Thursday, 25th April 2024

ಆಫ್ಘನ್ನರ ಕಂಟಕ ತಾಲಿಬಾನ್

ವಿಶ್ವವಾಣಿ ವಿಶೇಷ

ತಾಲಿಬಾನ್. ಈ ಹೆಸರೀಗ ಎಂಥವರದ್ದಾದರೂ ಎದೆಯನ್ನು ಒಮ್ಮೆಲೆ ಝಲ್ ಎನಿಸುವ ಶಬ್ದ. ಇದಕ್ಕೆ ಕಾರಣ ಇವರುಗಳ ಮಿತಿಯೇ ಇಲ್ಲದ ಕ್ರೌರ್ಯದ ಪ್ರವೃತ್ತಿ. ಕೆಲವೇ ತಿಂಗಳುಗಲ್ಲಿ ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನರು, ಭವಿಷ್ಯ ದಲ್ಲಿ ಎದುರಾಗಬಹುದಾದ ಆತಂಕದ ಕುರಿತು ಇಡೀ ಜಗತ್ತೇ ಯೋಚಿಸುವಂತೆ ಮಾಡಿದೆ. ಹಾಗಾದರೇ ಯಾರು ಈ ತಾಲಿಬಾನರು ಮತ್ತು ಏನಿವರ ಉದ್ದೇಶ ಎಂಬುದರ ರೌಂಡಪ್ ಇಲ್ಲಿದೆ.

೧. ೧೯೭೯ರ ಅವಽಯಲ್ಲಿ ಸೋವಿಯತ್ ಯೂನಿಯನ್ ಕಮ್ಯೂನಿಸ್ಟ್ ಸರಕಾರವು ಅಫ್ಘಾನಿಸ್ತಾನದ ಮೇಲೆ ತನ್ನ ಅಽಕಾರ ಸ್ಥಾಪನೆಗಾಗಿ ಇಲ್ಲಿನ ಸರಕಾರದ ವಿರುದ್ಧ ಪರೋಕ್ಷವಾಗಿ ಯುದ್ಧ ನಡೆಸುತ್ತಿತ್ತು.

೨.ಇದರಿಂದ ಬೇಸತ್ತಿದ್ದ ಕಂದಹಾರ್ ಪ್ರದೇಶದ ಗ್ರಾಮೀಣ ಭಾಗದ ಕೆಲವೊಂದಿಷ್ಟು ಯುವಕರು ಸೋವಿಯತ್ ಯೂನಿಯನ್ ವಿರುದ್ಧ ಹೋರಾಡಲು ಆರಂಭಿಸಿದರು.

೩.ಇದನ್ನೇ ದಾಳವಾಗಿ ಬಳಸಿಕೊಂಡು ಅಮೆರಿಕಾ ದೇಶವು ವರ್ಲ್ಡ್ ವಾರ್‌ನ ತನ್ನ ಶತೃ ರಾಷ್ಟ್ರವಾದ ಸೋವಿ ಯತ್ ಯೂನಿಯನ್ ವಿರುದ್ಧ ಇನ್ನಷ್ಟು ತೀವ್ರವಾಗಿ ಹೋರಾಡಲು ಇದೇ ಯುವಕರಿಗೆ ಎಲ್ಲ ರೀತಿಯ ನೆರವು, ತರಬೇತಿ ನೀಡಲಾರಂಭಿಸಿತು.

೪.ಅಂತಿಮವಾಗಿ ೧೯೮೯ರಲ್ಲಿ ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನವನ್ನು ತೊರೆಯಿತು, ಆದರೆ ಸಮಸ್ಯೆ ಆರಂಭವಾದದ್ದೇ ಇಲ್ಲಿಂದ!

೫.ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನ ತೊರೆದ ನಂತರ ಇದೇ ಸಂಘಟನೆಗಳು ಒಂದಷ್ಟು ಅಫ್ಘಾನಿಸ್ತಾನ ದಲ್ಲಿ ತಮ್ಮ ಅಽಕಾರ ಸ್ಥಾಪಿಸಲು ಕಚ್ಚಾಡಿದವು. ಇದರ ಪರಿಣಾಮ ಆಂತರಿಕವಾಗಿ ದೇಶದಲ್ಲಿ ಸುಮಾರು ೪ ವರ್ಷಗಳ ಕಾಲ ದೊಡ್ಡ ಮಟ್ಟದ ನಾಗರಿಕ ಯುದ್ಧವೇ ನಡೆದು ಹೋಯಿತು. ಇವುಗಳಲ್ಲಿ ಪ್ರಮುಖವಾಗಿ ತಾಲಿಬಾನ್ ಹಾಗೂ ಮುಜಾದೀನ್ ಸಂಘಟನೆಗಳು ಭಾಗಿಯಾಗಿದ್ದವು.

೬.ಆದರೆ, ಅಮೆರಿಕದ ಕೃಪಾಕಟಾಕ್ಷ ಹೊಂದಿದ್ದ ಒಂದಿಷ್ಟು ನಾಯಕರು ತಾಲಿಬಾನ್ ಸಂಘಟನೆಯಲ್ಲಿದ್ದ ಕಾರಣ, ಕಟ್ಟರ್ ಇಸ್ಲಾಂ ಮೂಲ ಭೂತವಾದಿಯಾಗಿ
ಅಫ್ಘಾನಿಸ್ತಾನದ ಮೇಲೆ ಪ್ರಭುತ್ವ ಸಾಧಿಸಲಾರಂಭಿಸಿತು.

ತಾಲಿಬಾನರ ಮೊದಲ ಆಡಳಿತ
೧. ೧೯೯೬ರಲ್ಲಿ ತಾಲಿಬಾನರು ಅಫ್ಘಾನಿಸ್ತಾನದ ಆಡಳಿತ ವಹಿಸಿಕೊಂಡರು. ಕುರಾನ್ ಅನುಸಾರ, ಇಸ್ಲಾಂ ಮೂಲಭೂತವಾದಕ್ಕೆ ಅನುಗುಣವಾದಂತಹ ಕಠಿಣ ಷರಿಯಾ ಕಾನೂನುಗಳನ್ನು ಜಾರಿಗೊಳಿಸಿದರು. ಆಗ ದೇಶದ ಎಲ್ಲೆಂದರಲ್ಲಿ ಕೇವಲ ಕ್ರೌರ್ಯವೇ ತಾಂಡವವಾಡುತ್ತಿತ್ತು. ಅಂದಿನ ಆಂತರಿಕ ಸಂಘರ್ಷಗಳಲ್ಲಿ
ಅಮಾಯಕರು ಸೇರಿದಂತೆ ಸಾರಾರು ಜನರು ಪ್ರಾಣ ಕಳೆದುಕೊಂಡರು.
೨.ತಾಲಿಬಾನರು ಎಲ್ಲೆಂದರಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಮಾಡಲಾರಂಭಿಸಿದರು, ಇದುವೇ ತಾಲಿಬಾನರ ಆರ್ಥಿಕತೆಯ ಮೂಲವಾಗಿತ್ತು.
೩.ಅಫ್ಘಾನಿಸ್ತಾನದಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳು ಬೆಳೆಯಲಾರಂಭಿಸಿದವು. ಇದರಲ್ಲಿ ಪ್ರಮುಖವಾಗಿ ಒಸಾಮಾ ಬಿನ್ ಲಾಡೆನ್ ಸಾರಥ್ಯದಲ್ಲಿ
ಅಂತರ‍್ಟ್ರಾಯ ಮಟ್ಟದ ಸಂಘಟನೆ ಅಲ್-ಖೈದಾ ಸಂಘಟನೆ ಚಿಗುರೊಡೆಯಿತು.
೪.ಅಮೆರಿಕವು ತಾಲಿಬಾನರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಕಂಡ ತಾಲಿಬಾನರು ಲಾಡೆನ್ ಬಳಿ ಸಹಕಾರ ಕೇಳಿದರು. ಅವಕಾಶವನ್ನು ಬಳಸಿಕೊಂಡ
ಲಾಡೆನ್ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಸೆಪ್ಟಂಬರ್ ೧೧, ೨೦೦೧ರಲ್ಲಿ ವಿಮಾನದಿಂದ ದಾಳಿ ಮಾಡಿಸಿ ಸಾವಿರಾರು ಜನರ ಸಾವಿಗೆ
ಕಾರಣನಾದ. ನಂತರ ಲಾಡೆನ್ ತಾಲಿಬಾನ್ ಆಶ್ರಯ ಪಡೆದ.

೫.ತನ್ನ ದೇಶದ ಮೇಲಾದ ಈ ದಾಳಿಗೆ ಅಮೆರಿಕ ಕುದ್ದು ಹೋಗಿತ್ತು, ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಘೋಷಿಸಿತು. ಅದರಂತೆ ತನ್ನ ಕಾರ್ಯ ವನ್ನು ಆರಂಭಿಸಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮಟ್ಟ ಹಾಕುವುದರ ಜೊತೆಗೆ ಸೇಡನ್ನು ತೀರಿಸಿಕೊಳ್ಳಲು ೨೦೦೧, ಅಕ್ಟೋಬರ್ ತಿಂಗಳಿ ನಲ್ಲಿ ನೇಟೋ ಪಡೆಯ ಮೂಲಕ ಹಂತ ಹಂತವಾಗಿ ಅಫ್ಘಾನಿಸ್ತಾನದ ಮೇಲೆ ದಾಳಿಯನ್ನು ಆರಂಭಿಸಿತು.

೬.ನಿಧಾನವಾಗಿ ಅಮೆರಿಕ ಸೇನೆಯ ಕೈ ಮೇಲಾಯಿತು, ತಾಲಿಬಾನರು ತಮ್ಮ ಆಡಳಿತ ಪ್ರದೇಶ ಕಳೆದು ಕೊಳ್ಳಲಾರಂಭಿಸಿದರು. ೨೦೦೧ರಲ್ಲಿ ಅಮೆರಿಕದ
ಮಾರ್ಗದರ್ಶನದಲ್ಲಿ ಅಫ್ಘಾನಿಸ್ತಾನವು ಜನಪರ ಸರಕಾರ ರಚಿಸಿ, ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಅಮೆರಿಕದೊಂದಿಗೆ ಕೈ ಜೋಡಿಸಿತು.

೭.ಅಮೆರಿಕ ಪಡೆಯು ಪಾಕಿಸ್ತಾನಕ್ಕೆ ನುಗ್ಗಿ ಬಿನ್ ಲಾಡೆನ್‌ನನ್ನು ಕೊಂದ ನಂತರ ಅಲ್-ಖೈದಾ ಸಂಘಟನೆ ನಿಷ್ಕ್ರಿಯವಾಯಿತು. ಆದರೂ ಒಂದಷ್ಟು ಪ್ರಮುಖ ನಾಯಕರು ತಾಲಿಬಾನ್ ಜತೆ ಸೇರಿಕೊಂಡು ಜಗತ್ತಿನಾದ್ಯಂತ ಹಲವು ಭಯೋತ್ಪಾದಕ ಚಟುವಟಿಕೆ ಮಾಡುತ್ತ ಆತಂಕ ಸೃಷ್ಠಿ ಮಾಡುತ್ತಿದ್ದರು.

೮. ೧೯೯೯ರಲ್ಲಿ ಕಾಠ್ಮಂಡುನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ್ದ ವಿಮಾನವನ್ನು ತಾಲಿಬಾನರು ಅಪಹರಿಸಿದರು. ಭಾರತದ
ಜೈಲಿನಲ್ಲಿದ್ದ ಪ್ರಮುಖ ಭಯೋತ್ಪಾದಕರ ಬಿಡುಗಡೆಗೆ ಬೇಡಿಕೆ ಇಟ್ಟಿತ್ತು. ಅವರ ಬೇಡಿಕೆಯನ್ನು ಪೂರೈಸಿದ ಭಾರತವು, ಉಗ್ರರನ್ನು ಹೊರಗೆ ಬಿಟ್ಟು,
ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಯಿತು.

೯.ಅಲ್ಲಿಯವರೆಗೆ ತಾಲಿಬಾನರ ಕುರಿತು ತಟಸ್ಥ ನಿಲುವನ್ನು ತಳೆದಿದ್ದ ಭಾರತವು, ನಂತರದ ದಿನಗಳಲ್ಲಿ ಅಫ್ಘಾನ್ ಸರಕಾರಕ್ಕೆ ಯದ್ಧೋಪಕರಣ, ಹಣಕಾಸು ನೆರವು ನೀಡಲು ಆರಂಭಿಸಿದತು. ನಂತರ ತಾಲಿಬಾನರನ್ನು ಮಟ್ಟ ಹಾಕಲು ಹಲವು ರೀತಿಯ ಸಹಕಾರ ಮಾಡುತ್ತಾ ಬಂದಿದೆ.

೧೦.೨೦೧೨ರ ಅವಧಿಯಲ್ಲಿ ಅಮೆರಿಕ ತಾಲಿಬಾನರ ನಡುನ ಹೋರಾಟದ ನೆಪದಲ್ಲಿ ಅಮಾಯಕ ನಾಗರಿಕರು ಬಲಿಯಾಗುವುದನ್ನು ಖಂಡಿಸಿತ್ತು. ಇದೇ
ಸಂದರ್ಭದಲ್ಲಿ ತಾಲಿಬಾನರು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದುವುದಾಗಿ ಹೇಳಿತ್ತು.

