Friday, 20th September 2024

ಅರಕಲಗೂಡಿನ ಆಪ್ತಮಿತ್ರ, ಆತ್ಮಬಂಧು ಜನಾನುರಾಗಿ ಎಂ.ಟಿ.ಕೃಷ್ಣೇಗೌಡ

ವಿನಾಯಕ ರಾಮ್/ಕೆ.ಎಂ.ರಘು

ಅತೀ ಸಣ್ಣ ಊರಾದ ಮಗ್ಗೆ ಗ್ರಾಮದಲ್ಲಿ ಜನಿಸಿ, ಬಡತನದಿಂದಲೇ ಬದುಕು ಆರಂಭಿಸಿ, ಇವತ್ತು ನೂರಾರು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡಿ ಅಚ್ಚರಿ ಮೂಡಿಸಿದವರು ಅರಕಲಗೂಡು ಎಂ.ಟಿ. ಕೃಷ್ಣೇಗೌಡರು. ಸದಾ ಬಡವರ ಪರ ಯೋಚಿಸುವ ಇವರು ಅದೆಷ್ಟೋ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಹಾಗೆಯೇ ಸಾವಿರಾರು ಕುಟುಂಬಗಳ ಕಣ್ಣೀರು ಒರೆಸುವ ಕೊಡುಗೈ ದಾನಿ ಎಂದೇ ಹೆಸರಾಗಿರುವವರು.

ಅರಕೂಲಗೂಡು ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ, ಕೃಷ್ಣೇಗೌಡರೆಂದರೆ ಹಸಿದವರಿಗೆ ಅನ್ನದಾತ, ಬಡವರ ಪಾಲಿನ
ಭಾಗ್ಯದಾತ. ಅದು ನಿಜವೂ ಹೌದು. ಅವರ ಕಣ್ಣಲ್ಲಿ ಜನಸೇವೆ ಮಾಡಬೇಕು ಎನ್ನೋ ತುಡಿತ ಎಷ್ಟಿದೆ ಎಂದರೆ ತನ್ನ ಬದುಕು ಸಮಾಜಸೇವೆಗೇ ಅರ್ಪಿತವಾಗಬೇಕು ಎನ್ನುವಂಥ ಕರ್ಣಗುಣ ಅವರದ್ದು. ಪರೋಪಕಾರವನ್ನು ಪ್ರಚಾರದ ರೂಪದಲ್ಲಿ ತೋರಿಸಿಕೊಳ್ಳಬೇಕು ಎನ್ನುವ ಉದ್ದೇಶ ಅವರಿಗೆ ಖಂಡಿತ ಇಲ್ಲ. ಅವರ ಮನೆಗೆ ದಿನನಿತ್ಯ ನೂರಾರು ಬಡವರು ಬಂದರೂ ಅವರೆಲ್ಲರನ್ನೂ ಸಂತೈಸಿ, ಸತ್ಕರಿಸಿ, ಪ್ರೀತಿ ಯಿಂದ ಕೈಲಾದಷ್ಟು ಸಹಾಯ ಮಾಡುವ ದಿವ್ಯಗುಣ ಕೃಷ್ಣಣ್ಣನದ್ದು.

ತಾನು ಮಾಡುವ ಸಮಾಜಸೇವೆಯನ್ನು ಪಬ್ಲಿಸಿಟಿ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ, ದಾನ ಧರ್ಮ ಮಾಡುವಾಗ ಮೊಬೈಲ್ ಫೋನ್ ವಿಡಿಯೋ ತೆಗೆಯುವುದು ನಿಷಿದ್ಧ ಎಂದು ಅದಾಗಲೇ ಆರ್ಡರ್ ಮಾಡಿದ್ದಾರೆ ಎನ್ನುವುದು ಅರಕಲಗೂಡು ಗ್ರಾಮಸ್ಥರ ಮನದಾಳದ ಮಾತು!

