Monday, 9th December 2024

ಅಮಾಯಕರ ನರಮೇಧ

ಸಂತೋಷಕುಮಾರ ಮೆಹೆಂದಳೆ

ಮಾರಣ ಹೋಮ- ಅನ್‌ಸ್ಟೋರಿ ಆಫ್‌ ಕಾಶ್ಮೀರ

ಆ ಹೊತ್ತಿಗಾಲೇ ಕಣಿವೆಯಿಂದ ಏನಿಲ್ಲವೆಂದರೂ ಒಂದು ಸಾವಿರ ಪಂಡಿತರು ಸತ್ತು ಹೋಗಿದ್ದರು. ಕನಿಷ್ಟ ನೂರರ ಲೆಕ್ಕದಲ್ಲಿ ಹೆಂಗಸರ ಅಪಹರಣ, ಬರ್ಬರತೆ, ಹತ್ಯೆ ಮತ್ತು ಅತ್ಯಾಚಾರ ಅತ್ಯಂತ ಪೈಶಾಚಿಕ ರೀತಿಯಲ್ಲಿ ನಡೆದು ಹೋಗಿತ್ತು.

ಆದರೂ ನನಗೆ ಏನಾಗಲ್ಲ ನಾನು ಅವರ ಮನಸ್ಸು ಬದಲಾವಣೆಗೆ ಕವನ ಬರೆದಿದ್ದೇನಲ್ಲ ಎಂಬ ಹುಂಬತನದಲ್ಲಿ ಉಳಿದು ಬಿಟ್ಟಿದ್ದ ೭೦ರ ವಯೋವೃದ್ಧ ಕೌಲ್. ಆದರೆ ಈಗ ಉಗ್ರರು ಒಂದು ಕಡೆಯಿಂದ ಕೂಂಬಿಗ್ ಆಪರೇಶನ್ ಜಾರಿ ಇಟ್ಟಿದ್ದರು. ಅಲ್ಲಲ್ಲಿ ಉಳಿದ ಸಿಂಗಲ್ ನಂಬರ್ ಕ್ಯಾಂಡಿಡೆಟುಗಳನ್ನು ಎತ್ತುವ ಆದ್ಯತೆಯ ಟಾರ್ಗೆಟ್ ಕಿಲ್ಲಿಂಗ್ ಶುರುವಾಗಿತ್ತಲ್ಲ ಅಷ್ಟೆ,  ಅದಕ್ಕೂ ಈ ಕವಿಯೂ ಹೊರತಾಗಿರಲಿಲ್ಲ.

ಸುತ್ತಮುತ್ತಲಿನ ಜಾಗ ಮತ್ತು ಮನೆಗಳೆಲ್ಲ ಖಾಲಿಯಾದ ಮೇಲೂ ಉಳಿದಿದ್ದು ಇವ ನೊಬ್ಬನೆ, ಹುಂಬ ಕವಿ ಹೇಳಿದ ಮಾತು ಕೇಳಿ ಊರು ಬಿಡುವುದಿಲ್ಲ ಎಂದಾದಾಗ ಅಕ್ಕಪಕ್ಕದವರೇ ಮಾಹಿತಿ ಕೊಟ್ಟು ಕವಿಯನ್ನು ಅವನ ಲೇಖನಿ ಸಮೇತ ಎತ್ತಿಸಿಬಿಟ್ಟಿ ದ್ದರು. ಎರಡು ದಿನಗಳ ಹಿಂಸೆಯ ನಂತರ ದೇಹ ಊರಿನ ಹೊರವಲಯದಲ್ಲಿ ನೇತಾ ಡುತ್ತಿತ್ತು. ಬಂದೂಕಿನ ನಳಿಕೆ ಅವನ ಹಿಂಭಾಗ ದಿಂದ ನುಗ್ಗಿ ಹೊರಬಂದಿದ್ದು ಮಾತ್ರ ಅಲ್ಲಿಯೇ ಗುಬ್ಬಿಗೂಡು ಕವಿಗಳ ಮಟ್ಟಿಗಿನ ವಿಪರ್ಯಾಸ.

ತೀರ ದೊಡ್ಡ ದುರಂತ ಎಂದರೆ ಅವನ ಹದಿಹರೆಯದ ಮಗ ವಿರೇಂದ್ರನನ್ನೂ ಜೊತೆಗೆ ಕರೆದೊಯ್ದು ಕತ್ತರಿಸಲಾಗಿತ್ತು. ಮೈ
ಮೇಲೆಲ್ಲ ಹಿಂಸೆಯ ಗುರುತುಗಳು ಎದ್ದು ಕಾಣುತ್ತಿದ್ದವು. ಎರಡು ದಿನದ ನಂತರ ದೇಹ ಪ್ರಾಣ ಕಳೆದುಕೊಳ್ಳುವ ಮುನ್ನ ಅನು ಭವಿಸರಬಹುದಾದ ಹಿಂಸೆಯ ಎತ್ತರ ಶವದ ಮುಖದ ಮೇಲೆ ಎದ್ದು ಕಾಣುತ್ತಿತ್ತು. ಎರಡೂ ದೇಹಗಳ ಮೂಳೆಗಳು ಮುರಿದು ಹೋಗಿದ್ದವು. ಮುಖ ಜಜ್ಜಿ ಹಾಕಲಾಗಿತ್ತು. ಚರ್ಮವನ್ನು ಅಲ್ಲಲ್ಲಿ ಸುಲಿಯಲಾಗಿತ್ತು, ಸುಡಲಾಗಿತ್ತು. ಚಟಕ್ಕಾಗಿ ಉರಿಸುತ್ತಿದ್ದ ಸುಡು ಕೆಂಡದ ಹುಕ್ಕಾ ಎಲ್ಲೆಲ್ಲಿ ಇಟ್ಟಿದ್ದರು ಕೇಳಬೇಡಿ.

ಎಂದಿನಂತೆ ಬಂದೂಕಿನ ಹಿಂಭಾಗ ಅಥವಾ ಭಾರವಾದ ವಸ್ತುವಿನಿಂದ ಮರ್ಮಾಂಗ ಜಜ್ಜುವ, ಕೈ ಕಾಲು ತಿರುಚಿ ಮೂಳೆ ಮುರಿದ ಅತ್ಯಂತ ಸ್ಪಷ್ಟ ಗುರುತುಗಳು ದೇಹದ ಮೇಲಿದ್ದವು. ಅಲ್ಲಲ್ಲಿ ದೇಹವನ್ನು ಚುಚ್ಚಿ ಹಿಂಸಿಸಿದ ಗುರುತುಗಳು ಸ್ಪಷ್ಟ ವಾಗಿದ್ದವು. ಇವರನ್ನು ನಂಬಿಕೊಂಡು ಕವಿ ಎಷ್ಟು ಕವನ ಬರೆದರೂ ಹಿಂಭಾಗದಿಂದ ನಳಿಕೆ ತೂರಿಸಿಕೊಳ್ಳುವುದು ತಪ್ಪಿಸಿ ಕೊಳ್ಳಲಾಗಿರಲಿಲ್ಲ. ಈಗ ಮಾತ್ರವಲ್ಲ ಆಗಲೂ ನಂಬಿಕೆಗೆ ಮತ್ತು ಭರವಸೆಗೆ ಈ ಮತಾಂಧರು ಅರ್ಹರಲ್ಲವೇ ಅಲ್ಲ ಎಂದು ಸಮಾಜ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಅದಾಗಲೇ ಇಲ್ಲ. ಇದಾದ ಮೇಲೆ ಅಲ್ಲಲ್ಲಿ ಹತ್ಯೆಗಳು ನಡೆದವಾದರೂ ಶ್ರೀನಗರದ ಪ್ರಮುಖ ಬೀದಿಗಳು ನಿರ್ಮಾನುಷ್ಯವಾಗಿದ್ದವು.

ಅಲ್ಲದೆ ಮತಾಂಧ ಸ್ಥಳೀಯರು ಹುಡುಕಿ ಹುಡುಕಿ ಸುಪಾರಿ ಕೊಡತೊಡಗಿದ್ದರಲ್ಲ, ಊರಿಗೆ ಊರೇ ಈಗ ಹೆಚ್ಚು ಕಡಿಮೆ ಹಿಂದೂ ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಸಾಯಿಸುವುದೇ ಉದ್ದೇಶವಾದ ಮತ್ತು ಕಂಡಲ್ಲೆಲ್ಲ ಗುಂಡು ಹಾರಿಸುತ್ತಿದ್ದ ಪ್ರವೃತ್ತಿ ಯಿಂದಾಗಿ ಜೀವನ ಮತ್ತು ಜೀವ ಎರಡೂ ತುಟ್ಟಿ ಬಿದ್ದಿತ್ತು. ಬದುಕು ಎಕ್ಕುಟ್ಟು ಹೋಗಿತ್ತು. ಹೊಸ ಹೊಸದರಲ್ಲಿ ಎಲ್ಲೆಡೆ ಇದು
ಜನಾಂಗೀಯವಾಗಿ ಅಪರೂಪದ ಫೀಲ್‌ನ್ನು ಸ್ಥಳೀಯ ಮುಸ್ಲಿಂರಿಗೂ ಕೊಟ್ಟಿತ್ತಾದರೂ ತಿಂಗಳಾದರೂ ಮುಗಿಯದ ಕರ್ಫ್ಯೂ ಕಂಡಲ್ಲಿ ಗುಂಡುಗಳ ಕಾರಣ ಕಣಿವೆ ಸಂಪೂರ್ಣ ಸ್ಮಶಾನ ಮೌನ ಹೊದ್ದು ಮಲಗಿತ್ತು. ಜನಜೀವನ ಎನ್ನುವುದು ಇರಲೇ
ಇಲ್ಲದ ಪರಿಸ್ಥಿತಿ. ಮೇ ೧, ೧೯೯೦ ಅನಂತನಾಗ್ ಜಿಲ್ಲೆಯ ಚಿರ್ಗಾಮ್‌ನಿಂದ ಸುದ್ದಿಯೊಂದು ಬಂತು ನೋಡಿ. ಅಳಿದುಳಿದ ಹೊರಗಿದ್ದ ಹಿಂದೂಗಳೂ ಬೆಚ್ಚಿ ಬಿದ್ದಿದ್ದರು.

ಶಾಮ್‌ಲಾಲ್ ಎನ್ನುವವನನ್ನು ಅಪಹರಣ ಮಾಡಿದ್ದ ಉಗ್ರ ಮತಾಂಧರು ಅವನ ಎರಡೂ ಮುಂಗೈಗಳನ್ನು ಕಡಿದು ಹಾಕಿ ಬಿಟ್ಟಿದ್ದರು. ಪಾದಗಳನ್ನೂ ಕಡಿದು ಹಾಕಲಾಗಿತ್ತು. ಖಂಡಿತವಾಗಿಯೂ ಇದು ಒಮ್ಮೆಲೆ ಎಸಗಿದ ಕಾರ್ಯವಾಗಿರಲೇ ಇಲ್ಲ.
ಎಲ್ಲೆಡೆ ವೃಣವಾಗಿದ್ದ ದೇಹದ ಮುಂಗೈ ಮುಂಗಾಲುಗಳು ಇರಲೇ ಇಲ್ಲ. ತಲೆಯ ಬುರುಡೆ ಒಡೆದು ಹೋಗಿತ್ತು. ಹಲ್ಲೆ ನಡೆಸಿದಾಗ ಭೀಕರ ದಾಳಿ ಆಗಿರಬಹುದೇನೋ ಕೊನೆಗೆ ತಲೆಯ ಸೀಳಿಕೆಯಿಂದ ಶಾಮ್‌ಲಾಲ್ ಸತ್ತು ಹೋಗಿದ್ದ.

ಒಂದು ದೇಹ ಎಂದು ಉಳಿದಿರಲೇ ಇಲ್ಲ. ಒಂದಿಷ್ಟು ಮುದ್ದೆ ತರಹದ ಅವನ ಅವಶೇಷಗಳನ್ನು ಚೀಲದಲ್ಲಿ ತುಂಬಿ ಅವನ ಮನೆಯ ಹೊಸ್ತಿಲಿಗೆ ಇಟ್ಟು ಹೋಗಿದ್ದರು ನರಾಧಮರು. ಕಾರಣ ಕೊಂದಿದ್ದೇವೆ ಮಾತ್ರವಲ್ಲ ಹೇಗೆ ಕತ್ತರಿಸಿದ್ದೇವೆ ನೋಡಿ
ಎನ್ನುವ ಸ್ಯಾಡಿಸ್ಟಿಕ್ ಮನಸ್ಥಿತಿ ಅದು. ಅದಾದ ಮರುದಿನವೇ ಮೇ ೨, ೧೯೯೦ರಂದು ಆರು ಗುಂಡು ಹೊಡೆದು ಪ್ರೊಫೆಸರ್ ಕೆ.ಎಲ್. ಗುಂಜು ಎಂಬಾತನನ್ನು ಹತ್ಯೆ ಮಾಡಲಾಯಿತು.