ಹೊಸ ತಲೆಮಾರು ಹೊಸ ತಾಲಿಬಾನರು

೧. ೨೦ ವರ್ಷಗಳ ನಂತರ ಅಮೆರಿಕ ತನ್ನ ಸೇನೆಯನ್ನು ಹಿಂಪಡೆದ ನಂತರ ಇದೀಗ ಮರಳಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನರು, ಕೆಲವು ದಿನಗಳಿಂದ ತನ್ನ ದೇಶದ ನಾಗರಿಕರು ಅಫ್ಘಾನ್ ತೊರೆಯುತ್ತಿರುವ ಕಾರಣ ತಪ್ಪು ಮರಳಿ ಆಗದಂತೆ ತಮ್ಮ ನೀತಿ ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಯನ್ನು ತಂದು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವತ್ತ ಹೆಜ್ಜೆ ಇಡುತ್ತಿದೆ.

೨. ಕಠಿಣ ನಿಯಮಗಳಿಂದ ಮಹಿಳೆಯರಿಗೆ ಒಂದಷ್ಟು ವಿನಾಯಿತಿ, ದೇಶಿ ವ್ಯವಹಾರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಕೆ, ಮುಸ್ಲೀಮೇತರ ಜನರ ರಕ್ಷಣೆ ಸೇರಿದಂತೆ ಹಲವು ಹೊಸ ನೀತಿಗಳನ್ನು ಹೊಸ ತಾಲಿಬಾನ್ ಸರಕಾರ ಘೋಷಿಸಿಕೊಂಡಿದೆ.

೩. ಆದರೂ ಹಳೆ ತಲೆಮಾರಿನ ನಾಯಕರುಗಳನ್ನೇ ಹೊಂದಿರುವ ತಾಲಿಬಾನ್, ಸದ್ಯದ ಪರಿಸ್ಥಿಯಲ್ಲಿ ರಾಜಕೀಯವಾದ ಲಾಭ ಪಡೆದುಕೊಳ್ಳಲು ಬಯಸುತ್ತಿದ್ದು, ಈ ಬದಲಾವಣೆಗಳು ಹೆಚ್ಚು ದಿನಗಳವರೆಗೆ ಇರದು ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

೪. ಕಾಶ್ಮೀರದ ವಿಷಯವಾಗಿ ತಾನು ಯಾರ ಪರವಾಗಿಯೂ ಇಲ್ಲ, ಅದು ಕೇವಲ ಭಾರತ ಹಾಗೂ ಪಾಕಿಸ್ತಾನದ ನಡುವಿನ ಆಂತರಿಕ ವಿಷಯ ಎಂಬ ಮೃದು ಧೋರಣೆಯನ್ನು ತಾಲಿಬಾನ್ ಹೊಂದಿದ್ದರೂ ಈಗಾಗಲೇ ಭಾರತಕ್ಕೆ ಅವಶ್ಯವಿರುವ ಹಲವು ಉಗ್ರರು ತಾಲಿಬಾನ್ ಆಶ್ರಯದಲ್ಲಿರುವುದನ್ನು ಭಾರತ ಮರೆಯು ವಂತಿಲ್ಲ.

೫. ಪಾಕಿಸ್ತಾನ ಹಾಗೂ ಚೀನಾ ದೇಶಗಳು ತಾಲಿಬಾನ್ ಆಡಳಿತವನ್ನು ಸ್ವಾಗತಿಸಿವೆ, ಇದು ಭಾರತಕ್ಕೆ ಎಚ್ಚರಿಕೆಯ ಗಂಟೆಯೂ ಹೌದು. ಚೀನಾ ಹಲವು ರೀತಿಯ ನೆರವನ್ನು ಪಾಕಿಸ್ತಾನಕ್ಕೆ ಘೋಷಿಸಿದಂತೆ ಇನ್ನು ಮುಂದೆ ತಾಲಿಬಾನ್ ಸರಕಾರಕ್ಕೂ ನೀಡುವುದಾಗಿ ಹೇಳಿದೆ.
೬. ಆಫ್ಘಾನ್ ನೆರೆಯ ದೇಶಗಳಾದ ಪಾಕ್ ಹಾಗೂ ಚೀನಾ ಹೊರತುಪಡಿಸಿ ಉಜ್ಬೇಕಿಸ್ಥಾನ, ತಾಜಿಕಿಸ್ತಾನ, ತುರ್ಕ್‌ಮೇನಿಸ್ತಾನ ಹಾಗೂ ಇರಾನ್ ದೇಶಗಳು ತಾಲಿಬಾನರಿಂದ ಅಂತರ ಕಾಯ್ದುಕೊಂಡಿವೆ.

Leave a Reply

Your email address will not be published. Required fields are marked *

error: Content is protected !!