ಈಗಂತೂ ಬರಗಾಲ ಎಲ್ಲೆಲ್ಲೂ ತಾಂಡವ ಆಡುತ್ತಿದೆ. ಆದರೆ ಅರಕಲುಗೂಡಿನ ಕೃಷ್ಣೇಗೌಡರ ತೋಟದಲ್ಲಿ ಮಾತ್ರ ಇವತ್ತಿಗೂ ನೀರು ಸುಭೀಕ್ಷವಾಗಿ, ಸಮೃದ್ಧವಾಗಿ ಹರಿಯುತ್ತದೆ. ಅದಕ್ಕೆ ಕಾರಣ ಕೃಷ್ಣಣ್ಣನ ಜಲ ಸಂರಕ್ಷಣಾ ಯೋಜನೆ. ಮಳೆಗಾಲದಲ್ಲಿ ಹರಿಯುವ ನೀರನ್ನು ಭೂ ದೇವಿಯ ಗರ್ಭದಲ್ಲಿ ಜೋಪಾನ ಮಾಡುವ ಕೆಲಸ ಸರಿಯಾದ ಸಮಯಕ್ಕೆ ಆಗಿರುವು ದರಿಂದ ಇವತ್ತಿಗೂ ಕೃಷ್ಣೇಗೌಡರ ಭೂಮಿ ಜಲಮಯ, ಅಮೃತಂಗಮಯ!

ರಾಜಕೀಯದಲ್ಲಿ ನೋ ಪಾಲಿಟಿಕ್ಸ್!
ರೈತಾಪಿ ಕುಟುಂಬದಲ್ಲಿ ಹುಟ್ಟಿ, ವರುಷಕ್ಕೆ ಕೇವಲ ಎಪ್ಪತ್ತು ಸಾವಿರದಷ್ಟು ಆದಾಯ ತೆಗೆಯುತ್ತಿದ್ದ ಕೃಷ್ಣಣ್ಣ ಇವತ್ತು
ಅದರ ನೂರು ಪಟ್ಟು ಶ್ರೀಮಂತ ರೈತ. ಅಲ್ಲಿ ದುಡಿದ ಹಣದ ಹೆಚ್ಚಿನ ಭಾಗವನ್ನು ಪರರಿಗೆ, ಪರೋಪಕಾರಕ್ಕೆ, ಪರದಾಟದಲ್ಲಿ ಇರುವವರಿಗೆ ಕೊಟ್ಟು ಕೃತಾರ್ಥರಾಗುವ ಕಾರಣಕ್ಕೆ ಅವರಲ್ಲೊಬ್ಬ ಸಮರ್ಥ ನಾಯಕ ಹುಟ್ಟಿಕೊಳ್ಳುತ್ತಾನೆ. ಜನಸೇವೆ ಮಾಡಲು ರಾಜಕೀಯ ವನ್ನು ಆಯ್ದುಕೊಳ್ಳುವಂತೇ ಅರಕಲುಗೂಡಿನ ಗ್ರಾಮಸ್ಥರು, ಹಿರಿಕರು, ಮುಖಂಡರು ಪ್ರಚೋದಿಸುತ್ತಾರೆ.

ನಿಸ್ವಾರ್ಥ ರಾಜಕೀಯವನ್ನೇ ಧ್ಯೇಯ ವಾಗಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕೃಷ್ಣಣ್ಣ ನಿಂತಾಗ ಕೆಲವರು ಆಡಿಕೊಂಡರೆ, ಹಲವರು ಹಾಡಿ ಹೊಗಳುತ್ತಾರೆ. ಕೃಷ್ಣಣ್ಣನ ಸಮಾಜಮುಖಿ ಧೋರಣೆಯೇ ಅವರನ್ನು ಈಗಾಗಲೇ ಗೆಲ್ಲಿಸಿಬಿಟ್ಟಿದೆ ಎಂದು ಘೋಷಣೆ ಆಗಿಬಿಡುತ್ತದೆ. ಆದರೆ ರಾಜಕೀಯ ಕುತಂತ್ರ ಎನ್ನುವ ದುಷ್ಟಶಕ್ತಿ ಅವರನ್ನು ಕೊನೇ ಹಂತದಲ್ಲಿ ಕಡಿಮೆ ಅಂತರದಲ್ಲಿ ಸೋಲುವಂತೇ ಮಾಡುತ್ತದೆ. ಮೂರು ಪಕ್ಷದವರೂ ಸೇರಿ ಕೃಷ್ಣಣ್ಣನನ್ನು ಗೆಲ್ಲಿಸಬಾರದು ಎಂಬ ಹಠಕ್ಕೆ ಕೃಷ್ಣಣ್ಣನ ಪ್ರಾಮಾಣಿಕ ಜನಸೇವೆ ಬಲಿಯಾಗಿಬಿಡುತ್ತದೆ.

ಇದು ಒಂದು ಆಯಾಮವಾದರೆ, ಪಕ್ಷೇತರವಾಗಿ ನಿಂತು, ಜನಸೇವೆಯನ್ನಷ್ಟೇ ಚುನಾವಣಾ ಅಸ್ತ್ರವನ್ನಾಗಿಸಿಕೊಂಡು, ಐವತ್ತೇಳು ಸಾವಿರ ಮತ ಗಳಿಸಿದ್ದಾರೆ ಎನ್ನುವುದು ಇವತ್ತು ರಾಷ್ಟ್ರ ರಾಜಕೀಯದಲ್ಲಿ ಚರ್ಚೆ ಆಗುತ್ತಿದೆ. ಕೃಷ್ಣಣ್ಣನಂಥ ಸಮಾಜ ಸೇವಕನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು, ದೊಡ್ಡ ಜವಾಬ್ದಾರಿ ಕೊಟ್ಟರೆ ಪಕ್ಷಕ್ಕೆ ಖಂಡಿತ ಒಳ್ಳೆಯದಾಗುತ್ತದೆ ಎನ್ನುವ ಮಾತುಗಳು ರಾಜ್ಯ ರಾಜಕೀಯ ಮುಖಂಡರ, ರಾಷ್ಟ್ರೀಯ ನಾಯಕರ ಬಾಯಲ್ಲೇ ಕೇಳಿಬರುತ್ತಿದೆ!

ಕೃಷ್ಣಣ್ಣಗೆ ತವರೇ ಸಿರಿ!
ಕೆಲಸದಲ್ಲಿ ಕೃಷ್ಣಣ್ಣನ ತೊಡಗಿಸಿಕೊಳ್ಳುವಿಕೆ, ತಲ್ಲೀನತೆ ಎಷ್ಟಿತ್ತು ಎಂದರೆ, ಆರಂಭದ ದಿನಗಳಲ್ಲಿ ಎರಡೇ ಎರಡು ತಾಸು ನಿದ್ರೆ ಮಾಡುತ್ತಿದ್ದರು, ಅದೂ ಹೊಲದಲ್ಲಿ ನಿಂತಿರುತ್ತಿದ್ದ ಟ್ರ್ಯಾಕ್ಟರ್‌ನ ಮೇಲೆ. ಕೃಷಿಯಲ್ಲಿ ತೊಡಗಿಸಿ ಕೊಳ್ಳುವುದು ಎಂದರೆ ಅಷ್ಟೊಂದು ಅಕ್ಕರೆ ಅವರಿಗೆ! ಬಾಲ್ಯ ದಿಂದ ಇದ್ದ ಅವರ ಕೃಷಿ ಪ್ರೇಮ ಇವತ್ತಿಗೂ ಇಂಗಿಲ್ಲ. ಹೆಚ್ಚಿನ ಸಮಯವನ್ನು ಅರಕಲ ಗೂಡಿನ ತಮ್ಮ ಗೂಡಿ ನಲ್ಲೇ ಕಳೆಯಲು ಇಷ್ಟಪಡುತ್ತಾರೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದರೂ ಅವರ ಮನಸು ಮಾತ್ರ
ತಮ್ಮೂರಿನ ನೆಲದ ಕಡೆಗೇ ಇರುತ್ತದೆ. ಊರೆಂದರೆ ಅಷ್ಟೊಂದು ಆಸೆ ಅವರಿಗೆ, ತವರೆಂದರೆ ಅಷ್ಟೊಂದು ಪ್ರೀತಿ ಅವರಿಗೆ!

ಕೃಷ್ಣೇಗೌಡರು ಎಷ್ಟು ಸಿಂಪಲ್ ಎಂದರೆ ಬಿಳಿಯ ಅಂಗಿ, ಸಾಧಾರಣ ಪ್ಯಾಂಟು, ಕೈಗೊಂದು ಹಳೆಯ ವಾಚು, ಮೊಗದಲ್ಲೊಂದು ಹೊಳೆವ ನಗು… ಇವರೇನಾ ಅವರು ಎನಿಸುವಷ್ಟು ಸರಳ, ಸಜ್ಜನ, ಸಂಪನ್ನ, ಸಾರ್ಥಕ ವ್ಯಕ್ತಿತ್ವ. ರಾಜಕೀಯದಲ್ಲಿ ಅಚ್ಚರಿ
ಎನಿಸುವ ಮನುಷ್ಯತ್ವ. ಹಾಗಾಗಿ ಇವರನ್ನು ಸಿಂಪಲ್ ಮ್ಯಾನ್, ಹಂಬಲ್ ಪೊಲಿಟಿಷನ್! ಎಂದೇ ಕರೆಯಬಹುದು.

ಸಾವಿರ ಹಸುಗಳ ಸರದಾರ!

