Wednesday, 6th November 2024

ಪ್ರತಿಯೊಬ್ಬರಿಗೂ ತ್ವಚೆ ಆರೈಕೆ ತಂತ್ರಗಳನ್ನು ಕುರಿತ ಸಲಹೆಗಳು…

ಡಾ. ಮಿಕ್ಕಿ ಸಿಂಗ್, ಮುಖ್ಯ ಚರ್ಮರೋಗಶಾಸ್ತ ತಜ್ಞ ಬಾಡಿಕ್ರಾಫ್ಟ್.

ಆರೋಗ್ಯಕರ ತ್ವಚೆಗಾಗಿ ನಾವು ಅಳವಡಿಸಿಕೊಳ್ಳಬೇಕಾದ ಅತ್ಯುತ್ತಮ ತ್ವಚೆ ಆರೈಕೆ ಯಾವುದು ಎಂಬುದನ್ನು ತಿಳಿದುಕೊಳ್ಳುವ ಇಚ್ಛೆಯನ್ನು ನಾವೆಲ್ಲರೂ ಹೊಂದಿರುತ್ತೇವೆ. ಹೊಳಪಿನ ನೋಟವನ್ನು ಹೊಂದಲು ಸುಲಭವಾದ ಮಾರ್ಗಗಳು ಇವೆಯೇ? ಹೊಳಪಿನ ತ್ವಚೆ ಪಡೆಯಲು ಅನುಸರಿಸಬೇಕಾದ ಕೆಲವು ತ್ವಚೆ ಆರೈಕೆ ತಂತ್ರಗಳ ಸಲಹೆಗಳನ್ನು ಬಾಡಿಕ್ರಾಫ್ಟ್ ಸ್ಕಿನ್ ಕ್ಲಿನಿಕ್ನ ಮುಖ್ಯ ಚರ್ಮರೋಗಶಾಸ್ತç ತಜ್ಞ ಡಾ. ಮಿಕ್ಕಿ ಸಿಂಗ್ ಅವರು ನೀಡಿದ್ದು, ಅವುಗಳ ಕಡೆಗೆ ಒಂದು ನೋಟ ಹರಿಸೋಣ ಬನ್ನಿ..

ಸಲಹೆ 1:
ಸತತ ಸ್ಥಿರ ಆರೈಕೆ ಮುಖ್ಯ
ತ್ವಚೆ ಅಥವಾ ಚರ್ಮದ ಆರೈಕೆಯನ್ನು ಅವಸರ ಓಟವಾಗಿಯಲ್ಲದೇ ದೀರ್ಘಾವಧಿಯ ಮೆರಥಾನ್ ಓಟ ಎಂದು ಪರಿಗಣಿಸಬೇಕು. ಸ್ವಚ್ಛ ಮತ್ತು ಸ್ಪಷ್ಟವಾಗಿರುವ ಚರ್ಮ ಹೊಂದುವ ಇಚ್ಛೆ ಇದ್ದಲ್ಲಿ, ಎದ್ದು ಕಾಣುವಂತಹ ಫಲಿತಾಂಶ ಬರಲು ಪ್ರತಿದಿನದ ಆರೈಕೆಯನ್ನು ಒಂದೆರಡು ತಿಂಗಳು ಮುಂದುವರಿಸಬೇಕು. ಬಹುತೇಕ ತ್ವಚೆಆರೈಕೆ ಉತ್ಪನ್ನಗಳನ್ನು ಚರ್ಮದ ಮೇಲೆ ಹಚ್ಚಲಾಗುತ್ತದೆ. ಇದರಿಂದ ಅವುಗಳನ್ನು ತ್ವಚೆ ಹೀರಿಕೊಳ್ಳುವ ದರ ಬಹಳ ಕಡಿಮೆಯಾಗಿರುತ್ತದೆ. ಹಾಗಾಗಿ ಈ ಉತ್ಪನ್ನಗಳು ಕೆಲಸ ಮಾಡಬೇಕಾಗಿದ್ದಲ್ಲಿ ಅವುಗಳನ್ನು ಸತತವಾಗಿ ತಪ್ಪದೇ ಪ್ರತಿ ದಿನ ಉಪಯೋಗಿಸಬೇಕು. ಇದು ಜಿಮ್ನಲ್ಲಿ ವ್ಯಾಯಾಮ ಮಾಡಿದಂತೆಯೇ ಆಗಿರುತ್ತದೆ, ಬರಿ ಒಂದು ದಿನದ ವ್ಯಾಯಾಮದಿಂದ ನಿಮ್ಮ ದೇಹವನ್ನು ಉತ್ತಮಗೊಳಿಸುವ ಗುರಿಗಳನ್ನು ತಲುಪಲು ಸಾಧ್ಯವಾಗುವುದಿಲ್ಲ,