ಹಾಗೆಂದು ನಂಬಲಾಗಿದೆ ಮತ್ತದು ನಂತರ ಗೊತ್ತಾಗಿದ್ದು. ಇದೆಲ್ಲ ನಡೆದ ಎಷ್ಟೊ ಸಮಯದ ನಂತರ ಉಗ್ರನೊಬ್ಬ ಸಿಕ್ಕಿಬಿದ್ದು ಎಲ್ಲ ಕಕ್ಕಿದಾಗ. ಅದಕ್ಕೆ ಮೊದಲು ಆರು ದಿನಗಳ ಕಾಲ ಕಿಡ್ ನ್ಯಾಪ್ ಆಗಿದ್ದ ಕೆ.ಎಲ್. ಗುಂಜುನ ದೇಹವೇ ಸಿಗಲಿಲ್ಲ. ಕೊನೆಗೂ ಸಿಗಲಿಲ್ಲ. ಆದರೆ ಮುಂದ್ಯಾವತ್ತೋ ತಂಡದ ಒಬ್ಬಾತ ಸಿಕ್ಕಿಬಿದ್ದಾಗ ನೀಡಿದ ಮಾಹಿತಿ ಇನ್ನಿಷ್ಟು ಭೀಭತ್ಸವಾಗಿತ್ತು. ಅವನೊಬ್ಬನೆ ಅಲ್ಲ ಅವನ ಹೆಂಡತಿಯಾದ ಪ್ರಾಣ ಗಂಜೂವನ್ನೂ ಅಪಹರಿಸಿ ಹೊತ್ತೊಯ್ಯಲಾಯಿತಲ್ಲ. ಆಗ ಎಸಗಿದ್ದು ಅನಾಹುತಕಾರಿ ಅತ್ಯಾಚಾರ ಅದು. ಕಾರಣ ಅವಳನ್ನು ಕಟ್ಟಿ ಹಾಕಿ ಭೋಗಿಸಿದ್ದೂ ಅಲ್ಲದೆ ವಿಪರೀತ ಹಿಂಸೆ ಕೊಟ್ಟು ಕೊಟ್ಟು ಸಾಯಿಸಲಾಗಿತ್ತು.

ನಂತರ ಯಾವಾಗಲೋ ಆಕೆಯ ಬಟ್ಟೆ ಹತ್ತಿರದಲ್ಲೆಲ್ಲೊ ಸಿಕ್ಕಿದುವಂತೆ. ಬಿಟ್ಟು ಅಥವಾ ತಪ್ಪಿಸಿಕೊಂಡು ಓಡಿ ಹೋಗದಂತೆ ಬೆತ್ತಲೆ ಕೂಡಿ ಹಾಕಿದ್ದಲ್ಲದೆ ಆಕೆಯನ್ನು ಅಲುಗಾಡದಂತೆ ಅಂಗಾತ ಕಾಲಗಲಿಸಿ ಬಿಗಿದು ಕೆಡುವಲಾಗಿತ್ತಂತೆ. ಸುಮ್ಮನೆ ಬಿದ್ದಲ್ಲಿ ಪದೇ ಪದೇ ಅತ್ಯಾಚಾರ ಅನುಭವಿಸುತ್ತಿರಬೇಕು ಜೀವ ಇರುವವರೆಗೂ ಅಷ್ಟೆ. ಆದರೆ ಆರು ದಿನಗಳ ಕಾಲ ಏನೆಲ್ಲ ನಡೆಯಿತು ವಿವರಿಸಲು ಯಾರೂ ಇರಲಿಲ್ಲ. ಆ ಉಗ್ರ ಸಿಕ್ಕಿದಾಗಲೇ ಇದೆಲ್ಲ ವಿವರ ದೊರಕಿದ್ದು.