ಕೃಷಿ ಕ್ಷೇತ್ರದಲ್ಲಿ ಅಪಾರ ಹೆಸರು, ಹಣ, ಕೀರ್ತಿ ಸಂಪಾದಿಸಿದ ಕೃಷ್ಣೇಗೌಡರು ಹೈನುಗಾರಿಕೆಯ ಕಡೆಗೂ ಹೊರಳಿ ಕೊಳ್ಳುತ್ತಾರೆ. ಹಸುಗಳನ್ನು ಸಾಕುವುದು, ಅವುಗಳಿಗೆ ಸರಿಯಾದ ಸಮಯಕ್ಕೆ ಮೇವು, ರಾಸು ಪೂರೈಸುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಹತ್ತು ಹಸುಗಳನ್ನು ಸಾಕಿ ಸಲಹುವಷ್ಟರಲ್ಲಿ ಸುಸ್ತಾಗಿಬಿಡುತ್ತದೆ. ಆದರೆ ಕೃಷ್ಣಣ್ಣ ಸಾವಿರಕ್ಕೂ ಹೆಚ್ಚು ಹಸುಗಳಿಗೆ ತಮ್ಮ ಹೃದಯ ದಲ್ಲಿ ಜಾಗಮಾಡಿಕೊಟ್ಟಿದ್ದಾರೆ. ಜಾಗರೂಕತೆಯಿಂದ ಗೋಮಾತೆಯ ಸೇವೆ ಮಾಡುತ್ತಾ ಬಂದಿದ್ದಾರೆ. ಅತ್ಯಂತ
ಶ್ರೇಷ್ಟಮಟ್ಟದ ತಂತ್ರಜ್ಞಾನವನ್ನು ಬಳಸಿ ಹಾಲು ಕರೆದು ಕ್ಷೀರ ಶೇಖರಣೆ ಮಾಡುತ್ತಾರೆ. ಅತ್ಯಂತ ಶುದ್ಧ ವಾದ, ಶುಭ್ರವಾದ ಇಸ್ರೇಲ್ ಮಾದರಿಯ ಬೆಲೆ ಬಾಳುವ ಮೆನರಿಗಳನ್ನು ಬಳಸಿ, ಇಡೀ ರಾಜ್ಯ-ರಾಷ್ಟ್ರಕ್ಕೇ ಮಾದರಿಯಾಗಿದ್ದಾರೆ. ಅತೀ ಶೀಘ್ರದಲ್ಲೇ ತಮ್ಮದೇ ಊರಿನ ಹೆಸರಿನಲ್ಲಿ ಹಾಲಿನ ಡೈರಿ ಮಾಡಲಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡುವುದರ ಜತೆಗೆ, ಜನಸಾಮಾನ್ಯರಿಗೆ ಪರಿಶುದ್ಧ ಹಾಲು ದೊರಕಬೇಕು ಎನ್ನುವುದು ಈ ಎಲ್ಲಾ ಹೂಡಿಕೆಯ ಹಿಂದಿರುವ ಸದುದ್ದೇಶವಾಗಿದೆ. ಕೃಷ್ಣಣ್ಣನ ಮಹೋನ್ನತ ದ್ಯೇಯೋದ್ದೇಶವಾಗಿದೆ!

*

ವಿಶ್ವಾಸಾರ್ಹ ಮತ್ತು ವಿಶ್ವಖ್ಯಾತ ಪ್ರಶಸ್ತಿಗಳಲ್ಲೊಂದಾದ ವಿಶ್ವವಾಣಿ ಗ್ಲೋಬಲ್ ಅಚೀವರ‍್ಸ್ ಅವಾರ್ಡ್ ಈ ಬಾರಿ ಕೃಷ್ಟೇಗೌಡರ ಮುಡಿಗೇರಿದೆ. ಇಂಡೋ ನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಈ ಮಹಾ ಸಮಾರಂಭದಲ್ಲಿ ಕೃಷ್ಣೇಗೌಡರನ್ನು ಸನ್ಮಾನಿಸಿ ಸತ್ಕರಿಸ ಲಾಗುತ್ತಿದ್ದು, ಈ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ, ನನ್ನ ಸಮಾಜಸೇವೆಗೆ ಈ ಪ್ರಶಸ್ತಿ ಸಿಕ್ಕಿರು ವುದು ದೊಡ್ಡ ಮಟ್ಟದ ಸೂರ್ತಿ ಎನ್ನುವುದು ಕೃಷ್ಣಣ್ಣನ ಮನದಾಳ!