ಸಲಹೆ 2:
ಕಡಿಮೆಯಿದ್ದಷ್ಟೂ ಹೆಚ್ಚು ಉತ್ತಮ
ನಿಮ್ಮ ಚರ್ಮ ಸೂಕ್ಷö್ಮವಾಗಿದ್ದು, ಅದನ್ನು ಬಹಳ ಎಚ್ಚರಿಕೆ ಮತ್ತು ದಯೆಯೊಂದಿಗೆ ನೋಡೊಕೊಳ್ಳಬೇಕು. ಮಾರುಕಟ್ಟೆ ಯಲ್ಲಿ ಹಲವಾರು ಸಕ್ರಿಯ ವಸ್ತುಗಳನ್ನು ಒಳಗೊಂಡ ಬಹಳ ಉತ್ಪನ್ನಗಳು ಲಭ್ಯವಿರುತ್ತವೆ. ಅವುಗಳಲ್ಲಿ ಪ್ರತಿಯೊಂದು ಉತ್ಪನ್ನ ವಿಭಿನ್ನ ತೊಂದರೆಗಳನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತವೆಂದು ಹೇಳಲಾಗುತ್ತದೆ. ನಿಮಗೆ ಅವೆಲ್ಲವನ್ನು ಒಟ್ಟಿಗೆ ಬಳಸಿ “ಶ್ರೇಷ್ಠ ತ್ವಚೆ” ಸಾಧಿಸುವ ಪ್ರಚೋದನೆ ಉಂಟಾಗಬಹುದು. ಒಂದೇ ಸಕ್ರಿಯವಸ್ತುವನ್ನು ಸತತವಾಗಿ ಬಳಸುವು ದಕ್ಕಿಂತ ಒಂದೇ ವಸ್ತು ಒಳಗೊಂಡಿರುವ ಹಲವು ಉತ್ಪನ್ನಗಳನ್ನು 10 ಹಂತಗಳ ದೈನಂದಿನ ಬಳಕೆ ಮಾಡುವುದು ಯಾವುದೇ ಗಮನಾರ್ಹ ಬದಲಾವಣೆ ಉಂಟು ಮಾಡುವುದಿಲ್ಲ. ನಮ್ಮ ತ್ವಚೆ ಹೀರಿಕೊಳ್ಳುವ ಪ್ರಮಾಣಕ್ಕೂ ಒಂದು ಮಿತಿ ಇರುತ್ತದೆ. ಅದಕ್ಕೂ ಹೆಚ್ಚಿನ ಉತ್ಪನ್ನ ಬಳಸಿದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಉಂಟಾಗದು. ವಿಭಿನ್ನ ಫಾರ್ಮುಲಾಗಳನ್ನು ಒಟ್ಟಿಗೆ ಬಳಸುವಾಗ ಎಚ್ಚರಿಕೆ ಇರಬೇಕು. ಏಕೆಂದರೆ ಇವು ಪರಸ್ಪರ ಪ್ರತಿಕ್ರಿಯಿಸಿ ತೊಂದರೆ ಉಂಟಾಗಬಹುದು.

ಸಲಹೆ 3:
ಕೆಲವೊಮ್ಮೆ ಚರ್ಮದ ಆರೈಕೆ ಕಾರ್ಯ ತಪ್ಪಿಸಿ ಅಥವಾ ಮಾಡಬೇಡಿ
ನೀವು ದಿನಾಲು ಕೈಗೊಳ್ಳುವ ತ್ವಚೆಯ ಆರೈಕೆಯ ಕಾರ್ಯಕ್ಕೆ ಬಿಡುವು ನೀಡುವುದು ಮುಖ್ಯವಾಗಿರುತ್ತದೆ, ಏಕೆಂದರೆ ಇದರಿಂದ ತ್ವಚೆ ಉಸಿರಾಡಲು ಅವಕಾಶ ಉಂಟಾಗುತ್ತದೆ. ಸತತವಾಗಿ ಹಲವಾರು ಸಕ್ರಿಯ ವಸ್ತುಗಳನ್ನು ಲೇಪಿಸುವುದರಿಂದ ಸುಧಾರಣೆಗೆ ಅಡ್ಡಿಯಾಗುವ ಪದರಕ್ಕೆ ಕಾರಣವಾಗಬಹುದು. ಆದ್ದರಿಂದ ತ್ವಚೆಯ ಆರೈಕೆಗೆ ಕೆಲವು ದಿನಗಳ ಬಿಡುವು ನೀಡಿ. ಆ ಸಮಯದಲ್ಲಿ ಸರಳವಾದ ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್ಗಳನ್ನು ಬಳಸುವುದು ಒಳ್ಳೆಯದು.