ದೇಹದ ಮೇಲೆಲ್ಲ ಪಶುವಿನಂತೆ ಕೈ ಎಳೆದು ಬಿಗಿದು ಹಾಕಿ ಅತ್ಯಾಚಾರ ಮಾಡಿದ್ದ ಮತಾಂಧರು ಆಕೆಯನ್ನು ನಿರಂತರವಾಗಿ ಐದಾರು ದಿನ ಕಾಲ ಪೀಡಿಸಿ ತಿಂದು ಹಾಕಿದ್ದರು. ಆದರೆ ಸತ್ತ ಮೇಲೆ ಆಕೆಯ ಕೈ ಕಾಲುಕಟ್ಟಿ, ದೇಹಕ್ಕೆ ಕಲ್ಲು ಕಟ್ಟಿ ಜೀಲಂ ನದಿಯಲ್ಲಿ ಬಿಸಾಕಿದ್ದರೆಂದು ತಿಳಿಸಿದ್ದ. ಆದರೆ ಆಕೆಯ ದೇಹ ಮತ್ತು ಅವನ ದೇಹಗಳೂ ಕೊನೆಗೂ ಸಿಗಲೇ ಇಲ್ಲ. ಕಾರಣ ಇಷ್ಟು ಮಾಹಿತಿ ದೊರಕುವ ಹೊತ್ತಿಗಾಗಲೇ ವರ್ಷವೇ ಉರುಳಿತ್ತು. ಅನಾಥ ಕಾಶ್ಮೀರದಂತೆ ಹಿಂದೂ ಹೆಣ್ಣು ಮಕ್ಕಳ ದೇಹಗಳೂ ಎಲ್ಲೆಲ್ಲೊ ಕರಗಿಹೋಗಿದ್ದವು. ಕಾಶ್ಮೀರ್ ಎಂಬುದು ಹೆಣ್ಣು ಮಕ್ಕಳಿಗೆ ಜೀವಂತ ನರಕವಾಗಿ ಬದಲಾಗಿತ್ತು.

ಅದೇ ದಿನಾ ಮೇ ೨, ೧೯೯೦ ಕೇವಲ ೨೩ ವರ್ಷದ ಯುವಕ ಸುರಿಂದರ್ ಕುಮಾರ್ ರೈನಾನನ್ನು ಸರಳಾ ಭಟ್‌ಳನ್ನು ಅಪಹರಿ ಸಿದ್ದ. ಸೌರಾದ ಆಸ್ಪತ್ರೆಯಿಂದಲೇ ಅಪಹರಿಸಿ ಒಯ್ಯಲಾಗಿತ್ತು. ಅವನನ್ನು ಅರೆ ಜೀವವಾಗಿಸಿ ಗಂಟೆಗಟ್ಟಲೇ ಕಾಲಿನಿಂದ ಒದೆಯುತ್ತಾ ಪೀ ಡಿಸಿ ಕೊನೆಗೊಮ್ಮೆ ಅಲಿಜಾನ್ ರಸ್ತೆಯ ನಡುಬಜಾರ್‌ನಲ್ಲಿ ಗುಂಡು ಹೊಡೆದು ಕೊಲ್ಲಲಾಗಿತ್ತು. ಮೂರ್ನಾಲ್ಕು
ತಿಂಗಳಿಂದ ನಿರಂತರವಾಗಿ ಹೀಗೆ ಹಲ್ಲೆ, ಹತ್ಯೆ ಮತ್ತು ಹಿಂದೂ ಹೆಂಗಸರ ಮಾನಭಂಗ ಮಾಡುತ್ತಲೇ ಇದ್ದರಾದರೂ ಲೆಕ್ಕಕ್ಕೆ ಸಿಗದ ಮಾಹಿತಿಯಿಂದ ಹಿಜ್ಬುಲ್ ಕುಪಿತವಾಗಿತ್ತು. ಕಾರಣ ಆಗಲೂ ಎಲ್ಲಿ ನೋಡಿದರೂ ಹಿಂದೂ ಚಹರೆಗಳು ನಡು ಮಧ್ಯಾಹ್ನವೇ ಎಲ್ಲ ಕಡೆಯೂ ಕಂಡು ಬರುತ್ತಿತ್ತು.

