿರುಕಿ ಹೊಡೆಯುತ್ತದೆ. ಎಸ್ಟೇಟ್ ಒಂದರಲ್ಲಿ ನಡೆಯುವ ಈ ಚಿತ್ರದ ಕಥೆ ಎಷ್ಟೆಷ್ಟೋ ತಿರುವುಗಳ ಜೊತೆ ಸಾಗುವ ಈ ಚಿತ್ರ ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸು ವುದು ನಿಶ್ಚಿತ ಎನ್ನುವುದು ನಿರ್ದೇಶಕರ ಮಾತೂ ಹೌದು, ಒಂಥರಾ ಚಾಲೆಂಜೂ ಹೌದು!

ಅಶ್ವಿನಿ ಪುನೀತ್ ಬೆನ್ನೆಲುಬು!
ಕರ್ನಾಟಕದ ಅಳಿಯ ಚಿತ್ರದ ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಇದ್ದಾರೆ. ಚಿತ್ರದ ಆರಂಭದಿಂದ ಹಿಡಿದು ಈ ತನಕವೂ ಅವರು ಪ್ರಥಮ್ ಅವರ ಕೆಲಸಕ್ಕೆ ಶಹಬ್ಬಾಶ್‌ಗಿರಿ ಕೊಡುತ್ತಲೇ ಬಂದಿದ್ದಾರೆ. ಪ್ರಥಮ್ ಅವರ ತಂಡದ ಜತೆ ಬೆನ್ನೆಲುಬಾಗಿ ನಿಂತಿ ದ್ದಾರೆ. ಕನ್ನಡ ಚಿತ್ರರಂಗದ ಅದೃಷ್ಟ ದೇವತೆ ನಮ್ಮ ಜತೆ ಇರುವುದು ನಮ್ಮೆಲ್ಲರ ಸೌಭಾಗ್ಯ ಎನ್ನುವ ಪ್ರಥಮ್, ಇಡೀ ಸಿನೆಮಾಗೆ ಅಶ್ವಿನಿ ಅವರು ನಿರಪೇಕ್ಷಿತವಾಗಿ ಸಪೋರ್ಟ್ ಮಾಡಿದ್ದಾರೆ. ಅವರ ಪ್ರೀತಿಗೆ, ಅವರ ಕಾಳಜಿಗೆ ಏನೆಂದು ಹೆಸರಿಡಲಿ ಎನ್ನುವಾಗ ಪ್ರಥಮ್ ನಿಜಕ್ಕೂ ಭಾವುಕರಾಗುತ್ತಾರೆ. ಅಶ್ವಿನಿ ಅವರು ನಮ್ಮ ಮೇಲೆ ಇಷ್ಟು ಕಾಳಜಿ ತೋರಿಸುತ್ತಿರುವುದಕ್ಕೆ ಇನ್ನೊಂದು ಕಾರಣವಿದೆ. ಅದು ನಾನು ರಾಜ್ ಕುಟುಂಬದ ಮೇಲೆ ಇಟ್ಟಿರುವ ವಿಶೇಷ ಗೌರವ ಮತ್ತು ಭಕ್ತಿ ಎನ್ನುವುದು ಪ್ರಥಮ್ ಅವರ ಮನದ ಮಾತು.

ವಿಜಯೇಂದ್ರ ಒಡೆಯರ್ ನಿರ್ಮಾಣ!

ಕರ್ನಾಟಕದ ಅಳಿಯ ಚಿತ್ರಕ್ಕೆ ವಿಜಯೇಂದ್ರ ಒಡೆಯರ್ ಅವರ ಹೆಮ್ಮೆಯ ನಿರ್ಮಾಣವಿದ್ದು, ಚಿತ್ರಕ್ಕೆ ಹೂಡಿಕೆ ಮಾಡಿರುವ ಭಂಡವಾಳದ ಬಗ್ಗೆ ಹೆಚ್ಚಿನ ಕಡೆ ಚರ್ಚೆಯಾಗುತ್ತಿದೆ. ಗ್ರಾಫಿಕಲೀ ಇದೊಂದು ದಿ ಬೆಸ್ಟ್ ಚಿತ್ರವಾಗಲಿದೆ. ತಾಂತ್ರಿಕವಾಗಿ ಹೆಚ್ಚನ ಗುಣಮಟ್ಟದ ಕೆಲಸಗಳು ನಡೆದಿದೆ. ಅದಕ್ಕೆ ದೊಡ್ಡ ಮಟ್ಟದ ವೆಚ್ಛವೇ ಆಗಿದೆ. ಇವತ್ತಿನ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಲು ಬೇಕಾದ ಎಲ್ಲಾ ರೀತಿಯ ವಿಶುವಲ್ ಟ್ರೀಟ್ ಅನ್ನು ಚಿತ್ರಕ್ಕೆ ನೀಡಿದ್ದಾರೆ ನಿರ್ದೇಶಕ ಭಯಂಕರ ಪ್ರಥಮ್. ಚಿತ್ರದ ಗ್ರಾಫಿಕ್ಸ್ ಕೆಲಸಕ್ಕೇ ಐವತ್ತಕ್ಕೂ ಹೆಚ್ಚು ಲಕ್ಷ ಖರ್ಚಾಗಿದ್ದು, ಸಿನೆಮಾ ನೋಡಿದಾಗ ಪ್ರೇಕ್ಷಕರಿಗೆ ಒಂದು ಗುಣಮಟ್ಟದ ಅನುಭವ ಆಗಲಿದೆಯಂತೆ. ಅದೇ ಕಾರಣಕ್ಕೆ ಕರ್ನಾಟಕದ ಅಳಿಯ ಚಿತ್ರ ವಿಶ್ವವಾಣಿಯ ಮತ್ತು ವಿಶ್ವಮಟ್ಟದ ಗಮನ ಸೆಳೆದಿದೆ ಎನ್ನುವುದು ಪ್ರಥಮ್ ಅವರ ಮತ್ತೊಂದು ಮಾತು ಕರ್ನಾಟಕದ ಅಳಿಯದಲ್ಲಿ ತಾರೆಯರ ದಂಡು ಹಿರಿಯ ಹಾಗೂ ಮನೋಜ್ಞ ನಟ ರಾಮಕೃಷ್ಣ ಅವರು ಈ ಚಿತ್ರದಲ್ಲಿ ಗಮನಾರ್ಹ ಪಾತ್ರ ಮಾಡಿದ್ದಾರೆ.