ಸಲಹೆ 4:
ಕೆಂಪು ಕಲೆ ಅಥವ ಮೊಡವೆಗೆ ಮಂಜುಗಡ್ಡೆಯ ಉಪಚಾರ
ಯಾವಾಗಲಾದರೂ ಒಮ್ಮೆ ಕೆಂಪು ಮೊಡವೆಗಳು ನಮ್ಮೆಲರಿಗೂ ಕಾಣಿಸಿಕೊಳ್ಳ್ಳುತ್ತವೆ. ಇವುಗಳನ್ನು ಹೋಗಲಾಡಿದಲು ಮಂಜುಗಡ್ಡೆಯ ಉಪಚಾರ ಅಥವಾ ಐಸಿಂಗ್ ಮಾಡುವುದು ಒಂದು ಆಯ್ಕೆಯಾಗಿರುತ್ತದೆ. ತಂಪು ತಾಪಮಾನದಿಂದ ರಕ್ತನಾಳಗಳು ಸಂಕುಚಿತವಾಗುವುದರಿAದ ಉರಿಯೂತ ಕಡಿಮೆಯಾಗುವುದಲ್ಲದೇ ಕೆಂಪಿನ ಬಣ್ಣವನ್ನೂ ಕಡಿಮೆ ಮಾಡುತ್ತದೆ. ಮಂಜುಗಡ್ಡೆಯನ್ನು ನೇರವಾಗಿ ಚರ್ಮದ ಮೇಲೆ ಹೆಚ್ಚು ಅವಧಿಯವರೆಗೆ ಇಡಬೇಡಿ. ಇದರಿಂದ ಐಸ್ಬರ್ನ್ ತೊಂದರೆ ಉಂಟಾಗಬಹುದು. ಬದಲಿಗೆ ಮಂಜುಗಡ್ಡೆಯನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿಕೊಂಡು ತ್ವಚೆಯ ಮೇಲಿಡಲು ಮರೆಯದಿರಿ.

ಸಲಹೆ 5:
ಒತ್ತಡವನ್ನು ತಪ್ಪಿಸಿ ಅಥವಾ ದೂರವಿಡಿ
ಬಹಳಷ್ಟು ಸಮಯಗಳಲ್ಲಿ ಹಾರ್ಮೋನ್ಗಳು ನಮ್ಮ ಮೇಲೆ ಪರಿಣಾಮ ಉಂಟುಮಾಡಬಹುದು. ನಾವು ಒತ್ತಡಕ್ಕೆ ಗುರಿಯಾದಾಗ ನಮ್ಮ ದೇಹದಲ್ಲಿ ಹಾರ್ಮೋನ್ಗಳು ಬಿಡುಗಡೆಯಾಗುತ್ತವಲ್ಲದೇ ವ್ಯಕ್ತಿಗಳ ಮೇಲೆ ಬೇರೆಬೇರೆ ಪರಿಣಾಮ ಉಂಟು ಮಾಡಬಹುದು. ಬಹುತೇಕ ಪ್ರಕರಣಗಳಲ್ಲಿ ಒತ್ತಡ ಹಲವು ರೀತಿಗಳಲ್ಲಿ ಚರ್ಮದ ಮೇಲೆ ಪರಿಣಾಮ ಉಂಟುಮಾಡಬಲ್ಲದು. ಒತ್ತಡದಿಂದ ತೈಲ ಉತ್ಪಾದನೆ ಹೆಚ್ಚಾಗಿ ತ್ವಚೆಯ ರಂಧ್ರಗಳು ಮುಚ್ಚುವುದಲ್ಲದೇ ಮೊಡವೆಗಳಿಗೆ ಕಾರಣವಾಗಬಹುದು. ಒತ್ತಡ ನಿಮ್ಮ ತ್ವಚೆಯನ್ನು ಒಣ ಮತ್ತು ಮಂದವಾಗಿ ಕಾಣುವಂತೆ ಮಾಡಬಹುದು. ಒತ್ತಡವಿರುವ ಸಮಯಗಳಲ್ಲಿ ಮಿತಿಮೀರಿದ ಕಾರ್ಟಿಸಾಲ್ ಉತ್ಪಾದನೆಯಾಗುವುದು ಇದೆಲ್ಲದಕ್ಕೆ ಕಾರಣವಾಗಬಹುದು. ಒತ್ತಡವನ್ನು ನಿವಾರಿಸುವಂತಹ ವ್ಯಾಯಾಮ, ಆಟವಾಡುವುದು, ಧ್ಯಾನ ಅಥವಾ ಏನಾದರೂ ಓದುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಇದಕ್ಕೆ ನೆರವಾಗಬಹುದು.