Saturday, 7th September 2024

ಉದ್ದಿನ ಬೇಳೆ ಹಣಿ

ಅತ್ಯುತ್ತಮ ಪ್ರೋಟಿನ್‌ಯುಕ್ತ, ಶಕ್ತಿದಾಯಕ ಆಹಾರ ಉದ್ದಿನ ಬೇಳೆ. ಇದರಲ್ಲಿ ಪ್ರೊಟೀನ್ ಕಾರ್ಬೋಹೈಡ್ರೇಟ್ಸ ಅಽಕವಾಗಿದೆ, ವಿಟಮಿನ್ ಬಿ ಶ್ರೀಮಂತ
ವಾಗಿದೆ. ಬಿ ಕುಟುಂಬದ ಹಲವು(ಬಿ ಕಾಂಪ್ಲೆಕ್ಸ್) ವಿಟಮಿನ್‌ಗಳೂ ಇದರಲ್ಲಿ ಲಭ್ಯ.

ಕ್ಯಾಲ್ಸಿಯಂ ಮತ್ತು ಫೋಲಿಕ್ ಆಸಿಡ್ ಅಂಶವನ್ನು ಸಮತೋಲನದಲ್ಲಿ ಇಡಲು ಇದು ಸಹಕರಿಸುತ್ತದೆ. ಹೀಗಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಇದು ಹೆಚ್ಚಿನ ಅಗತ್ಯ. ಇನ್ನು ಕಬ್ಬಿಣದಂಶ ಅಧಿಕವಾಗಿರುವುದರಿಂದ ದೇಹ ದಲ್ಲಿ ಶಕ್ತಿಯನ್ನು ವೃದ್ಧಿಸಿ, ಲವಲವಿಕೆಯನ್ನು ಹೆಚ್ಚಿಸುತ್ತದೆ. ಜತೆಗೆ ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಇದರಲ್ಲಿ ಹೇರಳಾಗಿದೆ. ಲೈಂಗಿಕ ನಿಶ್ಯಕ್ತಿ ಇರುವ ವ್ಯಕ್ತಿ ಮಾನಸಿಕ ಖಿನ್ನತೆ ಅನುಭವಿಸು ತ್ತಾರೆ. ಅವರ ಖಿನ್ನತೆ ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಸಸ್ಯಹಾರಿಗಳಿಗೆ ಸಾಕಷ್ಟು ಪ್ರೋಟಿನ್ ಪೂರೈಕೆ ಆಗುವುದಿಲ್ಲ.

ಮಾಂಸಾಹಾರಿಗಳಿಗಾದರೆ ಮೊಟ್ಟೆ, ಮಾಂಸಗಳಲ್ಲಿ ಪ್ರೋಟಿನ್ ಅಂಶ ಇರುತ್ತದೆ. ಪ್ರತಿ ವ್ಯಕ್ತಿಗೆ ಆತನ ದೇಹ ತೂಕದ ಒಂದು ಗ್ರಾಮ್‌ನಷ್ಟು ಪ್ರೋಟಿನ್ ಪ್ರತಿನಿತ್ಯ ಅಗತ್ಯ. ಆರೋಗ್ಯವಂತ ವ್ಯಕ್ತಿ ಸರಾಸರಿ ದಿನಕ್ಕೆ ೬೦ ಗ್ರಾಂ ಪ್ರೋಟಿನ್ ಕೊಡಬೇಕು. ಉದ್ದು ಅತ್ಯುತ್ತಮವಾದ ಪ್ರೊಟೀನ್‌ನ ಮೂಲ. ನಿಯಮಿತ ವಾಗಿ ಉದ್ದನ್ನು ಬಳಸು ವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೊಟೀನ್ ಲಭಿಸುತ್ತದೆ. ಇದರಿಂದ ಸ್ನಾಯುಗಳು ಸದೃಢವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ದೇಹದ ಉಷ್ಣಾಂಶ ವನ್ನು ಸಮತೋಲನದಲ್ಲಿಡಲು ಉದ್ದು ಸಹಾಯ ಮಾಡುತ್ತದೆ. ಮಹಿಳೆಯರಲ್ಲಿನ ಋತುಚಕ್ರ ಸಂದರ್ಭ ದಲ್ಲಿನ ನಿಶ್ಶಕ್ತಿಗೆ ಇದು ಪರಿಹಾರವಾಗಿ ಉತ್ತಮ ಬಲವನ್ನು ಕೊಡುತ್ತದೆ.

ಇಂಥ ಉದ್ದಿನ ಹಣೀ (ಪಾನಕ)ಬೇಸಿಗೆ ಸಂದರ್ಭದ ಆಯಾಸ ನಿವಾರಣೆಗೆ ಹೇಳಿ ಮಾಡಿಸಿದ್ದು. ಮಾಡಲೂ ಸುಲಭ. ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು, ಒಂದು ಗಂಟೆ ಎನೆಹಾಕಿಬಿಡಿ. ನಂತರ ಎರಡು ಏಲಕ್ಕಿಯೊಂದಿಗೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಅದಕ್ಕೆ ಒಂದೊಂದು ಕಪ್ ನೀರು ಹಾಗೂ ಕಾಯಿಸಿ ಆರಿಸಿದ ತಣ್ಣನೆಯ ಹಾಲನ್ನು ಸೇರಿಸಿ. ಬೇಕಷ್ಟು ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಅದು ಕರಗುವವರೆಗೆ ಕಲಕಿ. ಘಮಘಮಿಸುವ ದ್ದಿನ ಹಣೀ ಸಿದ್ಧ. ಗಾಜಿನ ಗ್ಲಾಸ್‌ನಲ್ಲಿ ಸರ್ವ್ ಡಿ. ಬಿಸಿಲಿನ ತಾಪಕ್ಕೆ ಊಟ ಸೇರದಾದಾಗಲೂ ಇದು ಪರ್ಯಾಯವಾಗಿ ಬಲ ನೀಡುತ್ತದೆ.

ಅಡುಗೆ ಭಡ್ತಿ

error: Content is protected !!