Saturday, 23rd November 2024

Vishwavani Impact: ಬೆಳ್ಳಾವಿ ಸರಕಾರಿ ಪದವಿ ಕಾಲೇಜು ಅಭಿವೃದ್ಧಿಗೆ 5 ಕೋಟಿ

ವಿಶ್ವವಾಣಿ ವರದಿ ಫಲಶ್ರುತಿ

ರಂಗನಾಥ ಕೆ.ಮರಡಿ

ತುಮಕೂರು: ಕಟ್ಟಡದ ಸಮಸ್ಯೆಯಿಂದ ಬಳಲುತ್ತಿದ್ದ ತಾಲೂಕಿನ ಬೆಳ್ಳಾವಿ ಸರಕಾರಿ ಪದವಿ ಕಾಲೇಜು ಅಭಿವೃದ್ಧಿ ಗೆ ಸರಕಾರ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಬೆಳ್ಳಾವಿ ಪದವಿ ಕಾಲೇಜಿನಲ್ಲಿ ಟೆಂಟ್ ಪಾಠ, ಸಭಾಂಗಣ , ಶೌಚಾಲಯ ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟ ಗೊಂಡಿತ್ತು. ಪರಿಣಾಮವಾಗಿ ಶಾಸಕ ಸುರೇಶ್ ಗೌಡ ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳನ್ನು ಪರಿಶೀಲಿಸಿ, ತಿಮ್ಲಾಪುರದ ಬಳಿ ಕಾಲೇಜು ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಮಂಜೂರು ಮಾಡಿಸಿ, ಅನುದಾನಕ್ಕಾಗಿ ಸರಕಾರಕ್ಕೆ ಮನವಿ ಮಾಡಿದ್ದರು.

ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿ ನೂತನ ಕಟ್ಟಡ, ಆವರಣ ಗೋಡೆ, ಉಪಕರಣಗಳ ಖರೀದಿ ಇತ್ಯಾದಿ ಮೂಲ ಸೌಕರ್ಯಗಳ ಅಭಿವೃದ್ದಿಗೆ ಬಳಸಲಾಗುವುದು ಎಂದು ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.

*

ಬೆಳ್ಳಾವಿಯಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. ಆದರೆ ಇಲ್ಲಿನ ಆಸಕ್ತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿಂದಿನ ಸರಕಾರದಲ್ಲಿ ನೊಣವಿನಕೆರೆಯಿಂದ ಬೆಳ್ಳಾವಿಗೆ ಕಾಲೇಜು ವರ್ಗಾವಣೆ ಆಗಿತ್ತು. ಈ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪದವಿ ಕಾಲೇಜು ತುಂಬಾ ಅವಶ್ಯಕವಾಗಿತ್ತು.

ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಶಾಸಕ

ಇದನ್ನೂ ಓದಿ: Vishwavani Impact: ವನ ಸಂರಕ್ಷಣೆಗೆ ಸೂಕ್ತ ಕ್ರಮ