Saturday, 14th December 2024

ರೊಬೋಟಿಕ್ ಮೂಳೆ ಶಸ್ತ್ರಚಿಕಿತ್ಸೆ

ಡಾ. ರಘು ನಾಗರಾಜ್
ನಿರ್ದೇಶಕರು
ಆರ್ಥೋಪಿಡಿಕ್, ಸ್ಪೋರ್ಟ್ಸ್ ಮೆಡಿಸಿನ್ ಮತ್ತು
ರೊಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ವೈದ್ಯರು

ಮಾರತ್ತಹಳ್ಳಿಯ ಕಾವೇರಿ ಆಸ್ಪತ್ರೆಯಲ್ಲಿ ರೊಬೋಟಿಕ್ ಯಂತ್ರದ ಮೂಲಕ ನಿಖರ ಮೂಳೆ ಶಸ್ತ್ರಚಿಕಿತ್ಸೆ. ರೊಬೋಟಿಕ್ ಶಸಚಿಕಿತ್ಸೆ: ಕಾವೇರಿ ಆಸ್ಪತ್ರೆ ಯಲ್ಲಿ ಮೂಳೆ ಶಸ್ತ್ರಚಿಕಿತ್ಸೆಯ ಭವಿಷ್ಯ.

ಪ್ರಶ್ನೆ: ರೊಬೋಟಿಕ್ ಯಂತ್ರ ವ್ಯವಸ್ಥೆಯನ್ನು ಬಳಸಿಕೊಂಡು ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಕಾವೇರಿ ಆಸ್ಪತ್ರೆ ಹೇಗೆ ಉನ್ನತ ಗುಣಮಟ್ಟವನ್ನು ಸಾಧಿಸಿದೆ?
ಡಾ. ರಘು ನಾಗರಾಜ್: ಮೂಳೆ ಸಂಬಂಧಿಸಿದ ಸಮಸ್ಯೆಗಳ ಚಿಕಿತ್ಸೆಯಲ್ಲಿ ನಮ್ಮ ಆಸ್ಪತ್ರೆ ಮುಂಚೂಣಿಯಲ್ಲಿದೆ. ಶಸಚಿಕಿತ್ಸೆಗೆ ಅತ್ಯಾಧುನಿಕ ರೊಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಳಕೆ ಮಾಡುತ್ತಿದ್ದೇವೆ. ಇಂತಹ ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಕೆ ಮಾಡಿ ಕೊಳ್ಳುವುದರಿಂದ ಅತ್ಯಂತ ನಿಖರವಾಗಿ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳನ್ನು ನಡೆಸಬಹುದು. ಇದರಿಂದ ನೋವು ಕಡಿಮೆ ಇರುತ್ತದೆ. ರೋಗಿಗಳು ಬೇಗ ಗುಣಮುಖರಾಗುತ್ತಾರೆ. ಅಲ್ಲದೇ, ಶಸ್ತ್ರಚಿಕಿತ್ಸೆ ಯಶಸ್ಸಿನ ಪ್ರಮಾಣವೂ ಹೆಚ್ಚು ಇರುತ್ತದೆ.

ಪ್ರಶ್ನೆ: ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ರೊಬೋಟಿಕ್ ನೆರವಿನ ಶಸಚಿಕಿತ್ಸೆ ಹೇಗೆ ಶ್ರೇಷ್ಠ ಎನಿಸಿಕೊಳ್ಳುತ್ತದೆ?

ಡಾ. ರಘು ನಾಗರಾಜ್: ರೊಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯು ಶಸ್ತ್ರಚಿಕಿತ್ಸಕರ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅತ್ಯಂತ ನಿಖರತೆಯೊಂದಿಗೆ ಶಸ್ತ್ರ
ಚಿಕಿತ್ಸೆ ಮಾಡಲು ನೆರವಾಗುತ್ತವೆ. ರಿಯಲ್ ಟೈಮ್ ತ್ರೀಡಿ ಇಮೇಜಿಂಗ್ ಚಿತ್ರಗಳನ್ನು ರೊಬೋಟ್ ವ್ಯವಸ್ಥೆ ಒದಗಿಸುತ್ತದೆ. ಶಸ್ತ್ರಚಿಕಿತ್ಸೆಗೆ ಬಳಸುವ  ಸಲಕರಣೆಗಳ ಮೇಲೆ ಉತ್ತಮ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ವೈದ್ಯರಿಂದ ಆಗಬಹುದಾದ ಲೋಪಗಳನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಡ್ಯಾಮೇಜ್ ಕಡಿಮೆ ಆಗುವ ಕಾರಣ ರೋಗಿಗಳು ಬೇಗ ಗುಣಮುಖರಾಗಿ ತಮ್ಮ ದೈನಂದಿನ ಕೆಲಸಗಳನ್ನು ಮುಂದುವರೆಸಲು ನೆರವಾಗುತ್ತದೆ.

ಪ್ರಶ್ನೆ: ರೊಬೋಟಿಕ್ ನೆರವಿನ ಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ಗುಣಮುಖರಾಗುವ ಪ್ರಕ್ರಿಯೆಯನ್ನು ವಿವರಿಸುವಿರಾ?
ಡಾ. ರಘು ನಾಗರಾಜ್: ರೊಬೋಟಿಕ್ ನೆರವಿನ ಮೂಳೆ ಶಸ್ತ್ರಚಿಕಿತ್ಸೆಯ ಮುಖ್ಯವಾದ ಅನುಕೂಲ ಎಂದರೆ ಕಡಿಮೆ ಸಮಯದಲ್ಲಿ ರೋಗಿ
ಗುಣಮುಖವಾಗುವುದು. ಏಕೆಂದರೆ, ಈ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಚರ್ಮ ಮತ್ತಿತರ ಭಾಗಗಳಿಗೆ ಹಾನಿಯಾಗುವ ಪ್ರಮಾಣ ಕಡಿಮೆ ಇರುತ್ತದೆ.
ಶಸ್ತ್ರಚಿಕಿತ್ಸೆ ನಂತರ ರೋಗಿಗಳಿಗೆ ನೋವಿನ ಅನುಭವವೂ ಕಡಿಮೆ ಇರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ರೋಗಿಗಳು ತಮ್ಮ ಕೆಲಸಗಳನ್ನು
ತಾವೇ ಮಾಡಿಕೊಳ್ಳಲು ಆರಂಭಿಸುತ್ತಾರೆ. ಇದರಿಂದ ದೈನಂದಿನ ಜೀವನಕ್ಕೆ ಬೇಗ ಮರಳಲು ಸಾಧ್ಯವಾಗುತ್ತದೆ. ಇದುವೇ ರೋಗಿಗಳಿಗೆ ಬಹುದೊಡ್ಡ ಅನುಕೂಲಕರ ಅಂಶವಾಗಿದೆ.

ಪ್ರಶ್ನೆ: ರೊಬೋಟಿಕ್ ಆಧಾರಿತ ಶಸ್ತ್ರಸಚಿಕಿತ್ಸೆಗಳು ಯಶಸ್ಸು ಸಾಽಸುವುದನ್ನು ಖಾತ್ರಿಪಡಿಸಲು ಕಾವೇರಿ ಆಸ್ಪತ್ರೆ ಏನು ಕ್ರಮಗಳನ್ನು ಕೈಗೊಳ್ಳುತ್ತದೆ?
ಡಾ. ರಘು ನಾಗರಾಜ್: ವೈದ್ಯಕೀಯವಾಗಿ ಮತ್ತು ತಾಂತ್ರಿಕವಾಗಿ ಪರಿಣಿತ ವೈದ್ಯರ ತಂಡ ಮತ್ತು ಆತ್ಯಾಧುನಿಕ ತಂತ್ರಜ್ಞಾನಗಳ ಸಮ್ಮಿಳಿತವೇ ನಮ್ಮ
ಆಸ್ಪತ್ರೆಯ ಯಶಸ್ಸಿನ ಗುಟ್ಟು ಆಗಿದೆ. ಕಾವೇರಿ ಆಸ್ಪತ್ರೆಯಲ್ಲಿ ಅತ್ಯಂತ ಅನುಭವಿ ಮೂಳೆ ಶಸ್ತ್ರಚಿಕಿತ್ಸಕರು ಮತ್ತು ತಂತ್ರಜ್ಞರಿದ್ದಾರೆ. ರೊಬೋಟಿಕ್ ಶಸಚಿಕಿತ್ಸೆಗಾಗಿಯೇ ವಿಶೇಷವಾಗಿ ತರಬೇತಿ ಪಡೆದುಕೊಂಡಿದ್ದಾರೆ. ಕೌಶಲ್ಯ ಮತ್ತು ತಂತ್ರಜ್ಞಾನ ಒಂದಾಗಿ ನಮ್ಮ ಆಸ್ಪತ್ರೆಯ ರೋಗಿಗಳಿಗೆ ಅತ್ಯಂತ ಶ್ರೇಷ್ಠವಾದ ವೈದ್ಯಕೀಯ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ.

ಪ್ರಶ್ನೆ: ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೊಬೋಟಿಕ್ ನೆರವಿನಿಂದ ಯಾವ ನಿರ್ದಿಷ್ಟ ಪ್ರಕ್ರಿಯೆ ನಡೆಸಲಾಗುತ್ತದೆ?
ಡಾ. ರಘು ನಾಗರಾಜ್: ಅನೇಕ ಮೂಳೆ ಶಸ್ತ್ರಚಿಕಿತ್ಸೆಗಳಿಗೆ ರೊಬೋಟಿಕ್ ನೆರವನ್ನು ನಾವು ಪಡೆಯುತ್ತವೆ. ಕೀಲು ಮರುಜೋಡಣೆ, ಬೆನ್ನುಹುರಿ ಶಸ್ತ್ರಚಿಕಿತ್ಸೆಗಳು ಹಾಗೂ ಮೂಳೆ ಮುರಿದಿರುವ ಸಂಕೀರ್ಣ ಪ್ರಕರಣಗಳಲ್ಲಿ ರೊಬೋಟಿಕ್ ನೆರವು ಪಡೆಯಲಾಗುತ್ತದೆ. ವಿಶೇಷವಾಗಿ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರೊಬೋಟಿಕ್ ವ್ಯವಸ್ಥೆಯು ಹೆಚ್ಚು ಅನುಕೂಲ ಆಗುತ್ತದೆ. ನಿಖರವಾಗಿ ಮರುಜೋಡಣೆ ಮಾಡಲು ನೆರವಾಗುತ್ತದೆ. ಇದರಿಂದ ರೋಗಿಗಳಿಗೆ ಮತ್ತೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳದೇ ಧೀರ್ಘಾವಧಿಯಲ್ಲಿ ಆರೋಗ್ಯವಾಗಿರಲು ನೆರವಾಗುತ್ತದೆ.

ಪ್ರಶ್ನೆ: ಮೂಳೆ ಶಸ್ತ್ರಚಿಕಿತ್ಸೆಗೆ ರೋಗಿಗಳು ಕಾವೇರಿ ಆಸ್ಪತ್ರೆಯನ್ನೇಕೆ ಆಯ್ಕೆ ಮಾಡಿಕೊಳ್ಳಬೇಕು?

ಉತ್ತರ: ಕಾವೇರಿ ಆಸ್ಪತ್ರೆಯು ರೋಗಿಗಳ ಆರೈಕೆಯಲ್ಲಿ ಅತ್ಯಂತ ಉನ್ನತ ಗುಣಮಟ್ಟವನ್ನು ಸಾಧಿಸುವ ಬದ್ಧತೆಯನ್ನು ಹೊಂದಿದೆ. ತಂತ್ರಜ್ಞಾನ ಮತ್ತು ಕೌಶಲ್ಯದೊಂದಿಗೆ ರೋಗಿಗಳ ಕೇಂದ್ರಿತವಾದ ಸೇವೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ರೋಗಿಗೂ ಅವರ ನಿರೀಕ್ಷೆ ಮತ್ತು ನಿರ್ದಿಷ್ಟ ಬೇಡಿಕೆಗೆ ತಕ್ಕಂತೆ ವೈಯಕ್ತಿಕ ಆರೋಗ್ಯ ಸೇವೆ ಒದಗಿಸುವುದು ನಮ್ಮ ಬದ್ಧತೆ. ರೊಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತರಾಗಿರುವ ನಮ್ಮ ತಂಡವು ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಕಾರಣ ಮೂಳೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಕಾವೇರಿ ಆಸ್ಪತ್ರೆಯೇ ಮೊದಲ ಆಯ್ಕೆಯ ಆದ್ಯತೆ
ಆಗಿರುತ್ತದೆ.