Sunday, 13th October 2024

ಹೊಸಬರಿಗೆ ಬಾಗಿಲು ತೆರೆಯದ ಐಟಿ ಕಂಪನಿಗಳು

ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮೊದಲಾದ ಕಂಪನಿಗಳು ಉದ್ಯೋಗ ರದ್ದುಗೊಳಿಸಿರುವ ಮಾಹಿತಿ

ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಉದ್ಯೋಗ ನಿರಾಕರಣೆ: ವಿಪ್ರೋ ಕ್ರಮಕ್ಕೆ ವಿರೋಧ

ಬೆಂಗಳೂರು: ವಿಶ್ವದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕಿರುವ ಖುಷಿಯಲ್ಲಿದ್ದ ಸಾವಿರಾರು ಎಂಜಿನಿಯರಿಂಗ್ ವಿದ್ಯಾರ್ಥಿ
ಗಳಿಗೆ ವಿಪ್ರೋ ಶಾಕ್ ನೀಡಿದೆ.

ಹೌದು, ಕ್ಯಾಂಪಸ್ ಇಂಟರ್ ವ್ಯೂವ್‌ನಲ್ಲಿ ಆಯ್ಕೆಯಾಗಿದ್ದೇವೆ ಎಂದು ಕನಸು ಕಂಡಿದ್ದ ಸಾವಿರಾರು ಎಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ, ಕೊನೆ ಕ್ಷಣದಲ್ಲಿ ‘ನಿರೀಕ್ಷಿತ ಮಟ್ಟದ ಅಂಕ’ವಿಲ್ಲ ಎನ್ನುವ ಉತ್ತರ ಕಳುಹಿಸಿರುವುದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಂತಿಮ ವರ್ಷದಲ್ಲಿದ್ದಾಗಲೇ ಸಂದರ್ಶನದ ಮೂಲಕ ಫ್ರೆಷಸ್ ಗಳನ್ನು ಆಯ್ಕೆ ಮಾಡಿ ಕೊಂಡು ಉದ್ಯೋಗದ ಆಫರ್ ಲೆಟರ್ ಗಳನ್ನು ಸಹ ನೀಡುವುದು ಸಹಜ ಪ್ರಕ್ರಿಯೆ.

ಹೀಗೆ ಆಯ್ಕೆಯಾದ ನೂರಾರು ಮಂದಿಗೆ ವಿಪ್ರೋ, ಇನೋಸಿಸ್, ಟೆಕ್ ಮಹೀಂದ್ರಾ ಮೊದಲಾದ ಕಂಪನಿಗಳು ಈಗ ಉದ್ಯೋಗ ರದ್ದುಗೊಳಿಸಿರುವ ಮಾಹಿತಿಯನ್ನು ನೀಡಿವೆ ಎಂದು ತಿಳಿದು ಬಂದಿದೆ. ತಾವು ಹೆಸರಾಂತ ಐಟಿ ಕಂಪನಿಗಳಿಗೆ ಆಯ್ಕೆಯಾದ ಸಂತಸ ದಲ್ಲಿದ್ದ ಫ್ರೆಷರ್ಸ್‌ಗಳು ಈಗ ಉದ್ಯೋಗ ನಿರಾಕರಣೆಯ ಮಾಹಿತಿ ಸಿಗುತ್ತಿದ್ದಂತ ಕಂಗಾಲಾಗಿದ್ದಾರೆ. ಅಲ್ಲದೆ ತಮಗೆ ಈ ಕಂಪನಿಗಳಲ್ಲಿ ಉದ್ಯೋಗ ಸಿಕ್ಕ ಕಾರಣ ಇತರೆ ಕಂಪನಿಗಳಿಗೂ ಸಹ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿರಲಿಲ್ಲ ವೆಂದು ಹೇಳಲಾಗಿದ್ದು, ಇದೀಗ ಅತಂತ್ರರಾಗಿದ್ದಾರೆ.

ಉದ್ಯೋಗ ನಿರಾಕರಣೆ ಇ-ಮೇಲ್ ಕಳಿಸುವ ವೇಳೆ ‘ನಿಮ್ಮ ಶೈಕ್ಷಣಿಕ ಅರ್ಹತೆ ನಾವು ನಿಗದಿಪಡಿಸಿದ ಮಟ್ಟದಲ್ಲಿಲ್ಲ’ ಎಂದು ತಿಳಿಸಲಾಗಿದೆ. ಈ ಮಾತಿಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿಂದೆ ಕ್ಯಾಂಪಸ್ ಸೆಲೆಕ್ಟ್ ಮಾಡುವಾಗ ಈ ವಿಷಯ
ತಿಳಿದಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮೂಲಗಳ ಪ್ರಕಾರ ಬಹುತೇಕ ಫ್ರೆಷರ್ಸ್‌ಗಳಿಗೆ ಏಳೆಂಟು ತಿಂಗಳ ಹಿಂದೆಯೇ ಆ-ರ್ ಲೆಟರ್ ಸಿಕ್ಕಿದೆಎನ್ನಲಾಗಿದ್ದು, ಇದೀಗ ಎಂಜಿನಿಯರಿಂಗ್ ಅಂತಿಮ ವರ್ಷದ ಫಲಿತಾಂಶವೂ ಹೊರ ಬಿದ್ದಿದೆ. ಹೀಗಾಗಿ ಇನ್ನೇನು ಕೆಲ ದಿನಗಳ ಉದ್ಯೋಗಕ್ಕೆ
ಹೋಗ ಬಹುದೆಂಬ ಕನಸು ಕಂಡಿದ್ದ ಇವರುಗಳು ಇದೀಗ ವಿರಾಕರಣೆ ಇ-ಮೇಲ್ ಬರುತ್ತಿರುವ ಕಾರಣ ನಿರಾಸಗೊಂಡಿದ್ದಾರೆ.

ರಿಸಿಷನ್‌ಗೆ ಬಲಿಯಾದ ಭವಿಷ್ಯ?
ಮೂಲಗಳ ಪ್ರಕಾರ ಇಡೀ ವಿಶ್ವದಲ್ಲಿ ಭಾರಿ ಪ್ರಮಾಣದಲ್ಲಿ ಆರ್ಥಿಕ ಹಿಂಜರಿತ ಆರಂಭವಾಗಿದೆ. ಅದರಲ್ಲಿಯೂ ಐಟಿ ವಲಯದಲ್ಲಿ ಬೆಳವಣಿಗೆ ಭಾರಿ ನಿಧಾನಗತಿಯಲ್ಲಿದೆ. ಈ ಸಮಯದಲ್ಲಿ ಹೊಸದಾಗಿ ಉದ್ಯೋಗಿಗಳನ್ನು ನೇಮಿಸಿಕೊಂಡರೆ
ಹೆಚ್ಚುವರಿ ಹೊರೆ ಬೀಳುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ದಿನದಲ್ಲಿ ಈ ರೀತಿಯ ಕಟ್ ಆ- ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿದೆ.