Saturday, 14th December 2024

Heart Disease: ವಾರಾಂತ್ಯದಲ್ಲಿ ನಿದ್ರೆ ಪೂರ್ಣಗೊಳಿಸಿದರೆ ಹೃದ್ರೋಗದ ಅಪಾಯ ಕಡಿಮೆ

Heart Disease

ಕಚೇರಿ, ಮನೆ ಕೆಲಸದ ಒತ್ತಡ, ಮಕ್ಕಳ ಶಾಲೆ, ಕಾಲೇಜು ಕೆಲಸಗಳು ನಮ್ಮ ದೈನಂದಿನ ದಿನಚರಿಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಹೆಚ್ಚಿನವರಿಗೆ ಇದರಿಂದ ಪರಿಪೂರ್ಣವಾದ ನಿದ್ರೆಯೇ ಸಿಗುವುದಿಲ್ಲ (Insomnia). ಇದು ಅನೇಕ ರೀತಿಯ ದೈಹಿಕ, ಮಾನಸಿಕ ಸಮಸ್ಯೆಗಳಿಗೆ ಅದರಲ್ಲೂ ಮುಖ್ಯವಾಗಿ ಹೃದಯದ ಆರೋಗ್ಯದ (Heart Disease) ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ನಿತ್ಯದ ಕೆಲಸದ ನಡುವೆ ವಿಶ್ರಾಂತಿಗೆ ಬಿಡುವಿಲ್ಲ ಎಂದು ನೊಂದುಕೊಳ್ಳುವವರು ಮತ್ತು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವರಿಗಾಗಿ ಯುಕೆಯ ಬಯೋಬ್ಯಾಂಕ್ ಒಂದು ಸಂತಸದ ಸುದ್ದಿಯನ್ನು ನೀಡಿದೆ. ಕೆಲಸದ ದಿನಗಳಲ್ಲಿ ನಿದ್ರೆಯಿಂದ ವಂಚಿತರಾಗುವವರು ವಾರಾಂತ್ಯದಲ್ಲಿ ಮಲಗಿ ನಿದ್ರೆಯನ್ನು ಪೂರ್ಣಗೊಳಿಸಿದರೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಸಂಶೋಧಕರು.

ವಾರಾಂತ್ಯದಲ್ಲಿ ನಿದ್ರೆ ಪೂರ್ಣಗೊಳಿಸಿದರೆ ಶೇ. 20ರಷ್ಟು ಹೃದ್ರೋಗದ ಅಪಾಯ ಕಡಿಮೆ ಆಗುತ್ತದೆ ಎನ್ನುವುದನ್ನು ಯುಕೆ ಬಯೋಬ್ಯಾಂಕ್ ಪ್ರಾಜೆಕ್ಟ್ ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಈ ಸಂಶೋಧನೆಗಾಗಿ 90,903 ವಿಷಯಗಳಿಂದ ಸಂಗ್ರಹಿಸಿದ್ದ ದತ್ತಾಂಶವನ್ನು ಬಳಸಿಕೊಳ್ಳಲಾಗಿದೆ. ಪ್ರತಿ ದಿನ ರಾತ್ರಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರನ್ನು ನಿದ್ರಾಹೀನತೆ ಹೊಂದಿರುವವರು ಎಂದು ಗುರುತಿಸಲಾಗಿದೆ. ವಾರಾಂತ್ಯದಲ್ಲಿ ಮಲಗಿ ವಾರದ ನಿದ್ರೆಯನ್ನು ಪೂರ್ಣಗೊಳಿಸುವವರಿಗೆ ತಮ್ಮ ಹೃದ್ರೋಗದ ಅಪಾಯ ಐದನೇ ಒಂದು ಭಾಗದಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಸಂಶೋಧನೆ ಮೂಲಕ ಪತ್ತೆ ಹಚ್ಚಲಾಗಿದೆ.

ನಿದ್ರೆಯ ಕೊರತೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಅಧ್ಯಯನದ ಸಹ-ಲೇಖಕರಾದ ಯಾಂಜುನ್ ಸಾಂಗ್.

ನಿದ್ರಾಹೀನತೆಯಿಂದ ಬಳಲುವವರು ನಿದ್ರೆಯ ಅಭಾವದ ಪರಿಣಾಮಗಳನ್ನು ತಗ್ಗಿಸಲು ರಜೆಯ ದಿನಗಳಲ್ಲಿ ನಿದ್ರಿಸಬೇಕು. ಈ ಸರಿದೂಗಿಸುವ ನಿದ್ರೆಯು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ.

 

ಯುಕೆ ಬಯೋಬ್ಯಾಂಕ್ ಈ ಸಂಶೋಧನೆಗಾಗಿ 90,903 ವಿಷಯಗಳನ್ನು ಪರಿಗಣಿಸಿದೆ. ಸರಿದೂಗಿಸಿದ ವಾರಾಂತ್ಯದ ನಿದ್ರೆ ಮತ್ತು ಹೃದ್ರೋಗದ ನಡುವಿನ ಸಂಬಂಧವನ್ನು ಮೌಲ್ಯಮಾಪನ ಮಾಡಲು ನಿದ್ರೆಯ ಅಂಕಿ ಅಂಶಗಳನ್ನು ಪರಿಗಣಿಸಲಾಗಿದೆ. ಅಧ್ಯಯನಕ್ಕಾಗಿ ಬಳಸಿರುವ ಒಟ್ಟು ಜನರಲ್ಲಿ ಶೇ. 21.8ರಷ್ಟು ಮಂದಿಯನ್ನು ನಿದ್ರಾ ವಂಚಿತರು ಎಂದು ಗುರುತಿಸಲಾಗಿದೆ.

Heart Disease

ನಿದ್ರಾಹೀನತೆಯು ರಕ್ತಕೊರತೆಯ ಹೃದಯ ಕಾಯಿಲೆ, ಹೃದಯ ವೈಫಲ್ಯ, ಹೃತ್ಕರ್ಣದ ಕಂಪನ ಮತ್ತು ಪಾರ್ಶ್ವವಾಯು ಸೇರಿದಂತೆ ವಿವಿಧ ಹೃದಯ ಕಾಯಿಲೆಗಳನ್ನು ಪತ್ತೆ ಹಚ್ಚಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ದಾಖಲಾದ ದಾಖಲೆಗಳು ಮತ್ತು ಸಾವಿನ ನೋಂದಣಿಯ ಮಾಹಿತಿಯನ್ನು ಬಳಸಲಾಗಿದೆ.

ನಿದ್ರಾಹೀನತೆಯ ಸಮಸ್ಯೆ ಅನುಭವಿಸುವವರಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಯಾವುದೇ ಹೆಚ್ಚಿನ ವ್ಯತ್ಯಾಸವಿಲ್ಲ ಎಂಬುದಾಗಿ ಸಂಶೋಧನೆ ತಿಳಿಸಿದೆ.