ಸದ್ಯ ಉತ್ತರ ಕನ್ನಡದ ತವರೂರಲ್ಲಿ ನೆಲೆಸಿರುವ ಅವರು ಪ್ರಥಮ್ ಆಹ್ವಾನಕ್ಕೆ ಮತ್ತು ಅವರ ಸಿನೆಮಾ ಮೇಲಿನ ಕಾಳಜಿಗೆ ಮನಸೋತು ಈ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಚಿತ್ರದ ಪಾತ್ರವನ್ನು ಮನಸಾರೇ ಅಪ್ಪಿಕೊಂಡಿದ್ದಾರೆ. ಅವರ ಜತೆಗೆ ಕರಿಸುಬ್ಬು, ತರಂಗ ವಿಶ್ವ, ಹೆಸರಾಂತ ನಿರ್ದೇಶಕ ಓಂಪ್ರಕಾಶ್ ರಾವ್ ಸೇರಿದಂತೇ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಮಿಂಚಿದ್ದಾರೆ. ಹೊನ್ನವಳ್ಳಿ ಕೃಷ್ಣ ಅವರು ಸಹ ವಿಭಿನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಯುವಕರ ಕಣ್ಮಣಿ ಪ್ರಥಮ್
ಪ್ರಥಮ್ ಸದ್ಯಕ್ಕಂತೂ ಸಾಕಷ್ಟು ಬಿಜಿ ಇದ್ದಾರೆ. ಒಂದಷ್ಟು ಕಿರುತೆರೆ ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ಹೋಗುತ್ತಾರೆ. ರಾಜ್ಯಾದ್ಯಂತ ನಡೆಯುವ ಕಾಲೇಜ್ ಫಸ್ಟ್ ಗಳಿಗೆ ಪ್ರಥಮ್ ಅವರೇ ಬೇಕು ಎನ್ನುವಷ್ಟು ಡಿಮ್ಯಾಂಡ್ ಅವರಿಗಿದೆ. ನೋ ಕೊಕೈನ್ ಎನ್ನುವ ಹೊಸ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಕೌರವ ವೆಂಕಟೇಶ್ ಅವರು ಈ ಚಿತ್ರದ ಸಾರಥ್ಯ ವಹಿಸಿದ್ದಾರೆ. ಸಾವಿರಾರು ಸಿನೆಮಾಗಳಿಗೆ ಫೈಟ್ ಮಾಸ್ಟರ್ ಆಗಿರುವ ವೆಂಕಟೇಶ್ ಅವರಿಗೆ ಪ್ರಥಮ್ ಅವರಿಗೆ ಪ್ರಥಮ್ ಅವರಿಗೆ ಇರುವ ಕ್ರೇಜ್ ಮೇಲೆ ಮಹಾ ನಂಬಿಕೆ. ಜತೆಗೆ ಟಿವಿ-ಸ್ಯಾಟಲೈಟ್ ಬಿಜಿನೆಸ್ ವಿಷಯದಲ್ಲೂ ಪ್ರಥಮ್ ಈ ಹಿಂದಿನ ಚಿತ್ರಗಳು ಎಲ್ಲಿಯೂ ಸೋತಿಲ್ಲ. ಲಕ್ಷಗಟ್ಟಲೇ ವ್ಯಾಪಾರವಾಗಿದೆ. ಈ ಎಲ್ಲದರ ಮಧ್ಯೆ ಪ್ರಥಮ್ ಅವರ ಜತೆ ಕೆಲಸ ಮಾಡಲು ಕೌರವ ವೆಂಕಟೇಶ್ ಅವರಿಗೆ ಅತೀವ ಒಲವಿದೆ.
ಮುಂದೊಂದು ದಿನ ಈ ಚಿತ್ರಕ್ಕೆ ದೊಡ್ಡ ಗೆಲುವಿದೆ ಎನ್ನುವುದು ವೆಂಕಟೇಶ್ ಅವರಿಗೂ ಗೊತ್ತಿದೆ!

ಕರ್ನಾಟಕದ ಅಳಿಯನಿಗೆ ವಿವಿ ಗ್ಲೋಬಲ್ ಪ್ರಶಸ್ತಿ!
ಇಷ್ಟೆಲ್ಲಾ ವಿಶೇಷತೆಗಳುಳ್ಳ ಕರ್ನಾಟಕದ ಅಳಿಯ ಚಿತ್ರ ಬಿಡುಗಡೆಗೂ ಮುನ್ನ ವಿಶ್ವವಾಣಿಯ ವಿಶೇಷ ಪ್ರಶಸ್ತಿ ಗಳಿಸುವ ಮೂಲಕ ದೊಡ್ಡ ಸುದ್ದಿಯಾ ಗಿದೆ. ಇತ್ತೀಚೆಗಷ್ಟೇ ಜ್ವಲಂತ ದ್ವೀಪ ಮಾರೀಷಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಥಮ್ ಅವರಿಗೆ ಈ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಶ್ವೇಶ್ವರ ಭಟ್ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಇಡೀ ತಂಡದ ಜೊತೆ ಜರ್ನಿ ಮಾಡುವುದೇ ಒಂದು ಗುರುತರ ಸಂಭ್ರಮ ಎನ್ನುತ್ತಾರೆ ಒಳ್ಳೇ ಹುಡುಗ ಪ್ರಥಮ್. ನಮ್ಮಂಥ ಯುವಕರನ್ನು ಬೆಳೆಸುವ ಭಟ್ ಸರ್ ಅವರ ಗುಣಕ್ಕೆ ಹ್ಯಾಟ್ಸಾ- ಹೇಳುತ್ತಾರೆ ಅದೇ ಬಿಗ್‌ಬಾಸ್ ಪ್ರಥಮ್!

Leave a Reply

Your email address will not be published. Required fields are marked *