ಎಲ್ಲೆಲ್ಲೂ ಇನ್ನೂ ಹಿಂದೂಗಳು ಬದುಕಿದ್ದರು. ಬದುಕುತ್ತಲೇ ಇದ್ದರು. ಕಶ್ಮೀರ್ ತುಂಬ ಅವರೇ ಕಾಣುತ್ತಿದ್ದಾರೆ ಇನ್ನೂ. ಲಕ್ಷದ
ಲೆಕ್ಕದಲ್ಲಿ ಓಡಿ ಹೋಗಿದ್ದರೂ ಸಂಖ್ಯೆ ಮಾತ್ರ ಬಹಿರಂಗವಾಗಿ ಎದ್ದು ಕಾಣುತ್ತಲೇ ಇತ್ತಲ್ಲ. ಎಲ್ಲ ಪರಿಶೀಲಿಸಿದಾಗ ಗೊತ್ತಾಗಿದ್ದು ಏನೇ ಬಡಿದು ಕೆಡುವಿದ್ದರೂ ಅಲ್ಲಲ್ಲಿ ಹತ್ತಾರು ಕಡೆಯಲ್ಲಿ ಕಾಶ್ಮೀರಿ ಪಂಡಿತರು ಇದ್ದೇ ಇದ್ದರು. ಅದರಲ್ಲೂ ಹಳ್ಳಿಗಳ ಒಳಭಾಗ ಸೇರಿದಂತೆ ಇನ್ನೂ ಶೇ.೫೦ ಕ್ಕೂ ಹೆಚ್ಚು ಕಾಶ್ಮೀರಿ ಹಿಂದೂಗಳು ಕಣಿವೆಯಲ್ಲಿ ಉಸಿರು ಹಿಡಿದು ಬದುಕುತ್ತಲೇ ಇದ್ದರಲ್ಲ.

ಹಿಜ್ಬುಲ್ ಮತ್ತು ಲಷ್ಕರ್ ಈ ಹಂತದಲ್ಲಿ ಯಾರೆಲ್ಲ ಇನ್ನೂ ಬೆದರದೆ ಅಥವಾ ಎದೆಯುಬ್ಬಿಸಿಕೊಂಡು ಇಲ್ಲೇ ಉಳಿದಿದ್ದಾರೆ, ಹೋಗುವ ಮಾತೇ ಇಲ್ಲ ಎಂದು ಬದುಕುತ್ತಿದ್ದಾರೆ ಎಂದೆಲ್ಲ ಮಾಹಿತಿ ತೆಗೆಯತೊಡಗಿತ್ತು ನೋಡಿ. ಲೆಕ್ಕಕ್ಕೆ ಸಿಕ್ಕಿದವರೆಲ್ಲ ಮೊದಲು ಸರಕಾರಿ ನೌಕರರೇ. ಒಹ್. ಅದಕ್ಕೆ ಇನ್ನೂ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಲೇ ಇಲ್ಲ ಎನ್ನಿಸುತ್ತಿದ್ದಂತೆ ಅದನ್ನು ಮತ್ತೊಂದು ರೀತಿಯಲ್ಲಿ ಬಳಸಿಕೊಂಡ ಹಿಜ್ಬುಲ್ quoಣ; ನೋಡಿದಿರಾ ಹೇಗೆ ಎಲ್ಲ ಸರಕಾರಿ ನೌಕರಿಯಲ್ಲೆಲ್ಲ ಹಿಂದೂಗಳೆ ಇದ್ದಾರೆ. ಎಲ್ಲ ಅವರೇ ಸವಲತ್ತನ್ನು ಬಳಸಿಕೊಳ್ಳುತ್ತಿದ್ದಾರೆ ಅದಕ್ಕಾಗೆ ಕಶ್ಮೀರಿಗಳಾದ ನಾವು ಏನೂ ಸಾಧಿಸಲಾಗೇ ಇಲ್ಲ.

ಎಲ್ಲ ಸರಕಾರಗಳೂ ಅವರನ್ನೇ ಬೆಂಬಲಿಸುತ್ತವೆ. ಇದಕ್ಕೆ ಒಂದೇ ಮದ್ದೆಂದರೆ ಅವರನ್ನೂ ಬಡಿದು ಹೊರಹಾಕುವುದೇ ಸಿಕ್ಕಲ್ಲೆಲ್ಲ ಕೊಂದು ಬಿಡಿ ಮೊದಲು ಸರಕಾರಿ ನೌಕರರನ್ನೇ ಟಾರ್ಗೆಟ್ ಮಾಡಿquoಣ; ಎಂದು ಬಿಟ್ಟಿತು. ಅಷ್ಟೆ ಈ ಬೈಠಕ್ ಆದ ಮೂರನೆಯ ದಿನವೇ, ಸರಕಾರಿ ನೌಕರರ ಮಾರಣ ಹೋಮದ ಮೊದಲ ನಗಾರಿ ಮೊಳಗಿತ್ತು.

(….ಮುಂದುವರೆಯುವುದು)